AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Income Tax: ತೆರಿಗೆ ಪಾವತಿದಾರರು ಫಾರ್ಮ್​ 26AS ಡೌನ್​ಲೋಡ್​ ಮಾಡಿಕೊಳ್ಳುವ ಹಂತಹಂತವಾದ ವಿವರ ಇಲ್ಲಿದೆ

ಹೊಸ ಆದಾಯ ತೆರಿಗೆ ವೆಬ್​ಪೋರ್ಟಲ್​ನಲ್ಲಿ ಫಾರ್ಮ್​ 26AS ಡೌನ್​ಲೋಡ್​ ಮಾಡುವುದು ಹೇಗೆ ಎಂಬುದರ ವಿವರ ಇಲ್ಲಿದೆ.

Income Tax: ತೆರಿಗೆ ಪಾವತಿದಾರರು ಫಾರ್ಮ್​ 26AS ಡೌನ್​ಲೋಡ್​ ಮಾಡಿಕೊಳ್ಳುವ ಹಂತಹಂತವಾದ ವಿವರ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
TV9 Web
| Updated By: Srinivas Mata|

Updated on: Aug 19, 2021 | 7:51 PM

Share

ಆದಾಯ ತೆರಿಗೆ (Income Tax) ಇಲಾಖೆಯು ಜೂನ್ 7, 2021ರಂದು ಹೊಸ ಇ-ಫೈಲಿಂಗ್ ವ್ಯವಸ್ಥೆಯನ್ನು ಪರಿಚಯಿಸಿದೆ. ಹೊಸ ಎಲೆಕ್ಟ್ರಾನಿಕ್ ಫೈಲಿಂಗ್ ವ್ಯವಸ್ಥೆಯು ತೆರಿಗೆದಾರರಿಗೆ ಅನುಕೂಲ ಒದಗಿಸುತ್ತದೆ. ಇದರ ಜತೆಗೆ ಆಧುನಿಕ, ತಡೆರಹಿತ ಅನುಭವವನ್ನು ನೀಡುವ ನಿರೀಕ್ಷೆಯಿದೆ. ಇನ್ನು ಫಾರ್ಮ್ 26AS ವಿಚಾರಕ್ಕೆ ಬಂದಾಗ ಈ ಹೊಸ ಪೋರ್ಟಲ್ ಸರಳ ಡೌನ್‌ಲೋಡ್ ಸಾಮರ್ಥ್ಯ ಕೂಡ ಹೊಂದಿದೆ. ಫಾರ್ಮ್ 26AS ಎಂಬುದನ್ನು ವಾರ್ಷಿಕ ಕ್ರೋಡೀಕೃತ ಹೇಳಿಕೆ (Consolidated Statement) ಎಂದೂ ಕರೆಯಲಾಗುತ್ತದೆ. ಇದು ಬಹಳ ಮುಖ್ಯವಾದ ದಾಖಲೆಯಾಗಿದ್ದು, ತೆರಿಗೆದಾರರ ಎಲ್ಲ ತೆರಿಗೆ ಸಂಬಂಧಿತ ಮಾಹಿತಿಗಳಾದ ಟಿಡಿಎಸ್ (ಮೂಲದಲ್ಲಿ ತೆರಿಗೆ ಕಡಿತ), ಮುಂಗಡ ತೆರಿಗೆ ಇತ್ಯಾದಿಗಳನ್ನು ಒಳಗೊಂಡಿದೆ. ಹೊಸ ಆದಾಯ ತೆರಿಗೆ ವೆಬ್​ಸೈಟ್​ ಆರಂಭವಾದ ಮೇಲೆ ತೆರಿಗೆದಾರರು ಹೊಸ ಪೋರ್ಟಲ್‌ನಿಂದ ಫಾರ್ಮ್ 26AS ಅನ್ನು ಡೌನ್‌ಲೋಡ್ ಮಾಡುವ ಮೂಲಕ ತಮ್ಮ ತೆರಿಗೆ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಫಾರ್ಮ್ 26AS ಏನೇನು ಒಳಗೊಂಡಿದೆ ಮತ್ತು ಫಾರ್ಮ್ 26AS ಅನ್ನು ಹೇಗೆ ಡೌನ್‌ಲೋಡ್ ಮಾಡಬಹುದು ಎಂಬುದನ್ನು ನೋಡೋಣ:

ಫಾರ್ಮ್ 26AS ಏನೇನು ಒಳಗೊಂಡಿದೆ? ಆದಾಯದಿಂದ ಕಡಿತಗೊಳಿಸಿದ ತೆರಿಗೆಯ ಮಾಹಿತಿಯನ್ನು ಫಾರ್ಮ್ 26AS ಒಳಗೊಂಡಿದೆ. ಇದು ಸಂಗ್ರಹಕರು ಸಂಗ್ರಹಿಸಿದ ತೆರಿಗೆಯ ವಿವರವಾದ ನೋಟವನ್ನು ನೀಡುತ್ತದೆ.

ತೆರಿಗೆದಾರರಿಂದ ಪಾವತಿಸಿದ ಮುಂಗಡ ತೆರಿಗೆ ಮತ್ತು ಸ್ವಯಂ ಮೌಲ್ಯಮಾಪನ ತೆರಿಗೆ ಪಾವತಿಗಳನ್ನು ಈ ಫಾರ್ಮ್ ಒಳಗೊಂಡಿರುತ್ತದೆ. ಅಲ್ಲದೆ, ಹಣಕಾಸು ವರ್ಷದಲ್ಲಿ ತೆರಿಗೆದಾರರು ಸ್ವೀಕರಿಸಿದ ಮರುಪಾವತಿ ಮತ್ತು ಸ್ಟಾಕ್‌ಗಳು, ಮ್ಯೂಚುವಲ್ ಫಂಡ್‌ಗಳು ಮತ್ತು ಇತರ ಹಣಕಾಸು ಇನ್​ಸ್ಟ್ರುಮೆಂಟ್​ಗಳನ್ನು ಒಳಗೊಂಡ ಹೆಚ್ಚಿನ ಮೌಲ್ಯದ ವಹಿವಾಟುಗಳ ವಿವರಗಳನ್ನು ಸಹ ವಿವರಿಸುತ್ತದೆ.

ಫಾರ್ಮ್ 26AS ಅಗತ್ಯ ಏಕೆಂದರೆ, ಇದು ತೆರಿಗೆದಾರರ ಪರವಾಗಿ ಮೂಲದಲ್ಲಿ ಕಡಿತಗೊಳಿಸಿದ ಮತ್ತು ಸಂಗ್ರಹಿಸಿದ ತೆರಿಗೆಯ ಮೊತ್ತವನ್ನು ತಿಳಿಸುತ್ತದೆ. ಇದರೊಂದಿಗೆ ಕಂಪೆನಿಗಳು ಮತ್ತು ಬ್ಯಾಂಕ್​ಗಳು ಸರಿಯಾದ ಲೆಕ್ಕದಲ್ಲಿ ತೆರಿಗೆಗಳನ್ನು ಕಡಿತಗೊಳಿಸಿವೆಯೋ ಮತ್ತು ಅವುಗಳನ್ನು ಸರ್ಕಾರದ ಖಾತೆಯಲ್ಲಿ ಠೇವಣಿ ಇಟ್ಟಿದೆಯೋ ಎಂಬುದನ್ನು ಪರಿಶೀಲಿಸುತ್ತದೆ.

ಫಾರ್ಮ್ 26AS ಡೌನ್​ಲೋಡ್ ಹಂತಗಳು – ಫಾರ್ಮ್ 26AS ಅನ್ನು ಡೌನ್‌ಲೋಡ್ ಮಾಡಲು ಆದಾಯ ತೆರಿಗೆದಾರರು ಹೊಸ ಆದಾಯ ತೆರಿಗೆ ವೆಬ್‌ಸೈಟ್‌ಗೆ ಲಾಗಿನ್ ಆಗಬೇಕು. ಅಂದರೆ, www.incometax.gov.in ಗೆ ತೆರಳಬೇಕು, ಮತ್ತು ಖಾತೆಯನ್ನು ಸೃಷ್ಟಿಸಬೇಕು.

-ಆ ನಂತರ, ಆದಾಯ ತೆರಿಗೆ ಪೋರ್ಟಲ್ ಮುಖಪುಟದ ಮೇಲಿನ ಬಲಬದಿಯಲ್ಲಿ ‘ಲಾಗಿನ್’ ಬಟನ್ ಅನ್ನು ಆಯ್ಕೆ ಮಾಡಿ, ‘ಇ-ಫೈಲ್’ ಮೆನುಗೆ ನೇವಿಗೇಟ್ ಮಾಡಿ ಮತ್ತು ಸರಳ ಸೂಚನೆಗಳನ್ನು ಅನುಸರಿಸಿ.

-ಲಾಗಿನ್ ಆದ ನಂತರ ‘ಇ-ಫೈಲ್’ ಮೆನುಗೆ ನೇವಿಗೇಟ್ ಮಾಡಿ ಮತ್ತು ಫಾರ್ಮ್ 26AS (ತೆರಿಗೆ ಕ್ರೆಡಿಟ್) ವೀಕ್ಷಿಸಿ ಎಂದಿರುವ ಲಿಂಕ್ ಕ್ಲಿಕ್ ಮಾಡಿ.

– ಡಿಸ್​ಕ್ಲೇಮರ್ ಓದಿ ಮತ್ತು ‘confirm’ ಬಟನ್ ಕ್ಲಿಕ್ ಮಾಡಿ. ಡಿಸ್​ಕ್ಲೇಮರ್ ‘confirm’ ಬಟನ್ ಕ್ಲಿಕ್ ಮಾಡಿದ ನಂತರ, TDS-CPC ವೆಬ್‌ಸೈಟ್‌ಗೆ ಒಯ್ಯಲಾಗುತ್ತದೆ. TDS-CPC ವೆಬ್‌ಸೈಟ್‌ನಲ್ಲಿ ‘proceed’ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ನಿಯಮಗಳು ಮತ್ತು ಷರತ್ತುಗಳನ್ನು ಸ್ವೀಕರಿಸಿ.

– ಆ ನಂತರ, ತೆರಿಗೆ ಕ್ರೆಡಿಟ್ ವೀಕ್ಷಿಸಿ (ನಮೂನೆ 26 ಎಎಸ್) ಮತ್ತು ಅಸೆಸ್​ಮೆಂಟ್ ವರ್ಷ ಆಯ್ಕೆ ಮಾಡಿ.

– “View Type” ಡ್ರಾಪ್-ಡೌನ್ ಮೆನು (HTML, ಪಠ್ಯ, ಅಥವಾ PDF) ಮೇಲೆ ಕ್ಲಿಕ್ ಮಾಡಿ ಮತ್ತು ಡೌನ್‌ಲೋಡ್ ಮಾಡಿ. ಕಂಪ್ಯೂಟರ್ ಮಾನಿಟರ್ ಅಥವಾ ಸೆಲ್ ಫೋನ್ ಪರದೆಯು ನಿಮ್ಮ ಫಾರ್ಮ್ 26ASಗಳನ್ನು ಪ್ರದರ್ಶಿಸುತ್ತದೆ. ಭವಿಷ್ಯದಲ್ಲಿ ಬಳಸುವುದಕ್ಕೆ ಫಾರ್ಮ್ 26AS ಅನ್ನು ಸೇವ್ ಮತ್ತು ಡೌನ್‌ಲೋಡ್ ಮಾಡಿ.

ಇದನ್ನೂ ಓದಿ: Income Tax: ಹೆಚ್ಚುವರಿಯಾಗಿ ಪಾವತಿಸಿದ ಬಡ್ಡಿ, ವಿಳಂಬ ಶುಲ್ಕ ಹಿಂತಿರುಗಿಸಲಿದೆ ಆದಾಯ ತೆರಿಗೆ ಇಲಾಖೆ

ಇದನ್ನೂ ಓದಿ: Income Tax: ಆದಾಯ ತೆರಿಗೆ ಪಾವತಿದಾರರ ಕುಂದುಕೊರತೆ ದಾಖಲಿಸುವುದಕ್ಕೆ ಅಂತಲೇ ಇ-ಮೇಲ್ ವಿಳಾಸ ಸೃಷ್ಟಿ

(How To Download Form 26AS From New Income Tax Portal)