ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಎಂಬುದು ಒಂದು ಶೀಘ್ರ ಪಾವತಿ ವ್ಯವಸ್ಥೆ ಆಗಿದ್ದು, ಇದನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಅಭಿವೃದ್ಧಿಪಡಿಸಿದೆ. ಇಂಟರ್ಫೇಸ್ ಜನರಿಗೆ ಬ್ಯಾಂಕ್ ಖಾತೆಗಳ ನಡುವೆ ಶೀಘ್ರವಾಗಿ ಹಣವನ್ನು ವರ್ಗಾಯಿಸುವುದಕ್ಕೆ ಅನುಕೂಲ ಮಾಡಿಕೊಡುತ್ತದೆ. ಐಎಂಪಿಎಸ್ಗಿಂತ ಯುಪಿಐ ಹೇಗೆ ಭಿನ್ನ ಎಂದು ಹಲವರು ಯೋಚಿಸಬಹುದು. ಯುಪಿಐ ಈ ಕೆಳಗಿನ ವಿಧಾನಗಳಲ್ಲಿ ಐಎಂಪಿಎಸ್ಗೆ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ ಎಂಬುದನ್ನು ಇಲ್ಲಿ ನಮೂದಿಸಬೇಕು: P2P ಪುಲ್ ಕಾರ್ಯವನ್ನು ಒದಗಿಸುವುದು, ವ್ಯಾಪಾರಿ ಪಾವತಿಗಳನ್ನು ಸರಳಗೊಳಿಸುವುದು, ಹಣ ವರ್ಗಾವಣೆಗಾಗಿ ಒಂದೇ ಅಪ್ಲಿಕೇಷನ್ ಮತ್ತು ಒಂದೇ ಕ್ಲಿಕ್ ಎರಡು ಅಂಶದ ದೃಢೀಕರಣ ಇಷ್ಟೆಲ್ಲ ಅನುಕೂಲಗಳಿವೆ.
ಯುಪಿಐ ಬಳಸಿ ಪಾವತಿಸುವುದು ಹೇಗೆ?
ಏನನ್ನಾದರೂ ಖರೀದಿಸುವಾಗ ಬಳಕೆದಾರರು ಯುಪಿಐ ಮೂಲಕ ವಹಿವಾಟು ಮಾಡಲು ಆಯ್ಕೆ ಮಾಡಬಹುದು. ವಹಿವಾಟು ನಡೆಸಲು, ಬಳಕೆದಾರರು ತಮ್ಮ ಪಾವತಿ ವಿಳಾಸವನ್ನು ನಮೂದಿಸಬೇಕಾಗುತ್ತದೆ (ಉದಾ – xyz@upi). ಒಮ್ಮೆ ನಮೂದಿಸಿದ ನಂತರ, ಬಳಕೆದಾರರು BHIM ಅಪ್ಲಿಕೇಷನ್‌ನಲ್ಲಿ ಸಂಗ್ರಹಣೆ ವಿನಂತಿಯನ್ನು ಪಡೆಯುತ್ತಾರೆ.
ಯುಪಿಐ ಮೂಲಕ ಹಣವನ್ನು ವರ್ಗಾಯಿಸುವ ಮೊದಲು ನೀವು ಫಲಾನುಭವಿಯನ್ನು ನೋಂದಾಯಿಸುವ ಅಗತ್ಯವಿದೆಯೇ?
ಯುಪಿಐ ಮೂಲಕ ಹಣವನ್ನು ವರ್ಗಾಯಿಸಲು ಫಲಾನುಭವಿಯನ್ನು ನೋಂದಾಯಿಸುವ ಅಗತ್ಯವಿಲ್ಲ. ಏಕೆಂದರೆ ಈ ಮೊತ್ತವನ್ನು ವರ್ಚುವಲ್ ಐಡಿ/ಖಾತೆ+ಐಎಫ್‌ಎಸ್‌ಸಿ/ಆಧಾರ್ ಸಂಖ್ಯೆ ಆಧಾರದ ಮೇಲೆ ವರ್ಗಾಯಿಸಲಾಗುತ್ತದೆ.
ಯುಪಿಐ ವಹಿವಾಟುಗಳಿಗಾಗಿ ನಿಮಗೆ ಬ್ಯಾಂಕ್ ಖಾತೆ ಅಗತ್ಯವಿದೆಯೇ?
ಈ ಹಿಂದೆ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳನ್ನು ಮಾತ್ರ ಜೋಡಣೆ ಮಾಡಲು ಅನುಮತಿಸಲಾಗಿತ್ತು. ಆದರೆ ಈಗ ಅವರು ಪಿಪಿಐ ವ್ಯಾಲೆಟ್‌ಗಳನ್ನು ಯುಪಿಐನಲ್ಲಿ ಜೋಡಣೆ ಮಾಡಬಹುದು.
ಹಣ ಕಡಿತ ಆದ ಮೇಲೆ ವಹಿವಾಟು ವಿಫಲವಾದರೆ ಏನು?
ಅಂತಹ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು, ಯುಪಿಐ ನಿರಾಕರಣೆಗಳಿಗೆ ರಿಯಲ್ ಟೈಮ್ ರಿವರ್ಸಲ್‌ಗಳನ್ನು ಒದಗಿಸುತ್ತದೆ ಮತ್ತು ಮೊತ್ತವನ್ನು ತಕ್ಷಣವೇ ಪಾವತಿದಾರರ ಖಾತೆಗೆ ವರ್ಗಾಯಿಸಲಾಗುತ್ತದೆ. ಇದು ಆಗದಿದ್ದಲ್ಲಿ ಗ್ರಾಹಕರು ತಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಬಹುದು. ವಹಿವಾಟು ವಿಫಲವಾದ ಸಂದರ್ಭದಲ್ಲಿ ಹಣವನ್ನು ಸ್ವಲ್ಪ ಸಮಯದ ನಂತರ ಖಾತೆಗೆ ಹಿಂತಿರುಗಿಸಲಾಗುತ್ತದೆ. ಕೆಲವೊಮ್ಮೆ ಇದು ಉದ್ದೇಶಿತಕ್ಕಿಂತ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು.
ಯುಪಿಐ ಬಳಸಿಕೊಂಡು ಹಣ ವರ್ಗಾವಣೆಯ ಮಿತಿ ಏನು?
ಸದ್ಯಕ್ಕೆ ಪ್ರತಿ ಯುಪಿಐ ವಹಿವಾಟಿನ ಗರಿಷ್ಠ ಮಿತಿ 2 ಲಕ್ಷ ರೂಪಾಯಿ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: UPI For Feature Phones: ಫೀಚರ್ ಫೋನ್ ಯುಪಿಐಗೆ ಚಾಲನೆ ನೀಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್