Hyundai Car Offers: ಹೊಸ ಕಾರು ಖರೀದಿಸುವವರಿಗೆ ಭರ್ಜರಿ ರಿಯಾಯಿತಿ ನೀಡಿದ ಹ್ಯುಂಡೈ; ಸೆಪ್ಟೆಂಬರ್ ಅಂತ್ಯದ ತನಕ ಆಫರ್
Hyundai Car Discount Offers: ಈ ಪ್ರಯೋಜನ ಸ್ಯಾಂಟ್ರೋ, ಗ್ರಾಂಡ್ ಐ 10 ನಿಯೋಸ್ ಮತ್ತು ಔರಾ ಕಾರುಗಳಿಗೆ ಅನ್ವಯಿಸುತ್ತದೆ. ಆಕರ್ಷಕ ಪ್ರಯೋಜನಗಳು ಮತ್ತು ವಿಶೇಷ ಕೊಡುಗೆಗಳೊಂದಿಗೆ ಈ ಅವಧಿಯಲ್ಲಿ ಸದರಿ ಮಾದರಿ ಕಾರುಗಳ ಮಾರಾಟ ಹೆಚ್ಚಿಸುವ ಗುರಿಯನ್ನು ಕಾರು ತಯಾರಿಕಾ ಸಂಸ್ಥೆ ಹ್ಯುಂಡೈ ಹೊಂದಿದೆ.
ಹಬ್ಬದ ಅವಧಿಗೆ ಮುಂಚಿತವಾಗಿಯೇ ಹ್ಯುಂಡೈ ಇಂಡಿಯಾ ಕಾರು ಪ್ರಿಯರಿಗಾಗಿ ವಿಶೇಷ ಹಾಗೂ ಆಕರ್ಷಕ ರಿಯಾಯಿತಿಗಳನ್ನು ಘೋಷಿಸಿದೆ. 2021ರ ಸೆಪ್ಟೆಂಬರ್ ತಿಂಗಳಲ್ಲಿ ವಾಹನ ಕೊಳ್ಳಲಿರುವವರಿಗೆ ಹುಂಡೈ ಕಂಪೆನಿಯ ಆಯ್ದ ಕಾರುಗಳ ಮೇಲೆ ರಿಯಾಯಿತಿ ಸಿಗಲಿದ್ದು, ಈ ಬಗ್ಗೆ ಸಂಸ್ಥೆಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ಸ್ಯಾಂಟ್ರೋ, ಗ್ರಾಂಡ್ ಐ 10 ನಿಯೋಸ್ ಮತ್ತು ಔರಾ ಮಾದರಿಗಳಿಗೆ ರಿಯಾಯಿತಿ ಅನ್ವಯಿಸಲಿದ್ದು, ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆಯಲು ಹ್ಯುಂಡೈ ಈ ಹೆಜ್ಜೆ ಇಟ್ಟಿದೆ.
ಹ್ಯುಂಡೈ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ರಿಯಾಯಿತಿ ಕುರಿತಾದ ವಿವರಗಳನ್ನು ಪ್ರಕಟಿಸಲಾಗಿದ್ದು, ಯಾವ ಯಾವ ಮಾದರಿಯ ಕಾರುಗಳಿಗೆ ರಿಯಾಯಿತಿ ಅನ್ವಯಿಸಲಿದೆ, ಎಲ್ಲಿಯ ತನಕ ಈ ವಿಶೇಷ ಕೊಡುಗೆ ಲಭ್ಯವಿರಲಿದೆ ಎನ್ನುವುದನ್ನು ತಿಳಿಸಲಾಗಿದೆ. ಸಂಸ್ಥೆ ನೀಡಿರುವ ವಿವರಗಳ ಪ್ರಕಾರ ಈ ಪ್ರಯೋಜನ ಸ್ಯಾಂಟ್ರೋ, ಗ್ರಾಂಡ್ ಐ 10 ನಿಯೋಸ್ ಮತ್ತು ಔರಾ ಕಾರುಗಳಿಗೆ ಅನ್ವಯಿಸುತ್ತದೆ. ಆಕರ್ಷಕ ಪ್ರಯೋಜನಗಳು ಮತ್ತು ವಿಶೇಷ ಕೊಡುಗೆಗಳೊಂದಿಗೆ ಈ ಅವಧಿಯಲ್ಲಿ ಸದರಿ ಮಾದರಿ ಕಾರುಗಳ ಮಾರಾಟ ಹೆಚ್ಚಿಸುವ ಗುರಿಯನ್ನು ಕಾರು ತಯಾರಿಕಾ ಸಂಸ್ಥೆ ಹ್ಯುಂಡೈ ಹೊಂದಿದೆ.
ಹ್ಯುಂಡೈ ಸಂಸ್ಥೆ ತನ್ನ ಕಾರುಗಳ ಮೇಲೆ ನೀಡುತ್ತಿರುವ ರಿಯಾಯಿತಿ ಔರಾ, ಗ್ರಾಂಡ್ ಐ 10 ನಿಯೋಸ್ ಮತ್ತು ಸ್ಯಾಂಟ್ರೋಗೆ ಸೀಮಿತವಾಗಲಿದ್ದು, ವೆನ್ಯೂ, ಕ್ರೆಟಾ, ಅಲ್ಕಾಜಾರ್, ಆಲ್ ನ್ಯೂ ಐ 20, ಐ 20 ಎನ್ ಲೈನ್, ಟಕ್ಸನ್, ಕೋನಾ ಎಲೆಕ್ಟ್ರಿಕ್, ಎಲಾಂಟ್ರಾ ಮತ್ತು ವರ್ನಾ ಕಾರುಗಳಿಗೆ ಅನ್ವಯಿಸುವುದಿಲ್ಲ ಎನ್ನುವುದು ಗಮನಾರ್ಹವಾಗಿದೆ. ಹ್ಯುಂಡೈ ಕಾರುಗಳ ಮೇಲಿನ ಈ ಕೊಡುಗೆಗಳು ಸೆಪ್ಟೆಂಬರ್ 30, 2021 ರವರೆಗೆ ಲಭ್ಯ ಇರಲಿವೆ. ಇದು ನಗದು ರಿಯಾಯಿ, ಕಾರ್ಪೊರೇಟ್ ಬೋನಸ್ ಮತ್ತು ವಿನಿಮಯ ಪ್ರಯೋಜನಗಳನ್ನು ಒಳಗೊಂಡಿರುತ್ತವೆ. ಬಹುಮುಖ್ಯವಾಗಿ ಈ ಕೊಡುಗೆಗಳು ಕೆಲವೆಡೆ ಮಾತ್ರ ಸಿಗಲಿದ್ದು, ಕಾರುಗಳ ಲಭ್ಯತೆಗೆ ಅನುಗುಣವಾಗಿ ಬದಲಾಗಬಹುದು ಎಂದು ಸಂಸ್ಥೆ ತಿಳಿಸಿದೆ.
ಹ್ಯುಂಡೈನ ಆರಂಭಿಕ ಹಂತದ ಹ್ಯಾಚ್ ಬ್ಯಾಕ್ ಸ್ಯಾಂಟ್ರೋ ಕಾರು ಗರಿಷ್ಠ ₹40,000ದ ತನಕ ರಿಯಾಯಿತಿ ಹೊಂದಿದೆ. ಈ ಕಾರಿಗೆ ನಗದು ರಿಯಾಯಿತಿ, ವಿನಿಮಯ ಲಾಭ ಮತ್ತು ಕಾರ್ಪೊರೇಟ್ ಬೋನಸ್ ಕ್ರಮವಾಗಿ ₹ 25,000, ₹10,000 ಮತ್ತು ₹5,000ದ ತನಕ ಅನ್ವಯಿಸಲಿದೆ. ಎರಾ ಮಾದರಿಯ ಮೇಲೆ ಒಟ್ಟು ₹25,000 ದ ತನಕ ರಿಯಾಯಿತಿ ಲಭ್ಯವಿದ್ದು, ಇದರಲ್ಲಿ ₹10,000 ನಗದು ರಿಯಾಯಿತಿ ಮತ್ತು ₹10,000 ವಿನಿಮಯ ಲಾಭ ಮತ್ತು ₹5,000 ಕಾರ್ಪೊರೇಟ್ ಬೋನಸ್ ಇರಲಿದೆ.
ಹ್ಯುಂಡೈ ಔರಾ ಕಾಂಪ್ಯಾಕ್ಟ್ ಸೆಡಾನ್ ಮಾರಾಟಕ್ಕೆ ಲಭ್ಯವಿದ್ದು ಅದರ ಮೇಲೆ ಗರಿಷ್ಠ ₹50,000ದ ತನಕ ಪ್ರಯೋಜನ ಪಡೆಯಬಹುದಾಗಿದೆ. ಇದು ₹35,000 ನಗದು ರಿಯಾಯಿತಿ, ₹10,000 ವಿನಿಮಯ ಪ್ರಯೋಜನ ಮತ್ತು ₹5,000 ಕಾರ್ಪೊರೇಟ್ ಬೋನಸ್ ಒಳಗೊಂಡಿದೆ. ಇತ್ತ ಸಿಎನ್‌ಜಿ ವೇರಿಯಂಟ್ಗಳಲ್ಲಿ ವಿನಿಮಯ ಲಾಭ ಮತ್ತು ಕಾರ್ಪೊರೇಟ್ ಬೋನಸ್ ಕ್ರಮವಾಗಿ ₹10,000 ಮತ್ತು ₹5,000 ಸಿಗಲಿದ್ದು, ಯಾವುದೇ ನಗದು ರಿಯಾಯಿತಿ ಇರುವುದಿಲ್ಲ.
ಗ್ರ್ಯಾಂಡ್ ಐ 10 ನಿಯೋಸ್ ಬಯಸುವ ಗ್ರಾಹಕರು ₹50,000ದ ತನಕ ಉಪಯೋಗ ಪಡೆದುಕೊಳ್ಳಬಹುದು. ಗ್ರ್ಯಾಂಡ್ ಐ 10 ನಿಯೋಸ್ ಮಾದರಿಯ ಮೇಲೆ ಒಟ್ಟು ರಿಯಾಯಿತಿ ₹50,000 ಇರಲಿದ್ದು, ಅದರಲ್ಲಿ ₹35,000 ನಗದು ರಿಯಾಯಿತಿ, ₹10,000 ವಿನಿಮಯ ಪ್ರಯೋಜನ ಮತ್ತು₹5,000 ಕಾರ್ಪೊರೇಟ್ ಬೋನಸ್ ಸಿಗಲಿದೆ. ಈ ಕೊಡುಗೆ ಕೇವಲ ಗ್ರಾಂಡ್ ಐ 10 ನಿಯೋಸ್ ಟರ್ಬೊ ವೇರಿಯಂಟ್ಗೆ ಮಾತ್ರ ಲಭ್ಯವಿದೆ. ಉಳಿದವುಗಳಿಗೆ ₹35,000ದ ತನಕ ರಿಯಾಯಿತಿ ಸಿಗಲಿದೆ ಎಂದು ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: Jio Offer: ಜಿಯೋ ಸೂಪರ್ ಆಫರ್: ಫ್ರೀ ಹಾಟ್ಸ್ಟಾರ್ ಜೊತೆಗೆ 1 ವರ್ಷದವರೆಗೆ ಪ್ರತಿದಿನ 2GB ಡೇಟಾ
(Hyundai announces discounts of up to rs 50000 on selected car variants)