ಯುದ್ಧ, ತೈಲ ಬಿಕ್ಕಟ್ಟಿನ ಸ್ಥಿತಿಯಲ್ಲೂ ಭಾರತದ ಆರ್ಥಿಕತೆ ಶೇ. 7.8 ಬೆಳೆಯಲು ಸಾಧ್ಯವಾಗಿದ್ದು ಹೇಗೆ?

Reasons why Indian economy grew faster that expected in Q1 of 27fy: 2026-27ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ. 7.8ರಷ್ಟು ಬೆಳೆದು ಅಚ್ಚರಿ ಸೃಷ್ಟಿಸಿದೆ. ಯುದ್ಧ, ತೈಲ ಬಿಕ್ಕಟ್ಟು, ಜಾಗತಿಕ ಆರ್ಥಿಕ ಮಂದಗತಿ ನಡುವೆ ಭಾರತ ಉತ್ತಮ ಬೆಳವಣಿಗೆ ದಾಖಲಿಸಿದ್ದು ಹೇಗೆ? ಆಂತರಿಕ ಅನುಭೋಗ, ಉತ್ಪಾದನೆ ಹೆಚ್ಚಳ ಮೊದಲಾದ ಕೆಲ ಕಾರಣಗಳಿಂದ ಜಿಡಿಪಿ ವೃದ್ಧಿ ಉತ್ತಮವಾಗಿದೆ.

ಯುದ್ಧ, ತೈಲ ಬಿಕ್ಕಟ್ಟಿನ ಸ್ಥಿತಿಯಲ್ಲೂ ಭಾರತದ ಆರ್ಥಿಕತೆ ಶೇ. 7.8 ಬೆಳೆಯಲು ಸಾಧ್ಯವಾಗಿದ್ದು ಹೇಗೆ?
ಆರ್ಥಿಕತೆ
Image Credit source: Getty Images

Updated on: Aug 31, 2026 | 9:02 PM

ನವದೆಹಲಿ, ಆಗಸ್ಟ್ 31: ಭಾರತದ ಆರ್ಥಿಕತೆ (Indian Economy) ಶೇ. 6ರ ಆಸುಪಾಸಿನಲ್ಲಿ ಇರಬಹುದು, ಶೇ. 7ರ ಬೆಳವಣಿಗೆ ದರ ದಾಟುವುದು ಕಷ್ಟ ಎಂದು ಹೆಚ್ಚಿನ ಅಂತರರಾಷ್ಟ್ರೀಯ ಏಜೆನ್ಸಿಗಳು, ಆರ್ಥಿಕ ತಜ್ಞರು ಹೇಳುತ್ತಿದ್ದರೂ, ಎಲ್ಲರ ಎಣಿಕೆ ತಲೆಕೆಳಗಾಗುವ ರೀತಿಯಲ್ಲಿ ದೇಶದ ಜಿಡಿಪಿ ವೃದ್ಧಿಸಿದೆ. ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಮೊದಲ ಕ್ವಾರ್ಟರ್​ನಲ್ಲಿ (ಏಪ್ರಿಲ್-ಜೂನ್) ಜಿಡಿಪಿ ಶೇ. 7.8ರಷ್ಟು ಏರಿ ಅಚ್ಚರಿ ಮೂಡಿಸಿದೆ. ಜಾಗತಿಕವಾಗಿ ಅಮೆರಿಕ-ಇರಾನ್ ಯುದ್ಧ ಮತ್ತು ಹಾರ್ಮುಜ್ ಜಲಸಂಧಿ (Strait of Hormuz) ಬಿಕ್ಕಟ್ಟಿನಿಂದ ಉಂಟಾದ ಭಾರಿ ತೈಲ ಬೆಲೆ ಏರಿಕೆಯ ಸವಾಲುಗಳ ನಡುವೆಯೂ, ಭಾರತವು ಅಚ್ಚರಿ ಎನಿಸುವ ನೈಜ ಆರ್ಥಿಕ ಪ್ರಗತಿ ಸಾಧಿಸುವ ಮೂಲಕ ಜಾಗತಿಕ ಅರ್ಥಶಾಸ್ತ್ರಜ್ಞರ ಅಂದಾಜುಗಳನ್ನು ಹುಸಿಗೊಳಿಸಿದೆ.

ಜಾಗತಿಕ ತೈಲ ಆಘಾತ ಮತ್ತು ಸವಾಲುಗಳು

ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನಿಂದಾಗಿ ಇಡೀ ಜಗತ್ತಿನಲ್ಲಿ ಅಂತರರಾಷ್ಟ್ರೀಯ ಕಚ್ಚಾ ತೈಲ ಮತ್ತು ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ, ತೈಲ ದರಗಳು ತೀವ್ರವಾಗಿ ಏರಿಕೆಯಾಗಿದ್ದವು. ಶೇ. 90 ರಷ್ಟು ತೈಲವನ್ನು ಆಮದು ಮಾಡಿಕೊಳ್ಳುವ ಭಾರತದ ಮೇಲೆ ಇದು ಭಾರಿ ಹಣದುಬ್ಬರ ಹಾಗೂ ರೂಪಾಯಿ ಮೌಲ್ಯ ಕುಸಿತದ ಆತಂಕವನ್ನು ಸೃಷ್ಟಿಸಿತ್ತು.

ಇದನ್ನೂ ಓದಿ: ಮೊದಲ ಕ್ವಾರ್ಟರ್​ನಲ್ಲಿ ಭಾರತದ ಜಿಡಿಪಿ ಭರ್ಜರಿ ಶೇ. 7.8 ಏರಿಕೆ; ಅದ್ಭುತ ಸಾಧನೆ ಎಂದ ಪ್ರಧಾನಿ ಮೋದಿ

ಸವಾಲುಗಳನ್ನು ಮೆಟ್ಟಿ ನಿಂತ ಭಾರತ

ಹಲವು ಅಂತರರಾಷ್ಟ್ರೀಯ ಆರ್ಥಿಕ ಸಂಸ್ಥೆಗಳು ಭಾರತದ ಪ್ರಗತಿ ನಿಧಾನಗೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದವು. ಆದರೆ ಭಾರತವು ಸಾಗರ ಆಮದು ಮೂಲಗಳನ್ನು ವೈವಿಧ್ಯಗೊಳಿಸುವುದು (Diversification) ಮತ್ತು ಆಂತರಿಕವಾಗಿ ಗಟ್ಟಿ ಆರ್ಥಿಕ ತಡಿ ಒದಗಿಸುವ ಮೂಲಕ ಜಾಗತಿಕ ಹಿಂಜರಿತದ ಪ್ರಭಾವದಿಂದ ತಪ್ಪಿಸಿಕೊಂಡಿದೆ.

ಭಾರತದ ಆರ್ಥಿಕ ಪ್ರಗತಿಗೆ ಪ್ರಮುಖ ಕಾರಣಗಳು

  • ದೇಶೀಯ ಬಳಕೆ (Domestic Consumption): ಭಾರತದ ಬೃಹತ್ ಆಂತರಿಕ ಮಾರುಕಟ್ಟೆ ಮತ್ತು ಗ್ರಾಹಕರ ಬೇಡಿಕೆಯು ಜಾಗತಿಕ ಆಘಾತಗಳನ್ನು ಹೀರಿಕೊಂಡಿದೆ. ಅಂದರೆ, ದೇಶದೊಳಗೆ ಮಾರುಕಟ್ಟೆ ಉತ್ತಮ ಆರೋಗ್ಯದಲ್ಲಿ ಇದ್ದು, ಉದ್ಯಮಗಳ ಕೈಹಿಡಿದಿದೆ.
  • ಸೇವಾ ಮತ್ತು ತಯಾರಿಕಾ ರಂಗ: ದೇಶದ ಸೇವಾ ವಲಯ (Services) ಹಾಗೂ ತಯಾರಿಕಾ ರಂಗದಲ್ಲಿ (Manufacturing) ದೃಢ ಪ್ರಗತಿ ದಾಖಲಾಗಿದೆ.
  • ಸರ್ಕಾರದ ಬಂಡವಾಳ ಹೂಡಿಕೆ: ಮೂಲಸೌಕರ್ಯ (Infrastructure) ಯೋಜನೆಗಳಿಗೆ ಸರ್ಕಾರ ನಿರಂತರವಾಗಿ ಮಾಡಿದ ಹೂಡಿಕೆಗಳು ಆರ್ಥಿಕತೆಗೆ ಬಲ ನೀಡಿವೆ.

ಇದನ್ನೂ ಓದಿ: ಪೆಟ್ರೋಲ್ ನಳಿಕೆ, ಬಿಲ್​ಗಳಲ್ಲಿ ಎಥೆನಾಲ್ ಶೇಕಡಾವಾರು ಮಾಹಿತಿ ಕಡ್ಡಾಯಕ್ಕೆ ಸುಪ್ರೀಂ ನಕಾರ

ಜಾಗತಿಕವಾಗಿ ಮಾರುಕಟ್ಟೆಗಳು ಕಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೂ, ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಬೃಹತ್ ಆರ್ಥಿಕತೆಯಾಗಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿರುವುದು ಹೌದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us