ಐಟಿಆರ್ ಸಲ್ಲಿಕೆಯಿಂದ ಟಿಡಿಎಸ್ ಪಾವತಿವರೆಗೆ, ಜುಲೈನಲ್ಲಿ ಡೆಡ್ಲೈನ್ಗಳಿವೆ, ಗಮನಿಸಿ
Income Tax tasks to be done by July 31st: 2026ರ ಜುಲೈನಲ್ಲಿ ಆದಾಯ ತೆರಿಗೆಯ ವಿವಿಧ ಕಾರ್ಯಗಳಿಗೆ ಗಡುವುಗಳಿವೆ. ಐಟಿಆರ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನವಾಗಿದೆ. ಟಿಡಿಎಸ್ ದಾಖಲೆ ಸಲ್ಲಿಕೆಗೆ ಜುಲೈನಲ್ಲೇ ಡೆಡ್‌ಲೈನ್ ಇದೆ. ಫಾರ್ಮ್ 10ಇ, 10 ಐಎ, ಫಾರ್ಮ್ 138 ಅನ್ನು ಸಲ್ಲಿಸಲು ಗಡುವು ಇದೆ.

ಮುಖ್ಯಾಂಶಗಳು
- 2026ರ ಜುಲೈನಲ್ಲಿ ಆದಾಯ ತೆರಿಗೆಯ ವಿವಿಧ ಕಾರ್ಯಗಳಿಗೆ ಗಡುವುಗಳಿವೆ.
- ಐಟಿಆರ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನವಾಗಿದೆ.
- ಟಿಡಿಎಸ್ ದಾಖಲೆ ಸಲ್ಲಿಕೆಗೆ ಜುಲೈನಲ್ಲೇ ಡೆಡ್‌ಲೈನ್ ಇದೆ.
ನವದೆಹಲಿ, ಜೂನ್ 29: ಭಾರತದ ಟ್ಯಾಕ್ಸ್ ಕ್ಯಾಲೆಂಡರ್‌ನಲ್ಲಿ ಜುಲೈ ತಿಂಗಳು ಅತ್ಯಂತ ಬಿಡುವಿಲ್ಲದ ಮತ್ತು ಪ್ರಮುಖವಾದ ತಿಂಗಳಾಗಿದೆ. ಈ ತಿಂಗಳಲ್ಲಿ ಸಾಮಾನ್ಯ ಸಂಬಳದಾರರಿಂದ ಹಿಡಿದು ಕಂಪನಿಗಳವರೆಗೆ ಹಲವು ಪ್ರಮುಖ ತೆರಿಗೆ ನಿಯಮಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ವೈಯಕ್ತಿಕ ತೆರಿಗೆ ಪಾವತಿದಾರರು (Individual tax payers) ಜುಲೈ 31ರೊಳಗೆ ಐಟಿಆರ್ ಫೈಲಿಂಗ್ ಮಾಡಬೇಕು. ಹಾಗೆಯೇ, ಆದಾಯ ತೆರಿಗೆಗೆ (Income Tax) ಸಂಬಂಧಿಸಿದ ಒಂದಷ್ಟು ಹಣಕಾಸು ಕಾರ್ಯಗಳಿಗೆ ಜುಲೈನಾದ್ಯಂತ ಬೇರೆ ಬೇರೆ ಡೆಡ್ಲೈನ್ಗಳಿವೆ. ಈ ಕುರಿತು ಮಾಹಿತಿ ಇಲ್ಲಿದೆ:
ಜುಲೈ 7: ಟಿಡಿಎಸ್ (TDS) ಮತ್ತು ಟಿಸಿಎಸ್ (TCS) ಪಾವತಿ
ಜೂನ್ 2026 ರ ತಿಂಗಳಿನಲ್ಲಿ ಕಡಿತಗೊಳಿಸಲಾದ ಟಿಡಿಎಸ್ (Tax Deducted at Source) ಮತ್ತು ಟಿಸಿಎಸ್ (Tax Collected at Source) ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ಜಮಾ ಮಾಡಲು ಜುಲೈ 7 ಕೊನೆಯ ದಿನವಾಗಿದೆ.
ಒಂದು ವೇಳೆ ಅಸೆಸಿಂಗ್ ಅಧಿಕಾರಿಯಿಂದ ತ್ರೈಮಾಸಿಕ (Quarterly) ಟಿಡಿಎಸ್ ಪಾವತಿಗೆ ಅನುಮತಿ ಪಡೆದಿದ್ದರೆ, ಏಪ್ರಿಲ್-ಜೂನ್ 2026 ರ ಮೊದಲ ತ್ರೈಮಾಸಿಕದ ಟಿಡಿಎಸ್ ಹಣವನ್ನು ಜಮಾ ಮಾಡಲು ಕೂಡ ಇದೇ ಕೊನೆಯ ದಿನಾಂಕವಾಗಿದೆ.
ಜೂನ್ ತಿಂಗಳಲ್ಲಿ ಖರೀದಿದಾರರಿಂದ ಪಡೆದ ‘ಫಾರ್ಮ್ 127’ ಮತ್ತು ಜೂನ್ ತ್ರೈಮಾಸಿಕದಲ್ಲಿ ಸ್ವೀಕರಿಸಿದ ‘ಫಾರ್ಮ್ 121’ ರ ಪ್ರಕಟಣೆಗಳನ್ನು (Declarations) ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಕೂಡ ಜುಲೈ 7 ಕೊನೆಯ ದಿನ.
ಇದನ್ನೂ ಓದಿ: AI Agents: 2027ರ ವೇಳೆಗೆ ಟೆಕ್ ತಂಡಗಳನ್ನು ಬದಲಾಯಿಸಲಿವೆ ‘AI ಏಜೆಂಟ್‌ಗಳು’; ಏನಿದು ಹೊಸ ಟೆಕ್ನಾಲಜಿ?
ಜುಲೈ 15: ಟಿಡಿಎಸ್ ಪ್ರಮಾಣಪತ್ರಗಳು ಮತ್ತು ವರದಿಗಳ ಸಲ್ಲಿಕೆ
ಜುಲೈ 15 ರೊಳಗೆ ವಿವಿಧ ತೆರಿಗೆ ವರದಿಗಳು, ಟಿಡಿಎಸ್ ಪ್ರಮಾಣಪತ್ರಗಳು (TDS Certificates) ಮತ್ತು ರೆಮಿಟೆನ್ಸ್ ವರದಿಗಳ ಸಲ್ಲಿಕೆ ಸೇರಿದಂತೆ ಹಲವು ಪ್ರಮುಖ ಶಾಸನಬದ್ಧ ಕೆಲಸಗಳನ್ನು ಮುಗಿಸಬೇಕಾಗುತ್ತದೆ.
ಜುಲೈ 30: ಚಲನ್-ಕಮ್-ಸ್ಟೇಟ್‌ಮೆಂಟ್ ಸಲ್ಲಿಕೆ
ಜೂನ್ ತಿಂಗಳಿನಲ್ಲಿ ಸೆಕ್ಷನ್ 194-IA (ಆಸ್ತಿ ಖರೀದಿ), 194-IB (ಬಾಡಿಗೆ ಪಾವತಿ), ಮತ್ತು 194-M ಅಡಿಯಲ್ಲಿ ಕಡಿತಗೊಳಿಸಿದ ಟಿಡಿಎಸ್ ಮೊತ್ತಕ್ಕೆ ಸಂಬಂಧಿಸಿದ ಚಲನ್ ಮತ್ತು ವಿವರಗಳ ಸ್ಟೇಟ್‌ಮೆಂಟ್ ಸಲ್ಲಿಸಲು ಜುಲೈ 30 ಗಡುವಾಗಿದೆ.
ಜುಲೈ 31: ಐಟಿಆರ್ ಸಲ್ಲಿಕೆಗೆ ಡೆಡ್‌ಲೈನ್
ಸಂಬಳದಾರರಿಗೆ ಐಟಿಆರ್ (ITR) ಸಲ್ಲಿಕೆಯ ಅಂತಿಮ ದಿನವಾಗಿದೆ. ಇದು ಇಡೀ ತಿಂಗಳಲ್ಲೇ ಅತ್ಯಂತ ಪ್ರಮುಖವಾದ ಡೆಡ್‌ಲೈನ್ ಆಗಿದೆ.
ಯಾರಿಗೆ ಅನ್ವಯ? ಯಾವುದೇ ಆಡಿಟ್ ಅಗತ್ಯವಿಲ್ಲದ ಸಾಮಾನ್ಯ ಸಂಬಳ ಪಡೆಯುವ ಉದ್ಯೋಗಿಗಳು, ಪೆನ್ಷನ್ ದಾರರು ಮತ್ತು ಸಣ್ಣ ಹೂಡಿಕೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ (ITR-1 ಅಥವಾ ITR-2 ಫಾರ್ಮ್‌ಗಳನ್ನು) ಸಲ್ಲಿಸಲು ಜುಲೈ 31, 2026 ಕೊನೆಯ ದಿನವಾಗಿದೆ.
ಇದನ್ನೂ ಓದಿ: ಚಿನ್ನದ ಬೆಲೆ ಕಡಿಮೆ ಆಗಲು ಕಾರಣಗಳೇನು? ಬಂಗಾರ ಈಗ ಸುರಕ್ಷಿತ ಸರಕಾಗಿ ಉಳಿದಿಲ್ಲವಾ?
ಸಲ್ಲಿಸಬೇಕಿರುವ ಇತರ ಪ್ರಮುಖ ಫಾರ್ಮ್‌ಗಳು (ಜುಲೈ 31)
- ಫಾರ್ಮ್ 10E: ಹಿಂಬಾಕಿ (Arrears) ಅಥವಾ ಮುಂಗಡವಾಗಿ ಸಂಬಳ ಪಡೆದಾಗ ಸೆಕ್ಷನ್ 89 ರ ಅಡಿಯಲ್ಲಿ ತೆರಿಗೆ ವಿನಾಯಿತಿ ಕ್ಲೈಮ್ ಮಾಡಲು ಉದ್ಯೋಗಿಗಳು ಫಾರ್ಮ್ 10E ಅನ್ನು ಜುಲೈ 31ರೊಳಗೆ ಸಲ್ಲಿಸಬೇಕು.
- ಫಾರ್ಮ್ 10-IA: ಸೆಕ್ಷನ್ 80DD ಮತ್ತು 80U ಅಡಿಯಲ್ಲಿ ವಿಕಲಚೇತನರ ವೈದ್ಯಕೀಯ ವೆಚ್ಚಗಳ ತೆರಿಗೆ ವಿನಾಯಿತಿ ಪಡೆಯಲು ವೈದ್ಯಕೀಯ ಮಂಡಳಿಯಿಂದ ಪಡೆದ ಸರ್ಟಿಫಿಕೇಟ್ ಅನ್ನು ಸಲ್ಲಿಕೆ ಮಾಡಬೇಕು.
- ಫಾರ್ಮ್ 138: ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ನೀಡಿದ ಸಂಬಳದ ಟಿಡಿಎಸ್ ತ್ರೈಮಾಸಿಕ ಸ್ಟೇಟ್‌ಮೆಂಟ್ ಅಥವಾ ಹಿರಿಯ ನಾಗರಿಕರಿಗೆ ಪಾವತಿಸಿದ ಆದಾಯದ ವಿವರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ.
ಗಮನಿಸಿ: ತಜ್ಞರ ಪ್ರಕಾರ ಈ ಬಾರಿ ಐಟಿಆರ್ ಸಲ್ಲಿಕೆಯ ಗಡುವನ್ನು ವಿಸ್ತರಿಸುವ (Deadline Extension) ಸಾಧ್ಯತೆಗಳು ತೀರಾ ಕಡಿಮೆ ಇರುವುದರಿಂದ, ಕೊನೆಯ ಕ್ಷಣದ ವೆಬ್‌ಸೈಟ್ ತಾಂತ್ರಿಕ ದೋಷಗಳು ಅಥವಾ ದಂಡವನ್ನು ತಪ್ಪಿಸಲು ಜುಲೈ 31 ರ ಒಳಗಾಗಿಯೇ ನಿಮ್ಮ ರಿಟರ್ನ್ಸ್ ಸಲ್ಲಿಸುವುದು ಸೂಕ್ತ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




