Earnings from Alcohol: ಮದ್ಯಕ್ಕೆ ಕರ್ನಾಟಕದಲ್ಲಿ ಅತಿಹೆಚ್ಚು ತೆರಿಗೆ; ಉತ್ತರಪ್ರದೇಶದಲ್ಲಿ ಅತಿಹೆಚ್ಚು ಅಬಕಾರಿ ಆದಾಯ

|

Updated on: Dec 27, 2023 | 2:39 PM

Highest Liquor Tax In Karnataka: 2020-21ರ ಅಂಕಿ ಅಂಶದ ಪ್ರಕಾರ ಆಲ್ಕೋಹಾಲ್ ಮೇಲಿನ ಅಬಕಾರಿ ತೆರಿಗೆಗಳಿಂದ ಭಾರತಕ್ಕೆ ಬಂದ ಆದಾಯ 1.75 ಲಕ್ಷ ಕೋಟಿ ರುಪಾಯಿಯಷ್ಟು ಇತ್ತು. ಉತ್ತರಪ್ರದೇಶದಲ್ಲಿ ಒಂದು ವರ್ಷದಲ್ಲಿ ಮದ್ಯದ ಮೇಲಿನ ತೆರಿಗೆಯಿಂದ ಬಂದ ಆದಾಯ 40,000 ಕೋಟಿ ರೂಗೂ ಹೆಚ್ಚು. ದೇಶದಲ್ಲಿ ಮದ್ಯಕ್ಕೆ ಅತಿಹೆಚ್ಚು ಅಬಕಾರಿ ಟ್ಯಾಕ್ಸ್ ಇರುವುದು ಕರ್ನಾಟಕದಲ್ಲಿ. ಇಲ್ಲಿ ಶೇ. 83ರಷ್ಟು ಎಕ್ಸೈಸ್ ಟ್ಯಾಕ್ಸ್ ಇದೆ.

Earnings from Alcohol: ಮದ್ಯಕ್ಕೆ ಕರ್ನಾಟಕದಲ್ಲಿ ಅತಿಹೆಚ್ಚು ತೆರಿಗೆ; ಉತ್ತರಪ್ರದೇಶದಲ್ಲಿ ಅತಿಹೆಚ್ಚು ಅಬಕಾರಿ ಆದಾಯ
ಆಲ್ಕೋಹಾಲ್
Follow us on

ನವದೆಹಲಿ, ಡಿಸೆಂಬರ್ 27: ಬೆಲೆ ಎಷ್ಟೇ ಆದರೂ ಕುಡುಕರು ಮದ್ಯಪಾನ ನಿಲ್ಲಿಸಲ್ಲ, ಸ್ಮೋಕರ್​ಗಳು ಧೂಮಪಾನ ನಿಲ್ಲಿಸಲ್ಲ. ಸರ್ಕಾರ ಪಾಲಿಗೆ ಇವರೇ ಪ್ರಮುಖ ಆದಾಯದಾತರು. ಆರೋಗ್ಯಕ್ಕೆ ಎಷ್ಟೇ ಮಾರಕವಾಗಲಿ ಸರ್ಕಾರ ತೆರಿಗೆ ಹೆಚ್ಚಿಸುತ್ತದೆಯೇ ವಿನಃ ಮದ್ಯ ನಿಷೇಧ ಮಾಡುವುದಿಲ್ಲ. ಸರ್ಕಾರ ಬಾರಿ ಬಾರಿ ಅಲ್ಕೋಹಾಲ್, ತಂಬಾಕು ಬೆಲೆ ಹೆಚ್ಚಿಸುತ್ತಲೇ ಇರುತ್ತದೆ. ಜನರ ಚಟ ಮಾತ್ರ ಕಡಿಮೆ ಆಗಿಲ್ಲ. 2020-21ರ ಹಣಕಾಸು ವರ್ಷದಲ್ಲಿ ಬಂದ ದತ್ತಾಂಶದ ಪ್ರಕಾರ ಅಬಕಾರಿ ಸುಂಕಗಳಿಂದ (excise tax, excise duty) ಭಾರತಕ್ಕೆ ಬಂದ ಆದಾಯ ಬರೋಬ್ಬರಿ 1.75 ಲಕ್ಷ ಕೋಟಿ ರೂ. ಅಬಕಾರಿ ತೆರಿಗೆಯಿಂದ ಅತಿಹೆಚ್ಚು ಆದಾಯ ಪಡೆಯುವುದು ಉತ್ತರಪ್ರದೇಶ ರಾಜ್ಯ. 2020-21ರ ವರ್ಷದಲ್ಲಿ ಉತ್ತರಪ್ರದೇಶಕ್ಕೆ ಬಂದ ಅಬಕಾರಿ ತೆರಿಗೆ ಆದಾಯ 41,250 ಕೋಟಿ ರೂ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಮೊದಲಾದ ರಾಜ್ಯಗಳಿಗೂ ಬಹಳ ಹೆಚ್ಚಿನ ಅಬಕಾರಿ ಆದಾಯ ಹರಿದುಬರುತ್ತದೆ. ಹೆಚ್ಚಿನ ರಾಜ್ಯಗಳಿಗೆ ಸಿಗುವ ಆದಾಯದಲ್ಲಿ ಶೇ. 15ರಿಂದ 30ರಷ್ಟು ಪಾಲು ಅಬಕಾರಿ ತೆರಿಗೆಗಳಿಂದಲೇ ಇದೆ.

ಒಂದು ವಸ್ತುವನ್ನು ಖರೀದಿಸಲು ಜನರು ಹಿಂದೇಟು ಹಾಕುವಂತೆ ಮಾಡಲು, ಅದಕ್ಕೆ ವಿಧಿಸುವ ತೆರಿಗೆಯೇ ಎಕ್ಸೈಸ್ ಟ್ಯಾಕ್ಸ್ ಅಥವಾ ಅಬಕಾರಿ ಸುಂಕ. ಪೆಟ್ರೋಲ್, ಮದ್ಯ, ಸಿಗರೇಟ್ ಇತ್ಯಾದಿಗೆ ಅಬಕಾರಿ ಸುಂಕ ಹಾಕಲಾಗುತ್ತದೆ. ಕೇಂದ್ರ ಸರ್ಕಾರ ಸೆಂಟ್ರಲ್ ಎಕ್ಸೈಸ್ ಟ್ಯಾಕ್ಸ್ ಹಾಕುತ್ತದೆ. ರಾಜ್ಯ ಸರ್ಕಾರಗಳೂ ಕೂಡ ಹೆಚ್ಚುವರಿ ತೆರಿಗೆ ವಿಧಿಸುವ ಅವಕಾಶ ಹೊಂದಿರುತ್ತವೆ.

ಇದನ್ನೂ ಓದಿ: ಗಣನೀಯವಾಗಿ ತಗ್ಗಿದ ದೇಶದ ಕರೆಂಟ್ ಅಕೌಂಟ್ ಡೆಫಿಸಿಟ್; ಜಿಡಿಪಿಯ 1 ಪ್ರತಿಶತ ಮಾತ್ರವೇ ಸಿಎಡಿ

ಇದರಲ್ಲಿ ಕರ್ನಾಟಕದಲ್ಲಿ ಮದ್ಯಕ್ಕೆ ಅತಿಹೆಚ್ಚು ತೆರಿಗೆ ಇದೆ. ಇಲ್ಲಿ ಮದ್ಯಕ್ಕೆ ಶೇ. 83ರಷ್ಟು ತೆರಿಗೆ ಇದೆ. ಗೋವಾದಲ್ಲಿ ಅತಿ ಕಡಿಮೆ ತೆರಿಗೆ ಇದೆ. ಪಾಂಡಿಚೇರಿಯಲ್ಲೂ ಅಬಕಾರಿ ತೆರಿಗೆ ಕಡಿಮೆ ಇದೆ. ಗೋವಾದಲ್ಲಿ ಪ್ರವಾಸ ಹೋಗುವ ಜನರು ಕುಡಿದು ಉರುಳಾಡಬೇಕೆನ್ನುವುದು ಇದೇ ಕಾರಣಕ್ಕೆ. ಕರ್ನಾಟಕದಲ್ಲಿ 500 ರೂಗೂ ಹೆಚ್ಚು ಬೆಲೆಯ ಲಿಕ್ಕರ್ ಬಾಟಲ್, ಗೋವಾದಲ್ಲಿ ಕೇವಲ 100 ರೂಗೆ ಸಿಗುತ್ತದೆ.

ಎಲ್ಲಾ ಮದ್ಯಕ್ಕೂ ಏಕರೀತಿಯಲ್ಲಿ ತೆರಿಗೆ ಇರುವುದಿಲ್ಲ. ದೇಶೀಯವಾಗಿ ತಯಾರಾದ ಮದ್ಯಕ್ಕೆ ಬೇರೆ ತೆರಿಗೆ, ವಿದೇಶಗಳಿಂದ ಆಮದಾದ ಮದ್ಯಕ್ಕೆ ಬೇರೆ ತೆರಿಗೆ ಇರುತ್ತದೆ. ಹಾಗೆಯೇ, ಬಿಯರ್, ವಿಸ್ಕಿ, ರಮ್, ಬ್ರಾಂಡಿ, ಸ್ಕಾಚ್, ವೋಡ್ಕಾ ಇತ್ಯಾದಿಗಳಿಗೆ ಭಿನ್ನ ಪ್ರಮಾಣದ ತೆರಿಗೆಗಳಿರುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ