ಗಣನೀಯವಾಗಿ ತಗ್ಗಿದ ದೇಶದ ಕರೆಂಟ್ ಅಕೌಂಟ್ ಡೆಫಿಸಿಟ್; ಜಿಡಿಪಿಯ 1 ಪ್ರತಿಶತ ಮಾತ್ರವೇ ಸಿಎಡಿ

India Current Account Deficit: ಭಾರತದ ಆರ್ಥಿಕತೆ ಉತ್ತಮವಾಗಿರುವುದನ್ನು ಸಂಕೇತಿಸುವಂತೆ ಸೆಪ್ಟೆಂಬರ್ ಅಂತ್ಯದ ಕ್ವಾರ್ಟರ್​ನಲ್ಲಿ ಕರೆಂಟ್ ಅಕೌಂಟ್ ಡೆಫಿಸಿಟ್ ತಗ್ಗಿದೆ. ಆರ್​ಬಿಐ ದತ್ತಾಂಶದ ಪ್ರಕಾರ ಚಾಲ್ತಿ ಖಾತೆ ಕೊರತೆ 8.3 ಬಿಲಿಯನ್ ಡಾಲರ್​ಗೆ ಇಳಿದಿದೆ. ಇದು ಜಿಡಿಪಿಯ ಶೇ. 1 ಮಾತ್ರವೇ. ಭಾರತದ ಸರಕು ಮತ್ತು ಸೇವೆಗಳ ರಫ್ತಿನಲ್ಲಿ ಹೆಚ್ಚಳವಾಗಿರುವುದರ ಪರಿಣಾಮವಾಗಿ ಸಿಎಡಿ ಅಂತರ ಕಡಿಮೆ ಆಗಿದೆ.

ಗಣನೀಯವಾಗಿ ತಗ್ಗಿದ ದೇಶದ ಕರೆಂಟ್ ಅಕೌಂಟ್ ಡೆಫಿಸಿಟ್; ಜಿಡಿಪಿಯ 1 ಪ್ರತಿಶತ ಮಾತ್ರವೇ ಸಿಎಡಿ
ಚಾಲ್ತಿ ಖಾತೆ ಕೊರತೆ
Follow us
|

Updated on: Dec 26, 2023 | 7:14 PM

ನವದೆಹಲಿ, ಡಿಸೆಂಬರ್ 26: ಭಾರತದ ಚಾಲ್ತಿ ಖಾತೆ ಕೊರತೆ ಅಥವಾ ಅಂತರವು (Current account Deficit) ಸೆಪ್ಟೆಂಬರ್ ಅಂತ್ಯದ ಕ್ವಾರ್ಟರ್​ನಲ್ಲಿ ಗಣನೀಯವಾಗಿ ಇಳಿದಿದೆ. ಆರ್​ಬಿಐ ಇಂದು ಮಂಗಳವಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಕರೆಂಟ್ ಅಕೌಂಟ್ ಡೆಫಿಸಿಟ್ ನಮ್ಮ ಜಿಡಿಪಿಯ ಶೇ. 1ಕ್ಕೆ ಇಳಿದಿದೆ. ಅಂದರೆ, ಚಾಲ್ತಿ ಖಾತೆ ಕೊರತೆ 8.3 ಬಿಲಿಯನ್ ಡಾಲರ್​ನಷ್ಟು ಇರುವುದು ತಿಳಿದುಬಂದಿದೆ. ಹಿಂದಿನ ವರ್ಷದ ಇದೇ ಕ್ವಾರ್ಟರ್​​ನಲ್ಲಿ (2022ರ ಜುಲೈನಿಂದ ಸೆಪ್ಟೆಂಬರ್​ವರೆಗಿನ ಅವಧಿ) ಕರೆಂಟ್ ಅಕೌಂಟ್ ಡೆಫಿಸಿಟ್ ಅಥವಾ ಸಿಎಡಿ 30.9 ಬಿಲಿಯನ್ ಡಾಲರ್ ಇತ್ತು. ಜಿಡಿಪಿಯ ಶೇ. 3.8ರಷ್ಟು ಪ್ರಮಾಣದಲ್ಲಿ ಕೊರತೆ ಇತ್ತು.

ಚಾಲ್ತಿ ಖಾತೆ ಕೊರತೆ ಅಂದರೆ ಏನು?

ಒಂದು ದೇಶದ ಒಟ್ಟಾರೆ ಸರಕು ಮತ್ತು ಸೇವೆಗಳ ರಫ್ತು ಹಾಗೂ ಆಮದು ನಡುವಿನ ಅಂತರವಾಗಿದೆ. ರಫ್ತಿಗಿಂತ ಆಮದು ಹೆಚ್ಚಾಗಿದ್ದರೆ ಅದು ಕರೆಂಟ್ ಅಕೌಂಟ್ ಡೆಫಿಸಿಟ್ ಎನಿಸುತ್ತದೆ. ರಫ್ತು ಹೆಚ್ಚಾಗಿದ್ದರೆ ಅದು ಕರೆಂಟ್ ಅಕೌಂಟ್ ಸರ್​ಪ್ಲಸ್ (current account surplus) ಎನಿಸುತ್ತದೆ.

ಇದನ್ನೂ ಓದಿ: ಖುಷಿಯ ಸುದ್ದಿ…! ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಹೆಚ್ಚಳ ಸಾಧ್ಯತೆ; ಇಲ್ಲಿದೆ ಸೇವಿಂಗ್ಸ್ ಸ್ಕೀಮ್​ಗಳ ಹಾಲಿ ದರದ ಪಟ್ಟಿ

ಈಗ ಕೊರತೆ ಕಡಿಮೆ ಆಗಲು ಏನು ಕಾರಣ?

ಭಾರತದ ಅಂತಾರಾಷ್ಟ್ರೀಯ ಸರಕು ವಹಿವಾಟಿನಲ್ಲಿ ಇರುವ ಅಂತರ ತಗ್ಗಿರುವುದು ಹಾಗೂ ಸರ್ವಿಸ್ ರಫ್ತು ಪ್ರಮಾಣ ಹೆಚ್ಚಿದ್ದು ಒಟ್ಟಾರೆಯಾಗಿ ಕರೆಂಟ್ ಅಕೌಂಟ್ ಡೆಫಿಸಿಟ್ ಕಡಿಮೆ ಆಗುವಂತೆ ಮಾಡಿದೆ.

ಇದನ್ನೂ ಓದಿ: ಪರ್ಸನಲ್ ಲೋನ್, ಅಕ್ಟೋಬರ್ ತಿಂಗಳಲ್ಲಿ 45 ಲಕ್ಷ ಕೋಟಿ ರೂ; ಆರ್ಥಿಕ ಚಟುವಟಿಕೆ ಗರಿಗೆದರಿದ ಕುರುಹಾ ಇದು?

ವರ್ಷದ ಹಿಂದಿನ ಇದೇ ಕ್ವಾರ್ಟರ್​ಗೆ ಹೋಲಿಸಿದರೆ ಸೇವಾ ಕ್ಷೇತ್ರದಿಂದ ಆದ ರಫ್ತು ಶೇ. 4.2ರಷ್ಟು ಹೆಚ್ಚಾಗಿರುವುದು ಕಂಡು ಬಂದಿದೆ. ಸಾಫ್ಟ್​ವೇರ್, ಟ್ರಾವಲ್ ಸರ್ವಿಸ್​ಗಳು ಹೆಚ್ಚಾಗಿವೆ. ಇನ್ನು, ಹಿಂದಿನ ವರ್ಷದ ಸೆಪ್ಟೆಂಬರ್ ಅಂತ್ಯದ ಕ್ವಾರ್ಟರ್​ನಲ್ಲಿ ಸರಕು ವ್ಯಾಪಾರ ಅಂತರ 78.3 ಬಿಲಿಯನ್ ಡಾಲರ್ ಇತ್ತು. ಅದು ಈ ವರ್ಷದ ಅವಧಿಯಲ್ಲಿ 61 ಬಿಲಿಯನ್ ಡಾಲರ್​ಗೆ ಇಳಿದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ