ಪರ್ಸನಲ್ ಲೋನ್, ಅಕ್ಟೋಬರ್ ತಿಂಗಳಲ್ಲಿ 45 ಲಕ್ಷ ಕೋಟಿ ರೂ; ಆರ್ಥಿಕ ಚಟುವಟಿಕೆ ಗರಿಗೆದರಿದ ಕುರುಹಾ ಇದು?

Personal Loans: ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಇತ್ತೀಚಿನ ವರ್ಷಗಳಲ್ಲಿ ಬಹಳವೇ ಬೆಳೆದಿದೆ. ಬ್ಯಾಂಕ್ ಸಾಲಗಳೂ ಕೂಡ ಸಾಕಷ್ಟು ವಿತರಣೆ ಆಗಿವೆ. ಬ್ಯಾಂಕ್ ಬಜಾರ್ ವರದಿಯೊಂದರ ಪ್ರಕಾರ ವೈಯಕ್ತಿಕ ಸಾಲಗಳ ಪ್ರಮಾಣ ಅಕ್ಟೋಬರ್ ತಿಂಗಳಲ್ಲಿ 45.51 ಲಕ್ಷ ಕೋಟಿ ರೂ ಇದೆ. ವೈಯಕ್ತಿಕ ಸಾಲದ ಪೈಕಿ ಹೌಸಿಂಗ್ ಲೋನ್ ಪಾಲು ಶೇ. 21ಕ್ಕಿಂತಲೂ ಹೆಚ್ಚು ಎನ್ನಲಾಗಿದೆ. ಒಟ್ಟಾರೆ ಆರ್ಥಿಕ ಚಟುವಟಿಕೆ ಗರಿಗೆದರಿದ ಸಂಕೇತ ಇದು.

ಪರ್ಸನಲ್ ಲೋನ್, ಅಕ್ಟೋಬರ್ ತಿಂಗಳಲ್ಲಿ 45 ಲಕ್ಷ ಕೋಟಿ ರೂ; ಆರ್ಥಿಕ ಚಟುವಟಿಕೆ ಗರಿಗೆದರಿದ ಕುರುಹಾ ಇದು?
ಪರ್ಸನಲ್ ಲೋನ್
Follow us
|

Updated on: Dec 26, 2023 | 5:05 PM

ನವದೆಹಲಿ, ಡಿಸೆಂಬರ್ 26: ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಇತ್ತೀಚಿನ ವರ್ಷಗಳಲ್ಲಿ ಬಹಳವೇ ಬೆಳೆದಿದೆ. ಬ್ಯಾಂಕ್ ಸಾಲಗಳೂ ಕೂಡ ಸಾಕಷ್ಟು ವಿತರಣೆ ಆಗಿವೆ. ಅದರಲ್ಲಿ ವೈಯಕ್ತಿಕ ಸಾಲದ ಪಾಲು ಬಹಳ ಇರುತ್ತದೆ. ಇವು ರಿಸ್ಕಿಯಾದರೂ ಬ್ಯಾಂಕುಗಳಿಗೆ ಹೆಚ್ಚಿನ ಆದಾಯ ತರುವುದು ಪರ್ಸನಲ್ ಲೋನ್​ಗಳೇ. ಬ್ಯಾಂಕ್ ಬಜಾರ್​ನ ವರದಿಯೊಂದರ ಪ್ರಕಾರ 2023ರ ಅಕ್ಟೋಬರ್ ತಿಂಗಳಲ್ಲಿ ದಾಖಲಾಗಿರುವ ವೈಯಕ್ತಿಕ ಸಾಲದ ಪ್ರಮಾಣ 45.51 ಲಕ್ಷ ಕೋಟಿ ರೂ ಎನ್ನಲಾಗಿದೆ.

ಹೆಚ್ಚಿನ ಸಂದರ್ಭದ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್​ಗಳನ್ನು ಅಡಮಾನ ಪಡೆದುಕೊಳ್ಳದೇ ನೀಡುವುದರಿಂದ ಬ್ಯಾಂಕುಗಳಿಗೆ ರಿಸ್ಕಿ ಇರುತ್ತವೆ. ವೈಯಕ್ತಿಕ ಸಾಲಗಳ ಪೈಕಿ ಹೆಚ್ಚಿನ ಪಾಲು ಇರುವುದು ಹೌಸಿಂಗ್ ಲೋನ್. ಇದು ಶೇ. 47.11ರಷ್ಟು ಇದೆ. 21.44 ಲಕ್ಷ ಕೋಟಿ ರೂನಷ್ಟು ಸಾಲ ಬಾಕಿ ಇದೆ. ವಾಹನ ಸಾಲ ಶೇ. 12ಕ್ಕಿಂತಲೂ ಹೆಚ್ಚಿದೆ. ಮೂರನೇ ಸ್ಥಾನ ಕ್ರೆಡಿಟ್ ಕಾರ್ಡ್ ಸಾಲಗಳದ್ದು. ಇದು 2.40 ಲಕ್ಷ ಕೋಟಿ ರೂನಷ್ಟು ಇದೆ.

ಇದನ್ನೂ ಓದಿ: Tips: ನಿವೃತ್ತಿಗೆ ಹಣ ಹೊಂದಿಸಬೇಕೆ? ಎಲ್ಲೆಲ್ಲಿ ಹೂಡಿಕೆ ಮಾಡಬೇಕು, ಈ ಸಲಹೆ ನಿಮಗೆ ಉಪಯುಕ್ತ ಎನಿಸಬಹುದು

ಸಾಲದ ವಿವರ….

ಅಕ್ಟೋಬರ್​ನಲ್ಲಿ ಇರುವ ಒಟ್ಟು ವೈಯಕ್ತಿಕ ಸಾಲಗಳು: 45.51 ಲಕ್ಷ ಕೋಟಿ ರೂ

  • ಹೌಸಿಂಗ್ ಲೋನ್: 21.44 ಲಕ್ಷ ಕೋಟಿ ರೂ (ಶೇ. 21.44)
  • ವಾಹನ ಸಾಲ: 5.53 ಲಕ್ಷ ಕೋಟಿ ರೂ (ಶೇ. 12.15)
  • ಕ್ರೆಡಿಟ್ ಕಾರ್ಡ್ ಸಾಲ: 2.40 ಲಕ್ಷ ಕೋಟಿ ರೂ (ಶೆ. 5.29)
  • ಎಫ್​ಡಿ ಆಧಾರಿತ ಸಾಲ: 1.13 ಲಕ್ಷ ಕೋಟಿ ರೂ (ಶೇ. 2.50)
  • ಶಿಕ್ಷಣ ಸಾಲ: 1.10 ಲಕ್ಷ ಕೋಟಿ ರೂ (ಶೇ. 2.43)
  • ಚಿನ್ನದ ಸಾಲ: 1 ಲಕ್ಷ ಕೋಟಿ ರೂ (ಶೇ. 2.20)
  • ಗ್ರಾಹಕ ಬಳಕೆ ವಸ್ತುಗಳ ಖರೀದಿಗೆ ಸಾಲ: 22,200 ಕೋಟಿ ರೂ (ಶೇ. 0.49)
  • ಶೇರ್, ಬಾಂಡ್ ಇತ್ಯಾದಿ ಆಧಾರಿತ ಸಾಲ: 7,800 ಕೋಟಿ ರೂ (ಶೇ. 0.17)
  • ಇತರೆ ಪರ್ಸನಲ್ ಲೋನ್: 12.59 ಲಕ್ಷ ಕೋಟಿ ರೂ (ಶೇ. 26.66)

ಇದನ್ನೂ ಓದಿ: Credit Card Closure: ಕ್ರೆಡಿಟ್ ಕಾರ್ಡ್ ಹಿಂದಿರುಗಿಸಬೇಕೆ? ಬಹಳ ಸಿಂಪಲ್ ಕೆಲಸ

ಈ ಮೇಲಿನ ಅಂಕಿ ಅಂಶಗಳು ಬ್ಯಾಂಕಿಂಗ್ ವಲಯದ ಸುದೃಢತೆಯನ್ನು ಸಂಕೇತಿಸುತ್ತದೆ ಎಂಬುದು ತಜ್ಞರ ಅನಿಸಿಕೆ. ದೇಶದ ಆರ್ಥಿಕ ಚಟುವಟಿಕೆ ಗರಿಗೆದರಿರುವುದನ್ನು ಇವು ಸೂಚಿಸುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ