ವಿಶ್ವದ ಅಗ್ರಮಾನ್ಯ ಎಲೆಕ್ಟ್ರಾನಿಕ್ಸ್ ಕಂಪನಿಯಾಗಿ ಬೆಳೆಯಲು ಪಣತೊಟ್ಟ ಭಾರತದ ಡಿಕ್ಸನ್ ಟೆಕ್ನಾಲಜೀಸ್

ಡಿಕ್ಸನ್ ಟೆಕ್ನಾಲಜೀಸ್ ಮುಂದಿನ 10 ವರ್ಷದಲ್ಲಿ ವಿಶ್ವದ ಟಾಪ್-5 ಎಲೆಕ್ಟ್ರಾನಿಕ್ಸ್ ಉತ್ಪಾದನಾ ಸೇವಾ (EMS) ಕಂಪನಿಯಾಗಲು ಮಹತ್ವದ ಗುರಿ ಇಟ್ಟಿದೆ. ಸದ್ಯ ಸ್ಮಾರ್ಟ್​ಫೋನ್ ಅಸೆಂಬ್ಲಿಂಗ್ ಮಾಡುವ ಸಂಸ್ಥೆಯು, ಹೆಚ್ಚು ಲಾಭ ತರುವ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ತಯಾರಿಕೆಗೆ ಒತ್ತು ನೀಡುತ್ತಿದೆ. ಭಾರತ ಸರ್ಕಾರದ PLI ಯೋಜನೆಯ ಬೆಂಬಲದೊಂದಿಗೆ, ಜಾಗತಿಕ ಕಂಪನಿಗಳಾದ ಫಾಕ್ಸ್‌ಕಾನ್ ಮತ್ತು ಪೆಗಟ್ರಾನ್​ಗಳಿಗೆ ಸ್ಪರ್ಧೆ ನೀಡಲು ಹಾಗೂ ಸ್ಥಳೀಯ ಮೌಲ್ಯವರ್ಧನೆ ಹೆಚ್ಚಿಸಲು ಡಿಕ್ಸನ್ ಸಜ್ಜಾಗಿದೆ.

ವಿಶ್ವದ ಅಗ್ರಮಾನ್ಯ ಎಲೆಕ್ಟ್ರಾನಿಕ್ಸ್ ಕಂಪನಿಯಾಗಿ ಬೆಳೆಯಲು ಪಣತೊಟ್ಟ ಭಾರತದ ಡಿಕ್ಸನ್ ಟೆಕ್ನಾಲಜೀಸ್
ಡಿಕ್ಸನ್ ಟೆಕ್ನಾಲಜೀಸ್​ನ ಛೇರ್ಮನ್ ಸುನೀಲ್ ವಚಾನಿ
Image Credit source: Sunil Vachani's LinkedIn

Updated on: Sep 24, 2026 | 5:15 PM

ಮುಂಬೈ, ಸೆಪ್ಟೆಂಬರ್ 24: ಭಾರತದ ಪ್ರಮುಖ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಸೇವಾ (EMS) ಸಂಸ್ಥೆಯಾದ ಡಿಕ್ಸನ್ ಟೆಕ್ನಾಲಜೀಸ್ (Dixon Technologies) ಬಹಳ ದೊಡ್ಡ ಗುರಿ ಇಟ್ಟಿದೆ. ಸದ್ಯ, ಸ್ಮಾರ್ಟ್​ಫೋನ್ ಅಸೆಂಬ್ಲಿಂಗ್ ಮಾಡುವ ಕಾಂಟ್ರಾಕ್ಟ್ ಸರ್ವಿಸ್ ನಡೆಸುತ್ತಿರುವ ಡಿಕ್ಸನ್, ತನ್ನ ಉದ್ಯಮ ವಿಸ್ತರಿಸಲು ಬೃಹತ್ ಯೋಜನೆ ಹಾಕಿದೆ. ಸದ್ಯ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಸದ್ಯ ಟಾಪ್-10 ರ ಹೊರಗಿರುವ ಡಿಕ್ಸನ್ ಟೆಕ್ನಾಲಜೀಸ್, ಮುಂದಿನ ಹತ್ತು ವರ್ಷದಲ್ಲಿ ವಿಶ್ವದ ಟಾಪ್-5 ಸಂಸ್ಥೆಯಾಗಿ ಬೆಳೆಯುವ ಬಹಳ ದೊಡ್ಡ ಗುರಿ ಹಾಕಿಕೊಂಡಿದೆ. ತೈವಾನ್ ಮತ್ತು ಚೀನೀ ಕಂಪನಿಗಳಿಗೆ ಕಠಿಣ ಸ್ಪರ್ಧೆಯೊಡ್ಡುವ ಸಾಮರ್ಥ್ಯ ಹೊಂದಲು ಹೊರಟಿದೆ.

ಡಿಕ್ಸನ್ ಟೆಕ್ನಾಲಜೀಸ್​ನ ಛೇರ್ಮನ್ ಸುನೀಲ್ ವಚಾನಿ ಅವರು ತಮ್ಮ ಸಂಸ್ಥೆಯ ಗುರಿಯನ್ನು ಸ್ಪಷ್ಟಪಡಿಸಿದ್ದಾರೆ. ಮುಂದಿನ ಐದು ವರ್ಷದಲ್ಲಿ ಟಾಪ್-10 ಇಎಂಎಸ್ ಪಟ್ಟಿಯಲ್ಲಿರುವುದು, ಮುಂದಿನ 10 ವರ್ಷದಲ್ಲಿ ಟಾಪ್-5 ಪಟ್ಟಿಯಲ್ಲಿ ಬರಬೇಕು ಎಂದು ಅವರು ತಮ್ಮ ಆಕಾಂಕ್ಷೆ ಮುಂದಿಟ್ಟಿದ್ದಾರೆ.

ಹೆಚ್ಚು ಲಾಭ ತರುವ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಿಕೆ ಮೇಲೆ ಕಣ್ಣು

ಡಿಕ್ಸನ್ ಟೆಕ್ನಾಲಜೀಸ್ ಕಂಪನಿಯು ಸದ್ಯ ಸ್ಯಾಮ್ಸುಂಗ್, ಶವೋಮಿ ಮೊದಲಾದ ಸ್ಮಾರ್ಟ್​ಫೋನ್ ಕಂಪನಿಗಳಿಗೆ ಕಾಂಟ್ರಾಕ್ಟ್ ಮ್ಯಾನುಫ್ಯಾಕ್ಚರಿಂಗ್ ಆಗಿದೆ. ಹಾಗೆಯೇ, ಕನ್ಸೂಮರ್ ಎಲೆಕ್ಟ್ರಾನಿಕ್ಸ್, ಗೃಹೋಪಕರಣಗಳು, ಸೆಕ್ಯೂರಿಟಿ ಸಿಸ್ಟಮ್ಸ್, ಲ್ಯಾಪ್​ಟಾಪ್ ಇತ್ಯಾದಿಗಳನ್ನೂ ಗುತ್ತಿಗೆ ಪಡೆದು ತಯಾರಿಸಿಕೊಡುತ್ತಿದೆ.

ಇದನ್ನೂ ಓದಿ: ಐಆರ್​ಡಿಎಐ ಹೊಸ ಡಿಸ್ಟ್ರಿಬ್ಯೂಶನ್ ನಿಯಮಗಳಿಗೆ ಪ್ರಸ್ತಾಪ; ಇನ್ಷೂರೆನ್ಸ್ ಕಮಿಷನ್ ಇಳಿಕೆ ಇತ್ಯಾದಿ ಕ್ರಮ; ಗ್ರಾಹಕರಿಗೆ ಆಗುವ ಲಾಭಗಳೇನು?

ಮುಂದಿನ ದಿನಗಳಲ್ಲಿ ಕ್ಯಾಮರಾ ಮಾಡ್ಯೂಲ್​ಗಳಂತಹ ಬಹಳ ಅಧಿಕ ಲಾಭದ ಮಾರ್ಜಿನ್ ಮತ್ತು ಮೌಲ್ಯ ಇರುವ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳನ್ನು ತಯಾರಿಸಲಿದೆ. ಈ ಮೂಲಕ, ವಿಶ್ವದ ಸರಬರಾಜು ಸರಪಳಿಯಲ್ಲಿ ಪ್ರಮುಖ ಭಾಗವಾಗಲು ಹೊರಟಿದೆ.

ಜಾಗತಿಕ ಮಟ್ಟದ ಸ್ಪರ್ಧೆ ಮತ್ತು ವಿಸ್ತರಣೆ

ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯ ಸಾಧಿಸಿದ ನಂತರ, ಡಿಕ್ಸನ್ ಈಗ ಜಾಗತಿಕ ಕಾಂಟ್ರಾಕ್ಟ್ ಮ್ಯಾನುಫ್ಯಾಕ್ಚರಿಂಗ್ ದೈತ್ಯ ಕಂಪನಿಗಳಾದ ಫಾಕ್ಸ್‌ಕಾನ್ (Foxconn) ಮತ್ತು ಪೆಗಟ್ರಾನ್ (Pegatron) ಸಾಲಿನಲ್ಲಿ ನಿಲ್ಲಲು ಸಜ್ಜಾಗುತ್ತಿದೆ.

ಭಾರತದಲ್ಲಿ ಉತ್ಪಾದಿಸುವ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುವ ಪ್ರಮಾಣವನ್ನು ಗಮನಾರ್ಹವಾಗಿ ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: ಭಾರತದ ಮೂಲಸೌಕರ್ಯ ಕ್ರಾಂತಿ; ಸೇತುವೆ, ಸುರಂಗ, ಎಕ್ಸ್​ಪ್ರೆಸ್​ವೇಗಳಿಂದ ಮಿಂಚಿನ ಸಂಚಾರ; ಪ್ರಯಾಣ ಅವಧಿ ಗಣನೀಯವಾಗಿ ಇಳಿಕೆ

ಸರ್ಕಾರದ ಯೋಜನೆಗಳ ಬೆಂಬಲ

ಭಾರತ ಸರ್ಕಾರದ ‘ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್’ (PLI) ಯೋಜನೆಯಡಿ ಹೆಚ್ಚಿನ ಲಾಭ ಪಡೆದಿರುವ ಡಿಕ್ಸನ್, ಪ್ರಸ್ತುತ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಮತ್ತು ಎಲೆಕ್ಟ್ರಾನಿಕ್ಸ್ ರಫ್ತು ಪ್ರೋತ್ಸಾಹದ ನೀತಿಗಳ ಪೂರ್ಣ ಪ್ರಯೋಜನವನ್ನು ಪಡೆಯುತ್ತಿದೆ.

ಕೇವಲ ಸಾಧನಗಳನ್ನು ಜೋಡಣೆ (Assembly) ಮಾಡುವುದಷ್ಟೇ ಅಲ್ಲದೆ, ಪ್ರಮುಖ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳನ್ನು (Components) ದೇಶೀಯವಾಗಿಯೇ ತಯಾರಿಸುವ ಮೂಲಕ ಸ್ಥಳೀಯ ಮೌಲ್ಯವರ್ಧನೆಯನ್ನು (Local Value Addition) ಹೆಚ್ಚಿಸಲು ಯೋಜನೆ ರೂಪಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us