ಭಾರತ-ಯೂರೋಪಿಯನ್ ಒಕ್ಕೂಟ ವ್ಯಾಪಾರ ಒಪ್ಪಂದ ಡಿಸೆಂಬರ್ 16ಕ್ಕೆ ಸಹಿ ಸಾಧ್ಯತೆ: ವರದಿ

27 ದೇಶಗಳ ಗುಂಪಾಗಿರುವ ಐರೋಪ್ಯ ಒಕ್ಕೂಟದ (ಇಯು) ಜೊತೆ ಭಾರತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿದೆ. 2026ರ ಜನವರಿಯಲ್ಲೇ ಮಾತುಕತೆಗಳು ಅಂತಿಮಗೊಂಡಿದ್ದವು. ನರೇಂದ್ರ ಮೋದಿ ಅವರ ಯೂರೋಪ್ ಪ್ರವಾಸದ ವೇಳೆ ಒಪ್ಪಂದಕ್ಕೆ ಸಹಿಬೀಳಬಹುದು. ಡಿ. 16ಕ್ಕೆ ಸಹಿ ಹಾಕಬಹುದು ಎನ್ನಲಾಗಿದೆ. ಯೂರೋಪ್​ನಲ್ಲಿ ಭಾರತ ಈಗಾಗಲೇ ಯುಕೆ ಮತ್ತು ಇಎಫ್​ಟಿಎ ಜೊತೆ ವ್ಯಾಪಾರ ಒಪ್ಪಂದ ಹೊಂದಿದೆ.

ಭಾರತ-ಯೂರೋಪಿಯನ್ ಒಕ್ಕೂಟ ವ್ಯಾಪಾರ ಒಪ್ಪಂದ ಡಿಸೆಂಬರ್ 16ಕ್ಕೆ ಸಹಿ ಸಾಧ್ಯತೆ: ವರದಿ
ಸರಕು ಸಾಗಣೆ
Image Credit source: Getty Images

Updated on: Nov 23, 2026 | 12:48 PM

ನವದೆಹಲಿ, ನವೆಂಬರ್ 23: ಹಲವು ದೇಶಗಳು ಹಾಗೂ ಗುಂಪುಗಳ ಜೊತೆ ಭಾರತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಕ್ಕೆ ಆದ್ಯತೆ ಕಟ್ಟಿದೆ. ಈ ನಿಟ್ಟಿನಲ್ಲಿ ಕೆಲವಾರು ಒಪ್ಪಂದಗಳು ಏರ್ಪಟ್ಟು ಜಾರಿಗೊಂಡಿವೆ. ಇನ್ನೂ ಹಲವು ಒಪ್ಪಂದಗಳಿಗೆ ಮಾತುಕತೆಗಳು ಆಗುತ್ತಿವೆ. ಇದೀಗ ಭಾರತ ಮತ್ತು ಐರೋಪ್ಯ ಒಕ್ಕೂಟದ ಮಧ್ಯೆ ಮುಕ್ತ ವ್ಯಾಪಾರ ಒಪ್ಪಂದ ಬಹಳ ಶೀಘ್ರದಲ್ಲೇ ಸಾಕಾರಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈ ವರ್ಷವೇ ಒಪ್ಪಂದಕ್ಕೆ ಸಹಿ ಬೀಳಬಹುದು ಎನ್ನಲಾಗಿದೆ. ಪಿಟಿಐ ವರದಿ ಪ್ರಕಾರ, ಡಿಸೆಂಬರ್ 16ಕ್ಕೆ ಎಫ್​ಟಿಎಗೆ ಭಾರತ ಮತ್ತು ಇಯು ಮುಖಂಡರು ಸಹಿ ಹಾಕಲಿದ್ದಾರೆ.

ಯೂರೋಪಿಯನ್ ಯೂನಿಯನ್​ನಲ್ಲಿ 27 ಸದಸ್ಯ ರಾಷ್ಟ್ರಗಳಿವೆ. ಇಯು ಜೊತೆ ಎಫ್​ಟಿಎ ಆಯಿತೆಂದರೆ 27 ದೇಶಗಳ ಮಾರುಕಟ್ಟೆ ಪ್ರವೇಶ ಭಾರತೀಯ ಉದ್ಯಮಗಳಿಗೆ ಸಿಕ್ಕಂತಾಗುತ್ತದೆ. ಆ ದೇಶಗಳಿಗೂ ಕೂಡ ಭಾರತದಂತಹ ಉದಯೋನ್ಮುಖ ಮಾರುಕಟ್ಟೆಯ ಪ್ರವೇಶ ಸಿಗುತ್ತದೆ.

Loading...

ಹತ್ತು ತಿಂಗಳ ಹಿಂದೆಯೇ, ಜನವರಿಯಲ್ಲೇ ಭಾರತ ಮತ್ತು ಯೂರೋಪಿಯನ್ ಯೂನಿಯನ್ ಮಧ್ಯೆ ವ್ಯಾಪಾರ ಒಪ್ಪಂದಕ್ಕೆ ಮಾತುಕತೆ ಪೂರ್ಣಗೊಂಡಿತ್ತು. ಯಾವಾಗ ಬೇಕಾದರೂ ಸಹಿ ಬೀಳಬಹುದು ಎನ್ನಲಾಗಿತ್ತು. ಆದರೆ, ಕಾರಣಾಂತರಗಳಿಂದ ಒಪ್ಪಂದಕ್ಕೆ ಅಂಕಿತ ಬಿದ್ದಿರಲಿಲ್ಲ.

ಇದನ್ನೂ ಓದಿ: ಚೀನಾದ 7 ಟ್ರಿಲಿಯನ್ ಡಾಲರ್ ಡೆಟ್ ಮಾರುಕಟ್ಟೆಯ ಅಪಾಯ; ಭಾರತದ ಬಾಂಡ್ ಮಾರುಕಟ್ಟೆಗಿಲ್ಲ ಈ ಅಪಾಯ

ಡಿಸೆಂಬರ್​ನಲ್ಲಿ ಪ್ರಧಾನಿ ಮೋದಿ ಯೂರೋಪ್ ಪ್ರವಾಸ

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ ತಿಂಗಳಲ್ಲಿ ಯೂರೋಪ್ ಮತ್ತು ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿ ಬಹಳ ಪ್ರಮುಖವಾದ ಮಾತುಕತೆಗಳು ನಡೆಯಲಿವೆ. ಈ ವೇಳೆ, ಡಿಸೆಂಬರ್ 16ರಂದು ಭಾರತ ಮತ್ತು ಇಯು ವ್ಯಾಪಾರ ಒಪ್ಪಂದಕ್ಕೆ ಸಹಿ ಕೂಡ ಆಗುವ ನಿರೀಕ್ಷೆ ಇದೆ ಎಂದು ಮೂಲವನ್ನು ಉಲ್ಲೇಖಿಸಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕಳೆದ ವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ವಿಚಾರದ ಬಗ್ಗೆ ಮಾತನಾಡಿ ಡಿಸೆಂಬರ್​ನಲ್ಲಿ ಒಪ್ಪಂದಕ್ಕೆ ಸಹಿ ಬೀಳುವ ಆಶಯ ಇದೆ ಎಂದಿದ್ದರು. ಹೀಗಾಗಿ, ಮೋದಿ ಅವರ ಯೂರೋಪ್ ಪ್ರವಾಸದಲ್ಲಿ ಈ ಒಪ್ಪಂದದ ವಿಚಾರ ಪ್ರಮುಖವಾಗಿರಬಹುದು.

ಭಾರತಕ್ಕೆ ಸಿಗಲಿದೆ ಯೂರೋಪ್​ನ ಪ್ರಮುಖ ಭಾಗಗಳ ಮಾರುಕಟ್ಟೆ

ಯೂರೋಪ್ ಖಂಡದಲ್ಲಿ 40ಕ್ಕೂ ಅಧಿಕ ರಾಷ್ಟ್ರಗಳಿವೆ. ಇದರಲ್ಲಿ ಯೂರೋಪಿಯನ್ ಯೂನಿಯನ್​​ನಲ್ಲೇ 27 ದೇಶಗಳಿವೆ. ಈ ಒಕ್ಕೂಟದಲ್ಲಿ ಜರ್ಮನಿ, ಫ್ರಾನ್ಸ್, ಇಟಲಿ ಇತ್ಯಾದಿ ಪ್ರಮುಖ ಆರ್ಥಿಕತೆಗಳ ದೇಶಗಳಿವೆ. ಇನ್ನು, ಸ್ವಿಟ್ಜರ್​ಲ್ಯಾಂಡ್, ನಾರ್ವೆ, ಐಸ್ಲೆಂಡ್ ಮತ್ತು ಲೇಶ್ಟನ್​ಸ್ಟೇನ್ ಈ ನಾಲ್ಕು ದೇಶಗಳ ಇಎಫ್​ಟಿಎ ಗುಂಪಿನೊಂದಿಗೆ ಭಾರತ ವ್ಯಾಪಾರ ಒಪ್ಪಂದ ಹೊಂದಿದೆ. ಬ್ರಿಟನ್ ಜೊತೆಗೂ ಒಪ್ಪಂದ ಇದೆ. ಈಗ ಇಯು ಜೊತೆ ಒಪ್ಪಂದವಾದರೆ ಯೂರೋಪ್​ನ 32 ದೇಶಗಳ ಮಾರುಕಟ್ಟೆ ಪ್ರವೇಶ ಭಾರತಕ್ಕೆ ಸುಲಭಗೊಳ್ಳಲಿದೆ. ಆದ್ಯತೆಯ ಪ್ರವೇಶ ಸಿಗಲಿದೆ.

ಇದನ್ನೂ ಓದಿ: 2047ಕ್ಕೆ 26 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ: ಸಿಐಐನಿಂದ 15 ಪ್ರಮುಖ ಸುಧಾರಣೆಗಳಿಗೆ ಶಿಫಾರಸು

ಇಎಇಯು ಗುಂಪಿನೊಂದಿಗೆ ಭಾರತದ ಮಾತುಕತೆ

ಯೂರೇಶಿಯನ್ ಎಕನಾಮಿಕ್ ಯೂನಿಯನ್ (EAEU) ಎನ್ನುವ ಗುಂಪಿನೊಂದಿಗೆ ಭಾರತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮಾತುಕತೆಯಲ್ಲಿ ನಿರತವಾಗಿದೆ. ಈ ಗುಂಪಿನಲ್ಲಿ ರಷ್ಯಾ, ಬೆಲಾರಸ್, ಆರ್ಮೇನಿಯಾ, ಕಜಕಸ್ತಾನ್, ಕಿರ್ಗಿಸ್ತಾನ್ ಇತ್ಯಾದಿ ಏಷ್ಯಾ ಮತ್ತು ಯೂರೋಪ್ ಎರಡೂ ಭಾಗಗಳೊಂದಿಗೆ ಮಿಳಿತವಾಗಿರುವ ದೇಶಗಳಿವೆ.

ಅಮೆರಿಕದ ಜೊತೆಗೂ ಭಾರತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿದೆ. ಇವೆಲ್ಲವೂ ಸಾಕಾರಗೊಂಡರೆ ವಿಶ್ವದ ಹೆಚ್ಚಿನ ಮಾರುಕಟ್ಟೆ ಪ್ರವೇಶ ಭಾರತಕ್ಕೆ ಸಿಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us