Unemployment In India: 2021ರ ಡಿಸೆಂಬರ್​ನಲ್ಲಿ ಭಾರತದಲ್ಲಿ 5.3 ಕೋಟಿ ನಿರುದ್ಯೋಗಿಗಳು; ಮಹಿಳೆಯರ ಪ್ರಮಾಣ ಹೆಚ್ಚು

ಭಾರತದಲ್ಲಿ 2021ರ ಡಿಸೆಂಬರ್​ನಲ್ಲಿ 5.3 ಕೋಟಿ ನಿರುದ್ಯೋಗಿಗಳಿದ್ದರು ಎಂಬುದನ್ನು ಸಿಎಂಐಇ ಡೇಟಾ ತೆರೆದಿಟ್ಟಿದೆ. ಇದರ ಪೈಕಿ ಮಹಿಳೆಯರ ಸಂಖ್ಯೆ ಹೆಚ್ಚು ಎಂಬುದನ್ನು ಸಹ ತಿಳಿಸಲಾಗಿದೆ.

Unemployment In India: 2021ರ ಡಿಸೆಂಬರ್​ನಲ್ಲಿ ಭಾರತದಲ್ಲಿ 5.3 ಕೋಟಿ ನಿರುದ್ಯೋಗಿಗಳು; ಮಹಿಳೆಯರ ಪ್ರಮಾಣ ಹೆಚ್ಚು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jan 21, 2022 | 11:39 AM

2021ರ ಡಿಸೆಂಬರ್ ಹೊತ್ತಿಗೆ ಭಾರತದಲ್ಲಿ 5.3 ಕೋಟಿ ನಿರುದ್ಯೋಗಿಗಳಿದ್ದಾರೆ, ಅದರಲ್ಲಿ ಮಹಿಳೆಯರ ಪ್ರಮಾಣ ಹೆಚ್ಚು ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಹೇಳಿದೆ. ಈ ಸಂಖ್ಯೆಯಲ್ಲಿ ನಿರುದ್ಯೋಗಿಗಳಾಗಿರುವ 3.5 ಕೋಟಿ ಮಂದಿ ಸಕ್ರಿಯವಾಗಿ ಉದ್ಯೋಗಕ್ಕೆ ಕೇಳುತ್ತಿದ್ದು, 1.7 ಕೋಟಿ ಮಂದಿ ಉದ್ಯೋಗ ಮಾಡುವುದಕ್ಕೆ ಸಾಧ್ಯವಿದ್ದರೂ ಸಕ್ರಿಯವಾಗಿ ಪ್ರಯತ್ನಿಸುತ್ತಿಲ್ಲ ಎಂದು ಸಿಎಂಐಇ ಹೇಳಿದೆ. “ಭಾರತವು ತಕ್ಷಣವೇ ಈ ನಿರುದ್ಯೋಗ ದರದ ಪೈಕಿಯ ಶೇ 7.9ರಷ್ಟು ಮಂದಿಗೆ ಅಥವಾ 2021ರ ಡಿಸೆಂಬರ್​ನಲ್ಲಿ ಇರುವ 3.5 ಕೋಟಿ ಮಂದಿ ಯಾರು ಸಕ್ರಿಯವಾಗಿ ಉದ್ಯೋಗಕ್ಕೆ ಹುಡುಕುತ್ತಿದ್ದಾರೋ ಅವರಿಗೆ ಒದಗಿಸಬೇಕು,” ಎಂದು ಸಿಎಂಐಇ ತನ್ನ ಸಾಪ್ತಾಹಿಕ ವಿಶ್ಲೇಷಣೆಯಲ್ಲಿ ಹೇಳಿದೆ. “ಇದರ ಜತೆಗೆ ಉದ್ಯೋಗ ಇಲ್ಲದ ಆ ಹೆಚ್ಚುವರಿ 1.7 ಕೋಟಿ ಮಂದಿಗೆ ಕೂಡ ಉದ್ಯೋಗ ಒದಗಿಸುವುದು ಅಷ್ಟೇ ಮುಖ್ಯವಾದ ಸವಾಲು. ಅವರು ಸಹ ಉದ್ಯೋಗ ಮಾಡುವ ಸಾಮರ್ಥ್ಯ ಹೊಂದಿದ್ದು, ಆದರೆ ಸಕ್ರಿಯವಾಗಿ ಅದಕ್ಕಾಗಿ ಹುಡುಕುತ್ತಿಲ್ಲ,” ಎಂದು ಸೇರಿಸಲಾಗಿದೆ.

ಸಿಎಂಐಇ ಪ್ರಕಾರ, 3.5 ಕೋಟಿ ನಿರುದ್ಯೋಗಿಗಳಲ್ಲಿ 2021ರ ಡಿಸೆಂಬರ್​ ತಿಂಗಳಲ್ಲಿ ಸಕ್ರಿಯವಾಗಿ ಉದ್ಯೋಗಕ್ಕೆ ಎದುರು ನೋಡುತ್ತಿರುವ ಪೈಕಿ ಶೇ 23ರಷ್ಟು ಅಥವಾ 80 ಲಕ್ಷ ಮಹಿಳೆಯರಿದ್ದಾರೆ. ಇದೇ ವೇಳೆ 1.7 ಕೋಟಿ ಮಂದಿ ಪ್ಯಾಸಿವ್ ಆಗಿ ನಿರುದ್ಯೋಗಿಗಳಾಗಿದ್ದು, ಶೇ 53ರಷ್ಟು ಅಥವಾ 90 ಲಕ್ಷ ಮಹಿಳೆಯರು ಸಕ್ರಿಯವಾಗಿ ಕೆಲಸಕ್ಕಾಗಿ ಹುಡುಕದಿದ್ದರೂ ಅವರಿಗೆ ಉದ್ಯೋಗ ಮಾಡುವ ಸಾಮರ್ಥ್ಯ ಇದೆ. “ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಉದ್ಯೋಗ ಮಾಡುವ ಸಾಮರ್ಥ್ಯ ಇದ್ದರೂ ಸಕ್ರಿಯವಾಗಿ ಕೆಲಸಕ್ಕೆ ಏಕೆ ಅಪ್ಲೈ ಮಾಡುತ್ತಿಲ್ಲ ಅಥವಾ ಉದ್ಯೋಗ ಅರಸಲು ಬೇರೆ ಪ್ರಯತ್ನ ಏಕೆ ಮಾಡುತ್ತಿಲ್ಲ. ಉದ್ಯೋಗ ಲಭ್ಯ ಇಲ್ಲ ಎಂಬ ಕಾರಣವೋ ಅಥವಾ ಕೆಲಸಕ್ಕೆ ಸೇರುವುದಕ್ಕೆ ಸಾಮಾಜಿಕ ಬೆಂಬಲದ ಕೊರತೆಯೋ,” ಎಂಬ ಚರ್ಚೆ ನಡೆಯುತ್ತಿದೆ.

ವಿಶ್ವ ಬ್ಯಾಂಕ್​ನ ಡೇಟಾ ಗಮನಿಸುವಂತೆ, ಸಿಎಂಐಇ ಹೇಳಿರುವ ಪ್ರಕಾರ, 2020ರಲ್ಲಿ ವಿಶ್ವ ಬ್ಯಾಂಕ್ ಕಲೆ ಹಾಕಿರುವ ಅಂಕಿ- ಅಂಶದಂತೆ ಜಾಗತಿಕ ಉದ್ಯೋಗ ದರ ಶೇ 55 ಅಥವಾ 2019ರಲ್ಲಿ ಶೇ 58. ಇದರಲ್ಲಿ ಭಾರತದಲ್ಲಿ ಶೇ 43ರಷ್ಟಿದೆ. ಆದರೆ ಸಿಎಂಐಇ ಲೆಕ್ಕದಂತೆ ಭಾರತದಲ್ಲಿನ ಉದ್ಯೋಗ ದರ ಶೇ 38. “ಭಾರತದ ನಿರುದ್ಯೋಗ ಸಮಸ್ಯೆಯು ನಿರುದ್ಯೋಗ ದರದಲ್ಲಿ ಪ್ರತಿಫಲಿಸುತ್ತಿಲ್ಲ. ಇದರ ಸಮಸ್ಯೆ ಕಡಿಮೆ ಉದ್ಯೋಗ ದರ ಮತ್ತು ನಿರುತ್ತೇಜಿತ ಆಗಿರುವ ಯುವ ಮಹಿಳಾ ಕಾರ್ಮಿಕ ಗುಂಪು,” ಎಂದು ಸಿಎಂಐಇ ಹೇಳಿದೆ.

ಸಿಎಂಐಇ ಪ್ರಕಾರ, ಭಾರತದ ಶ್ರೀಮಂತಿಕೆಯ ಹಾದಿ ಇರುವುದು ಹತ್ತಿರಹತ್ತಿರ ಶೇ 60ರಷ್ಟು ಜನಸಂಖ್ಯೆಗೆ ಉದ್ಯೋಗ ಹುಡುಕುವುದರಲ್ಲಿ. “ಜಾಗತಿಕ ಉದ್ಯೋಗ ದರದ ಗುಣಮಟ್ಟವನ್ನು ತಲುಪಬೇಕು ಅಂದರೆ ಭಾರತವು ಹೆಚ್ಚುವರಿಯಾಗಿ 18.75 ಕೋಟಿ ಜನರನ್ನು ನೇಮಕಾತಿ ಮಾಡಬೇಕು,” ಎಂದು ಹೇಳಿದೆ.

ಇದನ್ನೂ ಓದಿ: ರಾಜ್ಯದ ಯುವಜನತೆಗೆ ಉದ್ಯೋಗ ನೀಡಿ, ಇಲ್ಲವೇ 9 ಸಾವಿರ ರೂ ನಿರುದ್ಯೋಗ ಭತ್ಯೆ ಕೊಡಿ: ಕಾಂಗ್ರೆಸ್​ ರ್ಯಾಲಿಯಲ್ಲಿ ಡಿಕೆಶಿ ಆಗ್ರಹ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್