AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2030ರ ನವೀಕರಣ ಇಂಧನದ ಗುರಿಯನ್ನು 9 ವರ್ಷ ಮುಂಚೆಯೇ ಮುಟ್ಟಿದ ಏಕೈಕ ಜಿ20 ದೇಶ ಭಾರತ

Pralhad Joshi says India ranks 4th in the largest renewable energy capacity: ಅಭಿವೃದ್ಧಿಶೀಲ ದೇಶವಾಗಿಯೂ ಭಾರತವು ಸ್ವಚ್ಛ ಇಂಧನ ವ್ಯವಸ್ಥೆಯನ್ನು ಬಹಳ ಬೇಗ ಅಭಿವೃದ್ಧಿಪಡಿಸಲು ಬದ್ಧತೆ ತೋರುತ್ತಿದೆ. ನವೀಕರಣ ಇಂಧನದ ಅಳವಡಿಕೆಗೆ 2030ಕ್ಕೆ ಇರಿಸಲಾದ ಗುರಿಯನ್ನು ಭಾರತ 2021ರಲ್ಲೇ ಮುಟ್ಟಿ ಗಮನ ಸೆಳೆದಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನೀಡಿರುವ ಮಾಹಿತಿ ಪ್ರಕಾರ ಭಾರತದಲ್ಲಿ ಈಗ 257 ಗಿ.ವ್ಯಾ.ನಷ್ಟು ನವೀಕರಣ ಇಂಧನ ತಯಾರಿಕೆ ಸಾಮರ್ಥ್ಯ ಬೆಳೆದಿದೆ.

2030ರ ನವೀಕರಣ ಇಂಧನದ ಗುರಿಯನ್ನು 9 ವರ್ಷ ಮುಂಚೆಯೇ ಮುಟ್ಟಿದ ಏಕೈಕ ಜಿ20 ದೇಶ ಭಾರತ
ಸೋಲಾರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 29, 2025 | 8:52 PM

Share

ನವದೆಹಲಿ, ಅಕ್ಟೋಬರ್ 29: ಭಾರತದಲ್ಲಿ ನವೀಕರಣ ಇಂಧನ ಯೋಜನೆಗಳು (Renewable energy) ಬಹಳ ವ್ಯಾಪಕವಾಗಿ ನಡೆಯುತ್ತಿವೆ. ಸರ್ಕಾರ ನಿರೀಕ್ಷಿಸಿದುದಕ್ಕಿಂತಲೂ ಹೆಚ್ಚು ವೇಗದಲ್ಲಿ ಈ ಕ್ಷೇತ್ರ ಬೆಳವಣಿಗೆ ಹೊಂದುತ್ತಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ (Pralhad Joshi) ನೀಡಿರುವ ಮಾಹಿತಿ ಪ್ರಕಾರ ಭಾರತದಲ್ಲಿ ಸದ್ಯ 257 ಗಿಗಾವ್ಯಾಟ್​ನಷ್ಟು ರಿನಿವಬಲ್ ಎನರ್ಜಿ ಸಾಮರ್ಥ್ಯ ಇದೆ. 2014ರಲ್ಲಿ ಈ ಸಾಮರ್ಥ್ಯ 81 ಗಿ.ವ್ಯಾ.ನಷ್ಟಿತ್ತು. ಕಳೆದ 11 ವರ್ಷದಲ್ಲಿ ಇದು ಮೂರು ಪಟ್ಟು ಹೆಚ್ಚಾಗಿದೆ. ಅತಿಹೆಚ್ಚು ಮರುಬಳಕೆ ಇಂಧನ ತಯಾರಿಕೆಯ ಸಾಮರ್ಥ್ಯ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ 4ನೇ ಸ್ಥಾನದಲ್ಲಿದೆ.

ಇಂಟರ್ನ್ಯಾಷನಲ್ ಸೋಲಾರ್ ಅಲಾಯನ್ಸ್ ಅಸೆಂಬ್ಲಿಯ 8ನೇ ಅಧಿವೇಶನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಿದ್ದ ನವೀಕರಣ ಇಂಧನ ಸಚಿವರೂ ಆದ ಪ್ರಲ್ಹಾದ್ ಜೋಷಿ, ಭಾರತವು ಸೌರಶಕ್ತಿ ತಯಾರಿಕೆಯಲ್ಲೂ ಗಣನೀಯ ಪ್ರಗತಿ ತೋರಿರುವ ಸಂಗತಿಯನ್ನು ಒತ್ತಿಹೇಳಿದ್ದಾರೆ. ಅವರ ಪ್ರಕಾರ, 2014ರಲ್ಲಿ ಭಾರತದಲ್ಲಿ ಸೌರಶಕ್ತಿ ತಯಾರಿಕೆಯ ಸಾಮರ್ಥ್ಯ 2.8 ಜಿಡಬ್ಲ್ಯು ಇತ್ತು. ಇದೀಗ ಅದರು 128 ಗಿ.ವ್ಯಾ.ಗೆ ಏರಿದೆ.

ಇದನ್ನೂ ಓದಿ: ಅಮೇಜಾನ್​ನಿಂದ 14,000 ಮಂದಿ ಲೇಆಫ್, ಭಾರತದಲ್ಲೂ ಗಣನೀಯ ಕತ್ತರಿ

ಭಾರತ ಕಳೆದ ಐದು ವರ್ಷದಲ್ಲಿ ಒಟ್ಟಾರೆ ವಿದ್ಯುತ್ ತಯಾರಿಕೆಯ ಸಾಮರ್ಥ್ಯ ಹೆಚ್ಚಳದಲ್ಲಿ ಮೂರನೇ ಸ್ಥಾನ ಪಡೆಯುತ್ತದೆ. 2030ಕ್ಕೆ ನಿಗದಿ ಮಾಡಲಾದ ನವೀಕರಣ ಇಂಧನ ಗುರಿಯನ್ನು ಭಾರತ 2021ರಲ್ಲೇ ಸಾಧಿಸಿ ಮುಂದುವರಿದಿದೆ. ಜಿ20 ಗುಂಪಿನಲ್ಲಿ ಈ ಕ್ಷಿಪ್ರ ವೇಗದಲ್ಲಿ ಗುರಿ ಮುಟ್ಟಿದ ಏಕೈಕ ದೇಶ ಭಾರತ ಎನಿಸಿದೆ.

ಇಂಟರ್ನ್ಯಾಷನಲ್ ಎನರ್ಜಿ ಏಜೆನ್ಸಿ ಮಾಡಿದ ಅಂದಾಜು ಪ್ರಕಾರ ಭಾರತ ಮುಂದಿನ ವರ್ಷಗಳಲ್ಲಿ ವಿಶ್ವದ ಎರಡನೇ ಅತಿದೊಡ್ಡ ನವೀಕರಣ ಇಂಧನ ಮಾರುಕಟ್ಟೆ ಎನಿಸಲಿದೆ. ಪ್ರತೀ ವ್ಯಕ್ತಿಯ ಲೆಕ್ಕದಲ್ಲಿ ಅತಿ ಕಡಿಮೆ ಮಾಲಿನ್ಯ ಹೊರಸೂಸುವಿಕೆ ಹಾಗೂ ಅತೀ ಕಡಿಮೆ ಇಂಧನ ಬಳಕೆ ಹೊಂದಿರುವ ದೇಶಗಳ ಪೈಕಿ ಭಾರತ ಇದೆ. ಆದರೂ ಕೂಡ ಸ್ವಚ್ಛ ಇಂಧನಕ್ಕೆ ಬದಲಾಗಲು ಭಾರತ ತೋರಿರುವ ಬದ್ಧತೆಯನ್ನು ಹಲವರು ಶ್ಲಾಘಿಸಿದ್ಧಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಈ ವಿಚಾರವನ್ನೂ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ: ವಿಪ್ರೋ, ಐಐಎಸ್​ಸಿದಿಂದ ಸ್ವಯಂಚಾಲಿತ ಕಾರಿನ ಪ್ರೋಟೋಟೈಪ್; ಆರ್​ವಿ ಎಂಜಿನಿಯರಿಂಗ್ ಕಾಲೇಜು ಕ್ಯಾಂಪಸ್ ಸುತ್ತಿದ ಡ್ರೈವರ್ಲೆಸ್ ಕಾರು

ವಿಶ್ವಾದ್ಯಂತ ಸೌರಶಕ್ತಿ ಉತ್ಪಾದನಾ ಸಾಮರ್ಥ್ಯ 1,600 ಗಿಗಾವ್ಯಾಟ್​ಗಿಂತಲೂ ಹೆಚ್ಚಿದೆ. ಒಟ್ಟಾರೆ ನವೀಕರಣ ಇಂಧನದಲ್ಲಿ ಸೌರಶಕ್ತಿ ಪಾಲು ಶೇ. 40ರಷ್ಟಿದೆ ಎನ್ನಲಾಗಿದೆ. ಭಾರತದಲ್ಲಿ ಸೌರಶಕ್ತಿ ಸಾಮರ್ಥ್ಯ ಈಗ 128 ಗಿ.ವ್ಯಾ. ಇದೆ. 2014ರಲ್ಲಿ ಇದು 2.8 ಗಿ.ವ್ಯಾ. ಇತ್ತು. ಈ 11 ವರ್ಷದಲ್ಲಿ 45 ಪಟ್ಟು ಹೆಚ್ಚಿರುವುದು ಗಮನಾರ್ಹ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ