AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾರಕ 31 ಪ್ರಿಡೇಟರ್ ಡ್ರೋನ್ ಖರೀದಿಗೆ ಅಮೆರಿಕದೊಂದಿಗೆ ಭಾರತ ಒಪ್ಪಂದ; ಅಲ್​ಖೈದಾ ನಾಯಕನನ್ನು ಸಂಹರಿಸಿದ್ದು ಇದೇ ಡ್ರೋನ್

US manufactured MQ predator drones for India: ಅಮೆರಿಕದ ಜನರಲ್ ಅಟಾಮಿಕ್ಸ್ ತಯಾರಿಸುವ ಎಂಕ್ಯೂ ರೀಪರ್ ಡ್ರೋನ್​ಗಳನ್ನು ಭಾರತ ಪಡೆಯಲಿದೆ. 3.5 ಬಿಲಿಯನ್ ಡಾಲರ್ ಮೊತ್ತಕ್ಕೆ ಭಾರತ ಮತ್ತು ಅಮೆರಿಕ ನಡುವೆ ಒಪ್ಪಂದವಾಗಿದೆ. 31 ಎಂಕ್ಯೂ-9ಬಿ ಪ್ರಿಡೇಟರ್ ಡ್ರೋನ್​ಗಳನ್ನು ಜನರಲ್ ಅಟಾಮಿಕ್ಸ್ ತಯಾರಿಸಿ ಕೊಡಲಿದೆ. ಚೆನ್ನೈನಲ್ಲಿ ಎಂಆರ್​ಒ ಸೌಲಭ್ಯವನ್ನೂ ಸ್ಥಾಪಿಸಲಿದೆ. ಟೆಕ್ನಾಲಜಿ ಟ್ರಾನ್ಸ್​ಫರ್ ಮಾಡಲೂ ಮಾತುಕತೆ ನಡೆಯುತ್ತಿದೆ.

ಮಾರಕ 31 ಪ್ರಿಡೇಟರ್ ಡ್ರೋನ್ ಖರೀದಿಗೆ ಅಮೆರಿಕದೊಂದಿಗೆ ಭಾರತ ಒಪ್ಪಂದ; ಅಲ್​ಖೈದಾ ನಾಯಕನನ್ನು ಸಂಹರಿಸಿದ್ದು ಇದೇ ಡ್ರೋನ್
ಎಂಕ್ಯೂ-9ಬಿ ಪ್ರಿಡೇಟರ್ ಡ್ರೋನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 16, 2024 | 12:12 PM

Share

ನವದೆಹಲಿ, ಅಕ್ಟೋಬರ್ 16: ಅಮೆರಿಕದ ಶಕ್ತಿಶಾಲಿ ಎಂಕ್ಯು-9ಬಿ ಪ್ರಿಡೇಟರ್ ಡ್ರೋನ್​ಗಳನ್ನು ಭಾರತ ಪಡೆಯಲಿದೆ. 31 ಪ್ರಿಡೇಟರ್ ಡ್ರೋನ್​ಗಳಿಗೆ ಭಾರತದ ಮಿಲಿಟರಿ ಆರ್ಡರ್ ನೀಡಿದೆ. ಭಾರತ ಮತ್ತು ಅಮೆರಿಕ ನಡುವೆ ಈ ಒಪ್ಪಂದ ಅಂತಿಮಗೊಂಡಿದೆ. ಅಮೆರಿಕದ ಜನರಲ್ ಅಟಾಮಿಕ್ಸ್ ಸಂಸ್ಥೆ ಈ ಮಾರಕ ಡ್ರೋನ್​ಗಳನ್ನು ತಯಾರಿಸಲಿದೆ. ಭಾರತದಲ್ಲಿ ಈ ಡ್ರೋನ್​ಗಳಿಗಾಗಿ ಎಂಆರ್​ಒ ಕೇಂದ್ರವನ್ನು ನಿರ್ಮಿಸಲಾಗುತ್ತದೆ. ಒಪ್ಪಂದದಲ್ಲಿ ಇದನ್ನೂ ಒಳಗೊಳ್ಳಲಾಗಿದೆ. ವರದಿ ಪ್ರಕಾರ, 3.5 ಬಿಲಿಯನ್ ಡಾಲರ್ ಅಥವಾ 32,000 ಕೋಟಿ ರೂ ಮೊತ್ತದ ಒಪ್ಪಂದವಾಗಿದೆ.

ಜನರಲ್ ಅಟಾಮಿಕ್ಸ್ ಸಂಸ್ಥೆ ಈ ಡ್ರೋನ್​ಗಳನ್ನು ತಯಾರಿಸುವುದಷ್ಟೇ ಅಲ್ಲದೇ, ಚೆನ್ನೈನಲ್ಲಿ ಎಂಆರ್​ಒ ಕೇಂದ್ರದ ಸ್ಥಾಪನೆಗೂ ನೆರವಾಗಲಿದೆ. ಇದೇ ವೇಳೆ, ಈ ಡ್ರೋನ್ ತಂತ್ರಜ್ಞಾನದ ವರ್ಗಾವಣೆಯೂ ಆಗಬೇಕೆಂದು ಭಾರತ ಕೇಳಿಕೊಂಡಿದೆ. ಈ ಸಂಬಂಧ ಮಾತುಕತೆ ನಡೆಯುತ್ತಿದ್ದು, ಅದರ ಒಪ್ಪಂದವೂ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಭಾರತ ವಿಶ್ವದ 5G ಪವರ್​ಹೌಸ್ ಆಗಿ ಹೊರಹೊಮ್ಮಿದೆ; ಐಎಂಸಿಯಲ್ಲಿ ಪ್ರಧಾನಿ ಮೋದಿ

ಅಲ್​ಖೈದಾ ನಾಯಕನನ್ನು ಕೊಲ್ಲಲು ನೆರವಾಗಿದ್ದ ಡ್ರೋನ್

ಜನರಲ್ ಅಟಾಮಿಕ್ಸ್ ಸಂಸ್ಥೆ ಎಂಕ್ಯೂ ‘ರೀಪರ್’ ಡ್ರೋನ್ ಬಹಳ ಶಕ್ತಿಶಾಲಿಯಾಗಿದೆ. ಭಾರತಕ್ಕೆ ಸಿಗಲಿರುವ ಎಂಕ್ಯೂ-9ಬಿ ಪ್ರಿಡೇಟರ್ ಡ್ರೋನ್ ಈ ರೀಪರ್ ಡ್ರೋನ್​ನ ವೇರಿಯೆಂಟ್ ಆಗಿದೆ. 2022ರ ಜುಲೈನಲ್ಲಿ ಅಫ್ಘಾನಿಸ್ತಾನದ ಕಾಬೂಲ್​ನಲ್ಲಿ ಅಲ್-ಖೈದಾ ನಾಯಕ ಆಯ್ಮನ್ ಅಲ್ ಜವಾಹಿರಿ ಎಂಬಾತನನ್ನು ಕೊಲ್ಲಲು ಈ ಡ್ರೋನ್ ಅನ್ನು ಬಳಸಲಾಗಿತ್ತು. ಈ ಡ್ರೋನ್​ನಲ್ಲಿ ಇದ್ದ ಹೆಲ್​ಫೈರ್ ಮಿಸೈಲ್​ನಿಂದ ಹೊಡೆದು ಜವಾಹಿರಿಯನ್ನು ಕೊಲ್ಲಲಾಗಿತ್ತು.

ಎಂಕ್ಯೂ-9ಬಿ ಪ್ರಿಡೇಟರ್ ಡ್ರೋನ್​ಗಳಲ್ಲಿ ಎರಡು ವೇರಿಯೆಂಟ್​ಗಳಿಗೆ ಭಾರತ ಆರ್ಡರ್ ಕೊಟ್ಟಿದೆ. ಸೀಗಾರ್ಡಿಯನ್ ವೇರಿಯೆಂಟ್​ನ 15 ಪ್ರಿಡೇಟರ್ ಡ್ರೋನ್​ಗಳು ಭಾರತೀಯ ನೌಕಾಪಡೆಗೆ ನಿಯೋಜನೆಯಾಗಲಿವೆ. ಎಂಟೆಂಟು ಸ್ಕೈಗಾರ್ಡಿಯನ್ ಡ್ರೋನ್​ಗಳು ಭಾರತೀಯ ಸೇನೆ ಮತ್ತು ವಾಯುಪಡೆಗೆ ಹೋಗಲಿವೆ.

ಇದನ್ನೂ ಓದಿ: ಕರುನಾಡ ಹೆಮ್ಮೆ; ಭಾರತದ ಮೊದಲ ಬುಲೆಟ್ ಟ್ರೈನು ನಿರ್ಮಾಣ ಬೆಂಗಳೂರಿನಲ್ಲಿ; ಬೆಮೆಲ್ ಸಂಸ್ಥೆಗೆ ಗುತ್ತಿಗೆ

ಈ ಪ್ರಿಡೇಟರ್ ಡ್ರೋನ್​ಗಳ ವೈಶಿಷ್ಟ್ಯವೇನು?

ಎಂಕ್ಯು-9ಬಿ ಪ್ರಿಡೇಟರ್ ಡ್ರೋನ್​ಗಳು ಬಹಳ ಎತ್ತರದಲ್ಲಿ, ಹೆಚ್ಚ ಅವಧಿ ಓಡಬಲ್ಲ ಶಕ್ತಿ ಹೊಂದಿರುತ್ತವೆ. 2,155 ಕಿಲೋ ಪೇಲೋಡ್ ಅಥವಾ ಬಾಹ್ಯವಸ್ತುಗಳ ತೂಕ ಹೊತ್ತು ಇದು 40,000 ಅಡಿ ಎತ್ತರದಲ್ಲಿ 40 ಗಂಟೆ ಕಾಲ ನಿರಂತರವಾಗಿ ಓಡಬಲ್ಲುದು. ಈ ಡ್ರೋನ್​ನಲ್ಲಿ ನಾಲ್ಕು ಹೆಲ್​ಫೈರ್ ಕ್ಷಿಪಣಿಗಳು ಮತ್ತು 450 ಕಿಲೋ ಬಾಂಬ್​ಗಳನ್ನು ಇರಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು