RailOne: ರೈಲ್ವೇಸ್ನಿಂದ ಸೂಪರ್ ಆ್ಯಪ್ ಬಿಡುಗಡೆ; ಐಆರ್ಸಿಟಿಸಿ, ರೈಲ್ಕನೆಕ್ಟ್, ರೈಲ್ ಮದದ್ ಇತ್ಯಾದಿ ಸೇವೆಗಳೆಲ್ಲವೂ ರೈಲ್ಒನ್ನಲ್ಲಿ ಲಭ್ಯ
RailOne app by Indian Railways: ಕೇಂದ್ರ ರೈಲ್ವೆ ಸಚಿವ ಅಶ್ಚಿನಿ ವೈಷ್ಣವ್ ಅವರು ರೈಲ್ ಒನ್ ಎನ್ನುವ ಆ್ಯಪ್ ಅನ್ನು ಲೋಕಾರ್ಪಣೆ ಮಾಡಿದ್ದಾರೆ. ಟ್ರೈನ್ ಟಿಕೆಟ್, ಆಹಾರ, ಪ್ಲಾಟ್ಫಾರ್ಮ್ ಟಿಕೆಟ್, ಟ್ರೈನ್ ಸ್ಟೇಟಸ್ ಇತ್ಯಾದಿ ಎಲ್ಲಾ ಸೇವೆಗಳು ಲಭ್ಯ ಇರುವ ಸೂಪರ್ ಆ್ಯಪ್ ಇದು. ಐಆರ್ಸಿಟಿಸಿ, ರೈಲ್ ಕನೆಕ್ಟ್, ರೈಲ್ ಮದದ್ ಇತ್ಯಾದಿ ಬೇರೆ ಬೇರೆ ಆ್ಯಪ್ಗಳ ಬದಲು ಈ ಒಂದೇ ಆ್ಯಪ್ ಬಳಸಬಹುದು.

ನವದೆಹಲಿ, ಜುಲೈ 1: ಭಾರತೀಯ ರೈಲ್ವೆ ಇಲಾಖೆ (Indian railways) ಇಂದು ಗುರುವಾರ ರೈಲ್ ಒನ್ (RailOne) ಎನ್ನುವ ಹೊಸ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ರೈಲ್ವೆ ಪ್ರಯಾಣಿಕರ ಎಲ್ಲಾ ಅಗತ್ಯಗಳನ್ನು ಪೂರೈಸಬಲ್ಲ ಸೂಪರ್ ಆ್ಯಪ್ ಇದು. ಸೆಂಟರ್ ಫಾರ್ ರೈಲ್ವೆ ಇನ್ಫಾರ್ಮೇಶನ್ ಸಿಸ್ಟಮ್ಸ್ನ (CRIS) 40ನೇ ಸಂಸ್ಥಾಪನಾ ದಿನವಾದ ಇಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರೈಲ್ ಒನ್ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಕ್ರಿಸ್ ಸಂಸ್ಥೆಯು ಭಾರತೀಯ ರೈಲ್ವೆ ಇಲಾಖೆಗೆ ಪ್ರಮುಖ ಇನ್ಫಾರ್ಮೇಶ್ ಸಿಸ್ಟಂಗಳ ವಿನ್ಯಾಸ, ಅಭಿವೃದ್ಧಿ ಮತ್ತು ಜಾರಿ ಮಾಡುತ್ತದೆ.
ರೈಲ್ಒನ್ ಆ್ಯಪ್ ಆಂಡ್ರಾಯ್ಡ್ ಮತ್ತು ಆ್ಯಪಲ್ ಪ್ಲಾಟ್ಫಾರ್ಮ್ ಎರಡರಲ್ಲೂ ಲಭ್ಯ ಇದೆ. ರೈಲ್ವೆಗೆ ಸಂಬಂಧಿತ ಯಾವುದೇ ಮಾಹಿತಿಯನ್ನು ಪಡೆಯಲು ಹಾಗೂ ಪ್ರಯಾಣಿಕರಿಗೆ ಅಗತ್ಯವಾಗಿರುವ ಯಾವುದೇ ಸೇವೆಯನ್ನು ಪಡೆಯಲು ಈ ಹೊಸ ಆ್ಯಪ್ ಉಪಯುಕ್ತವಾಗಿದೆ. ಐಆರ್ಸಿಟಿಸಿ, ರೈಲ್ಕನೆಕ್ಟ್, ಯುಟಿ ಸನ್ ಮೊಬೈಲ್, ರೈಲ್ ಮದದ್ ಇತ್ಯಾದಿ ವಿವಿಧ ಪೋರ್ಟಲ್ಗಳು ನೀಡುವ ಸೇವೆಗಳನ್ನು ರೈಲ್ ಒನ್ ಆ್ಯಪ್ವೊಂದರಲ್ಲೇ ಪಡೆಯಬಹುದು.
ಇದನ್ನೂ ಓದಿ: GST: ಜೂನ್ನಲ್ಲಿ 1.85 ಲಕ್ಷ ಕೋಟಿ ರೂ ಜಿಎಸ್ಟಿ; ಐದು ವರ್ಷದಲ್ಲಿ ಎರಡು ಪಟ್ಟು ಹೆಚ್ಚಿದ ವಾರ್ಷಿಕ ಟ್ಯಾಕ್ಸ್ ಸಂಗ್ರಹ
ರೈಲ್ವೆ ಟಿಕೆಟ್ ಬುಕ್ ಮಾಡಲು ರೈಲ್ ಕನೆಕ್ಟ್ ಇದೆ. ರೈಲು ಪ್ರಯಾಣದ ವೇಳೆ ಊಟಕ್ಕೆ ಐಆರ್ಸಿಟಿಸಿ ಮೂಲಕ ಆರ್ಡರ್ ಮಾಡಬಹುದು. ಫೀಡ್ಬ್ಯಾಕ್ ನೀಡಲು ರೈಲ್ ಮದದ್ ಬಳಸಬಹುದು. ರಿಸರ್ವ್ ಅಲ್ಲ ಟಿಕೆಟ್ ಖರೀದಿಸಲು ಯುಟಿ ಸನ್ ಮೊಬೈಲ್ ಬಳಸಬಹುದು. ಟ್ರೈನುಗಳ ಸಂಚಾರವನ್ನು ಗಮನಿಸಲು ನ್ಯಾಷನಲ್ ಟ್ರೈನ್ ಎನ್ಕ್ವೈರಿಯನ್ನು ಉಪಯೋಗಿಸಬಹುದು.
ಈಗ ಈ ಮೇಲಿನ ಸೇವೆಗಳೆಲ್ಲವೂ ರೈಲ್ಒನ್ ಆ್ಯಪ್ನಲ್ಲಿ ಲಭ್ಯ ಇರುತ್ತದೆ. ರೈಲ್ ಕನೆಕ್ಟ್ ಮತ್ತು ಯುಟಿಎಸ್ ಆ್ಯಪ್ ಬಳಸುತ್ತಿರುವ ವ್ಯಕ್ತಿಗಳು ಅದೇ ಲಾಗಿನ್ ಹೆಸರು ಮತ್ತು ಪಾಸ್ವರ್ಡ್ ಬಳಸಿ ರೈಲ್ ಒನ್ ಆ್ಯಪ್ಗೆ ಲಾಗಿನ್ ಆಗಬಹುದು.
ಇದನ್ನೂ ಓದಿ: ಕೇಂದ್ರದಿಂದ RDI ಸ್ಕೀಮ್; ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆಗೆ ಉತ್ತೇಜಿಸಲು ಸರ್ಕಾರದಿಂದ ಭರ್ಜರಿ ಯೋಜನೆ
ರೈಲ್ಒನ್ ಆ್ಯಪ್ನಲ್ಲಿ ಸಿಗುವ ಸೇವೆಗಳು
- ಟ್ರೈನುಗಳ ರಿಸರ್ವ್ಡ್ ಮತ್ತು ಅನ್ರಿಸರ್ವ್ಡ್ ಟಿಕೆಟ್ಗಳನ್ನು ಬುಕ್ ಮಾಡಬಹುದು
- ಪ್ಲಾಟ್ಫಾರ್ಮ್ ಟಿಕೆಟ್ ಬುಕಿಂಗ್
- ಟ್ರೈನ್ ಬಗ್ಗೆ ವಿಚಾರಣೆ
- ಪಿಎನ್ಆರ್ ಸ್ಟೇಟಸ್ ಪರಿಶೀಲಿಸಬಹುದು
- ಪ್ರಯಾಣ ಯೋಜಿಸಲು ಸಹಾಯ
- ರೇಲ್ ಮದದ್ ಸೇವೆಗಳು ಲಭ್ಯ
- ಟ್ರೈನ್ನಲ್ಲಿ ಊಟಕ್ಕೆ ಆರ್ಡರ್ ಬುಕ್ ಮಾಡಬಹುದು
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ