Share Market: ಸತತ ಮೂರನೇ ದಿನ ಕುಸಿತದೊಂದಿಗೆ ವಹಿವಾಟು ಆರಂಭಿಸಿದ ಷೇರುಪೇಟೆ, ಚೀನಾದ್ದೇ ಆತಂಕ

BSE NSE: ಆರಂಭಿಕ ವಹಿವಾಟಿನಲ್ಲಿ ಬಿಎಸ್​ಐ ಸೆನ್ಸೆಕ್ಸ್ 361.86 ಅಂಶಗಳ ಕುಸಿತ ಕಂಡರೆ, ಎನ್​ಎಸ್​ಇ 114.70 ಅಂಶಗಳ ಕುಸಿತ ದಾಖಲಿಸಿತ್ತು.

Share Market: ಸತತ ಮೂರನೇ ದಿನ ಕುಸಿತದೊಂದಿಗೆ ವಹಿವಾಟು ಆರಂಭಿಸಿದ ಷೇರುಪೇಟೆ, ಚೀನಾದ್ದೇ ಆತಂಕ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 23, 2022 | 10:19 AM

ಮುಂಬೈ: ಉಕ್ರೇನ್​ ಮೇಲೆ ರಷ್ಯಾದ ದಾಳಿ ಮತ್ತಷ್ಟು ತೀವ್ರಗೊಳ್ಳುವ ಭೀತಿ, ತೈವಾನ್ ವಿವಾದ ಪಡೆದುಕೊಳ್ಳಬಹುದಾದ ತಿರುವಿನ ಬಗ್ಗೆ ಅಸ್ಪಷ್ಟತೆ, ಯೂರೋಪ್​ನಲ್ಲಿನ ಇಂಧನ ಬಿಕ್ಕಟ್ಟು, ತೈಲೋತ್ಪಾದನೆ ಕಡಿಮೆ ಮಾಡುವುದಾಗಿ ಒಪೆಕ್ ದೇಶಗಳ ಘೋಷಣೆ ಸೇರಿದಂತೆ ಹಲವು ಕಾರಣಗಳಿಂದ ಭಾರತದ ಷೇರುಪೇಟೆಯಲ್ಲಿ (Indian Share Market) ನಿರುತ್ಸಾಹ ಮೂಡಿತ್ತು. ಮಂಗಳವಾರ (ಆಗಸ್ಟ್​ 23) ಷೇರುಪೇಟೆಯು ಕುಸಿತದೊಂದಿಗೆ ವಹಿವಾಟು ಅರಂಭಿಸಿತು. ಇದು ಬಿಎಸ್​ಇ (BSE) ಮತ್ತು ಎನ್​ಎಸ್​ಇಗಳ (NSE) ಸತತ 3ನೇ ದಿನದ ಕುಸಿತವಾಗಿದೆ. ಚೀನಾದಲ್ಲಿ ಆರ್ಥಿಕ ಹಿಂಜರಿತದ ಭೀತಿ ಎದುರಾಗಿದ್ದರೆ, ಏಷ್ಯಾದ ಆರು ಪ್ರಮುಖ ಷೇರುಪೇಟೆಗಳಲ್ಲಿ ಸತತ ಆರನೇ ದಿನ ಕುಸಿತ ಮುಂದುವರಿದಿದೆ. ಭಾರತದಲ್ಲಿ ಕುಸಿತದೊಂದಿಗೆ ವಹಿವಾಟು ಆರಂಭವಾದರೂ, ಸ್ವಲ್ಪ ಕಾಲದಲ್ಲಿಯೇ ಎರಡೂ ಸೂಚ್ಯಂಕಗಳು ಚೇತರಿಸಿಕೊಂಡವು.

ಆರಂಭಿಕ ವಹಿವಾಟಿನಲ್ಲಿ ಬಿಎಸ್​ಐ ಸೆನ್ಸೆಕ್ಸ್ 361.86 ಅಂಶಗಳ ಕುಸಿತ ಕಂಡರೆ, ಎನ್​ಎಸ್​ಇ 114.70 ಅಂಶಗಳ ಕುಸಿತ ದಾಖಲಿಸಿತ್ತು. ಬೆಳಿಗ್ಗೆ 9:16ರ ಅವಧಿಯಲ್ಲಿ ಬಿಎಸ್​ಇ ಸೆನ್ಸೆಕ್ಸ್ 58,449.02 ಮತ್ತು ನಿಫ್ಟಿ 17,375 ಅಂಶಗಳಲ್ಲಿ ವಹಿವಾಟು ನಡೆಸುತ್ತಿತ್ತು. 10 ಗಂಟೆಯ ವೇಳೆಗೆ ಪರಿಸ್ಥಿತಿ ಬದಲಾಯಿತು. ನಿನ್ನೆ ವಹಿವಾಟು ಕೊನೆಗೊಂಡಿದ್ದಕ್ಕೆ ಹೋಲಿಸಿದರೆ ಬಿಎಸ್​ಇ 248.24 ಹಾಗೂ ನಿಫ್ಟಿ 85.60 ಅಂಶಗಳ ಮುನ್ನಡೆ ದಾಖಲಿಸಿದವು. ಸೆನ್ಸೆಕ್ಸ್ ಮತ್ತೆ 60,000 ಅಂಶಗಳ ಸಮೀಪಕ್ಕೆ ಮುನ್ನುಗ್ಗುತ್ತಿದೆ.

ನಿನ್ನೆ (ಆಗಸ್ಟ್ 22) ದಿನ ವಹಿವಾಟು ಮುಗಿಯುವಾಗ ಎರಡೂ ಸೂಚ್ಯಂಕಗಳು ಶೇ 1.5ರಷ್ಟು ಕುಸಿತ ಕಂಡಿದ್ದವು. ವಿಶ್ವದ ಹಲವೆಡೆ ಕೇಂದ್ರೀಯ ಬ್ಯಾಂಕ್​ಗಳು ಬಡ್ಡಿದರ ಹೆಚ್ಚಳಕ್ಕೆ ಮುಂದಾಗಿರುವುದು ಹೂಡಿಕೆದಾರರ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರಿತ್ತು. ಇದರ ಜೊತೆಗೆ ಚೀನಾದ ರಿಯಲ್​ ಎಸ್ಟೇಟ್ ಕಂಪನಿಗಳ ಸಂಕಷ್ಟ ಸಹ ಇದೇ ಹೊತ್ತಿಗೆ ಬೆಳಕಿಗೆ ಬಂದಿದ್ದು ಹೂಡಿಕೆದಾರರ ನಿರ್ಧಾರದ ಮೇಲೆ ಪರಿಣಾಮ ಬೀರಿತು. ಚೀನಾದ ರಿಯಲ್​ ಎಸ್ಟೇಟ್ ಕಂಪನಿಗಳಿಗೆ ಕಡಿಮೆ ಬಡ್ಡಿಯ ಸಾಲ ಒದಗಿಸುವುದು ಮತ್ತು ಮನೆಗಳನ್ನು ಕೊಳ್ಳುವ ಗ್ರಾಹಕರು ಪಡೆಯುವ ಸಾಲದ ಮೇಲೆ ಹಲವು ರಿಯಾಯ್ತಿಗಳನ್ನು ಘೋಷಿಸಲು ಚೀನಾ ಸರ್ಕಾರ ಮುಂದಾಗಿದೆ. ಈವರೆಗೆ ಗಾಳಿಮಾತಿನಂತಿದ್ದ ಚೀನಾ ಆರ್ಥಿಕ ಹಿಂಜರಿತದ ಭೀತಿಗೆ ಈ ಬೆಳವಣಿಗೆ ನೀರೆರೆದಿದೆ.

Published On - 10:19 am, Tue, 23 August 22

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್