Stock market: 4 ಟ್ರೇಡಿಂಗ್ ಸೆಷನ್ನಲ್ಲಿ ಹೂಡಿಕೆದಾರರ ಸಂಪತ್ತು 6.45 ಲಕ್ಷ ಕೋಟಿ ರೂಪಾಯಿ ಹೆಚ್ಚಳ
ಭಾರತದ ಷೇರು ಮಾರುಕಟ್ಟೆಯಲ್ಲಿ ಕಳೆದ ನಾಲ್ಕು ಟ್ರೇಡಿಂಗ್ ಸೆಷನ್ನಲ್ಲಿ ಹೂಡಿಕೆದಾರರ ಸಂಪತ್ತು 6.45 ಲಕ್ಷ ಕೋಟಿ ರೂಪಾಯಿ ಹೆಚ್ಚಳವಾಗಿದೆ.
ಮುಂಬೈ: ಕಳೆದ ನಾಲ್ಕು ಟ್ರೇಡಿಂಗ್ ಸೆಷನ್ಗಳಲ್ಲಿ ಭಾರತದ ಷೇರು ಮಾರುಕಟ್ಟೆ ಹೂಡಿಕೆದಾರರ ಸಂಪತ್ತು 6,44,760.45 ಕೋಟಿ, ಅರ್ಥಾತ್ 6.45 ಲಕ್ಷ ಕೋಟಿ ರೂಪಾಯಿ ಹೆಚ್ಚಳವಾಗಿವೆ. ಕಳೆದ ನಾಲ್ಕು ಟ್ರೇಡಿಂಗ್ ಸೆಷನ್ನಲ್ಲಿ 30 ಷೇರುಗಳ ಗುಚ್ಛವಾದ ಬಿಎಸ್ಇ ಸೆನ್ಸೆಕ್ಸ್ 1,248.90 ಪಾಯಿಂಟ್ ಅಥವಾ ಶೇ 2.58ರಷ್ಟು ಏರಿಕೆ ಕಂಡಿದೆ. ಸೋಮವಾರದಂದು (ಮೇ 10, 2021) ಬಿಎಸ್ಇ 295.94 ಪಾಯಿಂಟ್ ಮೇಲೇರಿ, 49,502.41 ಪಾಯಿಂಟ್ನೊಂದಿಗೆ ದಿನಾಂತ್ಯದ ವಹಿವಾಟನ್ನು ಮುಗಿಸಿತು. ಬಿಎಸ್ಇ ಲಿಸ್ಟೆಡ್ ಕಂಪೆನಿಗಳ ಮಾರುಕಟ್ಟೆ ಬಂಡವಾಳವು ಕಳೆದ ನಾಲ್ಕು ಟ್ರೇಡಿಂಗ್ ಸೆಷನ್ನಲ್ಲಿ, ಅಂದರೆ ಮೇ 5ನೇ ತಾರೀಕಿನಿಂದ ಈಚೆಗೆ 6,44,760.45 ಕೋಟಿ ರೂಪಾಯಿ ಹೆಚ್ಚಳವಾಗಿ, 213,28,658.05 ಕೋಟಿ ರೂಪಾಯಿಯನ್ನು ಮುಟ್ಟಿದೆ.
ಕೋವಿಡ್- 19 ಪ್ರಕರಣಗಳ ನಿರಂತರ ಹೆಚ್ಚಳ ಮತ್ತು ಹಲವು ರಾಜ್ಯಗಳಲ್ಲಿ ಸಂಚಾರಕ್ಕೆ ನಿರ್ಬಂಧಗಳನ್ನು ಹೇರಿರುವುದರ ಹೊರತಾಗಿಯೂ ದೇಶೀಯ ಈಕ್ವಿಟಿಗಳು ಆ ಎಲ್ಲ ಆತಂಕಗಳನ್ನು ಮೀರಿ, ಉತ್ತಮವಾದ ಗಳಿಕೆ ಕಂಡಿವೆ. ಜಾಗತಿಕವಾಗಿ ಅನಕೂಲಕರ ಅಂಶಗಳು, ಸ್ಥಿರವಾದ ಮಾರ್ಚ್ ತ್ರೈಮಾಸಿಕ ಗಳಿಕೆ ಹಾಗೂ ಜತೆಗೆ ಉತ್ತಮ ಅಭಿಪ್ರಾಯಗಳು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಘೋಷಣೆ ಮಾಡಿದ ನಗದು ಬೆಂಬಲ ಮತ್ತು ದೇಶದಾದ್ಯಂತ ಹೇರದ ಲಾಕ್ಡೌನ್ ಈ ಎಲ್ಲ ಕಾರಣಗಳಿಂದಾಗಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಮಧ್ಯೆಯೂ ದೇಶೀಯ ಈಕ್ವಿಟಿಗಳಿಗೆ ಬಲ ಬಂದಿದೆ ಎಂದು ರಿಲಯನ್ಸ್ ಸೆಕ್ಯೂರಿಟೀಸ್ನ ಬಿನೋದ್ ಮೋದಿ ಅಭಿಪ್ರಾಯ ಪಟ್ಟಿದ್ದಾರೆ.
ಅವರು ಮತ್ತೆ ಮುಂದುವರಿದು ಹೇಳುವಂತೆ, ಪ್ರತಿ ದಿನವೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಪಾಸಿಟಿವ್ ರೇಟ್ ಮತ್ತು ಕೋವಿಡ್-19 ಪ್ರಕರಣಗಳು ಹೂಡಿಕೆದಾರರ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮಾರುಕಟ್ಟೆಯು ನಿರ್ಣಾಯಕ ಎತ್ತರಕ್ಕೆ ಏರುವುದನ್ನು ತಡೆಯುತ್ತದೆ. ಅಂದಹಾಗೆ ಸೋಮವಾರದಂದು ಲಾರ್ಸನ್ ಅಂಡ್ ಟೂಬ್ರೋ ಟಾಪ್ ಗೇಯ್ನರ್ ಆಗಿ, ಶೇ 4ರಷ್ಟು ಏರಿಕೆ ಕಂಡಿದೆ. ಆ ನಂತರದ ಸ್ಥಾನದಲ್ಲಿ ಡಾ. ರೆಡ್ಡೀಸ್, ಸನ್ ಫಾರ್ಮಾ ಮತ್ತು ಎನ್ಟಿಪಿಸಿ ಗಳಿಕೆ ಕಂಡಿವೆ.
ಇದನ್ನೂ ಓದಿ: Kotak Mahindra Bank: ಖಾಸಗಿ ಬ್ಯಾಂಕ್ ಷೇರಿನ 10,000 ರೂಪಾಯಿ 20 ವರ್ಷದಲ್ಲಿ 64 ಲಕ್ಷ ರೂ.
(Indian stock market investors wealth increased by Rs 6.45 lakh crore in 4 trading sessions)