Stock Market Investors: 3 ದಿನದ ಇಳಿಕೆ ನಂತರ ಒಂದು ದಿನದ ಏರಿಕೆಯಲ್ಲಿ 2.93 ಲಕ್ಷ ಕೋಟಿ ರೂ. ಹೂಡಿಕೆದಾರರ ಸಂಪತ್ತು ಹೆಚ್ಚಳ
ಭಾರತದ ಷೇರು ಮಾರುಕಟ್ಟೆ ಹೂಡಿಕೆದಾರರ ಸಂಪತ್ತು ಗುರುವಾರದಂದು 2.93 ಲಕ್ಷ ಕೋಟಿ ರೂಪಾಯಿ ಹೆಚ್ಚಳವಾಗಿದೆ. ಜಾಗತಿಕ ಮಾರುಕಟ್ಟೆ ಪ್ರಭಾವ ಮತ್ತಿತರ ಕಾರಣಗಳಿಗೆ ಈ ಬೆಳವಣಿಗೆ ಆಗಿದೆ.
ಸತತ ಮೂರು ದಿನಗಳ ಇಳಿಕೆ ಕಂಡು, ಆ ನಂತರ ಏರಿಕೆಯಾದ ಮೇಲೆ ಹೂಡಿಕೆದಾರರ ಸಂಪತ್ತು ಗುರುವಾರದಂದು 2,93,054.25 ಕೋಟಿ ರೂಪಾಯಿ ಏರಿಕೆಯಾಗಿದೆ. 30 ಷೇರುಗಳ ಗುಚ್ಛವಾದ ಬಿಎಸ್ಇ ಸೆನ್ಸೆಕ್ಸ್ 638.70 ಪಾಯಿಂಟ್ಸ್ ಅಥವಾ ಶೇ 1.22ರಷ್ಟು ಮೇಲೇರಿ 52,837.21 ಪಾಯಿಂಟ್ ಹತ್ತಿರ ತಲುಪಿದೆ. ಗುರುವಾರದಂದು ಸೆನ್ಸೆಕ್ಸ್ 668.75 ಪಾಯಿಂಟ್ಸ್ ಮೇಲೇರಿ 52,867.26 ಪಾಯಿಂಟ್ಸ್ ತಲುಪಿದೆ. ಏರಿಕೆ ಟ್ರೆಂಡ್ ಅನುಸರಿಸಿ, ಬಿಎಸ್ಇ- ಲಿಸ್ಟೆಡ್ ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು 2,93,054.25 ಕೋಟಿ ಹೆಚ್ಚಳವಾಗಿ, ರೂ. 2,33,94,917.25 ಕೋಟಿ ಆಗಿದೆ. 2021- 22ರ ಮೊದಲನೇ ತ್ರೈಮಾಸಿಕದ ಗಳಿಕೆ ಫಲಿತಾಂಶ ಮತ್ತು ಜಾಗತಿಕ ಭಾವನೆಗಳನ್ನು ಅನುಸರಿಸಿ, ಭಾರತೀಯ ಮಾರುಕಟ್ಟೆಯಲ್ಲಿ ಖರೀದಿಗೆ ಬೆಂಬಲ ಸಿಕ್ಕಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ಟೆಕ್ ಮಹೀಂದ್ರಾ ಕಂಪೆನಿಯ ಷೇರು 30 ಷೇರುಗಳ ಗುಚ್ಛದಲ್ಲಿ ಶೇ 5.65ರಷ್ಟು ಗಳಿಕೆ ಕಂಡಿದೆ. ಆ ನಂತರದಲ್ಲಿ ಬಜಾಜ್ ಫೈನಾನ್ಸ್, ಭಾರ್ತಿ ಏರ್ಟೆಲ್, ಬಜಾಜ್ ಫಿನ್ಸರ್ವ್, ಟಾಟಾ ಸ್ಟೀಲ್ ಹಾಗೂ ಲಾರ್ಸನ್ ಅಂಡ್ ಟೂಬ್ರೋ ಟಾಪ್ ಗೇಯ್ನರ್ ಆಗಿತ್ತು. ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ ದೊಡ್ಡ ಮಟ್ಟದಲ್ಲಿ ಇಳಿಕೆ ಕಂಡಿದೆ. ಶೇ 2.27ರಷ್ಟು ಕುಸಿತ ಕಂಡಿದೆ. ಆ ನಂತರ ಏಷ್ಯನ್ ಪೇಂಟ್ಸ್, ಬಜಾಜ್ ಆಟೋ ಮತ್ತು ಮಹೀಂದ್ರಾ ಅಂಡ್ ಮಹೀಂದ್ರಾ ಕೂಡ ಕುಸಿತ ಕಂಡಿದೆ. ಬಿಎಸ್ಇ ಮಿಡ್ಕ್ಯಾಪ್ ಸೂಚ್ಯಂಕವು ಶೇ 1.52ರ ತನಕ ಮೇಲೇರಿದೆ.
ಬಿಎಸ್ಇ ಲೋಹ, ಟೆಲಿಕಾಂ, ಕ್ಯಾಪಿಟಲ್ ಗೂಡ್ಸ್ ಇಂಡಸ್ಟ್ರಿಯಲ್ಸ್ ಸೂಚ್ಯಂಕಗಳು ದೊಡ್ಡ ಗಳಿಕೆ ಕಂಡಿವೆ. ಶೇ 3.02ರ ತನಕ ಏರಿಕೆಯಾಗಿದೆ. ಎಫ್ಎಂಸಿಜಿ ದಿನಾಂತ್ಯಕ್ಕೆ ಇಳಿಕೆ ಕಂಡಿದೆ. “ಕಳೆದ ಮೂರು ಸೆಷನ್ ಸತತ ಇಳಿಕೆ ಕಂಡ ಮೇಲೆ, ಜಾಗತಿಕ ಮಾರುಕಟ್ಟೆ ಪ್ರಭಾವದ ಕಾರಣಕ್ಕೆ ಗುರುವಾರದಂದು ಬೆಳಗ್ಗೆ ದೊಡ್ಡ ಏರಿಕೆ ಕಂಡಿದೆ. ದಿನದ ಸಮಯ ಕಳೆದಂತೆ ಬಲಗೊಳ್ಳುತ್ತಾ ಹೋಯಿತು. ಮಾರುಕಟ್ಟೆಯು ಪ್ರಬಲವಾಗಿ ಚೇತರಿಕೆ ಕಂಡಿದೆ ಮತ್ತು ಒಂದು ಪರ್ಸೆಂಟ್ಗೂ ಹೆಚ್ಚಾಗಿದೆ,” ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: Investments In IPO: ಬ್ಯಾಂಕ್ಗಳಿಂದ ಐಪಿಒಗಳ ಮೇಲಿನ ಹೂಡಿಕೆ 4 ವರ್ಷಗಳ ಗರಿಷ್ಠ ಮಟ್ಟಕ್ಕೆ
(Indian Stock Market Investors Wealth Increased Nearly By Rs 3 Lakh Crore)
Published On - 10:37 pm, Thu, 22 July 21