
ನವದೆಹಲಿ, ಜುಲೈ 3: ಭಾರತ ಸರ್ಕಾರವು ಪರಿಸರ ಸಂರಕ್ಷಣೆ ಮತ್ತು ಇಂಧನ ಸ್ವಾವಲಂಬನೆಗೆ ಮುನ್ನಡಿ ಬರೆಯುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ‘ಎಥೆನಾಲ್ ಮಿಶ್ರಿತ ಪೆಟ್ರೋಲ್’ (EBP) ಕಾರ್ಯಕ್ರಮವು ಮೈಲಿಗಲ್ಲನ್ನು ಸಾಧಿಸಿದೆ. ನಿಗದಿಪಡಿಸಿದ್ದ ಗಡುವುಗಿಂತ ಮುಂಚಿತವಾಗಿಯೇ, ಅಂದರೆ ಡಿಸೆಂಬರ್ 2025 ರಲ್ಲೇ ದೇಶದಾದ್ಯಂತ ಶೇಕಡಾ 20 ರಷ್ಟು (E20) ಎಥೆನಾಲ್ ಮಿಶ್ರಣದ ಗುರಿಯನ್ನು ಯಶಸ್ವಿಯಾಗಿ ತಲುಪಲಾಗಿದೆ. 2013-14ರಲ್ಲಿ ಕೇವಲ ಶೇ. 1.5 ರಷ್ಟಿದ್ದ ಈ ಪ್ರಮಾಣವು ಪ್ರಸ್ತುತ ಶೇ. 20 ಕ್ಕೆ ಏರಿಕೆಯಾಗಿದ್ದು, ಭಾರತದ ಇಂಧನ ವಲಯದಲ್ಲಿ ಇದೊಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ.
2014-15 ರಿಂದ ಮೇ 2026 ರವರೆಗಿನ ಅವಧಿಯಲ್ಲಿ ಈ ಯೋಜನೆಯು ದೇಶದ ಆರ್ಥಿಕತೆ ಮತ್ತು ಕೃಷಿ ವಲಯಕ್ಕೆ ಭಾರಿ ಕೊಡುಗೆ ನೀಡಿದೆ:
ಇದನ್ನೂ ಓದಿ: ವಿಕಸಿತ ಭಾರತ ಉದ್ಯೋಗ ಖಾತ್ರಿ ಯೋಜನೆ ವಿಬಿ-ಜಿ-ರಾಮ್-ಜಿಗೆ ನೊಂದಣಿ ಹೇಗೆ? ಕೆಲಸ ಸಿಗದಿದ್ದರೆ ಎಷ್ಟು ಭತ್ಯೆ?
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ E20 ಇಂಧನ ಬಳಕೆಯಿಂದ ವಾಹನಗಳ ಮೈಲೇಜ್ ಕಡಿಮೆಯಾಗುತ್ತದೆ, ಎಂಜಿನ್ ತುಕ್ಕು ಹಿಡಿಯುತ್ತದೆ ಮತ್ತು ಇಂಧನ ಟ್ಯಾಂಕ್‌ಗೆ ಇರುವೆಗಳು ಆಕರ್ಷಿತವಾಗುತ್ತವೆ ಎಂಬ ತಪ್ಪು ಮಾಹಿತಿ ಹರಡುತ್ತಿರುವುದಕ್ಕೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ವೈಜ್ಞಾನಿಕ ಪುರಾವೆಗಳೊಂದಿಗೆ ಸ್ಪಷ್ಟನೆ ನೀಡಿದೆ.
ಎಥೆನಾಲ್ ಉತ್ಪಾದನಾ ಪ್ರಕ್ರಿಯೆಯಲ್ಲಿ ಸಕ್ಕರೆಯಂಶವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ. ಇದರಲ್ಲಿ ಕೀಟ ನಿವಾರಕ ಗುಣಗಳಿರುವುದರಿಂದ ಇರುವೆಗಳು ಆಕರ್ಷಿತವಾಗಲು ಯಾವುದೇ ವೈಜ್ಞಾನಿಕ ಆಧಾರವಿಲ್ಲ.
ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ನಡೆಸಿರುವ ತೀವ್ರತರದ ಪರೀಕ್ಷೆಗಳ ಪ್ರಕಾರ, E20 ಇಂಧನವು ವಾಹನಗಳಿಗೆ ಉತ್ತಮ ವೇಗವರ್ಧನೆ (Acceleration) ನೀಡುವುದಲ್ಲದೆ ಶೇ. 30 ರಿಂದ 50 ರಷ್ಟು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ. ವಾಹನಗಳ ಮೈಲೇಜ್ ಕೇವಲ ಇಂಧನದ ಮೇಲಷ್ಟೇ ಅಲ್ಲದೆ, ಚಾಲನಾ ಶೈಲಿ ಮತ್ತು ವಾಹನದ ನಿರ್ವಹಣೆಯ ಮೇಲೆ ನಿರ್ಧಾರವಾಗುತ್ತದೆ. ಜೊತೆಗೆ, E20 ಬಳಕೆಯಿಂದ ವಾಹನಗಳ ವಾರಂಟಿ ಅಥವಾ ಇನ್ಶೂರೆನ್ಸ್ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು SIAM ಮತ್ತು ವಿಮಾ ಕಂಪನಿಗಳು ಸ್ಪಷ್ಟಪಡಿಸಿವೆ.
ಇದನ್ನೂ ಓದಿ: ಮೆಷೀನ್ಗಿಂತ ಮನುಷ್ಯರೇ ವಾಸಿ; ಎಐ ಕಾರಣ ನೀಡಿ ಮನೆಗೆ ಕಳುಹಿಸಿದ್ದ ಉದ್ಯೋಗಿಗಳನ್ನು ವಾಪಸ್ ಕರೆಸಿಕೊಂಡ ದೊಡ್ಡ ಕಂಪನಿಗಳು
ಎಥೆನಾಲ್ ತಯಾರಿಕೆಗೆ ಕೇವಲ ಹೆಚ್ಚುವರಿ (Surplus) ಆಹಾರ ಧಾನ್ಯ ಹಾಗೂ ಕಬ್ಬನ್ನು ಮಾತ್ರ ಬಳಸಲಾಗುತ್ತಿದ್ದು, ಇದಕ್ಕಾಗಿ ಪ್ರತ್ಯೇಕವಾಗಿ ಕೃಷಿ ಮಾಡದ ಕಾರಣ ಭೂಗರ್ಭದ ನೀರಿನ ಸವಕಳಿ ವದಂತಿಯೂ ಸುಳ್ಳಾಗಿದೆ. ಪ್ರಸ್ತುತ ಕಡಿಮೆ ನೀರು ಬೇಡುವ ಮುಸುಕಿನ ಜೋಳದಿಂದಲೂ (Maize) ಶೇ. 40 ಕ್ಕೂ ಹೆಚ್ಚು ಎಥೆನಾಲ್ ತಯಾರಿಸಲಾಗುತ್ತಿದೆ.
ವಿಶ್ವದ ಪ್ರಮುಖ ಆರ್ಥಿಕತೆಗಳಾದ ಅಮೆರಿಕ (E10/E15) ಮತ್ತು ಬ್ರೇಜಿಲ್ (E27) ದೇಶಗಳ ಮಾದರಿಯಲ್ಲೇ ಭಾರತವೂ ಈ ಪರಿಸರಸ್ನೇಹಿ ಇಂಧನ ನೀತಿಯನ್ನು ಅಳವಡಿಸಿಕೊಂಡಿದ್ದು, ಸಾರ್ವಜನಿಕರು ಯಾವುದೇ ಸುಳ್ಳು ಸುದ್ದಿಗೆ ಕಿವಿಗೊಡಬಾರದು ಎಂದು ಸರ್ಕಾರ ಮನವಿ ಮಾಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ