AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಕಸಿತ ಭಾರತ ಉದ್ಯೋಗ ಖಾತ್ರಿ ಯೋಜನೆ ವಿಬಿ-ಜಿ-ರಾಮ್-ಜಿಗೆ ನೊಂದಣಿ ಹೇಗೆ? ಕೆಲಸ ಸಿಗದಿದ್ದರೆ ಎಷ್ಟು ಭತ್ಯೆ?

VB G-RAM-G rural employment guarantee scheme full details: ಜುಲೈ 1ರಿಂದ ವಿಕಸಿತ ಭಾರತ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಾದ ವಿಬಿ-ಜಿ-ರಾಮ್-ಜಿ ಜಾರಿಗೆ ಬಂದಿದೆ. ಗ್ರಾಮೀಣ ಭಾಗದ ಒಂದು ಕುಟುಂಬಕ್ಕೆ ಒಂದು ವರ್ಷದಲ್ಲಿ ಕನಿಷ್ಠ 125 ದಿನಗಳ ಕೌಶಲ್ಯರಹಿತ ಕೂಲಿ ಕೆಲಸಗಳನ್ನು ಇದು ಖಾತ್ರಿಪಡಿಸುತ್ತದೆ. ಒಂದು ಕುಟುಂಬವು ಕೃಷಿಗಾರಿಕೆಯ ಜೊತೆ ಜೊತೆಗೆ ಒಂದು ವರ್ಷದಲ್ಲಿ 45,000 ರೂನಿಂದ 60,000 ರೂವರೆಗೆ ಹೆಚ್ಚುವರಿ ಸಂಪಾದಿಸಬಹುದು.

ವಿಕಸಿತ ಭಾರತ ಉದ್ಯೋಗ ಖಾತ್ರಿ ಯೋಜನೆ ವಿಬಿ-ಜಿ-ರಾಮ್-ಜಿಗೆ ನೊಂದಣಿ ಹೇಗೆ? ಕೆಲಸ ಸಿಗದಿದ್ದರೆ ಎಷ್ಟು ಭತ್ಯೆ?
ಕೂಲಿಗಳುImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 03, 2026 | 3:44 PM

Share

ಮುಖ್ಯಾಂಶಗಳು

  • ಜುಲೈ 1ರಿಂದ ಉದ್ಯೋಗ ಖಾತ್ರಿ ಯೋಜನೆಯಾದ ವಿಬಿ-ಜಿ-ರಾಮ್-ಜಿ ಜಾರಿಗೆ ಬಂದಿದೆ.
  • ಒಂದು ಕುಟುಂಬಕ್ಕೆ ಕನಿಷ್ಠ 125 ದಿನಗಳ ಕೂಲಿ ಕೆಲಸಗಳನ್ನು ಇದು ಖಾತ್ರಿಪಡಿಸುತ್ತದೆ.
  • ಒಂದು ಕುಟುಂಬ ಒಂದು ವರ್ಷದಲ್ಲಿ 48,000 ರೂ ಹೆಚ್ಚುವರಿ ಸಂಪಾದಿಸಬಹುದು.

ಕೇಂದ್ರ ಸರ್ಕಾರವು 2026ರ ಜುಲೈ 1 ರಿಂದ ಹೊಸ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ VB-G RAM G (Viksit Bharat – Guarantee for Rozgar and Ajeevika Mission – Gramin) Act, 2025 ಅನ್ನು ಜಾರಿಗೆ ತಂದಿದೆ. ಎರಡು ದಶಕಗಳಿಂದ ಇದ್ದ ನರೇಗಾ (MGNREGA) ಯೋಜನೆ ಬದಲು ಜಿ ರಾಮ್ ಜಿ ಯೋಜನೆಯನ್ನು ಅಳವಡಿಸಲಾಗಿದೆ. ಹಿಂದಿನ ಸ್ಕೀಮ್​ಗಿಂತ ಇದು ಹೆಚ್ಚು ದಿನ ಕೆಲಸ ಮತ್ತು ಹೆಚ್ಚು ವೇತನ ನೀಡುತ್ತದೆ. ಹಳೆಯ ನರೇಗಾ ಯೋಜನೆಯಡಿ (MNREGA) ವರ್ಷಕ್ಕೆ 100 ದಿನಗಳ ಉದ್ಯೋಗ ನೀಡಲಾಗುತ್ತಿತ್ತು. ಆದರೆ ಹೊಸ VB-G RAM G ಕಾಯ್ದೆಯಡಿ, ಪ್ರತಿ ಗ್ರಾಮೀಣ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 125 ದಿನಗಳ ದೈಹಿಕ ಶ್ರಮದ (ಅಕುಶಲ) ಕೆಲಸದ ಕಾನೂನುಬದ್ಧ ಖಾತರಿಯನ್ನು ನೀಡಲಾಗುತ್ತದೆ.

ಜಿ ರಾಮ್ ಜಿ ಯೋಜನೆಗೆ ನೊಂದಣಿ ಮಾಡಿಕೊಳ್ಳುವುದು ಹೇಗೆ?

ಪ್ರಸ್ತುತ ಇ-ಕೆವೈಸಿ (e-KYC) ಆಗಿರುವ ಹಳೆಯ ನರೇಗಾ ಜಾಬ್ ಕಾರ್ಡ್‌ಗಳು ಹೊಸ ಕಾರ್ಡ್ ಸಿಗುವವರೆಗೆ ಮಾನ್ಯತೆ ಹೊಂದಿರುತ್ತವೆ. ಹೊಸದಾಗಿ ನೋಂದಾಯಿಸಲು (How to Register) ಅಥವಾ ಕಾರ್ಡ್ ನವೀಕರಿಸಲು ನಿಮ್ಮ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಬೇಕು.

ಕುಟುಂಬದ 18 ವರ್ಷ ಮೇಲ್ಪಟ್ಟ, ಅಕುಶಲ ದೈಹಿಕ ಕೆಲಸ ಮಾಡಲು ಸಿದ್ಧರಿರುವ ಎಲ್ಲಾ ಸದಸ್ಯರ ವಿವರಗಳು ಮತ್ತು ಆಧಾರ್ ಸಂಖ್ಯೆಯನ್ನು ನೀಡಿ ಅರ್ಜಿ ಸಲ್ಲಿಸಬೇಕು.

ಗ್ರಾಮೀಣ ಉದ್ಯೋಗ ಖಾತರಿ ಕಾರ್ಡ್ (Gramin Rozgar Guarantee Card): ಯಶಸ್ವಿ ನೋಂದಣಿಯ ನಂತರ ಹೊಸ ಡಿಜಿಟಲ್ ಕಾರ್ಡ್ ಅನ್ನು ನೀಡಲಾಗುತ್ತದೆ. ಇದರ ಮೂಲಕ ನೀವು ಕೆಲಸಕ್ಕಾಗಿ ಬೇಡಿಕೆ ಇಡಬಹುದು.

ರೈತ ಕುಟುಂಬಕ್ಕೆ ವರ್ಷಕ್ಕೆ 48,000 ರೂ ಹೆಚ್ಚುವರಿ ಗಳಿಕೆ

ಜಿ ರಾಮ್ ಜಿ ಯೋಜನೆಯಲ್ಲಿ ಒಂದು ದಿನದ ಕೂಲಿ 300 ರೂನಿಂದ 450 ರೂವರೆಗೆ ಇರುತ್ತದೆ. ಕರ್ನಾಟಕದಲ್ಲಿ ದಿನಕ್ಕೆ 385 ರೂ ವೇತನ ನಿಗದಿಯಾಗಿದೆ. ಅಂದರೆ, ವರ್ಷಕ್ಕೆ 125 ದಿನದ ಕೆಲಸಕ್ಕೆ ಕನಿಷ್ಠ 48,000 ರೂ ಸಂಪಾದಿಸುವ ಅವಕಾಶ ಇರುತ್ತದೆ. ಒಂದು ಕುಟುಂಬಕ್ಕೆ ಒಂದೇ ಜಾಬ್ ಕಾರ್ಡ್ ಸಿಗುವುದು. ಕುಟುಂಬದಲ್ಲಿ ಕೆಲಸ ಮಾಡುವ ಜನರ ಸಂಖ್ಯೆ ಹೆಚ್ಚು ಇದ್ದರೂ ಕನಿಷ್ಠ ಉದ್ಯೋಗ ದಿನಗಳು 125 ದಿನ ಮಾತ್ರವೇ ಎಂಬುದನ್ನು ಗಮನದಲ್ಲಿರಿಸಿಕೊಳ್ಳಬೇಕು. ಹಾಗೆಯೇ, ಕೃಷಿ ಕೆಲಸಗಳು ಇಲ್ಲದ ದಿನಗಳಲ್ಲಿ ಉದ್ಯೋಗಗಳು ಇರುತ್ತವೆ. ಹೀಗಾಗಿ, ಕೃಷಿ ಆದಾಯದ ಜೊತೆಗೆ ಇದು ಹೆಚ್ಚುವರಿ ಆದಾಯವಾಗಿರುತ್ತದೆ.

ಇದನ್ನೂ ಓದಿ: ವಿಬಿ-ಜಿ-ರಾಮ್​​ ಜಿ ಜಾರಿ: 125 ದಿನ ಕೆಲಸದ ಗ್ಯಾರಂಟಿ ಜೊತೆ ವೇತನ ಹೆಚ್ಚಳ, ಕರ್ನಾಟಕದಲ್ಲಿ ಎಷ್ಟು?

ಕೃಷಿ ಹಂಗಾಮಿನ ವಿರಾಮ

ಬಿತ್ತನೆ ಮತ್ತು ಕೊಯ್ಲು ಮಾಡುವ ಗರಿಷ್ಠ ಕೃಷಿ ಅವಧಿಯಲ್ಲಿ ಗ್ರಾಮೀಣ ಭಾಗದಲ್ಲಿ ಕೃಷಿ ಕಾರ್ಮಿಕರ ಕೊರತೆಯಾಗದಂತೆ ತಡೆಯಲು ವರ್ಷದಲ್ಲಿ ಗರಿಷ್ಠ 60 ದಿನಗಳ ಕಾಲ ಈ ಯೋಜನೆಯ ಕೆಲಸಗಳಿಗೆ ವಿರಾಮ (Agriculture Pause) ನೀಡಲು ರಾಜ್ಯಗಳಿಗೆ ಅವಕಾಶವಿದೆ. ಆದರೆ, ಉಳಿದ 305 ದಿನಗಳಲ್ಲಿ ಕಾರ್ಮಿಕರಿಗೆ ಪೂರ್ಣ 125 ದಿನಗಳ ಕೆಲಸವನ್ನು ಖಚಿತಪಡಿಸಲಾಗುತ್ತದೆ.

ಕೆಲಸ ಸಿಗದಿದ್ದರೆ ಪರಿಹಾರ ಮತ್ತು ನಿರುದ್ಯೋಗ ಭತ್ಯೆ

ಈ ಯೋಜನೆಯು ಸಂಪೂರ್ಣವಾಗಿ ಬೇಡಿಕೆ ಆಧಾರಿತವಾಗಿದೆ (Demand-driven). ಅಂದರೆ ನೀವು ಕೆಲಸ ಕೇಳಿದ 15 ದಿನಗಳ ಒಳಗಾಗಿ ಸರ್ಕಾರ ನಿಮಗೆ ಕೆಲಸ ನೀಡಲೇಬೇಕು.

ನಿರುದ್ಯೋಗ ಭತ್ಯೆ: ಒಂದು ವೇಳೆ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗಾಗಿ ಸರ್ಕಾರ ಕೆಲಸ ನೀಡಲು ವಿಫಲವಾದರೆ, ಕಾರ್ಮಿಕರಿಗೆ ದೈನಂದಿನ ನಿರುದ್ಯೋಗ ಭತ್ಯೆಯನ್ನು (Daily Unemployment Allowance) ನೀಡಲಾಗುತ್ತದೆ. ಇದರ ಸಂಪೂರ್ಣ ಆರ್ಥಿಕ ಹೊರೆಯನ್ನು ಆಯಾ ರಾಜ್ಯ ಸರ್ಕಾರಗಳು ಹೊರಬೇಕಾಗುತ್ತದೆ.

ವೇತನ ವಿಳಂಬಕ್ಕೆ ಪರಿಹಾರ: ಕೆಲಸ ಮುಗಿದ 15 ದಿನಗಳ ಒಳಗಾಗಿ ಅಥವಾ ವಾರಕ್ಕೊಮ್ಮೆ ವೇತನವನ್ನು ನೇರವಾಗಿ ಬ್ಯಾಂಕ್ ಖಾತೆಗೆ (DBT ಮೂಲಕ) ಜಮಾ ಮಾಡಬೇಕು. ಒಂದು ವೇಳೆ ವೇತನ ಪಾವತಿ ವಿಳಂಬವಾದರೆ, ಅದಕ್ಕೆ ಕಾನೂನುಬದ್ಧವಾಗಿ ಬಡ್ಡಿ ಸಮೇತ ವಿಳಂಬ ಪರಿಹಾರವನ್ನು (Delay Compensation) ಕಾರ್ಮಿಕರಿಗೆ ಪಾವತಿಸಬೇಕಾಗುತ್ತದೆ.

5 ಕಿಮೀಯೊಳಗೆ ಕೆಲಸದ ಸ್ಥಳ, ಇಲ್ಲದಿದ್ದರೆ ವೇತನ ಹೆಚ್ಚಳ

ಕೆಲಸದ ಸ್ಥಳವು ನಿಮ್ಮ ವಾಸಸ್ಥಳದಿಂದ 5 ಕಿಮೀ ವ್ಯಾಪ್ತಿಯೊಳಗೆ ಇರಬೇಕು. ಒಂದು ವೇಳೆ, 5 ಕಿಮೀಗಿಂತ ಹೆಚ್ಚು ದೂರ ಇದ್ದರೆ ಶೇ. 10ರಷ್ಟು ಹೆಚ್ಚು ವೇತನ ನೀಡಲಾಗುತ್ತದೆ.

ಕೆಲಸಕ್ಕೆ ಗೈರಾದರೆ ನಿರುದ್ಯೋಗ ಭತ್ಯೆ ಸಿಗದು

ನೀವು ಕೆಲಸಕ್ಕೆ ಅರ್ಜಿ ಸಲ್ಲಿಸಿ 15 ದಿನದೊಳಗೆ ನಿಮಗೆ ಕೆಲಸ ನಿಯೋಜನೆಯಾಗುತ್ತದೆ. ಆ ರೀತಿ ಸಿಕ್ಕ ಕೆಲಸಕ್ಕೆ ಹೋಗದಿದ್ದರೆ ಅದನ್ನು ಗೈರು ಎಂದು ಪರಿಗಣಿಸಲಾಗುತ್ತದೆ. ನೀವು ಎಷ್ಟು ದಿನ ಆ ರೀತಿ ಗೈರಾಗಿರುತ್ತೀರಿ, ಅಷ್ಟು ದಿನಕ್ಕೆ ನಿರುದ್ಯೋಗ ಭತ್ಯೆ ಅಥವಾ ಪರಿಹಾರವನ್ನು ಕ್ಲೇಮ್ ಮಾಡಲು ಆಗುವುದಿಲ್ಲ.

ಇದನ್ನೂ ಓದಿ: ಹೊಸ ಉದ್ಯೋಗ ಖಾತ್ರಿ ಸ್ಕೀಮ್; ಮನ್ರೇಗಾ ಬದಲು ವಿ ಬಿ ಜಿ ರಾಮ್ ಜಿ ಇಂದಿನಿಂದ ಅಧಿಕೃತ ಜಾರಿ

ಜಿ ರಾಮ್ ಜಿ ಯೋಜನೆಯ ಇತರ ಪ್ರಮುಖ ವಿವರಗಳು

  • ಹೆಚ್ಚಿದ ದಿನಗೂಲಿ: ದೇಶಾದ್ಯಂತ ಸರಾಸರಿ ದಿನಗೂಲಿಯನ್ನು ₹298.8 ರಿಂದ₹327.4 ಕ್ಕೆ ಏರಿಸಲಾಗಿದೆ. ಯಾವುದೇ ರಾಜ್ಯದಲ್ಲೂ ಕನಿಷ್ಠ ಕೂಲಿ ₹300 ಕ್ಕಿಂತ ಕಡಿಮೆ ಇರುವುದಿಲ್ಲ. ಕರ್ನಾಟಕದಲ್ಲಿ 385 ರೂ ದಿನಗೂಲಿ ಇದೆ.
  • ತಂತ್ರಜ್ಞಾನದ ಬಳಕೆ: ನಕಲಿ ಅಟೆಂಡೆನ್ಸ್ ಮತ್ತು ಭ್ರಷ್ಟಾಚಾರ ತಡೆಯಲು ಬಯೋಮೆಟ್ರಿಕ್ ಹಾಜರಾತಿ, ಜಿಪಿಎಸ್ (GPS) ಟ್ರ್ಯಾಕಿಂಗ್, ಮತ್ತು ಐಟಂ ಪರಿಶೀಲನೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನವನ್ನು ಬಳಸಲಾಗುತ್ತದೆ.
  • ವಿಶೇಷ ಆದ್ಯತೆ: ಒಂಟಿ ಮಹಿಳೆಯರು, ವಿಕಲಚೇತನರು (PwD), ಹಿರಿಯ ನಾಗರಿಕರು, ತೃತೀಯ ಲಿಂಗಿಗಳು ಮತ್ತು ಹಿಂದುಳಿದ ಬುಡಕಟ್ಟು ಸಮುದಾಯದವರಿಗೆ (PVTGs) ಉದ್ಯೋಗ ನೀಡಿಕೆಯಲ್ಲಿ ವಿಶೇಷ ಆದ್ಯತೆ ಇರುತ್ತದೆ.
  • ಸ್ಥಿರ ಆಸ್ತಿಗಳ ಸೃಷ್ಟಿ: ಕೇವಲ ಗುಂಡಿ ತೋಡುವುದಕ್ಕೆ ಸೀಮಿತವಾಗದೆ, ಹಳ್ಳಿಗಳಲ್ಲಿ ಶಾಶ್ವತ ರಸ್ತೆಗಳು, ಜಲ ಸಂರಕ್ಷಣೆ (Water Conservation), ಆಟದ ಮೈದಾನ ಹಾಗೂ ಕೃಷಿ ಪೂರಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು 300 ಕ್ಕೂ ಹೆಚ್ಚು ವಿಧದ ಕೆಲಸಗಳನ್ನು ಗುರುತಿಸಲಾಗಿದೆ.
  • ಹಣಕಾಸು ಹಂಚಿಕೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ 60:40 ಅನುಪಾತದಲ್ಲಿ (ಈಶಾನ್ಯ ರಾಜ್ಯಗಳಿಗೆ 90:10) ವೆಚ್ಚವನ್ನು ಹಂಚಿಕೊಳ್ಳಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:29 pm, Fri, 3 July 26

Follow Us
ಜುಲೈ ತಿಂಗಳ ವಿದ್ಯುತ್ ಬಿಲ್ ವಿತರಣೆಯಲ್ಲಿ ಮಹತ್ವದ ಬದಲಾವಣೆ
ಜುಲೈ ತಿಂಗಳ ವಿದ್ಯುತ್ ಬಿಲ್ ವಿತರಣೆಯಲ್ಲಿ ಮಹತ್ವದ ಬದಲಾವಣೆ
ಬೆಳಗಾವಿಯಲ್ಲಿ ಭೀಕರ ಬರದ ಛಾಯೆ: ಬರಿದಾದ ಹಿಡಕಲ್ ಡ್ಯಾಂ
ಬೆಳಗಾವಿಯಲ್ಲಿ ಭೀಕರ ಬರದ ಛಾಯೆ: ಬರಿದಾದ ಹಿಡಕಲ್ ಡ್ಯಾಂ
ಕೋಲಾರದ ಕುರುಬರಪೇಟೆಯಲ್ಲಿ ದೇಗುಲದ ಆವರಣದಲ್ಲಿ ಎಸ್​ಐಆರ್​​ ಪ್ರಕ್ರಿಯೆ!
ಕೋಲಾರದ ಕುರುಬರಪೇಟೆಯಲ್ಲಿ ದೇಗುಲದ ಆವರಣದಲ್ಲಿ ಎಸ್​ಐಆರ್​​ ಪ್ರಕ್ರಿಯೆ!
ಕೊಪ್ಪಳದ ಅಂಜನಾದ್ರಿ ದೇಗುಲಕ್ಕೆ ರಾಹುಲ್​​ ದ್ರಾವಿಡ್​​ ದಂಪತಿ ಭೇಟಿ
ಕೊಪ್ಪಳದ ಅಂಜನಾದ್ರಿ ದೇಗುಲಕ್ಕೆ ರಾಹುಲ್​​ ದ್ರಾವಿಡ್​​ ದಂಪತಿ ಭೇಟಿ
ಪತ್ನಿ, ತಮ್ಮನ ಜತೆ ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ತೆರಳಿ ಡಿಕೆಶಿ ಮಾತುಕತೆ
ಪತ್ನಿ, ತಮ್ಮನ ಜತೆ ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ತೆರಳಿ ಡಿಕೆಶಿ ಮಾತುಕತೆ
ರಾಮನಗರದ ಕಲ್ಯಾಣ ಮಂಟಪದಲ್ಲಿ SIR ಆರೋಪಕ್ಕೆ ಗೃಹ ಸಚಿವ ಖರ್ಗೆ ಏನಂದ್ರು ನೋಡಿ
ರಾಮನಗರದ ಕಲ್ಯಾಣ ಮಂಟಪದಲ್ಲಿ SIR ಆರೋಪಕ್ಕೆ ಗೃಹ ಸಚಿವ ಖರ್ಗೆ ಏನಂದ್ರು ನೋಡಿ
ಮಳೆಗಾಗಿ ವಿಭಿನ್ನ ಹರಕೆ: ದೇವಿ ದೇಗುಲದಲ್ಲಿ ರಾತ್ರಿಪೂರ್ತಿ ಭಜನೆ
ಮಳೆಗಾಗಿ ವಿಭಿನ್ನ ಹರಕೆ: ದೇವಿ ದೇಗುಲದಲ್ಲಿ ರಾತ್ರಿಪೂರ್ತಿ ಭಜನೆ
ಗೃಹಜ್ಯೋತಿ ಪರಿಷ್ಕರಣೆ ಅಲ್ಲ; ಇದು ಮಾಹಿತಿ ಸಂಗ್ರಹ ಅಷ್ಟೇ ಎಂದ ಚೆಸ್ಕಾಂ MD
ಗೃಹಜ್ಯೋತಿ ಪರಿಷ್ಕರಣೆ ಅಲ್ಲ; ಇದು ಮಾಹಿತಿ ಸಂಗ್ರಹ ಅಷ್ಟೇ ಎಂದ ಚೆಸ್ಕಾಂ MD
ಗೃಹ ಸಚಿವರ ತವರಲ್ಲೇ ಪೊಲೀಸ್ ಠಾಣೆಯಿಂದಲೇ ಪೋಕ್ಸೋ ಕೇಸ್ ಆರೋಪಿ ಪರಾರಿ!
ಗೃಹ ಸಚಿವರ ತವರಲ್ಲೇ ಪೊಲೀಸ್ ಠಾಣೆಯಿಂದಲೇ ಪೋಕ್ಸೋ ಕೇಸ್ ಆರೋಪಿ ಪರಾರಿ!
ಫುಟ್​ಪಾತ್ ವ್ಯಾಪಾರಿಗಳಿಗೆ ಮತ್ತೆ ಸಚಿವರ ಖಡಕ್ ವಾರ್ನಿಂಗ್
ಫುಟ್​ಪಾತ್ ವ್ಯಾಪಾರಿಗಳಿಗೆ ಮತ್ತೆ ಸಚಿವರ ಖಡಕ್ ವಾರ್ನಿಂಗ್