ಭಾರತದಲ್ಲಿ ಮೊದಲ ಲಿಥಿಯಂ ಗಣಿಗಾರಿಕೆ ಆರಂಭ; ಈ ಬಿಳಿ ಚಿನ್ನದ ಬೆಲೆ ಬಲು ದುಬಾರಿ

Lithium known as white gold: ಮುಂದಿನ ದಶಕಗಳಲ್ಲಿ ಜಾಗತಿಕವಾಗಿ ಬಹಳ ಬೇಡಿಕೆ ಹೊಂದಿರುವ ಲಿಥಿಯಮ್ ಭಾರತದ ಹಲವೆಡೆ ಇರುವುದು ಪತ್ತೆಯಾಗಿದೆ. ಛತ್ತೀಸ್​ಗಡದಲ್ಲಿ ಮೊದಲ ಬಾರಿಗೆ ಲಿಥಿಯಮ್ ಗಣಿಗಾರಿಕೆ ಆರಂಭವಾಗಿದೆ. ಕರ್ನಾಟಕದ ಮಂಡ್ಯ ಸೇರಿದಂತೆ ದೇಶದ ಹಲವೆಡೆ ಲಿಥಿಯಮ್ ನಿಕ್ಷೇಪಗಳಿವೆ. ಅಲ್ಲೆಲ್ಲಾ ಸದ್ಯದಲ್ಲೇ ಮೈನಿಂಗ್ ಶುರುವಾಗಬಹುದು.

ಭಾರತದಲ್ಲಿ ಮೊದಲ ಲಿಥಿಯಂ ಗಣಿಗಾರಿಕೆ ಆರಂಭ; ಈ ಬಿಳಿ ಚಿನ್ನದ ಬೆಲೆ ಬಲು ದುಬಾರಿ
ಮೈನಿಂಗ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 16, 2024 | 4:00 PM

ನವದೆಹಲಿ, ಆಗಸ್ಟ್ 16: ಜಾಗತಿಕ ಉತ್ಪಾದನಾ ವಲಯಕ್ಕೆ ಅಗತ್ಯವಾಗಿರುವ ಖನಿಜಗಳನ್ನು ಹುಡುಕಿ ಹೊರತೆಗೆಯುವ ಕೇಂದ್ರ ಸರ್ಕಾರದ ಮಹಾಯೋಜನೆಯ ಭಾಗವಾಗಿ ಲಿಥಿಯಮ್ ಗಣಿಗಾರಿಕೆ ಆರಂಭವಾಗಿದೆ. ಛತ್ತೀಸ್​ಗಡದ ಕೋರ್ಬಾ ಜಿಲ್ಲೆಯಲ್ಲಿ ಲಿಥಿಯಮ್ ಮೈನಿಂಗ್ ಶುರುವಾಗುತ್ತಿರುವುದು ತಿಳಿದುಬಂದಿದೆ. ಬಿಳಿ ಚಿನ್ನ ಎಂದೇ ಕರೆಯಲಾಗುವ ಲಿಥಿಯಮ್​ನ ಗಣಿಗಾರಿಕೆ ಭಾರತದಲ್ಲಿ ಆಗುತ್ತಿರುವುದು ಇದೇ ಮೊದಲು. ಕುತೂಹಲ ಎಂದರೆ ಕರ್ನಾಟಕವೂ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಾಕಷ್ಟು ಲಿಥಿಯಮ್ ನಿಕ್ಷೇಪಗಳನ್ನು ಪತ್ತೆ ಮಾಡಲಾಗಿದೆ.

ಲಿಥಿಯಮ್ ಅನ್ನು ಬಿಳಿ ಚಿನ್ನ ಅನ್ನೋದು ಯಾಕೆ?

ಲಿಥಿಯಮ್ ಅನ್ನು ಬ್ಯಾಟರಿಗಳ ತಯಾರಿಕೆಗೆ ಬಳಸಲಾಗುತ್ತದೆ. ಜಾಗತಿಕವಾಗಿ ಹೆಚ್ಚಿನ ಬ್ಯಾಟರಿಗಳು ಲಿಥಿಯಮ್ ಅಯಾನ್​ನಿಂದ ತಯಾರಿಸಲಾಗುತ್ತಿದೆ. ಎಲೆಕ್ಟ್ರಿಕ್ ವಾಹನ, ಲ್ಯಾಪ್​ಟಾಪ್, ಮೊಬೈಲ್ ಫೋನ್ ಮೊದಲಾದ ಬಹುತೇಕ ಎಲೆಕ್ಟ್ರಾನಿಕ್ ಸಾಧನಗಳ ತಯಾರಿಕೆಗೆ ಈ ಲಿಥಿಯಮ್ ಅಗತ್ಯ. ಎಲ್ಲಿಲ್ಲದ ಬೇಡಿಕೆ ಲಿಥಿಯಮ್​ಗೆ ಇದೆ. ಚಿನ್ನದಷ್ಟೇ ಇದೂ ಕೂಡ ದುರ್ಲಭ. ಅದಕ್ಕೆ ಲಿಥಿಯಮ್ ಅನ್ನು ಬಿಳಿ ಚಿನ್ನ ಎಂದು ಕರೆಯುತ್ತಾರೆ.

ಇದನ್ನೂ ಓದಿ: ಹಿಂದೂಸ್ತಾನ್ ಜಿಂಕ್ ಕಂಪನಿಯ ಷೇರುದಾರರಿಗೆ ಸುಗ್ಗಿ; ಸಿಗಲಿದೆ ಬರೋಬ್ಬರಿ 14,000 ಕೋಟಿ ರೂ ಮೊತ್ತದಷ್ಟು ಲಾಭಾಂಶ

ಭಾರತದಲ್ಲಿ ಲಿಥಿಯಂ ಮೈನಿಂಗ್​ನಿಂದ ಹಲವು ಪ್ರಯೋಜನಗಳು

ಭಾರತ ಈಗೀಗ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಹೆಚ್ಚಿಸುತ್ತಿದೆ. ಭಾರತ ತನಗೆ ಬೇಕಿರುವ ಲಿಥಿಯಮ್ ಅನ್ನು ಪೂರ್ಣವಾಗಿ ಆಮದು ಮಾಡಿಕೊಳ್ಳುತ್ತಿದೆ. ಚೀನಾದಲ್ಲಿ ಒಂದು ಟನ್ ಲಿಥಿಯಮ್ ಬೆಲೆ 50 ಲಕ್ಷ ರೂಗೂ ಹೆಚ್ಚಿದೆ. ಒಂದು ವರ್ಷದಲ್ಲಿ ಒಂದು ಬಿಲಿಯನ್ ಡಾಲರ್​ಗೂ ಹೆಚ್ಚು ಮೌಲ್ಯದ ಲಿಥಿಯಮ್ ಅನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಈಗ ಭಾರತದಲ್ಲೇ ಲಿಥಿಯಮ್ ಅನ್ನು ಹೆಕ್ಕಿ ತೆಗೆಯುತ್ತಿರುವಾಗ ಅದರ ಆಮದು ಕಡಿಮೆ ಆಗುತ್ತದೆ. ಇದರಿಂದ ಆಮದು ಮತ್ತು ರಫ್ತು ನಡುವಿನ ಅಂತರ ಅಥವಾ ಟ್ರೇಡ್ ಡೆಫಿಸಿಟ್ ಕಡಿಮೆ ಆಗುತ್ತದೆ. ಭಾರತಕ್ಕೆ ಸಾಕಷ್ಟು ಹಣ ಉಳಿತಾಯ ಆಗುತ್ತದೆ.

ಛತ್ತೀಸ್​ಗಡ, ಕರ್ನಾಟಕ, ರಾಜಸ್ಥಾನ ಮತ್ತು ಜಮ್ಮು ಕಾಶ್ಮೀರದಲ್ಲಿ ಬಹಳಷ್ಟು ಲಿಥಿಯಮ್ ನಿಕ್ಷೇಪಗಳಿರುವುದನ್ನು ಭೂ ಸರ್ವೇಕ್ಷಣಾ ಇಲಾಖೆ ಪತ್ತೆ ಮಾಡಿದೆ. ಬಿಹಾರ, ಆಂಧ್ರ, ಒಡಿಶಾ ಮತ್ತು ಗುಜರಾತ್​ನಲ್ಲೂ ಲಿಥಿಯಮ್ ನಿಕ್ಷೇಪಗಳಿರುವುದು ಗೊತ್ತಾಗಿದೆ. ಕರ್ನಾಟಕದ ಮಂಡ್ಯದಲ್ಲಿ ಪತ್ತೆಯಾಗಿರುವ ನಿಕ್ಷೇಪದಲ್ಲಿ 14,000 ಟನ್​ಗಳಷ್ಟು ಲಿಥಿಯಮ್ ಇರಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಭಾರತೀಯ ತಳಿಯ ಮಾವಿನಹಣ್ಣು ಬೆಳೆದು ಭಾರತಕ್ಕಿಂತಲೂ ಹೆಚ್ಚು ರಫ್ತು ಮಾಡುತ್ತಿದೆ ಚೀನಾ

ಜಾಗತಿಕವಾಗಿ ಚೀನಾ ಅತಿಹೆಚ್ಚು ಲಿಥಿಯಮ್ ಅಯಾನ್ ಬ್ಯಾಟರಿಗಳನ್ನು ತಯಾರಿಸುತ್ತದೆ. ಇದರ ಜಾಗತಿಕ ಮಾರುಕಟ್ಟೆಯಲ್ಲಿ ಚೀನಾ ಶೇ. 77ರಷ್ಟು ಪಾರಮ್ಯ ಹೊಂದಿದೆ. ಚಿಲಿ, ಆಸ್ಟ್ರೇಲಿಯಾ, ಅರ್ಜೆಂಟೀನಾ ದೇಶಗಳಲ್ಲಿ ಲಿಥಿಯಮ್ ಉತ್ಪಾದನೆ ಅಧಿಕ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ