ಭಾರತದ ಫಾರೆಕ್ಸ್ ನಿಧಿ 740 ಬಿಲಿಯನ್ ಡಾಲರ್; ಹೊಸ ಸಾರ್ವಕಾಲಿಕ ದಾಖಲೆ; ಒಂದೇ ವಾರದಲ್ಲಿ ಲಕ್ಷ ಕೋಟಿ ರೂ ಹೆಚ್ಚಳ

ಭಾರತದ ಫಾರೀನ್ ಎಕ್ಸ್​ಚೇಂಜ್ ರಿಸರ್ವ್ಸ್ ಫೆಬ್ರುವರಿ 28ರಂದು 740.803 ಬಿಲಿಯನ್ ಡಾಲರ್​ಗೆ ಏರಿದೆ. ಫಾರೆಕ್ಸ್ ಇತಿಹಾಸದಲ್ಲೇ ಇದು ಗರಿಷ್ಠ ಮಟ್ಟವಾಗಿದೆ. ಒಂದೇ ವಾರದಲ್ಲಿ 11 ಬಿಲಿಯನ್ ಡಾಲರ್​ಗೂ ಅಧಿಕ ಮೊತ್ತದಷ್ಟು ಫಾರೆಕ್ಸ್ ಸಂಗ್ರಹ ಏರಿದೆ. ವಿಶ್ವದಲ್ಲಿ ಅತಿಹೆಚ್ಚು ಫಾರೆಕ್ಸ್ ನಿಧಿ ಹೊಂದಿರುವ ದೇಶಗಳಲ್ಲಿ ಭಾರತ 5ನೇ ಸ್ಥಾನದಲ್ಲಿದೆ.

ಭಾರತದ ಫಾರೆಕ್ಸ್ ನಿಧಿ 740 ಬಿಲಿಯನ್ ಡಾಲರ್; ಹೊಸ ಸಾರ್ವಕಾಲಿಕ ದಾಖಲೆ; ಒಂದೇ ವಾರದಲ್ಲಿ ಲಕ್ಷ ಕೋಟಿ ರೂ ಹೆಚ್ಚಳ
ಫಾರೆಕ್ಸ್ ನಿಧಿ
Image Credit source: Getty Images

Updated on: Sep 06, 2026 | 3:08 PM

ಮುಖ್ಯಾಂಶಗಳು

  • ಭಾರತದ ಫಾರೆಕ್ಸ್ ರಿಸರ್ವ್ಸ್ ಫೆ. 28ರಂದು 740.803 ಬಿಲಿಯನ್ ಡಾಲರ್​ಗೆ ಏರಿದೆ.
  • ಒಂದೇ ವಾರದಲ್ಲಿ 11 ಬಿಲಿಯನ್ ಡಾಲರ್​ಗೂ ಅಧಿಕ ಮೊತ್ತದಷ್ಟು ಫಾರೆಕ್ಸ್ ಸಂಗ್ರಹ ಏರಿದೆ.
  • ವಿಶ್ವದಲ್ಲಿ ಅತಿಹೆಚ್ಚು ಫಾರೆಕ್ಸ್ ನಿಧಿ ಹೊಂದಿರುವ ದೇಶಗಳಲ್ಲಿ ಭಾರತ 5ನೇ ಸ್ಥಾನದಲ್ಲಿದೆ.

ನವದೆಹಲಿ, ಸೆಪ್ಟೆಂಬರ್ 6: ಭಾರತದ ವಿದೇಶಿ ವಿನಿಮಯ ಮೀಸಲು ನಿಧಿ ಒಂದೇ ವಾರದಲ್ಲಿ ಲಕ್ಷ ಕೋಟಿ ರೂಗೂ ಅಧಿಕ ಮೊತ್ತದಷ್ಟು ಏರಿಕೆ ಕಂಡಿದೆ. ಆರ್​ಬಿಐ ಮೊನ್ನೆ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಆಗಸ್ಟ್ 28ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ 11.475 ಬಿಲಿಯನ್ ಡಾಲರ್ (1.08 ಲಕ್ಷ ಕೋಟಿ ರೂ) ಹೆಚ್ಚಳ ಆಗಿದೆ. ಇದರೊಂದಿಗೆ ಒಟ್ಟು ನಿಧಿ 740.803 ಬಿಲಿಯನ್ ಡಾಲರ್ ಆಗಿದೆ. ಹಿಂದಿನ ವಾರದಲ್ಲೂ ಇದು 12.422 ಬಿಲಿಯನ್ ಡಾಲರ್​ನಷ್ಟು ಏರಿತ್ತು. 729 ಬಿಲಿಯನ್ ಡಾಲರ್​ನಿಂದ 740 ಬಿಲಿಯನ್ ಡಾಲರ್​ಗೆ ಫಾರೆಕ್ಸ್ ಏರಿಕೆ ಆಗಿದೆ.

ಭಾರತದ ಫಾರೆಕ್ಸ್ ಇತಿಹಾಸದಲ್ಲೇ 740 ಬಿಲಿಯನ್ ಡಾಲರ್ ಮೊತ್ತವು ಗರಿಷ್ಠ ಮಟ್ಟದ್ದಾಗಿದೆ. ಆಗಸ್ಟ್ 21ರ ವಾರದಲ್ಲಿ ಹೊಂದಿದ್ದ 729 ಬಿಲಿಯನ್ ಡಾಲರ್ ಮೊತ್ತವು ಹೊಸ ದಾಖಲೆಯಾಗಿತ್ತು. ಈಗ ಅದನ್ನೂ ಹಿಂದಿಕ್ಕಲಾಗಿದೆ.

ಇದನ್ನೂ ಓದಿ: ಇಪಿಎಫ್ ಅಕೌಂಟ್ ನಿಷ್ಕ್ರಿಯಗೊಳ್ಳುವುದು ಯಾವಾಗ? 40 ವರ್ಷಕ್ಕೆ ಕೆಲಸ ಬಿಟ್ಟರೂ ಬಡ್ಡಿ ಸಿಗುವುದು ಮುಂದುವರಿಯುತ್ತಾ?

ವಿದೇಶೀ ಕರೆನ್ಸಿ ಆಸ್ತಿಗಳದ್ದೇ ಅತಿಹೆಚ್ಚು ಏರಿಕೆ

ಆಗಸ್ಟ್ 28ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ನಿಧಿ 11.475 ಬಿಲಿಯನ್ ಡಾಲರ್ ಏರಿಕೆ ಆಗಿದೆ. ಈ ಪೈಕಿ ವಿದೇಶೀ ಕರೆನ್ಸಿ ಅಸ್ತಿಗಳ ಮೊತ್ತವೇ 9.337 ಬಿಲಿಯನ್ ಡಾಲರ್ ಆಗಿದೆ. ಚಿನ್ನದ ಸಂಗ್ರಹದ ಮೌಲ್ಯ 2.191 ಬಿಲಿಯನ್ ಡಾಲರ್ ಇದೆ. ಆದರೆ, ಫಾರೆಕ್ಸ್ ರಿಸರ್ವ್ಸ್​ನ ಇನ್ನುಳಿದ ಭಾಗಗಳಾಗಿರುವ ಎಸ್​ಡಿಆರ್ ಮತ್ತು ಐಎಂಎಫ್ ಮೀಸಲು ಸ್ಥಾನ, ಇವೆರಡೂ ಕೂಡ ಕಡಿಮೆಗೊಂಡಿವೆ. ಆ ವಾರ ಫಾರೆಕ್ಸ್ ನಿಧಿಯಲ್ಲಿ ಯಾವ್ಯಾವುದು ಎಷ್ಟು ವ್ಯತ್ಯಯ ಆಗಿದೆ ಎನ್ನುವ ಪಟ್ಟಿ ಇಲ್ಲಿದೆ:

ಒಂದು ವಾರದಲ್ಲಿ ಏರಿದ ಫಾರೆಕ್ಸ್ ರಿಸರ್ವ್ಸ್: 11.475 ಬಿಲಿಯನ್ ಡಾಲರ್

  • ಫಾರೀನ್ ಕರೆನ್ಸಿ ಅಸೆಟ್ಸ್: 9.337 ಬಿಲಿಯನ್ ಡಾಲರ್ ಏರಿಕೆ
  • ಚಿನ್ನ: 2.191 ಬಿಲಿಯನ್ ಡಾಲರ್ ಏರಿಕೆ
  • ಸ್ಪೆಷಲ್ ಡ್ರಾಯಿಂಗ್ ರೈಟ್ಸ್: 43 ಮಿಲಿಯನ್ ಡಾಲರ್ ಇಳಿಕೆ
  • ಐಎಂಎಫ್​ನೊಂದಿಗಿನ ನಿಧಿ: 11 ಮಿಲಿಯನ್ ಡಾಲರ್ ಇಳಿಕೆ.

ಫೆಬ್ರುವರಿ 28ರಂತೆ ಇರುವ ಒಟ್ಟು ಫಾರೆಕ್ಸ್ ನಿಧಿ

ಒಟ್ಟು ಫಾರೆಕ್ಸ್ ರಿಸರ್ವ್ಸ್: 740.803 ಬಿಲಿಯನ್ ಡಾಲರ್

  • ಫಾರೀನ್ ಕರೆನ್ಸಿ ಅಸೆಟ್ಸ್: 600.67 ಬಿಲಿಯನ್ ಡಾಲರ್
  • ಚಿನ್ನ: 116.409 ಬಿಲಿಯನ್ ಡಾಲರ್
  • ಸ್ಪೆಷಲ್ ಡ್ರಾಯಿಂಗ್ ರೈಟ್ಸ್: 18.81 ಬಿಲಿಯನ್ ಡಾಲರ್
  • ಐಎಂಎಫ್​ನೊಂದಿಗಿನ ನಿಧಿ: 4.914 ಬಿಲಿಯನ್ ಡಾಲರ್.

ಇದನ್ನೂ ಓದಿ: ಬ್ಲ್ಯಾಕ್‌ಬೆರಿ ಫೋನ್ ತಯಾರಿಕೆಯನ್ನು ಏಕೆ ನಿಲ್ಲಿಸಿತು? ಈಗ ಕಂಪನಿ ಏನು ಮಾಡುತ್ತಿದೆ?

ಜಾಗತಿಕವಾಗಿ ಐದನೇ ಸ್ಥಾನದಲ್ಲಿದೆ ಭಾರತದ ಫಾರೆಕ್ಸ್ ನಿಧಿ

ವಿದೇಶಿ ವಿನಿಮಯ ಮೀಸಲು ನಿಧಿಯಲ್ಲಿ ವಿಶ್ವದಲ್ಲೇ ಭಾರತ ಐದನೇ ಸ್ಥಾನದಲ್ಲಿದೆ. ಚೀನಾ, ಜಪಾನ್, ಸ್ವಿಟ್ಜರ್​ಲ್ಯಾಂಡ್ ಮತ್ತು ರಷ್ಯಾ ದೇಶಗಳು ಮೊದಲ ನಾಲ್ಕು ಸ್ಥಾನದಲ್ಲಿವೆ. ಚೀನಾ 4 ಟ್ರಿಲಿಯನ್ ಡಾಲರ್ ಹತ್ತಿರದಷ್ಟಿದೆ. ಜಪಾನ್ 1.28 ಟ್ರಿಲಿಯನ್ ಡಾಲರ್ ಫಾರೆಕ್ಸ್ ಸಂಪತ್ತು ಹೊಂದಿದೆ. ಸ್ವಿಟ್ಜರ್​ಲ್ಯಾಂಡ್ ಒಂದು ಟ್ರಿಲಿಯನ್ ಡಾಲರ್​ಗೆ ಸಮೀಪ ದೌಡಾಯಿಸುತ್ತಿದೆ. ರಷ್ಯಾ ವಾರದಿಂದ ವಾರಕ್ಕೆ ತನ್ನ ಫಾರೆಕ್ಸ್ ನಿಧಿಯನ್ನು ಹೆಚ್ಚಿಸಿಕೊಂಡು ಹೋಗುತ್ತಲೇ ಇರುವುದು ಕುತೂಹಲದ ವಿಷಯ.

ಫಾರೆಕ್ಸ್ ನಿಧಿ: ಟಾಪ್-5 ದೇಶಗಳು

  1. ಚೀನಾ: 3.85 ಟ್ರಿಲಿಯನ್ ಡಾಲರ್
  2. ಜಪಾನ್: 1.29 ಟ್ರಿಲಿಯನ್ ಡಾಲರ್
  3. ಸ್ವಿಟ್ಜರ್​ಲ್ಯಾಂಡ್: 939 ಬಿಲಿಯನ್ ಡಾಲರ್
  4. ರಷ್ಯಾ: 761 ಬಿಲಿಯನ್ ಡಾಲರ್
  5. ಭಾರತ: 740 ಬಿಲಿಯನ್ ಡಾಲರ್.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:04 pm, Sun, 6 September 26

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us