ಇನ್ಫೋಸಿಸ್ ಜಾಗ ಮಾರಾಟ: ಸರ್ಕಾರದಿಂದ ತನಿಖೆಗೆ ಆದೇಶ; ತಾನ್ಯಾವ ಕಾನೂನು ಉಲ್ಲಂಘಿಸಿಲ್ಲವೆಂದ ಇನ್ಫೋಸಿಸ್
Infosys says all regulations followed in its land sale: ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಇನ್ಫೋಸಿಸ್ಗೆ ಸೇರಿದ ಜಾಗವನ್ನು ಮಾರಿದ ಪ್ರಕರಣದಲ್ಲಿ ತನಿಖೆಗೆ ಆದೇಶಿಸಲಾಗಿದೆ. ಇನ್ಫೋಸಿಸ್ ಜಮೀನು ಮಾರಾಟ ಸಂಬಂಧ ಸರ್ಜಾಪುರ ಉಪನೊಂದಣಾಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಅಕ್ರಮವಾಗಿ ಸೇಲ್ ಡೀಡ್ ನೊಂದಾಯಿಸಲಾಗಿದೆ ಎಂಬುದೂ ಸೇರಿ ವಿವಿಧ ಆರೋಪಗಳನ್ನು ಈ ಅಧಿಕಾರಿಯ ಮೇಲೆ ಮಾಡಲಾಗಿದೆ.

ಬೆಂಗಳೂರು, ಜನವರಿ 6: ಆನೇಕಲ್ ತಾಲೂಕಿನಲ್ಲಿ ಇನ್ಫೋಸಿಸ್ನಿಂದ (Infosys) 53.5 ಎಕರೆ ಭೂಮಿಯನ್ನು ರಿಯಲ್ ಎಸ್ಟೇಟ್ ಸಂಸ್ಥೆಯಾದ ಪೂರವಂಕರಕ್ಕೆ ಮಾರಾಟ ಮಾಡಿದ ಪ್ರಕರಣ ಈಗ ದೊಡ್ಡ ಸದ್ದು ಮಾಡತೊಡಗಿದೆ. ಬೆಂಗಳೂರು ಜಿಲ್ಲಾಧಿಕಾರಿಗಳು (ಡಿಸಿ) ಈ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ತನಿಖೆಯಲ್ಲಿ ಯಾರೇ ತಪ್ಪಿತಸ್ಥರೆಂದು ಗೊತ್ತಾದರೂ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೈಗೌಡ ಅವರು ತಿಳಿಸಿದ್ದಾರೆ.
ಏನಿದು ಇನ್ಫೋಸಿಸ್ ಜಮೀನು ಮಾರಾಟ?
ಇನ್ಫೋಸಿಸ್ ಸಂಸ್ಥೆ ಅನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ತಾನು ಹೊಂದಿರುವ 53.5 ಎಕರೆ ಪ್ರದೇಶದ ಜಾಗವನ್ನು 250 ಕೊಟಿ ರೂಗೆ ಪೂರ್ವಂಕರ ಕಂಪನಿಗೆ ಮಾರಾಟ ಮಾಡಿದೆ. ತನ್ನ ಆಸ್ತಿಪಾಸ್ತಿಗಳ ಮರುವಿಂಗಡಣೆಯ ಭಾಗವಾಗಿ ಈ ಆಸ್ತಿಯನ್ನು ಮಾರಲಾಗಿದೆ ಎಂಬುದು ಇನ್ಫೋಸಿಸ್ ನೀಡಿರುವ ಹೇಳಿಕೆ.
ಅಲ್ಲದೇ, ಜಮೀನು ಮಾರಾಟದಲ್ಲಿ ಯಾವುದೇ ಕಾನೂನು ಉಲ್ಲಂಘನೆ ಮಾಡಲಾಗಿಲ್ಲ. ಎಲ್ಲಾ ನಿಯಮಗಳನ್ನು ಪಾಲಿಸಲಾಗಿದೆ. ಜೊತೆಗೆ, ಈ ಭೂಮಿ ಸರ್ಕಾರ ಅಲಾಟ್ ಮಾಡಿದ್ದಲ್ಲ. ಮಾರುಕಟ್ಟೆ ಮೌಲ್ಯಕ್ಕೆ ಖರೀದಿ ಮಾಡಿದ್ದಿದು ಎಂದು ಇನ್ಫೋಸಿಸ್ ಹೇಳಿಕೆ ಕೊಟ್ಟಿದೆ.
ಇದನ್ನೂ ಓದಿ: ಇನ್ಮುಂದೆ ಸೆಟ್ಬ್ಯಾಕ್ ಬಿಡದೆ ಮನೆ ನಿರ್ಮಾಣಕ್ಕೆ ಅವಕಾಶ: ಸಂಕ್ರಾಂತಿ ಗಿಫ್ಟ್ ನೀಡಿದ ಸರ್ಕಾರ
ಸೇಲ್ ಡೀಡ್ ನೆರವೇರಿಸಿದ ಉಪನೊಂದಣಾಧಿಕಾರಿ ಅಮಾನತು
ಇನ್ಫೋಸಿಸ್ ಭೂಮಿ ಮಾರಾಟ ನೆರವೇರಿಸಿದ ಸರ್ಜಾಪುರ ಉಪನೊಂದಣಾಧಿಕಾರಿ ರವಿ ಸಂಕನಗೌಡ ಅವರನ್ನು ಇಲಾಖೆ ಅಮಾನತು ಮಾಡಿದೆ. ಅಕ್ರಮ ರಿಜಿಸ್ಟ್ರೇಶನ್ ಮೂಲಕ 40 ಸೇಲ್ ಡೀಡ್ಗಳನ್ನು ನೊಂದಾಯಿಸಲಾಗಿದೆ ಎನ್ನುವುದು ಆರೋಪ.
ಕಾವೇರಿ 2.0 ಸಾಫ್ಟ್ವೇರ್ ದುರುಪಯೋಗದ ಆರೋಪ
ಸೇಲ್ ಡೀಡ್ಗಳನ್ನು ನೊಂದಾಯಿಸುವ ಕಾವೇರಿ 2.0 ರಿಜಿಸ್ಟ್ರೇಶನ್ ಸಾಫ್ಟ್ವೇರ್ನಲ್ಲಿ ಕೋರ್ಟ್ ಆದೇಶವಿರುವ ಪ್ರಕರಣಗಳಲ್ಲಿ ಸೇಲ್ ಡೀಡ್ಗಳ ರಿಜಿಸ್ಟ್ರೇಶನ್ಗಳಿಗೆ ವಿನಾಯಿತಿ ಕೊಡುವ ಅವಕಾಶ ಇದೆ. ಇದನ್ನು ದುರುಪಯೋಗಿಸಿಕೊಳ್ಳಲಾಗಿದೆ. ಕೋರ್ಟ್ ಆದೇಶ ಇಲ್ಲದಿದ್ದರೂ, ಕೋರ್ಟ್ ಆರ್ಡರ್ ಆಪ್ಷನ್ ಆಯ್ಕೆ ಮಾಡಿಕೊಂಡು ಸೇಲ್ ಡೀಡ್ಗಳನ್ನು ನೊಂದಾಯಿಸಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ಇತ್ತ ಅಧ್ಯಕ್ಷರ ಸೆರೆ, ಅತ್ತ ವೆನೆಜುವೆಲಾ ಮಾರುಕಟ್ಟೆ ಹಿಗ್ಗು; ಕುಸಿಯಬೇಕಿದ್ದ ಷೇರುಪೇಟೆ ಹಿರಿಹಿರಿ ಹಿಗ್ಗುತ್ತಿರುವುದೇಕೆ?
ಇನ್ಫೋಸಿಸ್ನ ಜಮೀನು ಮಾರಾಟ ಮಾತ್ರವಲ್ಲ, ಇನ್ನೂ ಅನೇಕ ಪ್ರಕರಣಗಳು ಇದೇ ರೀತಿ ಆಗಿದೆ. ಹೀಗಾಗಿ ಉಪನೊಂದಣಾಧಿಕಾರಿಯನ್ನು ಅಮಾನತು ಮಾಡಲಾಗಿದೆ. ಸರ್ಜಾರಪುರ ಮಾತ್ರವಲ್ಲ, ಬಾನಸವಾಡಿ, ವರ್ತೂರು ಮತ್ತು ಹಲಸರೂರು ಉಪನೊಂದಣಿ ಕಚೇರಿಗಳಲ್ಲೂ ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದಿದೆ. ಐವರು ಅಧಿಕಾರಿಗಳನ್ನು ಇತ್ತೀಚೆಗೆ ಅಮಾನತುಗೊಳಿಸಲಾಗಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




