AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Railway stocks: ಬಜೆಟ್​ಗೆ ಮುಂಚೆ ರೈಲ್ವೆ ಕ್ಷೇತ್ರದ ಯಾವ ಷೇರುಗಳನ್ನು ಖರೀದಿಸಬಹುದು?

Railway stocks to Buy Ahead of Budget 2026: ಫೆಬ್ರುವರಿ 1ರಂದು ಬಜೆಟ್ ಮಂಡನೆಯಾಗಲಿದ್ದು, ಈ ಬಾರಿ ರೈಲ್ವೆ ಕ್ಷೇತ್ರದ ಮತ್ತಷ್ಟು ಬಲವರ್ಧನೆಗೆ ಗಮನ ಹರಿಸುವ ನಿರೀಕ್ಷೆ ಇದೆ. ಇತ್ತೀಚೆಗೆ ಇಲಾಖೆಯ ರೈಲು ಪ್ರಯಾಣ ದರವನ್ನು ಏರಿಸಿದೆ. ಇದರಿಂದ ಈ ಕ್ಷೇತ್ರಕ್ಕೆ ಹೆಚ್ಚಿನ ಆದಾಯ ಬರುವ ನಿರೀಕ್ಷೆ ಇದೆ. ಬಜೆಟ್​ನಲ್ಲಿ 1.3 ಲಕ್ಷ ಕೋಟಿ ರೂ ಬಂಡವಾಳ ವೆಚ್ಚ ಬರುವ ನಿರೀಕ್ಷೆ ಇದೆ. ಹೀಗಾಗಿ, ರೈಲ್ವೆ ಸ್ಟಾಕ್​ಗಳಿಗೆ ಬೇಡಿಕೆ ಹೆಚ್ಚಿದೆ.

Railway stocks: ಬಜೆಟ್​ಗೆ ಮುಂಚೆ ರೈಲ್ವೆ ಕ್ಷೇತ್ರದ ಯಾವ ಷೇರುಗಳನ್ನು ಖರೀದಿಸಬಹುದು?
ಷೇರುಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 06, 2026 | 1:17 PM

Share

ನವದೆಹಲಿ, ಜನವರಿ 6: ಬಜೆಟ್ ಮಂಡನೆಗೆ (Union Budget) ಕೆಲವೇ ವಾರ ಬಾಕಿ ಇದೆ. ನಿರೀಕ್ಷೆಗಳು ಹಲವಿವೆ. ರೈಲ್ವೆ ಕ್ಷೇತ್ರದಲ್ಲೂ (Indian Railways) ನಿರೀಕ್ಷೆ ಹೆಚ್ಚಿದೆ. ಆ ಕ್ಷೇತ್ರದ ಹಲವು ಕಂಪನಿಗಳ ಷೇರುಗಳಿಗೆ ಇತ್ತೀಚೆಗೆ ಬೇಡಿಕೆ ಹೆಚ್ಚುತ್ತಿದೆ. ರೈಲ್ವೆ ಸ್ಟಾಕ್​ಗಳು ಕಳೆದ ಎರಡು ವಾರಗಳಲ್ಲಿ ಸರಾಸರಿಯಾಗಿ ಶೇ. 13ರಷ್ಟು ಏರಿವೆ. ಇತ್ತೀಚೆಗೆ ರೈಲು ಪ್ರಯಾಣ ದರವನ್ನು ಏರಿಸಿರುವುದು, ಮುಂಬರುವ ಬಜೆಟ್​ನಲ್ಲಿ ಪೂರಕ ಕ್ರಮಗಳಿಗೆ ನಿರೀಕ್ಷೆ ಹೆಚ್ಚಿರುವುದು ರೈಲು ಷೇರುಗಳ ಮೇಲೆ ಹೂಡಿಕೆದಾರರ ಕಣ್ಣು ನೆಡುವಂತೆ ಮಾಡಿದೆ.

ಡಿಸೆಂಬರ್ 26ರಂದು ರೈಲು ಪ್ರಯಾಣ ದರ ಏರಿಸಿದ್ದರಿಂದ ಭಾರತೀಯ ರೈಲ್ವೆಯ ಆದಾಯಕ್ಕೆ 600 ಕೋಟಿ ರೂನಷ್ಟು ಹೆಚ್ಚಳ ಆಗಿದೆ. ಈ ಬಾರಿಯ ಬಜೆಟ್​ನಲ್ಲಿ ರೈಲ್ವೆ ಕ್ಷೇತ್ರಕ್ಕೆ ಸರ್ಕಾರದಿಂದ 1.3 ಲಕ್ಷ ಕೋಟಿ ರೂ ಬಂಡವಾಳ ವೆಚ್ಚ ಪ್ರಕಟಗೊಳ್ಳುವ ನಿರೀಕ್ಷೆ ಇದೆ ಎಂದು ತಜ್ಞರು ನಿರೀಕ್ಷಿಸಿದ್ದಾರೆ.

ಇದನ್ನೂ ಓದಿ: ರಾಮ್​ಜೆಟ್ ಶಕ್ತ ಆರ್ಟಿಲರಿ ಶೆಲ್ ಹೊಂದಿರುವ ವಿಶ್ವದ ಮೊದಲ ಸೇನೆ ಭಾರತದ್ದು; ಏನಿದರ ವಿಶೇಷತೆ?

ಭಾರತೀಯ ರೈಲ್ವೇಸ್ ಯಾಕೆ ಮುಖ್ಯ?

ಭಾರತದಲ್ಲಿ ಈಗಲೂ ಕೂಡ ಜನರಿಗೆ ಕಡಿಮೆ ಬೆಲೆಯಲ್ಲಿ ಪ್ರಯಾಣ ವ್ಯವಸ್ಥೆ ಇದೆ ಎಂದರೆ ಅದು ರೈಲು. ದೇಶದ ಬಹುತೇಕ ಎಲ್ಲಾ ಜಾಗಕ್ಕೂ ಈಗ ರೈಲ್ವೆ ನೆಟ್ವರ್ಕ್ ಇದೆ. ಜನರ ಪ್ರಯಾಣಕ್ಕೆ ಮಾತ್ರವಲ್ಲ, ಸರಕು ಸಾಗಣೆಯಲ್ಲೂ ರೈಲ್ವೆಯದ್ದು ಮುಖ್ಯ ಪಾತ್ರ ಇದೆ. ದೇಶದ ಲಾಜಿಸ್ಟಿಕ್ಸ್ ವ್ಯವಸ್ಥೆಗೆ ರೈಲ್ವೆಯ ಬಲ ಇದೆ. ರಫ್ತು, ಆಮದು, ಸರಬರಾಜು ಸರಪಳಿ ಇದಕ್ಕೆ ಗೂಡ್ಸ್ ರೈಲುಗಳ ಬಳಕೆ ಬಹಳ ಆಗುತ್ತದೆ. ಹೀಗಾಗಿ, ಸರ್ಕಾರ ಯಾವತ್ತಿಗೂ ಕೂಡ ರೈಲ್ವೇ ವಿಭಾಗವನ್ನು ಕಡೆಗಣಿಸಲು ಸಾಧ್ಯವಿಲ್ಲ.

ಕಳೆದ ಎರಡು ವಾರದಲ್ಲಿ ವಿವಿಧ ರೈಲು ಷೇರುಗಳ ಬೆಲೆ ಏರಿಕೆ

  • ಇರ್​ಕಾನ್ ಇಂಟರ್ನ್ಯಾಷನಲ್: ಶೇ. 13.93ರಷ್ಟು ಹೆಚ್ಚಳ
  • ಐಆರ್​ಎಫ್​ಸಿ: ಶೇ. 9.79
  • ತೀತಾಗಡ್ ರೈಲ್: ಶೇ. 8.79
  • ಐಆರ್​ಸಿಟಿಸಿ: ಶೇ. 1.94
  • ರೈಟ್ಸ್: ಶೇ. 5.72
  • ರೈಲ್ ವಿಕಾಸ್: ಶೇ. 10
  • ಜುಪಿಟರ್ ವ್ಯಾಗನ್ಸ್: ಶೇ. 8.90 ಹೆಚ್ಚಳ

ಇದನ್ನೂ ಓದಿ: ಈ ಬಾರಿಯ ಗಣರಾಜ್ಯೋತ್ಸವ ಬಹಳ ಡಿಫರೆಂಟ್; ಸೇನೆಯಿಂದ ಒಂಟೆ, ಭಾರತೀಯ ತಳಿಯ ನಾಯಿಗಳ ಮೆರವಣಿಗೆ

ಬಜೆಟ್​ಗೆ ಮುನ್ನ ಯಾವ ರೈಲ್ವೆ ಸ್ಟಾಕ್​ಗಳನ್ನು ಖರೀದಿಸಬಹುದು?

ವೆಂಚುರಾ ಸಂಸ್ಥೆಯ ವಿನೀತ್ ಬೋಳಿಂಜಕರ್ ಅವರು ಕೆಲ ರೈಲ್ವೆ ಷೇರುಗಳನ್ನು ಖರೀದಿಸಲು ಶಿಫಾರಸು ಮಾಡಿದ್ದಾರೆ. ಅದಕ್ಕೆ ಕೆಲ ಕಾರಣಗಳನ್ನೂ ನೀಡಿದ್ದಾರೆ. ಅವರು ಶಿಫಾರಸು ಮಾಡಿದ ಷೇರುಗಳೆಂದರೆ ಆರ್​ವಿಎನ್​ಎಲ್, ಐಆರ್​ಎಫ್​ಸಿ, ಐಆರ್​ಸಿಟಿಸಿ, ತೀತಾಗಡ್ ಮತ್ತು ರೈಟ್ಸ್.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ