Multibagger Share: ಈ ಸ್ಟಾಕ್​ ಮೇಲೆ ಮಾಡಿದ ರೂ. 1 ಲಕ್ಷ ಹೂಡಿಕೆ 20 ತಿಂಗಳಲ್ಲಿ 18 ಲಕ್ಷ ರೂಪಾಯಿ

ಈ ಮಲ್ಟಿಬ್ಯಾಗರ್ ಸ್ಟಾಕ್​ನಲ್ಲಿ ಹೂಡಿಕೆ ಮಾಡಿದ 1 ಲಕ್ಷ ರೂಪಾಯಿ ಕೇವಲ 20 ತಿಂಗಳಲ್ಲಿ 18 ಲಕ್ಷ ರೂಪಾಯಿ ಆಗಿದೆ. ಯಾವುದು ಆ ಸ್ಟಾಕ್ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Multibagger Share: ಈ ಸ್ಟಾಕ್​ ಮೇಲೆ ಮಾಡಿದ ರೂ. 1 ಲಕ್ಷ ಹೂಡಿಕೆ 20 ತಿಂಗಳಲ್ಲಿ 18 ಲಕ್ಷ ರೂಪಾಯಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Feb 06, 2022 | 8:29 AM

2021ರಲ್ಲಿ ಕೊವಿಡ್​-19 ಬಿಕ್ಕಟ್ಟಿನ ನಂತರ ದೊಡ್ಡ ಸಂಖ್ಯೆಯಲ್ಲಿ ಮಲ್ಟಿಬ್ಯಾಗರ್​ ಸ್ಟಾಕ್​ಗಳು (Multibagger Stocks) ಕಾಣಿಸಿಕೊಂಡಿವೆ. ಕೊವಿಡ್​ ಎರಡನೇ ಅಲೆಯಿಂದ ಮಾರ್ಕೆಟ್​ ಚೇತರಿಸಿಕೊಂಡ ನಂತರ ಉತ್ತಮ ಸಂಖ್ಯೆಯ ಮಲ್ಟಿಬ್ಯಾಗರ್ ಸ್ಟಾಕ್‌ಗಳು ಮತ್ತು ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ಗಳು ಅದ್ಭುತವಾದ ರಿಟರ್ನ್ಸ್ ನೀಡಿವೆ. ಭಾರತೀಯ ಷೇರು ಮಾರುಕಟ್ಟೆಯ ಮಲ್ಟಿಬ್ಯಾಗರ್ ಸ್ಟಾಕ್‌ಗಳ ಪೈಕಿ ಅದಾರ್​ ಪೂನವಾಲಾ ಅವರ (ಸೈರಸ್ ಪೂನವಾಲಾ ಗ್ರೂಪ್ ಪ್ರಮೋಟೆಡ್) ಪುಣೆ ಮೂಲದ ಎನ್​ಬಿಎಫ್​ಸಿ ಪೂನವಾಲಾ ಫಿನ್‌ಕಾರ್ಪ್ ಲಿಸ್ಟ್​ ಮಾಡಲಾದ ಮಲ್ಟಿಬ್ಯಾಗರ್ ಸ್ಟಾಕ್‌ಗಳಲ್ಲಿ ಒಂದಾಗಿದೆ. ಪೂನವಾಲಾ ಫಿನ್‌ಕಾರ್ಪ್ ಲಿಮಿಟೆಡ್ ಷೇರಿನ ಬೆಲೆಯು ಎನ್​ಎಸ್​ಇನಲ್ಲಿ ಜೂನ್ 5, 2020ರಂದು ಪ್ರತಿ ಷೇರಿಗೆ ರೂ. 16.40ರಂತೆ ಮುಕ್ತಾಯ ಆಗಿತ್ತು. ಆ ಷೇರಿನ ಬೆಲೆ 4ನೇ ಫೆಬ್ರವರಿ 2022 ರಂದು ಎನ್​ಎಸ್​ಇಯಲ್ಲಿ ದಿನದ ಮುಕ್ತಾಯಕ್ಕೆ ರೂ. 264.80 ಆಗಿದೆ. ಅಂದರೆ ಈ ಎನ್​ಬಿಎಫ್​ಸಿ ಷೇರು ಈ 20 ತಿಂಗಳಲ್ಲಿ ಶೇ 1700ರಷ್ಟು ಏರಿಕೆಯಾಗಿದೆ.

ಪೂನವಾಲಾ ಫಿನ್​ಕಾರ್ಪ್ ಷೇರು ಬೆಲೆ ಇತಿಹಾಸ ಕಳೆದ ಒಂದು ತಿಂಗಳಲ್ಲಿ ಈ ಮಲ್ಟಿಬ್ಯಾಗರ್ ಷೇರಿನ ಬೆಲೆ ರೂ. 228.40 ರಿಂದ ರೂ. 264.80ಕ್ಕೆ ಏರಿಕೆಯಾಗಿ, ಈ ಸಮಯದಲ್ಲಿ 16ರಷ್ಟು ಹೆಚ್ಚಳವಾಗಿದೆ. ಆದರೆ ಕಳೆದ 6 ತಿಂಗಳಲ್ಲಿ ಈ ಎನ್​ಬಿಎಫ್​ಸಿ ಸ್ಟಾಕ್ ಸುಮಾರು ಶೇ 60ರಷ್ಟು ಮೇಲೇರಿದೆ. ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ (YTD) ಈ ಎನ್​ಬಿಎಫ್​ಸಿ ಸ್ಟಾಕ್ ರೂ. 220.75ರಿಂದ ರೂ. 264.80ಕ್ಕೆ ತಲುಪಿದ್ದು, 2022ರಲ್ಲಿ ಶೇ 20ರಷ್ಟು ರಿಟರ್ನ್ ನೀಡಿದೆ. ಕಳೆದ ಒಂದು ವರ್ಷದಲ್ಲಿ ಸುಮಾರು ರೂ. 60ರ ಹಂತದಿಂದ ರೂ. 264.80ರ ಮಟ್ಟಕ್ಕೆ ಏರಿ, ಈ ಅವಧಿಯಲ್ಲಿ ಸುಮಾರು ಶೇ 350ರಷ್ಟು ಹೆಚ್ಚಳವಾಗಿದೆ. ಅದೇ ರೀತಿ, 5ನೇ ಜೂನ್ 2020ರಿಂದ 4ನೇ ಫೆಬ್ರವರಿ 2022ರವರೆಗೆ ರೂ. 14.60ರಿಂದ ರೂ. 264.80 ಮಟ್ಟಕ್ಕೆ ತಲುಪಿದ್ದು, ಈ 20 ತಿಂಗಳಲ್ಲಿ ಸುಮಾರು 18 ಪಟ್ಟು ಮೇಲೇರಿದೆ.

ಹೂಡಿಕೆ ಮೇಲೆ ಪರಿಣಾಮ ಪೂನವಾಲಾ ಫಿನ್‌ಕಾರ್ಪ್ ಲಿಮಿಟೆಡ್ ಷೇರು ಬೆಲೆ ಇತಿಹಾಸದಿಂದ ಹೇಳುವುದಾದರೆ, ಒಂದು ತಿಂಗಳ ಹಿಂದೆ ಹೂಡಿಕೆದಾರರು ಈ ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ ಆ 1 ಲಕ್ಷ ಇಂದು 1.16 ಲಕ್ಷಕ್ಕೆ ಆಗಿರುತ್ತಿತ್ತು. ಇನ್ನು ಕಳೆದ 6 ತಿಂಗಳಲ್ಲಿ ರೂ. 1.60 ಲಕ್ಷ ತಲುಪಿರುತ್ತಿತ್ತು. ಹೂಡಿಕೆದಾರರು ಒಂದು ವರ್ಷದ ಹಿಂದೆ ಈ ಎನ್‌ಬಿಎಫ್‌ಸಿ ಷೇರಿನಲ್ಲಿ 1 ಲಕ್ಷ ಹೂಡಿದ್ದರೆ ಇವತ್ತಿಗೆ ರೂ. 4.50 ಲಕ್ಷ ಆಗುತ್ತಿತ್ತು. ಅದೇ ರೀತಿ ಹೂಡಿಕೆದಾರರು 20 ತಿಂಗಳ ಹಿಂದೆ ಈ ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ, ಅಂದರೆ ಒಂದು ಸ್ಟಾಕ್ ಅನ್ನು ಪ್ರತಿ ರೂ. 14.60ರಂತೆ ಖರೀದಿಸಿ, ಇವತ್ತಿಗೂ ಹಾಗೇ ಉಳಿಸಿಕೊಂಡಿದ್ದಲ್ಲಿ ಆ 1 ಲಕ್ಷ ಇಂದು 18 ಲಕ್ಷಕ್ಕೆ ಬದಲಾಗುತ್ತಿತ್ತು.

ಪೂನವಾಲಾ ಫಿನ್‌ಕಾರ್ಪ್ ಸ್ಟಾಕ್ ಕುರಿತು ಇನ್ನಷ್ಟು ಪೂನವಾಲಾ ಫಿನ್‌ಕಾರ್ಪ್ ಲಿಮಿಟೆಡ್‌ನ ಮಾರುಕಟ್ಟೆ ಬಂಡವಾಳ ರೂ. 20,200 ಕೋಟಿ. ಅದರ 52-ವಾರದ ಗರಿಷ್ಠ ಮೌಲ್ಯವು ರೂ. 302.90 ಆಗಿದ್ದರೆ, ಅದರ 52 ವಾರಗಳ ಕನಿಷ್ಠ ಮಟ್ಟ ಪ್ರತಿ ಷೇರಿಗೆ ರೂ. 55.60 ಆಗಿದೆ. ಪ್ರತಿ ಷೇರಿಗೆ ಕಂಪೆನಿಯ ಪುಸ್ತಕ ಮೌಲ್ಯ 73.90 ರೂಪಾಯಿ ಇದೆ.

ಇದನ್ನೂ ಓದಿ: Multibagger penny stocks: ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್​ನಲ್ಲಿ ಹೂಡಿದ 1 ಲಕ್ಷ ರೂಪಾಯಿ 10 ವರ್ಷಗಳಲ್ಲಿ ರೂ. 4 ಕೋಟಿಗೆ 

ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ