
ಆ್ಯಪಲ್‌ನ (Apple) ಮೊದಲ ಮಡಚಬಹುದಾದ ಐಫೋನ್‌ಗಾಗಿ ಕಾಯುತ್ತಿರುವವರಿಗೆ ಇದೀಗ ಮತ್ತೊಂದು ಕುತೂಹಲಕಾರಿ ಸುದ್ದಿ ಬಂದಿದೆ. ಸೆಪ್ಟೆಂಬರ್ 9ರಂದು ನಡೆಯಲಿರುವ ಆ್ಯಪಲ್‌ನ ವಿಶೇಷ ಕಾರ್ಯಕ್ರಮಕ್ಕೂ ಮುನ್ನ, ಈಫೋನ್ ಫೋಲ್ಡ್ ಎಂದು ಹೇಳಲಾಗುತ್ತಿರುವ ಫೋನ್‌ನ ಅನ್‌ಬಾಕ್ಸಿಂಗ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಇದು ಆ್ಯಪಲ್‌ನ ಅಂತಿಮ ಉತ್ಪನ್ನವಲ್ಲ, ಬದಲಾಗಿ ಚೀನಾದಲ್ಲಿ ತಯಾರಿಸಲಾದ ಮಾಕ್‌ಅಪ್ ಅಥವಾ ಮೂಲಮಾದರಿ ಎಂದು ವರದಿಯಾಗಿದೆ.
ಕೆನಡಾದ ಯೂಟ್ಯೂಬ್ ಚಾನೆಲ್ Unbox Therapy ಈ ಮಾಕ್‌ಅಪ್ ಅನ್ನು ವಿಡಿಯೋದಲ್ಲಿ ತೋರಿಸಿದೆ. ವಿಡಿಯೋ ಈಗಾಗಲೇ 19 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಚೀನಾದಲ್ಲಿ ತಯಾರಾಗುತ್ತಿರುವ ಇಂತಹ ಮೂಲಮಾದರಿಗಳ ಗುಣಮಟ್ಟ ಇತ್ತೀಚೆಗೆ ಸಾಕಷ್ಟು ಸುಧಾರಿಸಿದೆ ಎಂದು ವಿಡಿಯೋದ ನಿರೂಪಕ ಲೂಯಿಸ್ ಹಿಲ್ಸೆಂಟೆಗರ್ ಹೇಳಿದ್ದಾರೆ.
ವಿಡಿಯೋದಲ್ಲಿರುವ ಸಾಧನವು ಪುಸ್ತಕದಂತೆ ಮಧ್ಯಭಾಗದಲ್ಲಿ ಮಡಚಿಕೊಳ್ಳುವ ವಿನ್ಯಾಸ ಹೊಂದಿದೆ. ಫೋನ್ ಮಡಚಿದಾಗ ಹೊರಭಾಗದಲ್ಲಿ ಸಣ್ಣ ಡಿಸ್‌ಪ್ಲೇ ಕಾಣಿಸುತ್ತದೆ. ತೆರೆದಾಗ ದೊಡ್ಡದಾದ ಒಳಗಿನ ಡಿಸ್‌ಪ್ಲೇ ಟ್ಯಾಬ್ಲೆಟ್‌ನಂತೆ ಕಾಣುತ್ತದೆ.
ಸೋರಿಕೆಯ ಮಾಹಿತಿಯ ಪ್ರಕಾರ, ಹೊರಭಾಗದ ಡಿಸ್‌ಪ್ಲೇ ಸುಮಾರು 5.5 ಇಂಚು ಮತ್ತು ಒಳಗಿನ ಮುಖ್ಯ ಡಿಸ್‌ಪ್ಲೇ ಸುಮಾರು 7.8 ಇಂಚು ಇರಬಹುದು. ಹೀಗಾಗಿ ಫೋನ್ ಮಡಚಿದ ಸ್ಥಿತಿಯಲ್ಲಿಯೂ ಸಾಮಾನ್ಯ ಸ್ಮಾರ್ಟ್‌ಫೋನ್‌ನಂತೆ ಬಳಸಬಹುದು. ತೆರೆದಾಗ ವಿಡಿಯೋ ವೀಕ್ಷಣೆ, ವೆಬ್ ಬ್ರೌಸಿಂಗ್ ಮತ್ತು ಹಲವು ಆ್ಯಪ್‌ಗಳನ್ನು ಬಳಸಲು ಹೆಚ್ಚಿನ ಸ್ಕ್ರೀನ್ ಜಾಗ ಸಿಗಬಹುದು.
ಮಾಕ್‌ಅಪ್‌ನ ಹಿಂಭಾಗದಲ್ಲಿ ಎರಡು ಕ್ಯಾಮೆರಾ ಲೆನ್ಸ್‌ಗಳು ಕಾಣಿಸುತ್ತವೆ. ವಾಲ್ಯೂಮ್ ಬಟನ್‌ಗಳು ಮೇಲ್ಭಾಗದಲ್ಲಿರುವಂತೆ ಕಾಣುತ್ತಿದ್ದು, ಹಿಂಜ್‌ನ ಸಮೀಪದಲ್ಲಿ ಇನ್ನೆರಡು ಬಟನ್‌ಗಳೂ ಕಂಡುಬಂದಿವೆ. ಈ ಹೆಚ್ಚುವರಿ ಬಟನ್‌ಗಳು ಫೋನ್ ಮಡಚುವ ವ್ಯವಸ್ಥೆಗೆ ಸಂಬಂಧಿಸಿರಬಹುದು ಅಥವಾ ಫೋನ್ ಮುಚ್ಚಿರುವಾಗ ಫೋಟೊ, ವಿಡಿಯೋ ತೆಗೆದುಕೊಳ್ಳಲು ಬಳಸುವ ನಿಯಂತ್ರಣಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.
iPhone 18 Pro Max: ಐಫೋನ್ 18 ಪ್ರೊ ಮ್ಯಾಕ್ಸ್ ಬಿಡುಗಡೆಗೆ ಕ್ಷಣಗಣನೆ: ಈ ಬಾರಿ ಎಷ್ಟು ಬಣ್ಣಗಳಲ್ಲಿ ಬರಲಿದೆ?
ಮಾಕ್‌ಅಪ್‌ನಲ್ಲಿ ಒಳಗಿನ ಡಿಸ್‌ಪ್ಲೇಯ ಮಧ್ಯಭಾಗದಲ್ಲಿ ಮಡಚಿದ ಗುರುತು ಅಥವಾ ಗೆರೆ ಸ್ಪಷ್ಟವಾಗಿ ಕಾಣಿಸುತ್ತದೆ. ಆದರೆ ಅಂತಿಮ ಐಫೋನ್‌ನಲ್ಲಿ ಈ ಗೆರೆ ಇಷ್ಟು ಸ್ಪಷ್ಟವಾಗಿ ಕಾಣಿಸುವ ಸಾಧ್ಯತೆ ಕಡಿಮೆ ಎಂದು ವಿಡಿಯೋದ ನಿರೂಪಕರು ಹೇಳಿದ್ದಾರೆ. ಆ್ಯಪಲ್ ತನ್ನ ಫೋಲ್ಡಬಲ್ ಫೋನ್‌ನಲ್ಲಿ ಸ್ಕ್ರೀನ್‌ನ ಮಡಚುವ ಗುರುತನ್ನು ಕಡಿಮೆ ಮಾಡಲು ಕೆಲಸ ಮಾಡುತ್ತಿದೆ ಎಂಬ ವರದಿಗಳೂ ಈ ಹಿಂದೆ ಬಂದಿವೆ.
ಆ್ಯಪಲ್‌ನ ಮೊದಲ ಫೋಲ್ಡಬಲ್ ಐಫೋನ್‌ನ ಬೆಲೆ ಸಾಮಾನ್ಯ ಐಫೋನ್‌ಗಳಿಗಿಂತ ಸಾಕಷ್ಟು ಹೆಚ್ಚಿರಬಹುದು ಎಂಬ ನಿರೀಕ್ಷೆಯಿದೆ. ಕೆಲವು ವರದಿಗಳ ಪ್ರಕಾರ ಇದರ ಬೆಲೆ 2,000 ಡಾಲರ್‌ಗಿಂತ ಹೆಚ್ಚಿರಬಹುದು. ಭಾರತೀಯ ಮಾರುಕಟ್ಟೆಯಲ್ಲಿ ಇದರಿಂದ ಬೆಲೆ ₹1.5 ಲಕ್ಷಕ್ಕಿಂತಲೂ ಹೆಚ್ಚಾಗುವ ಸಾಧ್ಯತೆಯಿದೆ.
ಸೆಪ್ಟೆಂಬರ್ 9ರಂದು ನಡೆಯಲಿರುವ ಆ್ಯಪಲ್‌ನ ‘Surprise and Shine’ ಕಾರ್ಯಕ್ರಮದಲ್ಲಿ ಐಫೋನ್ 18 ಪ್ರೊ, ಐಫೋನ್ 18 ಪ್ರೊ ಮ್ಯಾಕ್ಸ್ ಮತ್ತು ಕಂಪನಿಯ ಮೊದಲ ಫೋಲ್ಡಬಲ್ ಐಫೋನ್ ಕುರಿತು ಅಧಿಕೃತ ಮಾಹಿತಿ ಹೊರಬರುವ ನಿರೀಕ್ಷೆಯಿದೆ. ಹೊಸ ಆಫಲ್ ವಾಚ್ ಮತ್ತು ಏರ್ಪಾಡ್ಸ್ ಮಾದರಿಗಳನ್ನೂ ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಸಾಧ್ಯತೆಯಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:30 pm, Tue, 8 September 26