ಹೊತ್ತಿ ಉರಿಯುವ ಭೀತಿಯಲ್ಲಿ ಮಧ್ಯಪ್ರಾಚ್ಯ; ಭಾರತದ ಆರ್ಥಿಕತೆಯ ಮೇಲೇನು ಪರಿಣಾಮಗಳು?

Effects of middle east conflict on Indian economy: ಇಸ್ರೇಲ್ ಹಾಗು ಇರಾನ್ ಸಂಘರ್ಷದಿಂದ ಮಧ್ಯಪ್ರಾಚ್ಯ ಪ್ರದೇಶ ಹೊತ್ತಿ ಉರಿಯುವ ಅಪಾಯದಲ್ಲಿದೆ. ಈ ಪ್ರದೇಶದಲ್ಲಿ ಭಾರತದ ವ್ಯಾವಹಾರಿಕ ಸಂಬಂಧ ಗಾಢವಾಗಿರುವುದರಿಂದ ಭಾರತಕ್ಕೆ ಈ ಯುದ್ಧದ ಬಿಸಿ ಸಹಜವಾಗಿ ತಾಕುವ ನಿರೀಕ್ಷೆ ಇದೆ. ಪೆಟ್ರೋಲ್ ಬೆಲೆ ಏರಿಕೆಯಿಂದ ಹಿಡಿದು, ವಿವಿಧ ರೀತಿಯ ಪರಿಣಾಮಗಳನ್ನು ಭಾರತದ ಆರ್ಥಿಕತೆ ಎದುರಿಸಬೇಕಾಗಬಹುದು.

ಹೊತ್ತಿ ಉರಿಯುವ ಭೀತಿಯಲ್ಲಿ ಮಧ್ಯಪ್ರಾಚ್ಯ; ಭಾರತದ ಆರ್ಥಿಕತೆಯ ಮೇಲೇನು ಪರಿಣಾಮಗಳು?
ಇರಾನ್ ಇಸ್ರೇಲ್ ಸಂಘರ್ಷ
Follow us
|

Updated on: Oct 04, 2024 | 2:40 PM

ನವದೆಹಲಿ, ಅಕ್ಟೋಬರ್ 4: ಮಧ್ಯಪ್ರಾಚ್ಯ ಪ್ರದೇಶದಲ್ಲಿ ಯುದ್ಧಭೀತಿ ವಾತಾವರಣ ಇನ್ನಷ್ಟು ಬಿಗಡಾಯಿಸಿದೆ. ಇಸ್ರೇಲ್ ಮೇಲೆ ಇರಾನ್ 180ಕ್ಕೂ ಹೆಚ್ಚು ಕ್ಷಿಪಣಿಗಳಿಂದ ದಾಳಿ ಮಾಡಿದ ಬೆನ್ನಲ್ಲೇ ಎಲ್ಲರ ಚಿತ್ತ ಇಸ್ರೇಲ್ ಪ್ರತಿದಾಳಿಗಳತ್ತ ನೆಟ್ಟಿದೆ. ಇರಾನ್ ಬೆಂಬಲಿತ ಹೆಜ್ಬೊಲ್ಲಾ ಮತ್ತು ಹಮಾಸ್ ಸಂಘಟನೆಗಳ ಮೇಲೆ ಇಸ್ರೇಲ್ ದಾಳಿ ಮಾಡಿದೆ. ಇರಾನ್ ಮೇಲೆ ಸದ್ಯದಲ್ಲೇ ತಕ್ಕ ರೀತಿಯಲ್ಲಿ ದಾಳಿ ಮಾಡುವುದಾಗಿ ಇಸ್ರೆಲ್ ಎಚ್ಚರಿಕೆ ನೀಡಿದೆ. ಇಸ್ರೇಲ್ ದಾಳಿ ಮಾಡಿದಲ್ಲಿ ಹಿಂದಿಗಿಂತಲೂ ಹೆಚ್ಚು ತೀವ್ರವಾಗಿ ದಾಳಿ ಮಾಡುವುದಾಗಿ ಇರಾನ್ ಕೂಡ ಎಚ್ಚರಿಕೆ ನೀಡಿದೆ. ಈ ಮಧ್ಯೆ ತೈಲ ಸಂಪದ್ಭರಿತ ಮಧ್ಯಪ್ರಾಚ್ಯ ಪ್ರದೇಶ ಹೊತ್ತಿ ಉರಿಯುವುದೋ ಎನ್ನುವ ಆತಂಕ ಇದೆ.

ಇಸ್ರೇಲ್, ಇರಾನ್ ಎರಡರ ಜೊತೆಗೂ ಭಾರತದ ಸ್ನೇಹ

ಭಾರತದ ಸರ್ವಋತು ಸ್ನೇಹ ರಾಷ್ಟ್ರಗಳಲ್ಲಿ ಇಸ್ರೇಲ್ ಕೂಡ ಒಂದು. ಭಾರತ ಮತ್ತು ಇಸ್ರೇಲ್ ಮಧ್ಯೆ ವಿವಿಧ ಸ್ತರಗಳಲ್ಲಿ ಗೆಳೆತನ ಇದೆ. ಇಸ್ರೇಲ್ ವಿರುದ್ಧ ಕತ್ತಿ ಮಸೆಯುತ್ತಿರುವ ಮಧ್ಯಪ್ರಾಚ್ಯ ದೇಶಗಳ ಜೊತೆಗೂ ಭಾರತಕ್ಕೆ ಉತ್ತಮ ಸಂಬಂಧ ಇದೆ. ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದ ಪರ ರಾಗ ಎಳೆದರೂ ಇರಾನ್ ಜೊತೆ ಭಾರತಕ್ಕೆ ಉತ್ತಮ ಬಾಂಧವ್ಯ ಇದೆ. ಹೀಗಾಗಿ, ಈ ಯುದ್ಧದಲ್ಲಿ ಭಾರತ ಯಾವುದೇ ದೇಶದ ಪರವಾಗಿ ಅಧಿಕೃತವಾಗಿ ನಿಲುವು ತೆಗೆದುಕೊಳ್ಳುತ್ತಿಲ್ಲ.

ಇದನ್ನೂ ಓದಿ: ಭಾರತದಲ್ಲಿ ಗೂಗಲ್​ಗೆ ಕರ್ನಾಟಕ, ರಾಜಸ್ಥಾನ, ಗುಜರಾತ್​ನಿಂದ ಸ್ವಚ್ಛ ಶಕ್ತಿ ಪೂರೈಕೆ; ಅದಾನಿ, ಕ್ಲೀನ್​ಮ್ಯಾಕ್ಸ್ ಕಂಪನಿಗಳೊಂದಿಗೆ ಗೂಗಲ್ ಒಪ್ಪಂದ

ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಭಾರತದ ಮೇಲೇನು ಪರಿಣಾಮ?

ಮಧ್ಯಪ್ರಾಚ್ಯ, ಗಲ್ಫ್ ಮತ್ತು ಪಶ್ಚಿಮ ಏಷ್ಯನ್ ಪ್ರದೇಶಗಳಲ್ಲಿ ಭಾರತಕ್ಕೆ ವ್ಯಾವಹಾರಿಕ ಸಂಬಂಧ ಗಾಢವಾಗಿದೆ. ಇಸ್ರೇಲ್ ಇರಾನ್ ಯುದ್ಧ ಪೂರ್ಣಮಟ್ಟಕ್ಕೆ ಹೋದರೆ ತೈಲ ಪೂರೈಕೆ ಮೇಲೆ ಪರಿಣಾಮ ಬೀರಬಹುದು. ಭಾರತಕ್ಕೆ ಹೆಚ್ಚಿನ ತೈಲ ಹರಿದುಬರುವುದು ಇವೇ ಪಶ್ಚಿಮ ಏಷ್ಯನ್ ದೇಶಗಳಿಂದ. ರಷ್ಯಾದಿಂದ ಸೀಮಿತ ಪ್ರಮಾಣದಲ್ಲಿ ಮಾತ್ರವೇ ತೈಲ ಸಿಗುವ ನಿರೀಕ್ಷೆ ಇರುತ್ತದೆ. ಹೀಗಾಗಿ, ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಭಾರತದಲ್ಲಿ ಪೆಟ್ರೋಲ್, ಡೀಸಲ್ ಬೆಲೆ ಏರಿಕೆ ಆಗಬಹುದು. ಇದು ತೀರಾ ದೊಡ್ಡ ಬಿಕ್ಕಟ್ಟಾದರೆ ಬೆಲೆ ಏರಿಕೆಯ ಗಾಯಕ್ಕೆ ಮತ್ತಷ್ಟು ಬರೆ ಬಿದ್ದಂತಾಗುತ್ತದೆ.

ಗಲ್ಫ್ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಭಾರತೀಯರು…

ಮಧ್ಯಪ್ರಾಚ್ಯ ಬಿಕ್ಕಟ್ಟು ಉಲ್ಭಣಿಸಿದರೆ ಗಲ್ಫ್ ದೇಶಗಳು ಸ್ತಬ್ಧಗೊಳ್ಳಬಹುದು. ಇಲ್ಲಿ ಹತ್ತಿರ ಹತ್ತಿರ ಒಂದು ಕೋಟಿಯಷ್ಟು ಭಾರತೀಯರು ವಿವಿಧೆಡೆ ಕೆಲಸ ಮಾಡುತ್ತಿದ್ದಾರೆ. ಅಲ್ಲಿ ಗಳಿಸಿದ ಸಂಪಾದನೆಯ ಕೆಲ ಭಾಗವನ್ನು ಭಾರತದಲ್ಲಿರುವ ತಮ್ಮ ಮನೆಮಂದಿಗೆ ಇವು ಕಳುಹಿಸುತ್ತಾರೆ. ಇದರಿಂದ ಭಾರತದ ಆರ್ಥಿಕತೆಗೆ ಒಂದಷ್ಟು ಕೊಡುಗೆ ಸಿಗುತ್ತಿದೆ. ಯುದ್ಧವಾಗಿ ಗಲ್ಫ್ ದೇಶಗಳು ಸ್ತಬ್ದಗೊಂಡರೆ ಈ ಭಾರತೀಯರ ಸಂಪಾದನೆ ತಾತ್ಕಾಲಿಕವಾಗಿ ನಿಂತು ಹೋಗಬಹುದು.

ಇದನ್ನೂ ಓದಿ: ರೈಲ್ವೆ ಉದ್ಯೋಗಿಗಳಿಗೆ 2,029 ಕೋಟಿ ರೂ ಮೊತ್ತದ ಬೋನಸ್ ಬಿಡುಗಡೆಗೆ ಸಂಪುಟ ಅನುಮೋದನೆ

ಗಲ್ಫ್ ದೇಶಗಳೊಂದಿಗೆ ಭಾರತದ ವ್ಯವಹಾರ…

ಗಲ್ಫ್ ದೇಶಗಳೊಂದಿಗೆ ಭಾರತಕ್ಕೆ ಉತ್ತಮ ವ್ಯಾವಹಾರಿಕ ಸಂಬಂಧ ಇದೆ. ಈ ಪಶ್ಚಿಮ ಏಷ್ಯನ್ ದೇಶಗಳಿಂದ ತೈಲ, ನೈಸರ್ಗಿಕ ಅನಿಲ ಮತ್ತು ರಸಗೊಬ್ಬರಗಳು ಭಾರತಕ್ಕೆ ರಫ್ತಾಗುತ್ತವೆ. ಭಾರತವು ಯಂತ್ರೋಪಕರಣಗಳಿಂದ ಹಿಡಿದು ಔಷಧವರೆಗೆ ನಾನಾ ಉತ್ಪನ್ನಗಳನ್ನು ಈ ದೇಶಗಳಿಗೆ ರಫ್ತು ಮಾಡುತ್ತದೆ. ಬಹಳ ಕಡೆ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಭಾರತೀಯ ಕಂಪನಿಗಳು ನಡೆಸುತ್ತಿವೆ. ಈ ದೇಶಗಳೊಂದಿಗೆ ಭಾರತ ಹೊಂದಿರುವ ಒಟ್ಟಾರೆ ವ್ಯವಹಾರ 195 ಬಿಲಿಯನ್ ಡಾಲರ್. ಅಂದರೆ, ಸುಮಾರು 15,000 ಕೋಟಿ ರೂಗೂ ಹೆಚ್ಚು ಮೊತ್ತದ ಟ್ರೇಡಿಂಗ್ ಸಂಬಂಧ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಜಿಟಿ ದೇವೇಗೌಡರ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸ್ನೇಹಮಯಿ ಕೃಷ್ಣ
ಜಿಟಿ ದೇವೇಗೌಡರ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸ್ನೇಹಮಯಿ ಕೃಷ್ಣ
ಗೃಹಲಕ್ಷ್ಮೀಯರಿಗೆ ದಸರಾ ಗಿಫ್ಟ್: ನವರಾತ್ರಿಗೆ ಮಹಿಳೆಯರ ಖಾತೆಗೆ ಹಣ ಜಮೆ
ಗೃಹಲಕ್ಷ್ಮೀಯರಿಗೆ ದಸರಾ ಗಿಫ್ಟ್: ನವರಾತ್ರಿಗೆ ಮಹಿಳೆಯರ ಖಾತೆಗೆ ಹಣ ಜಮೆ
ವಿಡಿಯೋ: ಅಲ್ಲೂರಿ ಜಿಲ್ಲೆಯ ನದಿಯಲ್ಲಿ ತೇಲಿಬಂದ ಆಂಜನೇಯ ಸ್ವಾಮಿ ವಿಗ್ರಹ!
ವಿಡಿಯೋ: ಅಲ್ಲೂರಿ ಜಿಲ್ಲೆಯ ನದಿಯಲ್ಲಿ ತೇಲಿಬಂದ ಆಂಜನೇಯ ಸ್ವಾಮಿ ವಿಗ್ರಹ!
ಕುಮಾರಸ್ವಾಮಿ ವಿರುದ್ಧ ಎಫ್​ಐಆರ್: ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದೇನು?
ಕುಮಾರಸ್ವಾಮಿ ವಿರುದ್ಧ ಎಫ್​ಐಆರ್: ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದೇನು?
ಮೈಸೂರು ದಸರಾ: ಹೇಗಿದೆ ನೋಡಿ ಹಳೇ ಬೈಕ್​ಗಳ ಸವಾರಿ!
ಮೈಸೂರು ದಸರಾ: ಹೇಗಿದೆ ನೋಡಿ ಹಳೇ ಬೈಕ್​ಗಳ ಸವಾರಿ!
ಮೃಗಗಳಂತೆ ವರ್ತಿಸಿದ ಸ್ಪರ್ಧಿಗಳಿಗೆ ಬಿಗ್ ಬಾಸ್ ನೀತಿ ಪಾಠ
ಮೃಗಗಳಂತೆ ವರ್ತಿಸಿದ ಸ್ಪರ್ಧಿಗಳಿಗೆ ಬಿಗ್ ಬಾಸ್ ನೀತಿ ಪಾಠ
Daily Devotional: ನಂಬಿಕೆ ದ್ರೋಹ ಮಾಡಿದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ?
Daily Devotional: ನಂಬಿಕೆ ದ್ರೋಹ ಮಾಡಿದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ?
ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ