2019-20ನೇ ಸಾಲಿನ ಹಣಕಾಸು ವರ್ಷಕ್ಕೆ ನಿಮ್ಮ ತೆರಿಗೆ ರಿಟರ್ನ್ಸ್ ಪ್ರೊಸೆಸಿಂಗ್ಗೆ ಬಾಕಿ ಇದ್ದಲ್ಲಿ ನಿಮ್ಮ ಇ-ಮೇಲ್ ಒಮ್ಮೆ ಚೆಕ್ ಮಾಡಿಕೊಳ್ಳಿ ಅಥವಾ ನಿಮ್ಮ ಚಾರ್ಟರ್ಡ್ ಅಕೌಂಟೆಂಟ್ರನ್ನು ಸಂಪರ್ಕಿಸಿ, ಯಾವುದಾದರೂ ನೋಟಿಸ್ ಬಂದಿದೆಯಾ ನೋಡಿಕೊಳ್ಳಿ. ನೀವು ತೆರಿಗೆ ಅನುಕೂಲಕ್ಕೆ ಅರ್ಹರಿದ್ದರೂ ಆ ನೋಟಿಸ್ ಮೂಲಕ ಅದನ್ನು ನಿರಾಕರಿಸುವ ಸಾಧ್ಯತೆ ಇರುತ್ತದೆ. ಉದಾಹರಣೆಗೆ, ಅನಿಲ್ ಕುಮಾರ್ (ಹೆಸರು ಬದಲಿಸಲಾಗಿದೆ) 2019-20ರ ಹಣಕಾಸು ವರ್ಷದಲ್ಲಿ ಬಾಡಿಗೆ ಆದಾಯ 2.24 ಲಕ್ಷ ರೂಪಾಯಿ ಘೋಷಣೆ ಮಾಡಿಕೊಂಡಿದ್ದರು. ಆ ಬಾಡಿಗೆ ಆದಾಯವನ್ನು ಗಣನೆಗೆ ತೆಗೆದುಕೊಳ್ಳದೆ, ಗೃಹ ಸಾಲಕ್ಕೆ ಅನಿಲ್ ಕುಮಾರ್ ವಿನಾಯಿತಿ ಕೇಳಿದ್ದಾರೆ ಅಂತಂದುಕೊಂಡಿದೆ ಮತ್ತು ಒಟ್ಟಾರೆ ಆದಾಯಕ್ಕೆ 5 ಲಕ್ಷ ರೂಪಾಯಿಯನ್ನು ಸೇರಿಸಿದೆ.
ಮತ್ತೊಬ್ಬರು ಮಹಿಳೆ ದೆಹಲಿ ಮೂಲದವರು ತಡವಾಗಿ ರಿಟರ್ನ್ ಫೈಲ್ ಮಾಡಿದ್ದಾರೆ. ಆದ್ದರಿಂದ ಮನೆ ಆಸ್ತಿಯ ನಷ್ಟವೊಂದನ್ನು ಬಿಟ್ಟು ಉಳಿದ ಯಾವುದನ್ನೂ ಹೊಂದಿಸಲು ಆಗುವುದಿಲ್ಲ ಅಂತ ನಿಯಮ ಇದೆ. ಮನೆ ಆಸ್ತಿಯ ನಷ್ಟವನ್ನು ಅವರು ಕ್ಲೇಮ್ ಮಾಡಿದ್ದರೂ ರಿಟರ್ನ್ ತಡವಾಗಿ ಫೈಲ್ ಮಾಡಿದ್ದರಿಂದ ಮನೆ ಆಸ್ತಿಯ ನಷ್ಟವನ್ನು ಕ್ಲೇಮ್ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ನೋಟಿಸ್ ನೀಡಲಾಗಿದೆ. ಇವೆಲ್ಲ ಅಲ್ಲೊಂದು- ಇಲ್ಲೊಂದು ಎಂಬಂಥ ಪ್ರಕರಣಗಳೇನೂ ಅಲ್ಲ. ಹಲವಾರು ಚಾರ್ಟರ್ಡ್ ಅಕೌಂಟೆಂಟ್ಗಳಿಗೆ ಈ ರೀತಿಯ ನೋಟಿಸ್ಗಳು ಬಂದಿವೆ.
“ನಮಗೆ ಸೆಕ್ಷನ್ 143ರ ಅಡಿಯಲ್ಲಿ ಬಹಳ ನೋಟಿಸ್ಗಳು ತಪ್ಪಾಗಿ ಬರುತ್ತಿವೆ. ಇವು ಅಸೆಸ್ಮೆಂಟ್ ವರ್ಷ (ಹಣಕಾಸು ವರ್ಷದ ನಂತರ ವರ್ಷ) 2020-21ರದ್ದು,” ಎನ್ನುತ್ತಾರೆ ತೆರಿಗೆ ರಿಟರ್ನ್ಸ್ ಫೈಲ್ ಮಾಡುವ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಕನ್ಸಲ್ಟೆಂಟ್. ಈ ನೋಟಿಸ್ಗಳು ಬಹುತೇಕ ಕಠಿಣವಾದವು ಮತ್ತು ತಡವಾದ ರಿಟರ್ನ್ಸ್ಗೆ ಸಂಬಂಧಿಸಿದವು. ಹತೆಗೆ ಕಳೆದ ವರ್ಷದ ಪ್ರೊಸೆಸಿಂಗ್ಗೆ ಬಾಕಿ ಉಳಿದವು. ಈ ಪೈಕಿ ಹಲವು ರೀಫಂಡ್ ಆಗುವುದಕ್ಕೆ ಕನಿಷ್ಠ 7ರಿಂದ 8 ತಿಂಗಳು ತಡವಾಗಿದೆ.
ಏನಿದು ಸೆಕ್ಷನ್ 143?
ಸೆಕ್ಷನ್ 143 (1) ಅಂದರೆ, ಆದಾಯ ತೆರಿಗೆ ಇಲಾಖೆಯು ಸೆಂಟ್ರಲ್ ಪ್ರೊಸೆಸಿಂಗ್ ಸೆಂಟರ್ನಿಂದ ತೆರಿಗೆ ರಿಟರ್ನ್ಸ್ನ ಡೇಟಾ ವ್ಯಾಲಿಡೇಟ್ ಮಾಡಿ, ತೆರಿಗೆ ಪಾವತಿದಾರರಿಗೆ ಮಾಹಿತಿಯನ್ನು ಕಳುಹಿಸುವುದು. ಈ ಹಂತದಲ್ಲಿ ತಪ್ಪುಗಳು ಅಥವಾ ಅಸಮರ್ಪಕತೆಗಳನ್ನು ಪರಿಶೀಲನೆ ಮಾಡುವುದಕ್ಕೆ ಪ್ರಯತ್ನಿಸುತ್ತಾರೆ ಮತ್ತು ಸೆಕ್ಷನ್ 143ರ ಅಡಿಯಲ್ಲಿ ತೆರಿಗೆ ಪಾವತಿದಾರರಿಗೆ ನೋಟಿಸ್ ಮೂಲಕವಾಗಿ ಮಾಹಿತಿಯನ್ನು ನೀಡುತ್ತಾರೆ. ಈ ತಿಂಗಳು ಕಳುಹಿಸಲಾದ ಆ ತಪ್ಪುಗಳನ್ನು ಒಳಗೊಂಡ ನೋಟಿಸ್ಗಳು ಕೇವಲ ಮನೆ ಆಸ್ತಿ ತೆರಿಗೆಗೆ ಸಂಬಂಧಿಸಿದ್ದು ಮಾತ್ರವಲ್ಲ, ಇತರ ಕೆಟಗರಿಗಳ ಸಹ ಒಳಗೊಂಡಿವೆ. ವೇತನದಾರರಿಗೆ ಮನೆ ಬಾಡಿಗೆ ಭತ್ಯೆ (HRA) ಕ್ಲೇಮ್ಗೆ ನಾವು ತೆರಿಗೆ ರಿಟರ್ನ್ ಫೈಲ್ ಮಾಡಿದ್ದೆವು. ಈ ವಾರ ನಮಗೆ ನೋಟಿಸ್ ಬಂದಿದ್ದು, ಗ್ರಾಚ್ಯುಟಿ ವಿನಾಯಿತಿಗೆ ಅವಕಾಶ ಇಲ್ಲ ಎಂದಿದೆ ಎಂಬುದಾಗಿ ಚಾರ್ಟರ್ಡ್ ಅಕೌಂಟೆಂಟ್ವೊಬ್ಬರು ಹೇಳಿದ್ದಾರೆ.
ಪ್ರತಿಕ್ರಿಯಿಸಲು ಸಾಧ್ಯವಾಗುತ್ತಿಲ್ಲ
ಒಂದು ಸಲ ಅಂಥ ನೋಟಿಸ್ ಬಂದ ಮೇಲೆ, ಆದಾಯ ತೆರಿಗೆ ಇಲಾಖೆ ಸಲಹೆ ಪ್ರಕಾರ, ಮತ್ತೊಮ್ಮೆ ಫೈಲಿಂಗ್ ಮಾಡಬೇಕಾಗುತ್ತದೆ. “ಸಾಮಾನ್ಯವಾಗಿ, ಏನಾದರೂ ತಪ್ಪುಗಳಿದ್ದಲ್ಲಿ ಅದನ್ನು ನಾವು ಸರಿಪಡಿಸಬೇಕು. ಇಲ್ಲದಿದ್ದಲ್ಲಿ ಆ ತೆರಿಗೆ ಕ್ಲೇಮ್ ಯಾಕೆ ಸರಿ ಎಂಬುದನ್ನು ತಿಳಿಸಬೇಕು ಹಾಗೂ ಮತ್ತೊಮ್ಮೆ ಪರಿಗಣಿಸಬೇಕು ಎಂದು ಕೇಳಿಕೊಳ್ಳಬೇಕು. ಆದರೆ ಆ ಪ್ರತಿಕ್ರಿಯೆಯನ್ನು ದಾಖಲಿಸುವುದಕ್ಕೆ ಯತ್ನಿಸಿದರೆ ಪೋರ್ಟಲ್ನಲ್ಲಿ ಸ್ವೀಕಾರ ಆಗುತ್ತಿಲ್ಲ.” ಎನ್ನುತ್ತಾರೆ ಮತ್ತೊಬ್ಬ ಅಕೌಂಟೆಂಟ್. ನೋಟಿಸ್ ಬಂದ 30 ದಿನದೊಳಗೆ ಉತ್ತರ ನೀಡಬೇಕಾಗುತ್ತದೆ. ಆದರೆ ತೆರಿಗೆ ಪಾವತಿದಾರರು ಮತ್ತು ಚಾರ್ಟರ್ಡ್ ಅಕೌಂಟೆಂಟ್ಗಳು ಅಸಹಾಯಕರಾಗಿದ್ದಾರೆ. ಪ್ರತಿಕ್ರಿಯೆ ದಾಖಲೆ ಮಾಡಿದ ನಂತರವೂ ಸಲ್ಲಿಕೆ ಟ್ಯಾಬ್ ಕೆಲಸ ಮಾಡುತ್ತಿಲ್ಲ.
ನಮಗೆ ನೋಟಿಸ್ ಬರುತ್ತಿದೆ. ಆದರೆ ಯಾವುದೇ ಕ್ರಮ ತೆಗೆದುಕೊಳ್ಳಲು ಆಗುತ್ತಿಲ್ಲ. ಏಕೆಂದರೆ ಹೊಸ ತೆರಿಗೆ ಪೋರ್ಟಲ್ ಕಾರ್ಯ ನಿರ್ವಹಿಸುತ್ತಿಲ್ಲ. ಸಿಸ್ಟಮ್ನಲ್ಲಿ ಡೇಟಾ ಸೇವ್ ಮಾಡುವುದಕ್ಕೆ ಆಗುತ್ತಿಲ್ಲ ಮತ್ತು ಆ ನಂತರ ಯಾವುದೇ ಕೆಲಸ ಮಾಡುವುದನ್ನು ನಿಲ್ಲಿಸಿದೆವು. ಏಕೆಂದರೆ ಇದು ಸಮಯ ವ್ಯರ್ಥ ಎನ್ನುತ್ತಾರೆ ಬಹುತೇಕ ಚಾರ್ಟರ್ಡ್ ಅಕೌಂಟೆಂಟ್ಗಳು. ಇನ್ನು ಇಂಥ ನೋಟಿಸ್ಗಾಗಿ ಉತ್ತರ ನೀಡಲು ತೆಗೆದುಕೊಳ್ಳುವ ಸಮಯ ಕೂಡ ವಿಪರೀತ ಹೆಚ್ಚು. ಸಾಮಾನ್ಯವಾಗಿ ಇಂಥ ನೋಟಿಸ್ಗೆ ಉತ್ತರ ನೀಡಲು 1 ಗಂಟೆ ಸಾಕು. ಆದರೆ ರೀಫಿಲ್ ಮಾಡುವುದಕ್ಕೆ, ಸಿಸ್ಟಮ್ನಲ್ಲಿ ಸೇವ್ ಮಾಡುವುದಕ್ಕೆ ಮತ್ತು ಬೇರೆ ವಿಧಾನದಲ್ಲಿ ಸೇವ್ ಮಾಡುವುದಕ್ಕೆ 10 ಗಂಟೆ ವ್ಯರ್ಥ ಅಗುತ್ತಿದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಚಾರ್ಟರ್ಡ್ ಅಕೌಂಟೆಂಟ್ವೊಬ್ಬರು ತಿಳಿಸಿದ್ದಾರೆ. ಅಂದಹಾಗೆ ತೆರಿಗೆ ವೃತ್ತಿಪರರು ಸೆಪ್ಟೆಂಬರ್ 15, 2021ಕ್ಕೆ ಕಾಯುತ್ತಿದ್ದಾರೆ. ಏಕೆಂದರೆ, ತೆರಿಗೆ ಪೋರ್ಟಲ್ ಸರಾಗವಾಗಿ ಕಾರ್ಯ ನಿರ್ವಹಿಸುವಂತೆ ಮಾಡಲು ಇನ್ಫೋಸಿಸ್ಗೆ ಗಡುವು ನೀಡಲಾಗಿದೆ. ಈ ಪೋರ್ಟಲ್ ಅನ್ನು ಅಭಿವೃದ್ಧಿ ಪಡಿಸಿರುವುದೇ ಇನ್ಫೋಸಿಸ್.
ಇದನ್ನೂ ಓದಿ: Income Tax Returns: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಡಿಸೆಂಬರ್ 31ರ ತನಕ ಕಾಲಾವಧಿ ವಿಸ್ತರಣೆ
ಆದಾಯ ತೆರಿಗೆ ಪೋರ್ಟಲ್ ಸಮಸ್ಯೆಗಳಿವು; ಇನ್ಫೋಸಿಸ್ ಸಿಇಒಗೆ ಹಣಕಾಸು ಸಚಿವರು ಬುಲಾವ್ ಕಳಿಸಿದ್ದು ಈ ಕಾರಣಕ್ಕೆ
(IT Portal Issue Taxpayers Receiving Erroneous Notices Unable To File Respond)