ಜೆನ್ಸೆನ್ ಹುವಾಂಗ್ ಮತ್ತೆ ಸಿಇಒ ಸ್ಥಾನಕ್ಕೆ ಮರಳಿದ್ದು, ವಿಶ್ವ ಮಾರುಕಟ್ಟೆ ಇತಿಹಾಸದಲ್ಲೇ ಮಹತ್ವದ ನಿರ್ಧಾರ: ಉದಯ್ ಕೋಟಕ್

ಎನ್​ವಿಡಿಯಾದಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಜಾಗತಿಕ ಆಟ ಎಂದು ಭಾರತದ ಬ್ಯಾಂಕಿಂಗ್ ಉದ್ಯಮಿ ಉದಯ್ ಕೋಟಕ್ ಬಣ್ಣಿಸಿದ್ದಾರೆ. ಜೆನ್ಸೆನ್ ಹುವಾಂಗ್ ಎನ್​ವಿಡಿಯಾದ ಸಿಇಒ ಆಗಿ ಮರಳಿ ಬಂದಿರುವುದು ಜಾಗತಿಕ ಮಾರುಕಟ್ಟೆ ಇತಿಹಾಸದ ದೊಡ್ಡ ನಿರ್ಧಾರ ಎಂದು ಹೇಳಿದ್ದಾರೆ. ಆನೆಗಳು ಕುಣಿಯುವಾಗ ಎಲ್ಲರೂ ಜಾಗ ಬಿಡಬೇಕು ಎಂದು ಹೇಳುವ ಮೂಲಕ ಇದು ಜಾಗತಿಕ ರಾಜಕೀಯ ಯುದ್ಧ ಎಂದಿದ್ದಾರೆ.

ಜೆನ್ಸೆನ್ ಹುವಾಂಗ್ ಮತ್ತೆ ಸಿಇಒ ಸ್ಥಾನಕ್ಕೆ ಮರಳಿದ್ದು, ವಿಶ್ವ ಮಾರುಕಟ್ಟೆ ಇತಿಹಾಸದಲ್ಲೇ ಮಹತ್ವದ ನಿರ್ಧಾರ: ಉದಯ್ ಕೋಟಕ್
ಜೆನ್ಸೆನ್ ಹುವಾಂಗ್
Image Credit source: AP

Updated on: Nov 24, 2026 | 5:57 PM

ನವದೆಹಲಿ, ನವೆಂಬರ್ 24: ಜೆನ್ಸೆನ್ ಹುವಾಂಗ್ ಅವರು ಎನ್​ವಿಡಿಯಾದ ಸಿಇಒ ಸ್ಥಾನಕ್ಕೆ ಮರಳಿರುವುದು ವಿಶ್ವ ಮಾರುಕಟ್ಟೆ ಇತಿಹಾಸದಲ್ಲೇ ಅತ್ಯಂತ ಮಹತ್ವಪೂರ್ಣ ನಿರ್ಧಾರಗಳಲ್ಲಿ ಒಂದು ಎಂದು ಭಾರತದ ಬ್ಯಾಂಕಿಂಗ್ ಉದ್ಯಮಿ ಉದಯ್ ಕೋಟಕ್ ಬಣ್ಣಿಸಿದ್ದಾರೆ. ಜೆನ್ಸೆನ್ ಸಿಇಒ ಆಗಿ ಮರಳಿ ಬಂದ ಬಳಿಕ ಮಾರುಕಟ್ಟೆಯಲ್ಲಿ ಎದ್ದ ದೊಡ್ಡ ಅಲೆಗಳನ್ನು ಉಲ್ಲೇಖಿಸಿ, ಅವರು ಈ ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಎಕ್ಸ್ ಅಕೌಂಟ್​ನಿಂದ ಈ ವಿಚಾರದ ಬಗ್ಗೆ ಬರೆದಿರುವ ಅವರು ಎಐ ರೇಸ್​ನಲ್ಲಿ ಅಮೆರಿಕವನ್ನು ಮುಂಚೂಣಿಯಲ್ಲಿಡಬೇಕೆನ್ನುವ ಅಜೆಂಡಾವನ್ನು ಗುರುತಿಸಿದ್ದಾರೆ.

‘ಎನ್​ವಿಡಿಯಾದ ಮಾರುಕಟ್ಟೆ ಬಂಡವಾಳ 1 ಟ್ರಿಲಿಯನ್ ಡಾಲರ್​ನಷ್ಟು ಚೇತರಿಸಿಕೊಂಡಿತು. ಅಮೆರಿಕದ ಮಾರುಕಟ್ಟೆ ಬಂಡವಾಳ 4 ಟ್ರಿಲಿಯನ್ ಡಾಲರ್ನಷ್ಟು ಚೇತರಿಸಿಕೊಂಡಿತು’ ಎಂದು ಉದಯ್ ಕೋಟಕ್ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಬರೆದಿದ್ದಾರೆ.

Loading...

ಎಐ ರೇಸ್​ನಲ್ಲಿ ಅಮೆರಿಕವನ್ನು ಮುಂಚೂಣಿಯಲ್ಲಿ ಮುಂದುವರಿಸುವ ಸ್ಪಷ್ಟವಾದ ರಾಜಕೀಯ ಮತ್ತು ಆರ್ಥಿಕ ಅಜೆಂಡಾ ಇದೆ ಎಂದೂ ಕೋಟಕ್ ಬ್ಯಾಂಕ್​ನ ಸಂಸ್ಥಾಪಕರು ಅವಲೋಕಿಸಿದ್ದಾರೆ.

ಇದನ್ನೂ ಓದಿ: ಗೂಢಚಾರಿಕೆ ವಿವಾದದಿಂದ ರಾಜೀನಾಮೆ ನೀಡಿದ 11 ದಿನಗಳಲ್ಲೇ ಎನ್‌ವಿಡಿಯಾ ಸಿಇಒ ಆಗಿ ಜೆನ್ಸನ್ ಹುವಾಂಗ್ ಪುನರ್ ನೇಮಕ

‘ಈ ಸಂದೇಶ ಸರಿಯೋ ತಪ್ಪೋ, ಆದರೆ, ಜಾಗತಿಕ ಶಕ್ತಿ ಪ್ರದರ್ಶನದಲ್ಲಿ ಆಟದ ನಿಯಮಗಳು ಸಡಿಲವಾಗಿರುತ್ತವೆ. ಆನೆಗಳು ಕುಣಿಯುವಾಗ ಎಲ್ಲರೂ ಜಾಗ ಬಿಟ್ಟುಕೊಡುತ್ತಾರೆ’ ಎಂದು ಜಾಗತಿಕ ರಾಜಕೀಯದ ಆಟಗಳು ನಡೆಯುತ್ತಿರಬಹುದು ಎಂದು ಶಂಕಿಸಿದ್ದಾರೆ.

ಉದಯ್ ಕೋಟಕ್ ಅವರ ಎಕ್ಸ್ ಪೋಸ್ಟ್

ಜೆನ್ಸೆನ್ ಹುವಾಂಗ್ ಮತ್ತು ಎನ್​ವಿಡಿಯಾ ವಿವಾದದ ಕುರಿತು…

ಜೆನ್ಸೆನ್ ಹುವಾಂಗ್ ಅವರು ಎನ್​ವಿಡಿಯಾದ ಸಂಸ್ಥಾಪಕರು. ಇದರ ಸಿಇಒ ಕೂಡ. ಆದರೆ, ಚೀನೀ ಗೂಢಚಾರಿಣಿ ಸೇರಿದಂತೆ ವಿವಿಧ ಮಹಿಳೆಯರ ಜೊತೆ ಇವರು ಅಕ್ರಮ ಸಂಬಂಧ ಹೊಂದಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿತು. ಹುವಾಂಗ್ ಸ್ವತಃ ತಾವೇ ತಪ್ಪೊಪ್ಪಿಕೊಂಡಿದ್ದರು. ಇದಾದ ಬಳಿಕ ಎನ್​ವಿಡಿಯಾದ ಸಿಇಒ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದರು.

ಎನ್​ವಿಡಿಯಾಗೆ ಬೇರೆ ಸಿಇಒ ಹುಡುಕುತ್ತಿರುವಾಗಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಧ್ಯಪ್ರವೇಶಿಸಿ, ಜೆನ್ಸೆನ್ ಅವರನ್ನು ಮರಳಿ ನೇಮಿಸುವಂತೆ ಎನ್​ವಿಡಿಯಾ ಮೇಲೆ ಒತ್ತಡ ಹಾಕಿದರೆನ್ನಲಾಗಿದೆ. ಜೆನ್ಸೆನ್ ಕೂಡ ತಾನು ಸಿಇಒ ಆಗಿ ಮರಳಲು ಸಿದ್ಧನಿದ್ದೇನೆ ಎಂದು ಹೇಳಿದ್ದರು. ನವೆಂಬರ್ 23ರಂದು ಎನ್​ವಿಡಿಯಾದ ಮಂಡಳಿಯು ಜೆನ್ಸೆನ್ ಹುವಾಂಗ್ ಅವರನ್ನು ಸಿಇಒ ಮತ್ತು ಅಧ್ಯಕ್ಷರನ್ನಾಗಿ ಪುನರ್ಸ್ಥಾಪಿಸಲು ಒಮ್ಮತದಿಂದ ನಿರ್ಧರಿಸಿದೆ. ಈ ಮೂಲಕ ಹುವಾಂಗ್ ತಾವೇ ಕಟ್ಟಿದ ಮನೆಗೆ ಮರಳಿದ್ದಾರೆ.

ಇದನ್ನೂ ಓದಿ: ಅಮೆರಿಕದ ರಹಸ್ಯ ಮಾಹಿತಿ ಕದಿಯಲು ಚೀನಾ ಮಾಯಾಜಾಲ? ಬಹಳ ಹಿಂದೆಯೇ ಸುಳ್ಳು ಉದ್ಯೋಗ, ನಕಲಿ ಕಂಪನಿಗಳ ಜಾಲ ಪತ್ತೆಹಚ್ಚಿದ್ದ ಎಫ್​ಬಿಐ

ಜೆನ್ಸೆನ್ ಆಗಮನದಿಂದ ಷೇರು ಮಾರುಕಟ್ಟೆಯಲ್ಲಿ ಸಂಚಲನ

ಜೆನ್ಸೆನ್ ಹುವಾಂಗ್ ಅವರು ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗ ಎನ್​ವಿಡಿಯಾ ಶೇರು ಮೌಲ್ಯ ಬಹಳ ಕುಸಿದಿತ್ತು. ಈಗ ಅವರು ಕಂಬ್ಯಾಕ್ ಮಾಡಿದ ಬಳಿಕ ಷೇರುಮೌಲ್ಯ ಶೇ. 30ಕ್ಕೂ ಹೆಚ್ಚು ಪ್ರಮಾಣದಲ್ಲಿ ಏರಿಕೆ ಆಗಿದೆ. ಅದರ ಮಾರ್ಕೆಟ್ ಕ್ಯಾಪ್ 1 ಟ್ರಿಲಿಯನ್ ಡಾಲರ್​ನಷ್ಟು ಹೆಚ್ಚಳಗೊಂಡಿದೆ. ಅದರ ಮಾರ್ಕೆಟ್ ಕ್ಯಾಪ್ 4 ಟ್ರಿಲಿಯನ್ ಡಾಲರ್ ಗಡಿದಾಟಿದೆ. ಜೆನ್ಸೆನ್ ಹುವಾಂಗ್ ಅವರ ವೈಯಕ್ತಿಕ ಆಸ್ತಿ ಮೌಲ್ಯವೂ ಸಿಕ್ಕಾಪಟ್ಟೆ ಜಂಪ್ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us