ಚಿಪ್ ಡಿಸೈನ್​ನಲ್ಲಿ ಕರ್ನಾಟಕ ಹಾಗೂ ದಕ್ಷಿಣ ರಾಜ್ಯಗಳೇ ಮುಂದು; ಸಿಲಿಕಾನ್ ಸಿಟಿ ಮಾತ್ರವಲ್ಲ, ಸೆಮಿಕಂಡಕ್ಟರ್ ಹಬ್ ಕೂಡ ಆದ ಬೆಂಗಳೂರು

ಕೇಂದ್ರ ಸರ್ಕಾರ ನಿರ್ವಹಿಸುವ ಚಿಪ್​ಇನ್ ಸೆಂಟರ್ ಬೆಂಬಲಿತ ಸೆಮಿಕಂಡಕ್ಟರ್ ಡಿಸೈನ್ ಕಾರ್ಯದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಕರ್ನಾಟಕದ 88 ಕಂಪನಿಗಳು ಚಿಪ್​ಇನ್ ಸೆಂಟರ್ ಬೆಂಬಲದಲ್ಲಿ ಚಿಪ್ ಡಿಸೈನ್ ಮಾಡುತ್ತಿವೆ. ಅತಿಹೆಚ್ಚು ಟೇಪ್​ಔಟ್ ಮಾಡಲಾಗುತ್ತಿರುವುದೂ ಕೂಡ ಕರ್ನಾಟಕದಲ್ಲೇ. ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳು ಟಾಪ್-3 ಅಲ್ಲಿ ಇವೆ.

ಚಿಪ್ ಡಿಸೈನ್​ನಲ್ಲಿ ಕರ್ನಾಟಕ ಹಾಗೂ ದಕ್ಷಿಣ ರಾಜ್ಯಗಳೇ ಮುಂದು; ಸಿಲಿಕಾನ್ ಸಿಟಿ ಮಾತ್ರವಲ್ಲ, ಸೆಮಿಕಂಡಕ್ಟರ್ ಹಬ್ ಕೂಡ ಆದ ಬೆಂಗಳೂರು
ಸೆಮಿಕಂಡಕ್ಟರ್
Image Credit source: Getty Images

Updated on: Sep 07, 2026 | 1:36 PM

ನವದೆಹಲಿ, ಸೆಪ್ಟೆಂಬರ್ 7: ಚಿಪ್​ಇನ್ ಸೆಂಟರ್ ಬೆಂಬಲಿತ ಸೆಮಿಕಂಡಕ್ಟರ್ ಡಿಸೈನ್ ಮತ್ತು ಅಭಿವೃದ್ಧಿಯಲ್ಲಿ ಕರ್ನಾಟಕ ದೇಶದಲ್ಲೇ ನಂಬರ್ ಒನ್ ಎನಿಸಿದೆ. ದೇಶದ ಟಾಪ್-3ಯಲ್ಲಿ ಮೂರೂ ರಾಜ್ಯಗಳು ದಕ್ಷಿಣ ಭಾರತದವೇ ಆಗಿರುವುದು ಗಮನಾರ್ಹ. ತಮಿಳುನಾಡು ಮತ್ತು ತೆಲಂಗಾಣ ಈ ಟಾಪ್-3ಯಲ್ಲಿ ಇವೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ‘ಡಿಜಿಟಲ್ ಇಂಡಿಯಾ’ ಹಾಗೂ ‘ಚಿಪ್ಸ್ ಟು ಸ್ಟಾರ್ಟ್‌ಅಪ್ (C2S)’ ಯೋಜನೆಯಡಿಯಲ್ಲಿ ಸ್ಥಾಪಿಸಲಾದ ChipIN ಸೆಂಟರ್​ನ ಬೆಂಬಲದಲ್ಲಿ ನಡೆಯುತ್ತಿರುವ ಸೆಮಿಕಂಡಕ್ಟರ್ ವಿನ್ಯಾಸ ಹಾಗೂ ಅಭಿವೃದ್ಧಿಯಲ್ಲಿ ಯಾವ ರಾಜ್ಯಗಳು ಹೆಚ್ಚು ಸಮರ್ಥವಾಗಿ ಕೆಲಸ ಮಾಡಿವೆ ಎನ್ನುವ ದತ್ತಾಂಶವನ್ನು ಎಲೆಕ್ಟ್ರಾನಿಕ್ಸ್ ಸಚಿವಾಲಯ ಪ್ರಕಟಿಸಿದೆ.

ಕೇಂದ್ರ ಸರ್ಕಾರ ಪ್ರಕಟಿಸಿರುವ ಅಧಿಕೃತ ದತ್ತಾಂಶದ ಪ್ರಕಾರ, ಚಿಪ್ ವಿನ್ಯಾಸ ಸಂಸ್ಥೆಗಳ ಬೆಂಬಲ, ಟೇಪ್-ಔಟ್‌ಗಳು (Tape-outs) ಹಾಗೂ EDA ಟೂಲ್ ಬಳಕೆ – ಹೀಗೆ ಎಲ್ಲಾ ಪ್ರಮುಖ ಸೂಚ್ಯಂಕಗಳಲ್ಲಿ ಕರ್ನಾಟಕವು ಅಗ್ರಸ್ಥಾನದಲ್ಲಿದೆ.

ಚಿಪ್ ಡಿಸೈನ್​ನಲ್ಲಿ ಪ್ರಮುಖ ರಾಜ್ಯಗಳ ಸಾಧನೆಯ ವಿವರ

ಕರ್ನಾಟಕ (ಪ್ರಥಮ ಸ್ಥಾನ): ಇಲ್ಲಿ ಚಿಪ್​ಇನ್ ಸೆಂಟರ್​ನ ಬೆಂಬಲ ಪಡೆದ ಸಂಸ್ಥೆಗಳ ಸಂಖ್ಯೆ 81 ಇದೆ. ಇವುಗಳಲ್ಲಿ ಟೇಪ್​ಔಟ್​ಗಳನ್ನು ಬಳಸಿರುವ ಸಂಸ್ಥೆಗಳು 73 ಇವೆ. ಇಡಿಎ ಟೂಲ್​ಗಳು 88 ಲಕ್ಷ ಗಂಟೆಗಳಷ್ಟಾಗಿದೆ (Lakh hours). ಟೇಪ್​ಔಟ್​ಗಳ ವಿಚಾರದಲ್ಲಂತೂ ಬೇರಾವ ರಾಜ್ಯಗಳು ಕರ್ನಾಟಕದ ಅರ್ಧಕ್ಕೂ ಬಂದಿಲ್ಲ.

ಇದನ್ನೂ ಓದಿ: ‘ಭಾರತದಲ್ಲಿ ಹೂಡಿಕೆ ಮಾಡಿ’: ಕನ್ನಡಿಗರು ಮತ್ತು ಭಾರತೀಯರಿಗೆ ಹೆಚ್​ಡಿ ಕುಮಾರಸ್ವಾಮಿ ಕರೆ

ಎರಡನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ 79 ಸಂಸ್ಥೆಗಳು ಚಿಪ್​ಇನ್ ಸೆಂಟರ್​ನ ಬೆಂಬಲ ಪಡೆದಿವೆ. ಟೇಪೌಟ್​ಗಳ ಹಂತಕ್ಕೆ ಬಂದಿರುವುದು 33. ಇಡಿಎ ಟೂಲ್ ಬಳಕೆ 49 ಲಕ್ಷ ಗಂಟೆಗಳಷ್ಟಿದೆ.

ಟಾಪ್-10 ಪಟ್ಟಿಯಲ್ಲಿರುವ ರಾಜ್ಯಗಳಿವು

  1. ಕರ್ನಾಟಕ
  2. ತಮಿಳುನಾಡು
  3. ತೆಲಂಗಾಣ
  4. ಮಹಾರಾಷ್ಟ್ರ
  5. ಉತ್ತರಪ್ರದೇಶ
  6. ಮಧ್ಯಪ್ರದೇಶ
  7. ಕೇರಳ
  8. ಪಶ್ಚಿಮ ಬಂಗಾಳ
  9. ಒಡಿಶಾ
  10. ಪಂಜಾಬ್

ದೇಶದ ಒಟ್ಟು ಸೆಮಿಕಂಡಕ್ಟರ್ ವಿನ್ಯಾಸ ಮತ್ತು ಇಡಿಎ (EDA – Electronic Design Automation) ಉಪಕರಣಗಳ ಬಳಕೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ಕರ್ನಾಟಕದ ಪಾಲು ಸಿಂಹಪಾಲಾಗಿದೆ.

ಪಿಐಬಿ ಬೆಂಗಳೂರಿನ ಎಕ್ಸ್ ಪೋಸ್ಟ್

ಇದನ್ನೂ ಓದಿ: ‘ಗುರಿ’ ಮುಟ್ಟಲು ಒಂದು ಸಂಘಟನೆಗೆ ಅಸಾಧ್ಯ, ಖಾಸಗಿ ಉದ್ಯಮವೂ ಬೇಕು: ಇಸ್ರೋ ಉದ್ಯೋಗಿಗಳ ಅಸಮಾಧಾನಕ್ಕೆ ಪವನ್ ಗೋಯೆಂಕಾ ಉತ್ತರ

ಟೇಪ್-ಔಟ್ ಎಂದರೇನು?: ಐಸಿ, ಅಥವಾ ಇಂಟಿಗ್ರೇಟೆಡ್ ಸರ್ಕ್ಯೂಟ್​ಗಳ ಡಿಸೈನ್ ಪ್ರಕ್ರಿಯೆಯ ಕೊನೆಯ ಹಂತವೇ ಟೇಪ್​ಔಟ್. ಪೂರ್ಣಗೊಂಡ ಲೇಔಟ್ ಫೈಲ್​ಗಳನ್ನು ಫೌಂಡ್ರಿಗೆ ಕಳುಹಿಸಲಾಗುತ್ತದೆ. ಫೌಂಡ್ರಿಯಲ್ಲಿ ಈ ಅಂತಿಮ ಡಿಸೈನ್ ಅನ್ನು ಬಳಸಿ ಚಿಪ್ ತಯಾರಿಸಲಾಗುತ್ತದೆ.

ಚಿಪ್​ಇನ್​ನ ಪಾತ್ರವೇನು?: ‘ChipIN’ ಕೇಂದ್ರವು ದೇಶದ ಸ್ಟಾರ್ಟ್‌ಅಪ್‌ಗಳು, ಎಂಎಸ್‌ಎಂಇ ಹಾಗೂ ಸಂಶೋಧನಾ ಸಂಸ್ಥೆಗಳಿಗೆ ಕ್ಲೌಡ್ ಆಧಾರಿತ ಅತ್ಯಾಧುನಿಕ ಚಿಪ್ ಡಿಸೈನ್ ಪರಿಕರಗಳನ್ನು ಒದಗಿಸುತ್ತಿದ್ದು, ಭಾರತವನ್ನು ಜಾಗತಿಕ ಚಿಪ್ ಡಿಸೈನ್ ರಂಗದಲ್ಲಿ ಮುಂಚೂಣಿಗೆ ತರಲು ಶ್ರಮಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:31 pm, Mon, 7 September 26

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us