AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ್ಯಪಲ್, ಫೇಸ್​ಬುಕ್, ಗೂಗಲ್ ಸಿಇಒಗಳಿಗಿಂತ ಹೆಚ್ಚು ಸಂಬಳ ಪಡೆಯುವ ನಿಕೇಶ್ ಅರೋರ; ಯಾರು ಈ ಭಾರತ ಮೂಲದ ವ್ಯಕ್ತಿ

Palo Alto Networks CEO Nikesh Arora: ಭಾರತ ಮೂಲದ ನಿಕೇಶ್ ಅರೋರಾ ಪಾಲೋ ಆಲ್ಟೋ ನೆಟ್ವರ್ಕ್ಸ್ ಸಿಇಒ ಆಗಿ 2023ರಲ್ಲಿ 151 ಮಿಲಿಯನ್ ಡಾಲರ್ ಕಾಂಪೆನ್ಸೇಶನ್ ಪಡೆದಿದ್ದಾರೆ. ಅಮೆರಿಕನ್ ಕಂಪನಿಗಳ ಸಿಇಒಗಳ ಪೈಕಿ ಅತ್ಯಧಿಕ ಸಂಬಳ ಪಡೆದವರ ಪಟ್ಟಿಯಲ್ಲಿ ನಿಕೇಶ್ ಎರಡನೇ ಸ್ಥಾನದಲ್ಲಿದ್ದಾರೆ. ಗೂಗಲ್ ಸಿಇಒ ಸುಂದರ್ ಪಿಚೈಗಿಂತ ನಿಕೇಶ್ ಸಂಬಳ ಹಲವು ಪಟ್ಟು ಹೆಚ್ಚಿದೆ. ಸೈಬರ್ ಸೆಕ್ಯೂರಿಟಿ ಕಂಪನಿಯಾದ ಪಾಲಾ ಆಲ್ಟೋ ನೆಟ್ವರ್ಕ್ಸ್ ಸಿಇಒ ಆಗಿರುವ ನಿಕೇಶ್ ಅವರು ಬಿಎಚ್​ಯು ಐಐಟಿ ಎಂಜಿನಿಯರ್ ಆಗಿದ್ದಾರೆ. ಗೂಗಲ್, ಸಾಫ್ಟ್​​ಬ್ಯಾಂಕ್ ಗ್ರೂಪ್ ಕಂಪನಿಗಳಲ್ಲಿ ಈ ಹಿಂದೆ ಕೆಲಸ ಮಾಡಿದ್ದಾರೆ.

ಆ್ಯಪಲ್, ಫೇಸ್​ಬುಕ್, ಗೂಗಲ್ ಸಿಇಒಗಳಿಗಿಂತ ಹೆಚ್ಚು ಸಂಬಳ ಪಡೆಯುವ ನಿಕೇಶ್ ಅರೋರ; ಯಾರು ಈ ಭಾರತ ಮೂಲದ ವ್ಯಕ್ತಿ
ನಿಕೇಶ್ ಅರೋರಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 22, 2024 | 11:21 AM

Share

ಕ್ಯಾಲಿಫೋರ್ನಿಯಾ, ಮೇ 22: ಅಮೆರಿಕದಲ್ಲಿ ಸಿಇಒಗಳಾಗಬೇಕೆಂದರೆ ಭಾರತೀಯ ಸಮುದಾಯದವರಾಗಿರಬೇಕು ಎನ್ನುವ ಜೋಕ್ ಚಾಲನೆಯಲ್ಲಿದೆ. ಅಂತೆಯೇ ಭಾರತ ಮೂಲದ ಬಹಳಷ್ಟು ವ್ಯಕ್ತಿಗಳು ಅಮೆರಿಕದ ದೈತ್ಯ ಕಂಪನಿಗಳ ಚುಕ್ಕಾಣಿ ಹಿಡಿದಿರುವುದುಂಟು. ಅತ್ಯಧಿಕ ಸಂಬಳ ಪಡೆಯುವ ಸಿಇಒಗಳಲ್ಲಿ ಭಾರತ ಮೂಲದವರಿದ್ದಾರೆ. ವಾಲ್​ಸ್ಟ್ರೀಟ್ ಜರ್ನಲ್ (Wall Street Journal) ಪತ್ರಿಕೆ ಪ್ರಕಟಿಸಿರುವ ಪಟ್ಟಿ ಪ್ರಕಾರ ಅಮೆರಿಕ ಕಂಪನಿಗಳ ಪೈಕಿ 2023ರಲ್ಲಿ ಅತಿಹೆಚ್ಚು ಸಂಬಳ ಪಡೆದವರ ಸಾಲಿನಲ್ಲಿ ನಿಕೇಶ್ (Nikesh Arora) ಅವರಿದ್ದಾರೆ. ಈ ಪಟ್ಟಿಯಲ್ಲಿ ಅರೋರಾ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ಮೂಲದ ನಿಕೇಶ್ ಅರೋರಾ ಅವರು ಅಮೆರಿಕದ ಪಾಲೋ ಆಲ್ಟೋ ನೆಟ್ವರ್ಕ್ ಸಂಸ್ಥೆಯ ಸಿಇಒ ಆಗಿದ್ದಾರೆ. 2023ರಲ್ಲಿ ಅವರು ಪಡೆದ ಕಾಂಪೆನ್ಸೇಶನ್ 151.43 ಮಿಲಿಯನ್ ಡಾಲರ್. ಅಂದರೆ ಸುಮಾರು 1,260 ಕೋಟಿ ರೂನಷ್ಟು ಸಂಭಾವನೆ ಪಡೆದಿದ್ದಾರೆ.

ಆ್ಯಪಲ್, ಮೆಟಾ, ಗೂಗಲ್ ಇತ್ಯಾದಿ ದೈತ್ಯ ತಂತ್ರಜ್ಞಾನ ಕಂಪನಿಗಳ ಸಿಇಒಗಳಿಗಿಂತಲೂ ಬಹಳ ಅಧಿಕ ಕಾಂಪೆನ್ಸೇಶನ್ ಪಡೆದಿದ್ದಾರೆ ನಿಕೇಶ್ ಅರೋರಾ. ಸೈಬರ್ ಸೆಕ್ಯೂರಿಟಿ ಕಂಪನಿಯ ಸಿಇಒ ಆಗಿರುವ ನಿಕೇಶ್ ಅತ್ಯಧಿಕ ಸಂಬಳ ಪಡೆದ ಅಮೆರಿಕನ್ ಸಿಇಒಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಕೇವಲ 24.40 ಮಿಲಿಯನ್ ಡಾಲರ್ ಸಂಬಳ ಪಡೆದಿದ್ದಾರೆ. ಗೂಗಲ್ ಸಿಇಒ ಸುಂದರ್ ಪಿಚೈ ಅವರಂತೂ ಇನ್ನೂ ಕಡಿಮೆ 8.8 ಮಿಲಿಯನ್ ಸಂಬಳ ಪಡೆದಿದ್ದಾರೆ.

ಇದನ್ನೂ ಓದಿ: ತೈವಾನ್ ಮೇಲೆ ಚೀನಾ ಆಕ್ರಮಣವಾದರೆ ನಿಷ್ಕ್ರಿಯಗೊಳ್ಳಲಿವೆ ಚಿಪ್ ಮೆಷೀನ್ಸ್; ಯಾಕೆ ಹೀಗೆ?

ವಾಲ್ ಸ್ಟ್ರೀಟ್ ಜರ್ನಲ್ ಪಟ್ಟಿ ಪ್ರಕಾರ 2023ರಲ್ಲಿ ಅಧಿಕ ಕಾಂಪೆನ್ಸೇಶನ್ ಪಡೆದ 5 ಸಿಇಒಗಳು

  1. ಹಾಕ್ ಟ್ಯಾನ್, ಬ್ರಾಡ್​ಕಾಮ್ ಸಿಇಒ: 162 ಮಿಲಿಯನ್ ಡಾಲರ್
  2. ನಿಕೇಶ್ ಅರೋರಾ, ಪಾಲೋ ಆಲ್ಟೋ ನೆಟ್ವರ್ಕ್ಸ್ ಸಿಇಒ: 151 ಮಿಲಿಯನ್ ಡಾಲರ್
  3. ಸ್ಟೀವನ್ ಶ್ವಾರ್ಜ್​ಮನ್, ಬ್ಲ್ಯಾಕ್​ಸ್ಟೋನ್ ಸಿಇಒ: 120 ಮಿಲಿಯನ್
  4. ಕ್ರಿಸ್ಟೋಫರ್ ವಿನ್​ಫ್ರೀ, ಚಾರ್ಟರ್ ಕಮ್ಯೂನಿಕೇಶನ್ಸ್ ಸಿಇಒ: 89.1 ಮಿಲಿಯನ್ ಡಾಲರ್
  5. ವಿಲ್ ಲಾನ್ಸಿಂಗ್, ಫೇರ್ ಐಸಾಕ್ ಸಿಇಒ: 66 ಮಿಲಿಯನ್ ಡಾಲರ್.

ಇದನ್ನೂ ಓದಿ: ರಷ್ಯಾ ತೈಲಕ್ಕಾಗಿ ಸರ್ಕಾರಿ ಸಂಸ್ಥೆಗಳ ಜೊತೆ ಸೇರಿ ಸಂಧಾನ ನಡೆಸಿ: ರಿಲಾಯನ್ಸ್​ಗೆ ಸರ್ಕಾರ ಮನವಿ

ನಿಕೇಶ್ ಅರೋರಾ ಯಾರು?

ನಿಕೇಶ್ ಅರೋರಾ ಭಾರತ ಸಂಜಾತದವರಾಗಿದ್ದು, ಐಐಟಿಯಲ್ಲಿ ಎಲೆಕ್ಟ್ರಿಕ್ ಎಂಜಿನಿಯರಿಂಗ್ ಮಾಡಿದ್ದಾರೆ. ಗೂಗಲ್, ಸಾಫ್ಟ್​ಬ್ಯಾಂಕ್ ಮೊದಲಾದ ಕಂಪನಿಗಳಲ್ಲಿ ಬಹಳ ಅಧಿಕ ಸಂಬಳಕ್ಕೆ ಕೆಲಸಕ್ಕೆ ಸೇರಿ ತಮ್ಮ ಕ್ಷಮತೆ ರೋರಿದವರು. ಸಾಫ್ಟ್​​ಬ್ಯಾಂಕ್ ಗ್ರೂಪ್​ನಲ್ಲಿ ಅವರಿಗಿದ್ದ ಸಂಬಳ ಬರೋಬ್ಬರಿ 135 ಮಿಲಿಯನ್ ಡಾಲರ್. ಜಪಾನ್ ಮಟ್ಟಿಗೆ ಅದು ಹೊಸ ದಾಖಲೆಯಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ