ನವದೆಹಲಿ: ಕೋಟಕ್ ಮಹೀಂದ್ರಾ ಬ್ಯಾಂಕ್ (Kotak Mahindra Bank) ಸ್ಥಿರ ಠೇವಣಿ ಬಡ್ಡಿ ದರ (FD Rates) ಹೆಚ್ಚಿಸಿದ್ದು, ಇಂದಿನಿಂದಲೇ (ನವೆಂಬರ್ 30) ಅನ್ವಯವಾಗಲಿದೆ. ಈ ಕುರಿತು ಬ್ಯಾಂಕ್ನ ವೆಬ್ಸೈಟ್ನಲ್ಲಿ ಮಾಹಿತಿ ನೀಡಲಾಗಿದ್ದು, 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಎಫ್ಡಿ ಬಡ್ಡಿ ದರ ಪರಿಷ್ಕರಿಸಲಾಗಿದೆ ಎಂದು ತಿಳಿಸಲಾಗಿದೆ. 7 ದಿನಗಳಿಂದ 10 ವರ್ಷಗಳ ಅವಧಿಯ ವಿವಿಧ ಎಫ್ಡಿ ಯೋಜನೆಗಳ ಬಡ್ಡಿ ದರವನ್ನು ಶೇಕಡಾ 2.75ರಿಂದ 6.20ರ ವರೆಗೆ ಹೆಚ್ಚಿಸಲಾಗಿದೆ. ಇದೇ ಅವಧಿಗೆ ಹಿರಿಯ ನಾಗರಿಕರ ವಿವಿಧ ಎಫ್ಡಿ ಯೋಜನೆಗಳ ಬಡ್ಡಿ ದರವನ್ನು ಶೇಕಡಾ 3.25 ರಿಂದ 6.70 ವರೆಗೆ ಹೆಚ್ಚಿಸಲಾಗಿದೆ.
23 ತಿಂಗಳುಗಳಿಂದ ತೊಡಗಿ 2 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್ಡಿಯ ಗರಿಷ್ಠ ಬಡ್ಡಿ ದರವನ್ನು ಶೇಕಡಾ 6.50ಕ್ಕೆ ಹೆಚ್ಚಿಸಲಾಗಿದ್ದು, ಹಿರಿಯ ನಾಗರಿಕರ ಠೇವಣಿಗಳ ಮೇಲಿನ ಗರಿಷ್ಠ ಬಡ್ಡಿ ದರವನ್ನು ಶೇಕಡಾ 7ಕ್ಕೆ ಹೆಚ್ಚಿಸಿದೆ.
ಇದನ್ನೂ ಓದಿ: Home Loan Interest Rates: ಗೃಹ ಸಾಲ ಪಡೆಯಲಿದ್ದೀರಾ? ಈ 5 ಬ್ಯಾಂಕ್ಗಳಲ್ಲಿ ಬಡ್ಡಿ ದರ ಕಡಿಮೆ
ಎಫ್ಡಿ ದರ ವಿವರ ಹೀಗಿದೆ;
7ರಿಂದ 14 ದಿನಗಳ ಅವಧಿಯ ಸ್ಥಿರ ಠೇವಣಿಗೆ ಶೇಕಡಾ 2.75ರ ಬಡ್ಡಿ ನಿಗದಿಪಡಿಸಲಾಗಿದೆ. 15 ದಿನಗಳಿಂದ 30 ದಿನಗಳ ಅವಧಿಯ ಎಫ್ಡಿಗೆ ಶೇಕಡಾ 3ರ ಬಡ್ಡಿ ನಿಗದಿಪಡಿಸಲಾಗಿದೆ. 31 ದಿನಗಳಿಂದ 45 ದಿನಗಳ ನಡುವಣ ಅವಧಿಯ ಹಾಗೂ 46ರಿಂದ 90 ದಿನಗಳ ಅವಧಿಯ ಎಫ್ಡಿಗೆ ಕ್ರಮವಾಗಿ ಶೇಕಡಾ 3.25 ಹಾಗೂ ಶೇಕಡಾ 3.50ರ ಬಡ್ಡಿ ನಿಗದಿಪಡಿಸಲಾಗಿದೆ. 91ರಿಂದ 120 ದಿನಗಳ ಅವಧಿಯ ಎಫ್ಡಿಗೆ ಶೇಕಡಾ 4ರ ಬಡ್ಡಿ ನೀಡಲು ಬ್ಯಾಂಕ್ ನಿರ್ಧರಿಸಿದೆ. 121ರಿಂದ 179 ದಿನಗಳ ನಡುವಣ ಅವಧಿಯ ಎಫ್ಡಿಗೆ ಶೇಕಡಾ 4.25ರ ಬಡ್ಡಿ ನಿಗದಿಪಡಿಸಲಾಗಿದೆ.
180ರಿಂದ 270 ದಿನಗಳ ಅವಧಿಯಲ್ಲಿ ಮೆಚ್ಯೂರ್ ಆಗುವ ಎಫ್ಡಿಗೆ ಶೇಕಡಾ 5.50ರ ಬಡ್ಡಿ ಹಾಗೂ 271ರಿಂದ 363 ದಿನಗಳ ನಡುವೆ ಅವಧಿ ಪೂರೈಸುವ ಎಫ್ಡಿಗೆ ಶೇಕಡಾ 5.75ರ ಬಡ್ಡಿ ನಿಗದಿಪಡಿಸಲಾಗಿದೆ. 364 ದಿನಗಳ ಅವಧಿಯ ಎಫ್ಡಿಗೆ ಶೇಕಡಾ 6ರ ಬಡ್ಡಿ ಘೋಷಿಸಲಾಗಿದೆ. 365ರಿಂದ 389 ದಿನಗಳ ಎಫ್ಡಿಗೆ ಶೇಕಡಾ 6.25ರ ಬಡ್ಡಿ ನಿರ್ಧರಿಸಲಾಗಿದೆ.
ಇದನ್ನೂ ಓದಿ: Gold Loan Interest: ಕಡಿಮೆ ಬಡ್ಡಿಗೆ ಚಿನ್ನದ ಅಡಮಾನ ಸಾಲ ನೀಡುತ್ತಿವೆ ಈ ಬ್ಯಾಂಕ್ಗಳು
ಎರಡು ವರ್ಷಗಳಲ್ಲಿ ಅವಧಿ ಪೂರೈಸುವ ಹಾಗೂ 3 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್ಡಿಗೆ ಕೋಟಕ್ ಮಹೀಂದ್ರಾ ಬ್ಯಾಂಕ್ ಶೇಕಡಾ 6.40ರ ಬಡ್ಡಿ ನಿಗದಿಪಡಿಸಿದೆ. 3 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 4 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್ಡಿಗೆ ಶೇಕಡಾ 6.30ರ ಬಡ್ಡಿ ನೀಡುವುದಾಗಿ ತಿಳಿಸಿದೆ. 4 ವರ್ಷಕ್ಕಿಂತ ಹೆಚ್ಚಿನ ಹಾಗೂ 5 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್ಡಿಗೆ ಶೇಕಡಾ 6.25ರ ಬಡ್ಡಿ ಮತ್ತು 5 ವರ್ಷ ಮೇಲ್ಪಟ್ಟ ಹಾಗೂ 10 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್ಡಿಗೆ ಶೇಕಡಾ 6.20ರ ಬಡ್ಡಿ ನಿಗದಿಪಡಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ