ಎಲ್ ಅಂಡ್ ಟಿಯಿಂದ ಫ್ಯಾಬ್ಲೆಸ್ ಸೆಮಿಕಂಡಕ್ಟರ್ ಡಿಸೈನ್ ಘಟಕ; ಪ್ರತ್ಯೇಕ ಉಪಸಂಸ್ಥೆ ರಚನೆಗೆ ಅನುಮೋದನೆ

|

Updated on: Nov 01, 2023 | 10:48 AM

L&T Into Fabless Semiconductor Chip Designing: ಬಹುತೇಕ ಸೆಮಿಕಂಡಕ್ಟರ್ ಫ್ಯಾಬ್ ಯೂನಿಟ್​ಗಳು ಚೀನಾದಲ್ಲಿವೆ. ಇವುಗಳ ನಿರ್ವಹಣೆ ದುಬಾರಿ ಎನಿಸುತ್ತದೆ. ಇದರಲ್ಲಿ ಪರಿಣಿತಿ ಇರುವ ಕಾರ್ಮಿಕರು ಚೀನಾದಲ್ಲಿ ಹೆಚ್ಚಿದ್ದಾರೆ. ಚೀನಾ ಮತ್ತು ತೈವಾನ್ ಕಂಪನಿಗಳ ಜೊತೆ ಎಲ್ ಅಂಡ್ ಟಿ ಪೈಪೋಟಿ ನಡೆಸುವುದು ಕಷ್ಟ. ಹೀಗಾಗಿ, ಅದು ಸಣ್ಣ ಹೆಜ್ಜೆ ಇಟ್ಟಿದೆ ಎಂದು ಹೇಳಲಾಗುತ್ತಿದೆ.

ಎಲ್ ಅಂಡ್ ಟಿಯಿಂದ ಫ್ಯಾಬ್ಲೆಸ್ ಸೆಮಿಕಂಡಕ್ಟರ್ ಡಿಸೈನ್ ಘಟಕ; ಪ್ರತ್ಯೇಕ ಉಪಸಂಸ್ಥೆ ರಚನೆಗೆ ಅನುಮೋದನೆ
ಸೆಮಿಕಂಡಕ್ಟರ್ ಚಿಪ್
Follow us on

ನವದೆಹಲಿ, ನವೆಂಬರ್ 1: ಎಂಜಿನಿಯರಿಂಗ್ ಸಂಸ್ಥೆಯಾದ ಲಾರ್ಸನ್ ಅಂಡ್ ಟೌಬ್ರೋ (L&T) ಇದೀಗ ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಅಡಿ ಇಡುತ್ತಿದೆ. ಫ್ಯಾಬ್​ಲೆಸ್ ಸೆಮಿಕಂಡಕ್ಟರ್ ಚಿಪ್ ಡಿಸೈನ್ ಘಟಕ ಶುರು ಮಾಡುವುದಾಗಿ ಎಲ್ ಅಂಟ್ ಟಿ ಮಂಗಳವಾರ (ಅ. 31) ತಿಳಿಸಿದೆ. ಅದಕ್ಕಾಗಿ ಪ್ರತ್ಯೇಕವಾದ ಉಪಸಂಸ್ಥೆಯನ್ನು ರಚಿಸಲಿದೆ. ಎಲ್ ಅಂಡ್ ಟಿ ಆಡಳಿತ ಮಂಡಳಿ ಈ ಹೊಸ ಅಂಗಸಂಸ್ಥೆ ರಚನೆಗೆ ಅನುಮೋದನೆಯನ್ನೂ ನೀಡಿದೆ. ವರದಿ ಪ್ರಕಾರ ಎಲ್ ಅಂಡ್ ಟಿ ಹೊಸ ವ್ಯವಹಾರಕ್ಕೆ 830 ಕೋಟಿ ರೂ ಹೂಡಿಕೆ ಮಾಡುವ ಸಾಧ್ಯತೆ ಇದೆ.

‘ಫ್ಯಾಬ್ಲೆಸ್ ಸೆಮಿಕಂಡಕ್ಟರ್ ಚಿಪ್​ಗಳ ಡಿಸೈನ್ ಮಾಡುತ್ತೇವೆ. ಡಿಸೈನ್ ಬಹಳ ಮೌಲ್ಯಯುತ ಎನಿಸುತ್ತದೆ. ಅದಕ್ಕೆ ಪೇಟೆಂಟ್ ಕೂಡ ಪಡೆಯಬಹುದು. ಹೀಗಾಗಿ, ಡಿಸೈನ್ ಕಾರ್ಯ ನಡೆಸಲು ನಿರ್ಧರಿಸಿದ್ದೇವೆ,’ ಎಂದು ಎಲ್ ಅಂಡ್ ಟಿ ಸಂಸ್ಥೆಯ ಸಿಎಫ್​ಒ ಆರ್ ಶಂಕರ್ ರಾಮನ್ ಹೇಳಿದ್ದಾರೆ.

ಇದನ್ನೂ ಓದಿ: KPMG Report: ಮುಂದಿನ 5 ವರ್ಷದಲ್ಲಿ ಸೆಮಿಕಂಡಕ್ಟರ್ ಸೇರಿ ಈ ಮೂರು ಕ್ಷೇತ್ರಗಳಿಂದ ಭಾರತೀಯ ಆರ್ಥಿಕತೆಗೆ 240 ಬಿಲಿಯನ್ ಡಾಲರ್ ಕೊಡುಗೆ: ಕೆಪಿಎಂಜಿ ವರದಿ

ಏನಿದು ಫ್ಯಾಬ್ಲೆಸ್ ಸೆಮಿಕಂಡಕ್ಟರ್ ಚಿಪ್?

ಇಲ್ಲಿ ಫ್ಯಾಬ್ ಎಂದರೆ ಫ್ಯಾಬ್ರಿಕೇಶನ್​ನ ಕಿರುರೂಪ. ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಕಂಪನಿಗಳು ಸಂಪೂರ್ಣವಾಗಿ ಚಿಪ್​ಗಳನ್ನು ತಯಾರಿಸುತ್ತವೆ. ಸಿಲಿಕಾನ್ ವೇಫರ್​ಗಳೂ ಇದರಲ್ಲಿ ಒಳಗೊಂಡಿರುತ್ತವೆ. ಆದರೆ, ಫ್ಯಾಬ್ಲೆಸ್ ಘಟಕಗಳಲ್ಲಿ ಚಿಪ್ ವಿನ್ಯಾಸ ಮಾತ್ರವೇ ಮಾಡಲಾಗುತ್ತದೆ. ಫ್ಯಾಬ್ ಘಟಕಗಳು ದುಬಾರಿಯಾಗಿರುತ್ತವೆ. ಚೀನಾ ಮತ್ತು ತೈವಾನ್​ನಲ್ಲೇ ಅತಿಹೆಚ್ಚು ಫ್ಯಾಬ್ ಘಟಕಗಳಿವೆ. ಭಾರತದಲ್ಲಿ ಸೆಮಿಕಂಡಕ್ಟರ್ ಉದ್ಯಮ ನೆಲೆ ನಿಲ್ಲಬೇಕಾದರೆ ಸಾಕಷ್ಟು ಫ್ಯಾಬ್ ಮತ್ತು ಡಿಸೈನ್ ಸೆಂಟರ್​ಗಳಿರಬೇಕು.

ಎಲ್ ಅಂಡ್ ಟಿ ಯಾಕೆ ಫ್ಯಾಬ್ ಯೂನಿಟ್ ಶುರು ಮಾಡುತ್ತಿಲ್ಲ?

ಮೇಲೆ ತಿಳಿಸಿದ ಹಾಗೆ ಬಹುತೇಕ ಸೆಮಿಕಂಡಕ್ಟರ್ ಫ್ಯಾಬ್ ಯೂನಿಟ್​ಗಳು ಚೀನಾದಲ್ಲಿವೆ. ಇವುಗಳ ನಿರ್ವಹಣೆ ದುಬಾರಿ ಎನಿಸುತ್ತದೆ. ಇದರಲ್ಲಿ ಪರಿಣಿತಿ ಇರುವ ಕಾರ್ಮಿಕರು ಚೀನಾದಲ್ಲಿ ಹೆಚ್ಚಿದ್ದಾರೆ. ಚೀನಾ ಮತ್ತು ತೈವಾನ್ ಕಂಪನಿಗಳ ಜೊತೆ ಎಲ್ ಅಂಡ್ ಟಿ ಪೈಪೋಟಿ ನಡೆಸುವುದು ಕಷ್ಟ. ಹೀಗಾಗಿ, ಅದು ಸಣ್ಣ ಹೆಜ್ಜೆ ಇಟ್ಟಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಗಂಡಸರಿಗಿಂತ ಹೆಂಗಸರು ಒಳ್ಳೆಯ ಇನ್ವೆಸ್ಟರ್​ಗಳಾಗ್ತಾರಂತೆ; ಸೆಬಿ ಸದಸ್ಯ ಅನಂತನಾರಾಯಣ್ ಕೊಟ್ಟ ಕಾರಣ ಬಹಳ ಇಂಟರೆಸ್ಟಿಂಗ್

‘ವಾಹನ ಮತ್ತು ಔದ್ಯಮಿಕ ಚಿಪ್​ಗಳ ವಿನ್ಯಾಸದತ್ತ ನಾವು ಹೆಚ್ಚಿನ ಗಮನ ಹರಿಸಿದ್ದೇವೆ. ಅದಕ್ಕೆ ಕಡಿಮೆ ಬಂಡವಾಳವಷ್ಟೇ ಬೇಕಾಗುತ್ತದೆ. ಮ್ಯಾನುಫ್ಯಾಕ್ಚರಿಂಗ್ ಕೂಡ ಕಡಿಮೆಯೇ,’ ಎಂದು ಎಲ್ ಅಂಡ್ ಟಿ ಸಿಎಫ್​ಒ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ