AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lakshadweep: ಲಕ್ಷದ್ವೀಪಕ್ಕೆ ಇದೇ ಮೊದಲ ಬಾರಿಗೆ ಸಬ್​ಮರೀನ್ ಆಪ್ಟಿಕ್ ಫೈಬರ್ ಕೇಬಲ್ ಸಂಪರ್ಕ; ಪ್ರವಾಸೋದ್ಯಮಕ್ಕೆ ಸಿಗಲಿದೆ ಇನ್ನಷ್ಟು ಪುಷ್ಟಿ

KLI- SOFC Project For Lakshadweep: ಲಕ್ಷದ್ವೀಪಕ್ಕೆ ಇದೇ ಮೊದಲ ಬಾರಿಗೆ ಸಬ್​ಮರೀನ್ ಆಪ್ಟಿಕ್ ಫೈಬರ್ ಕೇಬಲ್ ಅಳವಡಿಕೆಯಾಗಲಿದೆ. 10 ದಿನದಿಂದ ಹಿಂದೆ ಪಿಎಂ ಮೋದಿ ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಅರೇಬಿಯಾ ಕಡಲಿನಲ್ಲಿರುವ ಲಕ್ಷದ್ವೀಪಗಳ ವಿವಿಧ ಪ್ರದೇಶಗಳ ಡಿಜಿಟಲ್ ಇನ್​ಫ್ರಾಸ್ಟ್ರಕ್ಚರ್​ಗೆ ಈ ಪ್ರಾಜೆಕ್ಟ್ ಪುಷ್ಟಿ ಕೊಡಲಿದೆ. ಸೆಟಿಲೈಟ್ ಇಂಟರ್ನೆಟ್ ಇರುವ ಲಕ್ಷದ್ವೀಪಕ್ಕೆ ಫೈಬರ್ ಇಂಟರ್ನೆಟ್ ಭಾಗ್ಯ ಸಿಗುತ್ತದೆ. ಇಂಟರ್ನೆಟ್ ವೇಗ ಹೆಚ್ಚುತ್ತದೆ.

Lakshadweep: ಲಕ್ಷದ್ವೀಪಕ್ಕೆ ಇದೇ ಮೊದಲ ಬಾರಿಗೆ ಸಬ್​ಮರೀನ್ ಆಪ್ಟಿಕ್ ಫೈಬರ್ ಕೇಬಲ್ ಸಂಪರ್ಕ; ಪ್ರವಾಸೋದ್ಯಮಕ್ಕೆ ಸಿಗಲಿದೆ ಇನ್ನಷ್ಟು ಪುಷ್ಟಿ
ಪ್ರಧಾನಿ ನರೇಂದ್ರ ಮೋದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 14, 2024 | 2:25 PM

Share

ನವದೆಹಲಿ, ಜನವರಿ 14: ಹತ್ತು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಲಕ್ಷದ್ವೀಪಕ್ಕೆ (Lakshadweep) ಹೋಗಿ ಕೇವಲ ಫೋಟೋ ಶೂಟ್, ಜಲ ಚಟುವಟಿಕೆಗಳನ್ನು ಮಾತ್ರ ಮಾಡಲಿಲ್ಲ. ಸಾವಿರ ಕೋಟಿ ರೂಗೂ ಹೆಚ್ಚು ಮೌಲ್ಯದ ಕೆಲವಿಷ್ಟು ಯೋಜನೆಗಳನ್ನು ಆರಂಭಿಸಿದ್ದರು. ಅದರಲ್ಲಿ ಆ ದ್ವೀಪಗಳ ನಾಡಿಗೆ ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಸುವ ಯೋಜನೆಯೂ ಒಂದು. ಕೊಚ್ಚಿ ಲಕ್ಷದ್ವೀಪ್ ಐಲ್ಯಾಂಡ್ಸ್ ಸಬ್​ಮರೀನ್ ಆಪ್ಟಿಕಲ್ ಫೈಬರ್ ಕನೆಕ್ಷನ್ (KLI- SOFC Project) ಪ್ರಾಜೆಕ್ಟ್​ಗೆ ನರೇಂದ್ರ ಮೋದಿ ಜನವರಿ 3ರಂದು ಚಾಲನೆ ನೀಡಿದ್ದಾರೆ.

ಆಪ್ಟಿಕಲ್ ಫೈಬರ್ ಕೇಬಲ್​ನಿಂದ ಲಕ್ಷದ್ವೀಪಕ್ಕೆ ಪುಷ್ಟಿ ಸಿಗುವ ಸಾಧ್ಯತೆ…

ಲಕ್ಷದ್ವೀಪಕ್ಕೆ ಇದೇ ಮೊದಲ ಬಾರಿಗೆ ಸಬ್​ಮರೀನ್ ಆಪ್ಟಿಕ್ ಫೈಬರ್ ಕೇಬಲ್ ಅಳವಡಿಸಲಾಗುತ್ತಿದೆ. ಇದರಿಂದ ಲಕ್ಷದ್ವೀಪದ ವಿವಿಧ ಪ್ರದೇಶಗಳಲ್ಲಿ ಇಂಟರ್ನೆಟ್ ಸಂಪರ್ಕ ವೇಗ ಹೆಚ್ಚುತ್ತದೆ. ಸದ್ಯ ಸೆಟಿಲೈಟ್ ಮೂಲಕ ಮಾತ್ರ ಇಲ್ಲಿ ಇಂಟರ್ನೆಟ್ ಸಂಪರ್ಕ ಇರುವುದು. ಇದರ ಬ್ಯಾಂಡ್​ವಿಡ್ತ್ ಬಹಳ ಸೀಮಿತವಾದುದು. ಫೈಬರ್ ಕೇಬಲ್ ಮೂಲಕ ಸಿಗುವ ಇಂಟರ್ನೆಟ್ ಬಹಳ ವಿಸ್ತೃತವಾಗಿರುತ್ತದೆ. ಇದರಿಂದ ಲಕ್ಷದ್ವೀಪದಲ್ಲಿ ಡಿಜಿಟಲ್ ಇನ್​ಫ್ರಾಸ್ಟ್ರಕ್ಚರ್​ಗೆ ಭರ್ಜರಿ ಪುಷ್ಟಿ ಸಿಗುವ ನಿರೀಕ್ಷೆ ಇದೆ.

ಇದನ್ನೂ ಓದಿ: Forex: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ ಕಳೆದ ಐದು ವಾರದಲ್ಲಿ ಮೊದಲ ಬಾರಿಗೆ ಇಳಿಕೆ

ಸರ್ಕಾರಿ ಸೇವೆಗಳು, ವೈದ್ಯಕೀಯ ಚಿಕಿತ್ಸೆ, ಶಿಕ್ಷಣ, ಡಿಜಿಟಲ್ ಬ್ಯಾಂಕಿಂಗ್ ಇತ್ಯಾದಿ ಸೌಲಭ್ಯಗಳು ಹೆಚ್ಚುತ್ತೆ. ಲಾಜಿಸ್ಟಿಕ್ಸ್ ಹಬ್ ಅಗಿ ಲಕ್ಷದ್ವೀಪವನ್ನು ಅಭಿವೃದ್ದಿಪಡಿಸಲು ಇದು ಸಹಕಾರಿ ಆಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಜನವರಿ 3ರಂದು ಹೇಳಿದ್ದರು.

ಕೊಚ್ಚಿ ಲಕ್ಷದ್ವೀಪ್ ಐಲ್ಯಾಂಡ್ಸ್ ಸಬ್​ಮರೀನ್ ಕೇಬಲ್ ಯೋಜನೆಯ ಅಡಿಯಲ್ಲಿ ಕೊಚ್ಚಿಯಿಂದ ಲಕ್ಷದ್ವೀಪದ 11 ದ್ವೀಪಗಳಿಗೆ ಫೈಬರ್ ಕೇಬಲ್ ಸಂಪರ್ಕ ಮಾಡಲಾಗುತ್ತದೆ. ಕರವಟ್ಟಿ, ಅಗಟ್ಟಿ, ಕಡಮತ್, ಚೆಟ್​ಲೆಟ್, ಕಲ್ಪೇನಿ, ಮಿನಿಕಾಯ್, ಆಂಡ್ರೋದ್, ಕಿಲ್ಟನ್, ಬಂಗಾರಮ್ ಮತ್ತು ಬಿಟ್ರಾಗೆ ಕೇಬಲ್ ಕನೆಕ್ಟಿವಿಟಿ ಸಿಗುತ್ತದೆ.

ದೂರಸಂಪರ್ಕ ಇಲಾಖೆಗೆ ಸೇರಿದ ಯೂನಿವರ್ಸಲ್ ಸರ್ವಿಸಸ್ ಒಬ್ಲಿಗೇಶನ್ ಫಂಡ್ (ಯುಎಸ್​ಒಎಫ್) ಈ ಪ್ರಾಜೆಕ್ಟ್​ಗೆ ಫಂಡಿಂಗ್ ಮಾಡುತ್ತಿದೆ. ಸಾಗರ ಮಾರ್ಗ ಸರ್ವೇಕ್ಷಣೆ, ಸಬ್​ಮರೀನ್ ಕೇಬಲ್ ಅಳವಡಿಕೆ, ಸಿಎಲ್​ಎಸ್ ಸ್ಟೆಷನ್​ಗಳ ನಿರ್ಮಾಣ, ಸ್ಥಾಪನೆ, ಟೆಸ್ಟಿಂಗ್ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ.

ಇದನ್ನೂ ಓದಿ: Inflation: ರೀಟೇಲ್ ಹಣದುಬ್ಬರ ಡಿಸೆಂಬರ್​ನಲ್ಲಿ ಶೇ. 5.69; ಸರ್ಕಾರದಿಂದ ಅಧಿಕೃತ ಮಾಹಿತಿ ಬಿಡುಗಡೆ

2020ರಲ್ಲಿ ಇದೇ ರೀತಿ ಚೆನ್ನೈ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳ ಮಧ್ಯೆ ಆಪ್ಟಿಕಲ್ ಸಬ್​ಮರೀನ್ ಕೇಬಲ್ ಸಿಸ್ಟಂ ಅನ್ನು ಅಳವಡಿಸಲಾಗಿತ್ತು. ಎನ್​ಇಸಿ ಕಾರ್ಪೊರೇಶನ್ ಸಂಸ್ಥೆ ಆ ಕಾರ್ಯವನ್ನು ಯಶಸ್ವಿಯಾಗಿ ಮಾಡಿತ್ತು. ಈಗ ಲಕ್ಷದ್ವೀಪಕ್ಕೂ ಕೇಬಲ್ ಅಳವಡಿಕೆ ಕಾರ್ಯವನ್ನು ಎನ್​​ಇಸಿಯೇ ಮಾಡುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್