
ನವದೆಹಲಿ, ಸೆಪ್ಟೆಂಬರ್ 1: ಸೆಪ್ಟೆಂಬರ್ ತಿಂಗಳ ಮೊದಲ ದಿನವೇ ತೈಲ ಮಾರುಕಟ್ಟೆ ಕಂಪನಿಗಳು (OMCs) ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿವೆ. 19 ಕೆಜಿ ತೂಕದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ (Commercial LPG Cylinder) ದರವನ್ನು ಪ್ರತಿ ಸಿಲಿಂಡರ್‌ಗೆ 9.50 ರೂ.ನಷ್ಟು ಹೆಚ್ಚಳ ಮಾಡಲಾಗಿದೆ. ಇದೇ ವೇಳೆ, 5 ಕೆಜಿ ಗೃಹಬಳಕೆಯೇತರ ಸಿಲಿಂಡರ್ ಬೆಲೆಯನ್ನು 2 ರೂ. ರಷ್ಟು ಹೆಚ್ಚಿಸಲಾಗಿದ್ದು , 14.2 ಕೆಜಿ ತೂಕದ ಸಾಮಾನ್ಯ ಗೃಹಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಪ್ರಮುಖ ನಗರಗಳಲ್ಲಿ ಹೊಸ ದರಪಟ್ಟಿ
ನವದೆಹಲಿ: 2,738 ರೂ. ಗಳಿಂದ 2,747.50 ರೂ.ಗೆ ಏರಿಕೆಯಾಗಿದೆ.
ಮುಂಬೈ: 2691.50 ರೂ.ನಿಂದ 2701 ರೂ.ಗೆ ಏರಿಕೆಯಾಗಿದೆ.
ಚೆನ್ನೈ: 2,906 ರೂ.ನಿಂದ 2,916.50 ರೂ.ಗೆ ಏರಿಕೆಯಾಗಿದೆ.
ಗುರುಗ್ರಾಮ : 2,764 ರೂ.ಗೆ ಲಭ್ಯವಿದೆ.
ನೋಯ್ಡಾ: 2,747.50 ರೂ.ಗೆ ಲಭ್ಯವಿದೆ.
ಲಕ್ನೋ: 2,870 ರೂ.ಗೆ ಏರಿಕೆಯಾಗಿದೆ.
ಪಾಟ್ನಾ: 3,044 ರೂ.ಗೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 10 ರೂ. ಏರಿಕೆಯಾಗಿ 2,831 ರೂ. ಆಗಿದೆ.
ಗೃಹಬಳಕೆದಾರರಿಗೆ ನಿರಾಳ, ಹೋಟೆಲ್ ಉದ್ಯಮಕ್ಕೆ ಹೊರೆ
ಸಾಮಾನ್ಯ ಮನೆಗಳಿಗೆ ರಿಲೀಫ್: 14.2 ಕೆಜಿ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲಾಗಿದ್ದು, ತಿಂಗಳ ಬಜೆಟ್ ಮೇಲೆ ಯಾವುದೇ ತಕ್ಷಣದ ಪರಿಣಾಮ ಬೀರುವುದಿಲ್ಲ.
ಹೋಟೆಲ್, ರೆಸ್ಟೋರೆಂಟ್‌ಗಳ ಮೇಲೆ ಪ್ರಭಾವ: ದಿನನಿತ್ಯ ಹತ್ತಾರು ಸಿಲಿಂಡರ್‌ಗಳನ್ನು ಬಳಸುವ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಡಾಬಾಗಳು, ಬೇಕರಿಗಳು ಹಾಗೂ ಕ್ಯಾಟರಿಂಗ್ ಉದ್ಯಮಗಳ ಮಾಸಿಕ ನಿರ್ವಹಣಾ ವೆಚ್ಚ ಹೆಚ್ಚಾಗಲಿದ್ದು, ಹೊರಗಿನ ತಿಂಡಿ-ತಿನಿಸುಗಳ ಬೆಲೆ ಏರಿಕೆಗೆ ಕಾರಣವಾಗಬಹುದು.
ಮತ್ತಷ್ಟು ಓದಿ:
ನೀರಿನಲ್ಲಿ ಕೊಚ್ಚಿ ಬಂದ ಸಿಲಿಂಡರ್ಗಾಗಿ ಪ್ರವಾಹದ ನೀರಿಗೆ ಹಾರಿದ ನೇಪಾಳದ ಜನರು!
ಬೆಲೆ ಪರಿಷ್ಕರಣಾ ಪದ್ಧತಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ, ನೈಸರ್ಗಿಕ ಅನಿಲದ ದರ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯದ ಏರಿಳಿತವನ್ನು ಆಧರಿಸಿ ತೈಲ ಕಂಪನಿಗಳು ಪ್ರತಿ ತಿಂಗಳ 1ನೇ ತಾರೀಖಿನಂದು ಎಲ್‌ಪಿಜಿ ದರಗಳನ್ನು ಪರಿಷ್ಕರಿಸುತ್ತವೆ.
ಆಗಸ್ಟ್‌ನಲ್ಲಿ ಭಾರಿ ಇಳಿಕೆಯಾಗಿತ್ತು: ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್ ದರವನ್ನು 200 ರೂ.ಗೂ ಹೆಚ್ಚು ಕಡಿತಗೊಳಿಸಲಾಗಿತ್ತು (ದೆಹಲಿಯಲ್ಲಿ 202 ರೂ., ಕೋಲ್ಕತ್ತಾದಲ್ಲಿ 209 ರೂ. ಇಳಿಕೆಯಾಗಿತ್ತು). ಇದೀಗ ಸಣ್ಣ ಪ್ರಮಾಣದ ಏರಿಕೆ ದಾಖಲಾಗಿದೆ.
ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:16 am, Tue, 1 September 26