
ನವದೆಹಲಿ, ಅಕ್ಟೋಬರ್ 11: ಅತಿಯಾದ ಎಐನಿಂದ ಅಪಾಯವಾ ಎನ್ನುವ ಚರ್ಚೆ ಮುಂದುವರಿದಿದೆ. ಮೈಕ್ರೋಸಾಫ್ಟ್ ಕಾರ್ಪೊರೇಷನ್ (Microsoft Corp) ಸಿಇಒ ಸತ್ಯ ನಾಡೆಲ್ಲಾ (Satya Nadella) ಅವರು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಭದ್ರತೆ ಮತ್ತು ನಿಯಂತ್ರಣದ ಕುರಿತು ಮಹತ್ವದ ಎಚ್ಚರಿಕೆ ನೀಡಿದ್ದಾರೆ. ಅತ್ಯಾಧುನಿಕ ಎಐ ಮಾಡಲ್ಗಳನ್ನು ನಿಯೋಜಿಸುವ ಸಂಸ್ಥೆಗಳು ಅವುಗಳನ್ನು ನಿರ್ಮಿಸಿದವರ ಭರವಸೆಯ ಮೇಲೆ ನಂಬಿಕೆ ಇಟ್ಟರೆ ಆಗದು, ಅದನ್ನು ನಿಯಂತ್ರಿಸುವ ವ್ಯವಸ್ಥೆ ಇರಬೇಕು ಎಂದು ಮೈಕ್ರೋಸಾಫ್ಟ್ ಮುಖ್ಯಸ್ಥರು ಹೇಳೀದ್ದಾರೆ.
ಆಂಥ್ರೋಪಿಕ್ ಮತ್ತು ಓಪನ್ಎಐನ ಕೆಲ ಇತ್ತೀಚಿನ ಎಐ ಮಾಡಲ್ಗಳು ಒಂದು ಚೌಕಟ್ಟು ಬಿಟ್ಟು ತಾನಾಗೇ ಹೊರಹೋಗಿ ಕೆಲಸ ಮಾಡುತ್ತಿರುವ ಉದಾಹರಣೆಗಳು ಪತ್ತೆಯಾಗಿದ್ದು, ಟೆಕ್ ಜಗತ್ತು ಮತ್ತು ಜನಸಾಮಾನ್ಯರು ಬೆರಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಈ ಮಾತುಗಳನ್ನಾಡಿದ್ದಾರೆ. ಎಐ ಮಾಡಲ್ಗಳಿಗೆ ಒಂದು ಬ್ರೇಕ್ ಸಿಸ್ಟಂ ಇರಬೇಕು ಎನ್ನುವ ವಾದ ಮುಂದಿಟ್ಟಿದ್ದಾರೆ.
ಸತ್ಯ ನಾಡೆಲ್ಲಾ ಅವರ ಎಕ್ಸ್ ಪೋಸ್ಟ್
https://t.co/MjwFy73LOF
— Satya Nadella (@satyanadella) October 10, 2026
‘ಒಂದು ಎಐ ಮಾಡಲ್ ಅನ್ನು ಬಳಸುವಾಗ ಅದು ಕಾಂಪ್ರಮೈಸ್ ಆಗಿದೆ ಎಂದು ಭಾವಿಸಿ, ಶುರುವಿನಿಂದಲೇ ಅದರ ನಿಯಂತ್ರಣ ಮಾಡಬೇಕು. ಒಂದು ರೀತಿಯಲ್ಲಿ ಎಮರ್ಜೆನ್ಸಿ ಬ್ರೇಕ್ನಂತೆ ಎಂದು ತಿಳಿಯಿರಿ. ಒಬ್ಬ ಅಧಿಕೃತ ವ್ಯಕ್ತಿಯು ಎಐ ಮಾಡಲ್ ಅನ್ನು ಒಂದು ಕೆಲಸದ ಮಧ್ಯದಲ್ಲೇ ತಡೆಯುವ ಅಥವಾ ನಿಲ್ಲಿಸುವ ಅವಕಾಶ ಹೊಂದಿರಬೇಕು’ ಎಂದು ಸತ್ಯ ನಾಡೆಲ್ಲಾ ಅವರು ತಮ್ಮ ಎಕ್ಸ್ ಪೋಸ್ಟ್ವೊಂದರಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:
ದಾರಿ ತಪ್ಪಿದ ಅಥವಾ ಸೀಮೋಲಂಘನೆ ಮಾಡುವ ಅಪಾಯಕಾರಿ ಎಐ ಮಾಡಲ್ಗಳು ಪತ್ತೆಯಾದಾಗ ಅದನ್ನು ನಿಲ್ಲಿಸುವ ಒಂದು ಎಐ ಕಿಲ್ ಸ್ವಿಚ್ ವ್ಯವಸ್ಥೆ ಇರಬೇಕು ಎನ್ನುವುದು ಹಲವು ಪರಿಣಿತರ ವಾದವಾಗಿದೆ. ಸತ್ಯ ನಾಡೆಲ್ಲಾ ಅವರ ಅನಿಸಿಕೆಯು ಈ ಅಭಿಪ್ರಾಯದ ಪುನರುಚ್ಚರಣೆಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ