Microsoft Layoffs 2023: ಮೈಕ್ರೋಸಾಫ್ಟ್​ನಿಂದ ಮತ್ತೆ 559 ಉದ್ಯೋಗಿಗಳು ವಜಾ

|

Updated on: Mar 29, 2023 | 1:19 PM

ಟೆಕ್ ಕಂಪನಿಗಳ ವಜಾ ಕಾಂತ್ರಿ ಮುಂದುವರಿದಿದೆ. ಅನೇಕ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಆರ್ಥಿಕ ಬಿಕ್ಕಟ್ಟು ಎಂದು ವಜಾ ಮಾಡುತ್ತಿದೆ. ಹೆಚ್ಚಾಗಿ ಮೈಕ್ರೋಸಾಫ್ಟ್​ನಿಂದ ತನ್ನ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ.

Microsoft Layoffs 2023: ಮೈಕ್ರೋಸಾಫ್ಟ್​ನಿಂದ ಮತ್ತೆ 559 ಉದ್ಯೋಗಿಗಳು ವಜಾ
ಸಾಂದರ್ಭಿಕ ಚಿತ್ರ
Follow us on

ಟೆಕ್ ಕಂಪನಿಗಳ ವಜಾ ಕಾಂತ್ರಿ ಮುಂದುವರಿದಿದೆ. ಅನೇಕ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಆರ್ಥಿಕ ಬಿಕ್ಕಟ್ಟು ಎಂದು ವಜಾ ಮಾಡುತ್ತಿದೆ. ಹೆಚ್ಚಾಗಿ ಮೈಕ್ರೋಸಾಫ್ಟ್​ನಿಂದ (Microsoft) ತನ್ನ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ. ಮೈಕ್ರೋಸಾಫ್ಟ್​​ನ ಬೆಲ್ಲೆವ್ಯೂ ಮತ್ತು ರೆಡ್‌ಮಂಡ್‌ನಲ್ಲಿ ಕೆಲಸ ಮಾಡುತ್ತಿದ್ದ 559 ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದರೊಂದಿಗೆ, ಸಿಯಾಟಲ್ ಪ್ರದೇಶದಲ್ಲಿದ್ದ ಮೈಕ್ರೋಸಾಫ್ಟ್ ಕಂಪನಿಯಿಂದ ಒಟ್ಟು 2,743 ಉದ್ಯೋಗ ಕಡಿತಗೊಳಿಸಿದೆ. ಇದು ಈ ವರ್ಷದ ಆರಂಭದಲ್ಲಿ ದೈತ್ಯ ಐಟಿ ಕಂಪನಿಗಳಿಂದ ದೊಡ್ಡ ಘೋಷಣೆಯಾಗಿದೆ ಎಂದು ಹೇಳಿದ್ದಾರೆ. ಇದು ತನ್ನ ಕಂಪನಿಗಳಲ್ಲಿ ಈ ಹಿಂದೆ 10,000ರ ಕಾಲು ಭಾಗಕ್ಕಿಂತ ಹೆಚ್ಚು ಜನರನ್ನು ವಜಾ ಮಾಡಲಾಗಿದೆ.

ವಾಷಿಂಗ್ಟನ್​​ನಲ್ಲಿ ಉದ್ಯೋಗ ಭದ್ರತಾ ಇಲಾಖೆ ಇತ್ತೀಚಿನ ವಜಾಗೊಳಿಸುವ ಬಗ್ಗೆ ಸೋಮವಾರ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಈ ಉದ್ಯೋಗ ಕಡಿತವು ಮೈಕ್ರೋಸಾಫ್ಟ್ ಭದ್ರತಾ ಕಾರ್ಯಾಚರಣೆಗಳ ಉದ್ಯೋಗಿಗಳನ್ನು ಗುರಿಯಾಗಿಸಿದೆ ಎಂದು IANS ವರದಿ ಮಾಡಿದೆ. ಫೆಬ್ರವರಿಯಲ್ಲಿ, ಮೈಕ್ರೋಸಾಫ್ಟ್ ಮೊದಲ ಸುತ್ತಿನ ಉದ್ಯೋಗಿಗಳನ್ನು ವಜಾ ಮಾಡಲಾಗಿತ್ತು. ಇದರಲ್ಲಿ ರೆಡ್‌ಮಂಡ್, ಬೆಲ್ಲೆವ್ಯೂ ಮತ್ತು ಇಸಾಕ್ವಾದಲ್ಲಿ 617 ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂದು ಐಎಎನ್‌ಎಸ್ ವರದಿ ಮಾಡಿದೆ.

ಇದನ್ನೂ ಓದಿ: Amazon Layoffs: ಅಮೇಜಾನ್​ನಿಂದ ಇನ್ನಷ್ಟು 9,000 ಮಂದಿ ಮನೆಗೆ; ಈ ವರ್ಷ ಕೆಲಸ ಕಳೆದುಕೊಳ್ಳುವವರ ಸಂಖ್ಯೆ 27 ಸಾವಿರ

2021ರಲ್ಲಿ ಮೈಕ್ರೋಸಾಫ್ಟ್‌ಗೆ ಸೇರಿದ ಮಾಜಿ ಅಮೆಜಾನ್ ವೆಬ್ ಸೇವೆಗಳ ಕಾರ್ಯನಿರ್ವಾಹಕ ಚಾರ್ಲಿ ಬೆಲ್ ಅವರ ಅಡಿಯಲ್ಲಿ ನೂರಾರು ಉದ್ಯೋಗಿಗಳನ್ನು ವಜಾ ಮಾಡಲಾಗಿತ್ತು ಎಂದು ಐಎಎನ್‌ಎಸ್ ವರದಿ ಹೇಳಿದೆ. ಇಸ್ರೇಲ್‌ನಲ್ಲಿ ಮೈಕ್ರೋಸಾಫ್ಟ್ ಕಾರ್ಯಾಚರಣೆಗಳಿಂದ ಸೈಬರ್‌ ಸೆಕ್ಯುರಿಟಿಯಲ್ಲಿ ಕೆಲಸ ಮಾಡುತ್ತಿರುವ 100ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕಡಿತಗೊಳಿಸಲಾಗಿದೆ ಎಂದು ಕ್ಯಾಲ್ಕಲಿಸ್ಟ್ ವರದಿ ಹೇಳಿದೆ.

Published On - 1:19 pm, Wed, 29 March 23