ಮಾ. 9ಕ್ಕೆ, ಬೆಂಗಳೂರಿನಲ್ಲಿ ಎಂಪಿಎಲ್​ಎಸ್ ರೂಟರ್, ಅಪ್ಲೈಡ್ ಮೆಟೀರಿಯಲ್ಸ್ ವ್ಯಾಲಿಡೇಶನ್ ಸೆಂಟರ್​ಗೆ ಸಚಿವ ವೈಷ್ಣವ್ ಚಾಲನೆ

|

Updated on: Mar 08, 2024 | 7:07 PM

Minister Ashwini Vaishnaw visiting Bengaluru: ಕೇಂದ್ರ ರೈಲ್ವೆ, ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಅಶ್ವಿನಿ ವೈಷ್ಣವ್ ಮಾರ್ಚ್ 9ರಂದು ಬೆಂಗಳೂರಿಗೆ ಆಗಮಿಸುತ್ತಿದ್ದು ಎರಡು ಪ್ರಮುಖ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಭಾರತದ ಅತಿವೇಗದ ಮತ್ತು ದೇಶೀಯವಾಗಿ ನಿವೆಟ್ಟಿ ಸಿಸ್ಟಮ್ಸ್​ನಿಂದ ಡಿಸೈನ್ ಮಾಡಲಾಗಿರುವ ಐಪಿ ಎಂಪಿಎಲ್​ಎಸ್ ರೂಟರ್ ಅನ್ನು ಅನಾವರಣಗೊಳಿಸಲಿದ್ದಾರೆ. ವೈಟ್​ಫೀಲ್ಡ್​ನಲ್ಲಿ ಸಂಜೆ ಅಪ್ಲೈಡ್ ಮೆಟೀರಿಯಲ್ಸ್​ನ ವ್ಯಾಲಿಡೇಶನ್ ಸೆಂಟರ್ ಸ್ಥಾಪನೆಗೆ ಚಾಲನೆ ಕೊಡಲಿದ್ದಾರೆ.

ಮಾ. 9ಕ್ಕೆ, ಬೆಂಗಳೂರಿನಲ್ಲಿ ಎಂಪಿಎಲ್​ಎಸ್ ರೂಟರ್, ಅಪ್ಲೈಡ್ ಮೆಟೀರಿಯಲ್ಸ್ ವ್ಯಾಲಿಡೇಶನ್ ಸೆಂಟರ್​ಗೆ ಸಚಿವ ವೈಷ್ಣವ್ ಚಾಲನೆ
ಅಶ್ವಿನಿ ವೈಷ್ಣವ್
Follow us on

ಬೆಂಗಳೂರು, ಮಾರ್ಚ್ 8: ಕೇಂದ್ರ ಎಲೆಕ್ಟ್ರಾನಿಕ್ಸ್ ಸಚಿವ ಡಾ. ಅಶ್ವಿನಿ ವೈಷ್ಣವ್ ಶನಿವಾರ (ಮಾ. 9) ಸಿಲಿಕಾನ್ ಸಿಟಿಗೆ (Ashwini Vaishnaw Bengaluru visit) ಆಗಮಿಸುತ್ತಿದ್ದು, ಎರಡು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಭಾರತದಲ್ಲಿ ದೇಶೀಯವಾಗಿ ರೂಪಿಸಲಾಗಿರುವ ಅತಿವೇಗದ ಐಪಿ ಎಂಪಿಎಲ್​ಎಸ್ ರೂಟರ್ ಅನ್ನು ಅವರು ಅನಾವರಣಗೊಳಿಸಲಿದ್ದಾರೆ. ಹಾಗೆಯೇ, ಅಮೆರಿಕದ ಅಪ್ಲೈಡ್ ಮೆಟೀರಿಯಲ್ಸ್​ನ ವ್ಯಾಲಿಡೇಶನ್ ಸೆಂಟರ್ (Applied Materials Validation Center) ಸ್ಥಾಪನೆಗೆ ಚಾಲನೆ ಕೊಡಲಿದ್ದಾರೆ.

ನಿವೆಟ್ಟಿ ಸಿಸ್ಟಮ್ಸ್ ಸಂಸ್ಥೆಯ ಜೆಪಿ ನಗರ ಕ್ಯಾಂಪಸ್​ನಲ್ಲಿ ಶನಿವಾರ ಬೆಳಗ್ಗೆ 9:30ಕ್ಕೆ ಐಪಿ ಎಂಪಿಎಲ್​ಎಸ್ ರೂಟರ್​ಗಳನ್ನು ಸಚಿವರು ಬಿಡುಗಡೆ ಮಾಡಲಿದ್ದಾರೆ. ನಿವೆಟ್ಟಿ ಸಿಸ್ಟಮ್ಸ್ ಸಂಸ್ಥೆ ಈ ರೂಟರ್ ನಿರ್ಮಿಸಿದೆ. ಉತ್ತಮ ವೇಗದ ನೆಟ್ವರ್ಕ್ ಸರ್ವಿಸ್ ಅನ್ನು ಎಂಪಿಎಲ್​ಎಸ್ ರೂಟರ್​ಗಳು ನೀಡುತ್ತವೆ. ಭಾರತದ ಕಂಪನಿಯೊಂದು ಸ್ವಂತವಾಗಿ ಮೊದಲ ಬಾರಿಗೆ ಈ ರೂಟರ್ ಡಿಸೈನ್ ಮಾಡಿದೆ.

ಇನ್ನು, ಅಮೆರಿಕದ ಸೆಮಿಕಂಡಕ್ಟರ್ ಕಂಪನಿಯಾದ ಅಪ್ಲೈಡ್ ಮೆಟೀರಿಯಲ್ಸ್ ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿ ವ್ಯಾಲಿಡೇಶನ್ ಸೆಂಟರ್ ಸ್ಥಾಪಿಸುತ್ತಿದೆ. ಶನಿವಾರ ಸಂಜೆ 4 ಗಂಟೆಗೆ ಕೇಂದ್ರ ಐಟಿ ಸಚಿವರೂ ಆಗಿರುವ ವೈಷ್ಣವ್ ಇದಕ್ಕೆ ಚಾಲನೆ ಕೊಡಲಿದ್ದಾರೆ.

ಇದನ್ನೂ ಓದಿ: ಅಡೆತಡೆಗಳನ್ನು ದಾಟಿ ಸ್ವಯಂಶಕ್ತಿಯಿಂದ ಭಾರತದ ಬಿಸಿನೆಸ್ ಜಗತ್ತಿನಲ್ಲಿ ಛಾಪು ಮೂಡಿಸಿರುವ ಮಹಿಳೆಯರು

ಅಪ್ಲೈಡ್ ಮೆಟೀರಿಯಲ್ಸ್ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ದೊಡ್ಡ ಹೆಸರಿರುವ ಕಂಪನಿ. ಚಿಪ್ ತಯಾರಕ ಉಪಕರಣಗಳನ್ನು ಇದು ತಯಾರಿಸುತ್ತದೆ. ಭಾರತದಲ್ಲಿ ಹೂಡಿಕೆ ಮಾಡುತ್ತಿರುವ ಕೆಲ ಪ್ರಮುಖ ಸೆಮಿಕಂಡಕ್ಟರ್ ಕಂಪನಿಗಳಲ್ಲಿ ಅದೂ ಒಂದು. ಬೆಂಗಳೂರು ಸೇರಿದಂತೆ ದೇಶದ ಕೆಲವಡೆ ಅದು ಲ್ಯಾಬ್​ಗಳನ್ನು ಸ್ಥಾಪಿಸಿದೆ.

ಭಾರತವನ್ನು ಸೆಮಿಕಂಡಕ್ಟರ್ ತಯಾರಿಕೆಯ ಅಡ್ಡೆಯಾಗಿಸಬೇಕೆನ್ನುವುದು ಸರ್ಕಾರದ ಗುರಿ. ಈ ನಿಟ್ಟಿನಲ್ಲಿ ಅದಕ್ಕೆ ಸೂಕ್ತ ನೆಲೆ ನಿರ್ಮಿಸುತ್ತಿದೆ. ಈ ನೆಲೆ ನಿರ್ಮಾಣಕ್ಕೆ ಹೆಚ್ಚು ಸಮಯ ವ್ಯಯವಾಗುತ್ತದೆ. ಇದು ಆಗಿ ಬಿಟ್ಟರೆ ಮುಂದಿನ ಬೆಳವಣಿಗೆ ಸುಲಭವಾಗುತ್ತದೆ ಎಂದು ರೈಲ್ವೆ ಸಚಿವರೂ ಆಗಿರುವ ಎ ವೈಷ್ಣವ್ ಅವರ ಅನಿಸಿಕೆ.

ಇದನ್ನೂ ಓದಿ: ವಹಿವಾಟಿನಲ್ಲಿ ಸ್ಥಳೀಯ ಕರೆನ್ಸಿ ಬಳಕೆಗೆ ಉತ್ತೇಜಿಸಲು ಭಾರತ, ಇಂಡೋನೇಷ್ಯಾ ಸೆಂಟ್ರಲ್ ಬ್ಯಾಂಕುಗಳ ಒಪ್ಪಂದ

‘ಅಪ್ಲೈಡ್ ಮೆಟೀರಿಯಲ್ ಸಂಸ್ಥೆ ಭಾರತದಲ್ಲಿ ಘಟಕ ಸ್ಥಾಪಿಸಲು ಆರಂಭಿಸಿದೆ. ಅವರು ಭಾರತದಲ್ಲಿ ಚಿಪ್ ಡಿಸೈನಿಂಗ್ ಮಾಡುತ್ತಿದ್ದಾರೆ, ತಯಾರಿಕೆ ಮಾಡುತ್ತಿದ್ದಾರೆ. ಉಪಕರಣವೂ ಜೊತೆಗೆ ಬರಲಿದೆ. ಒಂದು ರೀತಿಯಲ್ಲಿ ಸಂಪೂರ್ಣ ವ್ಯವಸ್ಥೆಯೇ ಬರಲಿದೆ,’ ಎಂದು ಅಶ್ವಿನಿ ವೈಷ್ಣವ್ ಕಳೆದ ವಾರ ಹೇಳಿದ್ದರು. ಅಪ್ಲೈಡ್ ಮೆಟೀರಿಯಲ್ ಸಂಸ್ಥೆ ಭಾರತದಲ್ಲಿ ಹೂಡಿಕೆ ಮಾಡುವುದರಿಂದ ಲಾಭ ಮತ್ತು ಅನುಕೂಲಗಳ ಬಗ್ಗೆ ಅಂದು ಸಚಿವರು ಮಾಹಿತಿ ಹಂಚಿಕೊಂಡಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ