ಅಡೆತಡೆಗಳನ್ನು ದಾಟಿ ಸ್ವಯಂಶಕ್ತಿಯಿಂದ ಭಾರತದ ಬಿಸಿನೆಸ್ ಜಗತ್ತಿನಲ್ಲಿ ಛಾಪು ಮೂಡಿಸಿರುವ ಮಹಿಳೆಯರು

International Women's Day, Indian Self Made Businesswomen: ಭಾರತದಲ್ಲಿ ಸ್ವಂತವಾಗಿ ಉದ್ದಿಮೆ ಕಟ್ಟುವುದು ಬಹಳ ಸವಾಲಿನ ಕೆಲಸ. ಅದರಲ್ಲೂ ಮಹಿಳೆಯರಾದರೆ ಅಡೆತಡೆಗಳು ಹಲವು. ಇಂಥ ಕ್ಲಿಷ್ಟ ವಾತಾವರಣದಲ್ಲೂ ಹಲವು ಮಹಿಳೆಯರು ಪ್ರಜ್ವಲಿಸಿದ್ದಾರೆ. ಸ್ವಂತ ಬಲದಿಂದ ಉದ್ಯಮ ವಲಯದಲ್ಲಿ ಯಶಸ್ವಿಯಾಗಿದ್ದಾರೆ. ಕಿರಣ್ ಮಜುಮ್ದಾರ್ ಶಾ, ಫಾಲ್ಗುಣಿ ನಾಯರ್ ಹೆಸರು ನೆನಪಿಗೆ ಬರಬಹುದು. ಇವರ ಜೊತೆಗೆ ಇನ್ನೂ ಕೆಲ ಭಾರತೀಯ ಮಹಿಳೆಯರು ತಮ್ಮ ಉದ್ಯಮ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಈ ಮಹಿಳೆಯರ ಪರಿಚಯದ ಲೇಖನ ಇಲ್ಲಿದೆ.

ಅಡೆತಡೆಗಳನ್ನು ದಾಟಿ ಸ್ವಯಂಶಕ್ತಿಯಿಂದ ಭಾರತದ ಬಿಸಿನೆಸ್ ಜಗತ್ತಿನಲ್ಲಿ ಛಾಪು ಮೂಡಿಸಿರುವ ಮಹಿಳೆಯರು
ರಿಚಾ ಕರ್
Follow us
|

Updated on: Mar 08, 2024 | 4:29 PM

ಒಂದು ಹೊಸ ವ್ಯವಹಾರ (entrepreneurship) ಆರಂಭಿಸುವುದು ಅಷ್ಟು ಸುಲಭವಲ್ಲ. ಅದರಲ್ಲೂ ನಾಯಿಕೊಡೆಗಳಂತೆ ತಲೆ ಎತ್ತಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿರುವ ಉದ್ಯಮಗಳ ಮಧ್ಯೆ ಹೊಸ ಉದ್ಯಮ ಕಟ್ಟಿ ನೆಲೆಗೊಳಿಸುವುದು ಸಾಮಾನ್ಯದ ಸಂಗತಿಯಲ್ಲ. ಹೊಸ ಉದ್ದಿಮೆಗೆ ಮಾರುಕಟ್ಟೆ ಸಿಗುವಂತೆ ಮಾಡುವುದು, ಬಂಡವಾಳ ವ್ಯವಸ್ಥೆ ಮಾಡುವುದು, ಉದ್ದಿಮೆ ಬೆಳವಣಿಗೆಗೆ ಪೂರಕವಾದ ತಂಡ ಕಟ್ಟುವುದು ಇವ್ಯಾವುದೂ ಕೂಡ ತೀರಾ ಸವಾಲೆನಿಸಬಲ್ಲುವು. ಉದ್ಯಮಿಗಳು ಯಶಸ್ವಿಯಾದರೆ ಅವರು ಮಾತ್ರವಲ್ಲ, ನೂರಾರು, ಸಾವಿರಾರು, ಲಕ್ಷಾಂತರ ಮಂದಿಗೆ ಉದ್ಯೋಗಾವಕಾಶಗಳು ಸಿಗುತ್ತವೆ. ಅಂತೆಯೇ, ಒಂದು ದೇಶಕ್ಕೆ ಉದ್ಯಮಿಗಳು, ಉದ್ದಿಮೆದಾರರು ಬಹಳ ಮುಖ್ಯ.

ಸ್ವಯಂ ಶಕ್ತಿಯಿಂದ ಉದ್ಯಮಿಗಳಾದವರ ಸಂಖ್ಯೆ ತೀರಾ ಹೆಚ್ಚೇನಿಲ್ಲ. ಅದರಲ್ಲೂ ಇಂಥ ಮಹಿಳೆಯರು ಭಾರತದಲ್ಲಿ ಕೆಲವರಿದ್ದಾರೆ. ಇವತ್ತು ಅಂತಾರಾಷ್ಟ್ರೀಯ ಮಹಿಳಾ ದಿನವಾದ್ದರಿಂದ (International women’s Day), ಉದ್ದಿಮೆ ವಲಯದಲ್ಲಿ ಛಾಪು ಮೂಡಿಸಿರುವ ಕೆಲ ಭಾರತೀಯ ಮಹಿಳೆಯರ ಬಗ್ಗೆ ಮಾಹಿತಿ ತಿಳಿಯುವುದು ಸಂದರ್ಭೋಚಿತ.

ಇದನ್ನೂ ಓದಿ: ಮಹಿಳೆಯರ ಸಬಲೀಕರಣಕ್ಕೆ ಸ್ವಾಧಾರ್, ಹಾಸ್ಟೆಲ್, ಉಜ್ವಲ ಇತ್ಯಾದಿ ಸರ್ಕಾರಿ ಯೋಜನೆಗಳು

  1. ಫಾಲ್ಗುಣಿ ನಾಯರ್: ಇನ್ವೆಸ್ಟ್ಮೆಂಟ್ ಬ್ಯಾಂಕಿಂಗ್ ಕೆಲಸದಲ್ಲಿದ್ದ ಫಾಲ್ಗುಣಿ ನಾಯರ್ ಮಧ್ಯ ವಯಸ್ಸು ದಾಟಿದ ಬಳಿಕ ಶುರು ಮಾಡಿದ ಕಂಪನಿಯೇ ನೈಕಾ. ಆನ್​ಲೈನ್​ನಲ್ಲಿ ಉತ್ತಮ ಗುಣಮಟ್ಟದ ಕಾಸ್ಮೆಟಿಕ್ಸ್ ಮಾರಾಟ ಮಾಡಿ, ಹಂತ ಹಂತವಾಗಿ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿದವರು ಫಾಲ್ಗುಣಿ.
  2. ರಿಚಾ ಕರ್: ಮಹಿಳಾ ಒಳ ಉಡುಪುಗಳ ಆನ್​ಲೈನ್ ಮಾರಾಟದ ಕಂಪನಿ ಝಿವಾಮೆ ಸಂಸ್ಥಾಪಕಿ ರಿಚಾ ಕರ್.
  3. ಸುಮನ್ ಅಗರ್ವಾಲ್: ಕಾಲೇಜನ್ನು ಅರ್ಧಕ್ಕೆ ಬಿಟ್ಟರೂ ಇವರು ವ್ಯವಹಾರದಲ್ಲಿ ಯಶಸ್ವಿಯಾಗಿದ್ದಾರೆ. ಇಮೇಜ್ ಕನ್ಸಲ್ಟೆನ್ಸಿ ಕ್ಷೇತ್ರದ ಪ್ರಮುಖ ಕಂಪನಿಯಾದ ಐಸಿಬಿಐನ ಸಂಸ್ಥಾಪಕಿ ಇವರು.
  4. ಕಿರಣ್ ಮಜುಮ್ದಾರ್ ಶಾ: ಇವರು ಭಾರತದ ಅತ್ಯಂತ ಹಿರಿಯ ಮಹಿಳಾ ಉದ್ಯಮಿಗಳಲ್ಲಿ ಒಬ್ಬರು. ಬೆಂಗಳೂರಿನ ಇವರು ಬಯೋಕಾನ್ ಸಂಸ್ಥಾಪಕಿ. ಬಯೋಫಾರ್ಮಸ್ಯೂಟಿಕಲ್ಸ್ ಕ್ಷೇತ್ರದಲ್ಲಿ ಬಯೋಕಾನ್ ಜಾಗತಿಕವಾಗಿ ಹೆಸರುವಾಸಿಯಾಗಿದೆ.
  5. ವಂದನಾ ಲೂತ್ರ: ಬ್ಯೂಟಿ ಮತ್ತು ವೆಲ್ನೆಸ್ ಕ್ಷೇತ್ರದಲ್ಲಿ ಈಗ ಬಹಳ ಮುಂಚೂಣಿಯಲ್ಲಿರುವ ವಿಎಲ್​ಸಿಸಿಯ ಸಂಸ್ಥಾಪಕಿ ವಂದನಾ ಲೂತ್ರ.
  6. ಘಜಲ್ ಅಲಘ್: ಮಾಮಾ ಅರ್ತ್ ಎಂಬ ಬೇಬಿಕೇರ್ ಕಂಪನಿಯ ಸಂಸ್ಥಾಪಕಿ ಘಜಲ್ ಅಲಘ್. ಬಹಳ ಸುರಕ್ಷಿತ, ನೈಸರ್ಗಿಕ ಮತ್ತು ಸ್ವಚ್ಛ ಉತ್ಪನ್ನಗಳಿಗೆ ಇವರ ಕಂಪನಿ ಹೆಸರುವಾಸಿಯಾಗಿದೆ.
  7. ಸುಚಿ ಮುಖರ್ಜಿ: ಉತ್ಕೃಷ್ಟ ಗುಣಮಟ್ಟದ ಇಕಾಮರ್ಸ್ ಕಂಪನಿ ಎನಿಸಿದ ಲೈಮ್​ರೋಡ್​ನ ಸಂಸ್ಥಾಪಕಿ ಇವರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ