LPG Rates: ಬೆಂಗಳೂರು ಮೊದಲಾದೆಡೆ ಇಂಡೇನ್, ಎಚ್​ಪಿ, ಭಾರತ್ ಗ್ಯಾಸ್ ಸಿಲಿಂಡರ್ ದರಗಳೆಷ್ಟು? ಇಲ್ಲಿದೆ ಪಟ್ಟಿ

March 8th Updated LPG Domestic and Commercial Cylinder Prices: ಕೇಂದ್ರ ಸರ್ಕಾರ ಗೃಹಬಳಕೆಯ 14.2 ಕಿಲೋ ಎಲ್​ಪಿಜಿ ಸಿಲಿಂಡರ್ ಬೆಲೆ 100 ರೂನಷ್ಟು ಇಳಿಕೆಯಾಗಿದೆ. ದೇಶಾದ್ಯಂತ ಎಲ್ಲಾ ಊರುಗಳಲ್ಲೂ 100 ರೂ ಬೆಲೆ ಇಳಿಕೆ ಆಗಿದೆ. ಬೆಂಗಳೂರಿನಲ್ಲಿ 905.50 ರೂ ಇದ್ದ ಬೆಲೆ 805.50 ರೂ ಆಗಿದೆ. ಆದರೆ, 5 ಕಿಲೋ ಗೃಹಬಳಕೆ ಗ್ಯಾಸ್ ಬೆಲೆಯಲ್ಲಿ ಇಳಿಕೆ ಆಗಿಲ್ಲ. ಇನ್ನು, 19 ಕಿಲೋ ಮತ್ತು 47.5 ಕಿಲೋ ಕಮರ್ಷಿಯಲ್ ಗ್ಯಾಸ್ ಬೆಲೆ ಎರಡೂ ಕೂಡ ಹೆಚ್ಚಳವಾಗಿದೆ.

LPG Rates: ಬೆಂಗಳೂರು ಮೊದಲಾದೆಡೆ ಇಂಡೇನ್, ಎಚ್​ಪಿ, ಭಾರತ್ ಗ್ಯಾಸ್ ಸಿಲಿಂಡರ್ ದರಗಳೆಷ್ಟು? ಇಲ್ಲಿದೆ ಪಟ್ಟಿ
ಎಲ್​ಪಿಜಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 08, 2024 | 3:41 PM

ಬೆಂಗಳೂರು, ಮಾರ್ಚ್ 8: ಕೇಂದ್ರ ಸರ್ಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಎರಡನೇ ಬಾರಿ ಎಲ್​ಪಿಜಿ ಸಿಲಿಂಡರ್ (LPG gas price) ದರ ಇಳಿಸಿದೆ. ಆಗಸ್ಟ್ ತಿಂಗಳಲ್ಲಿ ಪಂಚರಾಜ್ಯ ವಿಧಾನಸಭೆಗೆ ಮುನ್ನ 200 ರೂನಷ್ಟು ಬೆಲೆ ಇಳಿಕೆ ಮಾಡಿತ್ತು. ಇದೀಗ ಲೋಕಸಭೆ ಚುನಾವಣೆಗೆ ಮುನ್ನ 100 ರೂನಷ್ಟು ದರ ಇಳಿಸಿದೆ. ಬೆಂಗಳೂರಿನಲ್ಲಿ 905.50 ರೂ ಇದ್ದ 14.2 ಕಿಲೋ ಎಲ್​ಪಿಜಿ ಬೆಲೆ ಇದೀಗ 805.50 ರೂಗೆ ಇಳಿದಿದೆ. ದೇಶಾದ್ಯಂತ ಎಲ್​ಪಿಜಿ ಬಳಕೆ ಮಾಡುವ 33 ಕೋಟಿ ಕುಟುಂಬಗಳಿಗೆ ಒಂದಷ್ಟು ಹೊರೆ ತಗ್ಗಿದೆ. ಆದರೆ, 19 ಕಿಲೋ ಕಮರ್ಷಿಯಲ್ ಸಿಲಿಂಡರ್ ಬೆಲೆ 23.50 ರೂನಷ್ಟು ಏರಿಕೆ ಆಗಿದೆ. 47.5 ಕಿಲೋ ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲೂ ಏರಿಕೆ ಆಗಿದೆ. ಆದರೆ, 5 ಕಿಲೋ ಗೃಹಬಳಕೆ ಎಲ್​ಪಿಜಿ ಬೆಲೆಯಲ್ಲಿ ವ್ಯತ್ಯಯವಾಗಿಲ್ಲ.

ಇಂಡೇನ್, ಎಚ್​ಪಿ, ಭಾರತ್ ಗ್ಯಾಸ್ ಬೆಲೆಗಳೆಷ್ಟು?

ಭಾರತದಲ್ಲಿ ಮೂರು ಸಂಸ್ಥೆಗಳು ಗೃಹಬಳಕೆಯ ಎಲ್​ಪಿಜಿ ಗ್ಯಾಸ್ ಸೇವೆ ನೀಡುತ್ತವೆ. ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಒಸಿಎಲ್), ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್), ಹಿಂದೂಸ್ತಾನ್ ಪೆಟ್ರೋಲಿಯಂ (ಹೆಚ್​ಪಿಸಿಎಲ್) ಈ ಮೂರು ಕೂಡ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾಗಿವೆ. ಇಂಡೇನ್ ಗ್ಯಾಸ್, ಭಾರತ್ ಗ್ಯಾಸ್ ಮತ್ತು ಹೆಚ್​ಪಿ ಗ್ಯಾಸ್ ಅನ್ನು ಸರಬರಾಜು ಮಾಡುತ್ತವೆ. ಈ ಮೂರರಲ್ಲೂ ಬೆಲೆ ವ್ಯತ್ಯಾಸ ಇರುವುದಿಲ್ಲ. ವಿವಿಧ ಎಲ್​ಪಿಜಿ ಸಿಲಿಂಡರ್ ದರ ಈ ಮೂರರಲ್ಲೂ ಏಕ ತೆರನಾಗಿರುತ್ತದೆ.

ಇದನ್ನೂ ಓದಿ: ಎಲ್​ಪಿಜಿ ಸಿಲಿಂಡರ್ ಬೆಲೆ ಇಳಿಕೆ: ಮಹಿಳಾ ದಿನಾಚರಣೆ ದಿನ ಪ್ರಧಾನಿ ಮೋದಿ ಗಿಫ್ಟ್

ಬೆಂಗಳೂರಿನಲ್ಲಿ ಎಷ್ಟಿದೆ ಇವತ್ತಿನ ಎಲ್​ಪಿಜಿ ಬೆಲೆ

  • 14.2 ಕಿಲೋ ಗೃಹಬಳಕೆ ಎಲ್​ಪಿಜಿ: 805.50 ರೂ
  • 5 ಕಿಲೋ ಗೃಹಬಳಕೆ ಎಲ್​ಪಿಜಿ: 336 ರೂ
  • 19 ಕಿಲೋ ಕಮರ್ಷಿಯಲ್ ಎಲ್​ಪಿಜಿ: 1,875 ರೂ
  • 47.5 ಕಿಲೋ ಕಮರ್ಷಿಯಲ್ ಎಲ್​ಪಿಜಿ: 4,684.50 ರೂ

ಮುಂಬೈನಲ್ಲಿರುವ ಇವತ್ತಿನ ಎಲ್​ಪಿಜಿ ಬೆಲೆ

  • 14.2 ಕಿಲೋ ಗೃಹಬಳಕೆ ಎಲ್​ಪಿಜಿ: 802.50 ರೂ
  • 5 ಕಿಲೋ ಗೃಹಬಳಕೆ ಎಲ್​ಪಿಜಿ: 335 ರೂ
  • 19 ಕಿಲೋ ಕಮರ್ಷಿಯಲ್ ಎಲ್​ಪಿಜಿ: 1,749 ರೂ
  • 47.5 ಕಿಲೋ ಕಮರ್ಷಿಯಲ್ ಎಲ್​ಪಿಜಿ: 4,369 ರೂ

ಇದನ್ನೂ ಓದಿ: ಪಿಎಂ ಉಜ್ವಲ ಫಲಾನುಭವಿಗಳಿಗೆ 300 ರೂ ಎಲ್​ಪಿಜಿ ಸಬ್ಸಿಡಿ, ಒಂದು ವರ್ಷ ಮುಂದುವರಿಕೆ

ಕರ್ನಾಟಕದಲ್ಲಿ 14.2 ಕಿಲೋ ಎಲ್​ಪಿಜಿ ಅತಿ ದುಬಾರಿ ಬೆಲೆ ಇರುವ ಜಿಲ್ಲೆಗಳಿವು…

  • ಬೀದರ್: 874.59 ರೂ
  • ಹಾವೇರಿ: 840.50 ರೂ
  • ಗದಗ: 839 ರೂ
  • ಕೊಪ್ಪಳ: 839 ರೂ
  • ರಾಯಚೂರು: 829.50 ರೂ
  • ಕಲಬುರ್ಗಿ: 829.50 ರೂ
  • ಯಾದಗಿರಿ: 829 ರೂ
  • ಬಿಜಾಪುರ: 827.50 ರೂ
  • ಬಾಗಲಕೋಟೆ: 824 ರೂ
  • ಬಳ್ಳಾರಿ: 823 ರೂ
  • ಧಾರವಾಡ: 822 ರೂ
  • ಉತ್ತರಕನ್ನಡ: 822 ರೂ
  • ಕೊಡಗು: 821 ರೂ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು