AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Employee Provident Fund: ಕೆಲಸ ಬದಲಿಸಿದಾಗ ಹಳೆ ಪಿಎಫ್ ಖಾತೆ ಹಣ ಹೊಸ ಖಾತೆಗೆ ರವಾನೆಯಾಗಲು ಎಷ್ಟು ದಿನ ಬೇಕು?

EPF updates: ಒಂದಕ್ಕಿಂತ ಹೆಚ್ಚು ಕಂಪನಿಗಳಲ್ಲಿ ಕೆಲಸ ಮಾಡಿದ್ದರೆ ಒಂದಕ್ಕಿಂತ ಹೆಚ್ಚು ಪಿಎಫ್ ಖಾತೆಗಳಿರುವ ಸಾಧ್ಯತೆ ಇರುತ್ತದೆ. ಒಂದೇ ಯುಎಎನ್ ನಂಬರ್ ಅಡಿಯಲ್ಲಿ ಎಲ್ಲಾ ಪಿಎಫ್ ಖಾತೆಗಳನ್ನು ನಿರ್ವಹಿಸಬಹುದು. ಆದರೆ, ಒಂದಕ್ಕಿಂತ ಹೆಚ್ಚು ಪಿಎಫ್ ಖಾತೆ ಹೊಂದಿರುವ ಬದಲು ಹಿಂದಿನ ಪಿಎಫ್ ಖಾತೆಗಳನ್ನು ಈಗಿರುವ ಹಾಲಿ ಪಿಎಫ್ ಖಾತೆಗೆ ವಿಲೀನಗೊಳಿಸುವುದು ಉತ್ತಮ. ಸರ್ಕಾರದಿಂದ ಸಂದಾಯವಾಗುವ ಬಡ್ಡಿಹಣ ನಿಮ್ಮ ಎಲ್ಲಾ ಹಣಕ್ಕೂ ಅನ್ವಯ ಆಗುತ್ತದೆ.

Employee Provident Fund: ಕೆಲಸ ಬದಲಿಸಿದಾಗ ಹಳೆ ಪಿಎಫ್ ಖಾತೆ ಹಣ ಹೊಸ ಖಾತೆಗೆ ರವಾನೆಯಾಗಲು ಎಷ್ಟು ದಿನ ಬೇಕು?
ಇಪಿಎಫ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 08, 2024 | 12:26 PM

Share

ನೀವು ಯಾವುದೋ ಹೊಸ ಕೆಲಸಕ್ಕೆ ಸೇರಿದಾಗ ಹಳೆಯ ಪಿಎಫ್ ಖಾತೆ (EPF account) ಮುಂದುವರಿಯುವುದಿಲ್ಲ. ಹೊಸದಾಗಿ ಪಿಎಫ್ ಖಾತೆಯನ್ನು ಸೃಷ್ಟಿಸಲಾಗುತ್ತದೆ. ಆದರೆ, ಯುಎಎನ್ ನಂಬರ್ ಮಾತ್ರ ಒಂದೇ ಇರಬೇಕು. ಈ ಯುಎಎನ್ ನಂಬರ್ (UAN) ಅಡಿಯಲ್ಲಿ ನಿಮ್ಮ ಎಲ್ಲಾ ಪಿಎಫ್ ಖಾತೆಗಳು ಇರುತ್ತವೆ. ಆದರೆ, ವಿವಿಧ ಪಿಎಫ್ ಖಾತೆಗಳ ಬದಲು ಒಂದೇ ಖಾತೆ ಇದ್ದರೆ ಹಲವು ರೀತಿಯ ಪ್ರಯೋಜನಗಳು ಇರುತ್ತವೆ. ನಿಮ್ಮ ಸಕ್ರಿಯ ಪಿಎಫ್ ಖಾತೆಯಲ್ಲಿರುವ ಹಣಕ್ಕೆ ಮಾತ್ರವೇ ಸರ್ಕಾರದ ಬಡ್ಡಿ ಹಣ ಸಂದಾಯ ಆಗುತ್ತದೆ. ನೀವು ಕೆಲಸ ಬದಲಿಸಿದಾಗ ಹೊಸ ಪಿಎಫ್ ಖಾತೆಯಲ್ಲಿರುವ ಅಲ್ಪ ಹಣಕ್ಕೆ ಮಾತ್ರವೇ ಬಡ್ಡಿ ಸಿಗುತ್ತದೆ. ನಿಮ್ಮ ಹಳೆಯ ಪಿಎಫ್ ಖಾತೆಯಲ್ಲಿ ಹೆಚ್ಚಿನ ಮೊತ್ತ ಇದ್ದರೆ ಅದಕ್ಕೆ ಬಡ್ಡಿ ಸಿಗುವುದಿಲ್ಲ. ಹೀಗಾಗಿ, ಕೆಲಸ ಬದಲಿಸಿದಾಗ ಪಿಎಫ್ ಖಾತೆಯನ್ನೂ ಹೊಸ ಪಿಎಫ್ ಖಾತೆಗೆ ವಿಲೀನಗೊಳಿಸುವುದು ಮುಖ್ಯ.

ಇದನ್ನೂ ಓದಿ: ಎಲ್​ಪಿಜಿ ಸಿಲಿಂಡರ್ ಬೆಲೆ ಇಳಿಕೆ: ಮಹಿಳಾ ದಿನಾಚರಣೆ ದಿನ ಪ್ರಧಾನಿ ಮೋದಿ ಗಿಫ್ಟ್

ಇಪಿಎಫ್ ಎಂಬುದು ಖಾಸಗಿ ಕ್ಷೇತ್ರವನ್ನೂ ಒಳಗೊಂಡಂತೆ ಎಲ್ಲಾ ಕಂಪನಿಗಳ ಉದ್ಯೋಗಿಗಳ ಭವಿಷ್ಯದ ಭದ್ರತೆ ಅಥವಾ ನಿವೃತ್ತಿ ನಂತರದ ಜೀವನದ ಭದ್ರತೆಗೆಂದು ಸರ್ಕಾರ ರೂಪಿಸಿದ ಯೋಜನೆ ಇದು. 20ಕ್ಕೂ ಹೆಚ್ಚು ಉದ್ಯೋಗಿಗಳನ್ನು (ರೆಗ್ಯುಲರ್) ಹೊಂದಿರುವ ಯಾವುದೇ ಕಂಪನಿಯಾದರೂ ಇಪಿಎಫ್ ಯೋಜನೆಯನ್ನು ತಮ್ಮ ಉದ್ಯೋಗಿಗಳಿಗೆ ಅಳವಡಿಸುವುದು ಕಡ್ಡಾಯ. ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳೂ ಕೂಡ ಈ ಯೋಜನೆಯನ್ನು ಅಳವಡಿಸಬಹುದು.

ಈ ಯೋಜನೆಯ ಅಡಿಯಲ್ಲಿ ಉದ್ಯೋಗಿಯ ಬೇಸಿಕ್ ಸ್ಯಾಲರಿಯ ಶೇ. 12ರಷ್ಟು ಹಣವನ್ನು ಕಡಿತಗೊಳಿಸಿ ಅದನ್ನು ಪಿಎಫ್ ಖಾತೆಗೆ ಸಂದಾಯ ಮಾಡಲಾಗುತ್ತದೆ. ಅಷ್ಟೇ ಪ್ರಮಾಣದ ಹಣವನ್ನು ಸಂಸ್ಥೆಯೂ ಕೂಡ ಆ ಖಾತೆಗೆ ಹಾಕುತ್ತದೆ. ಸರ್ಕಾರ ವರ್ಷಕ್ಕೆ ಒಮ್ಮೆ ಪಿಎಫ್ ಖಾತೆಯಲ್ಲಿರುವ ಹಣಕ್ಕೆ ಬಡ್ಡಿ ಸೇರಿಸುತ್ತದೆ. ಬೇರೆ ಉಳಿತಾಯ ಸ್ಕೀಮ್​ಗಳಿಗಿಂತ ಇದಕ್ಕೆ ಹೆಚ್ಚು ಬಡ್ಡಿ ಸಿಗುತ್ತದೆ. ಹೀಗಾಗಿ, ಉದ್ಯೋಗಿಯ ಪಿಎಫ್ ಖಾತೆ ಒಂದು ರೀತಿಯಲ್ಲಿ ಉಳಿತಾಯದ ಜೊತೆಗೆ ಉತ್ತಮ ಹೂಡಿಕೆಯೂ ಆಗಿರುತ್ತದೆ. ನಿವೃತ್ತಿಯ ವೇಳೆಗೆ ಸಾಕಷ್ಟು ದೊಡ್ಡ ಮೊತ್ತವೇ ಸಂಗ್ರಹವಾಗಿರುತ್ತದೆ.

ಇದನ್ನೂ ಓದಿ: ಪಿಎಂ ಉಜ್ವಲ ಫಲಾನುಭವಿಗಳಿಗೆ 300 ರೂ ಎಲ್​ಪಿಜಿ ಸಬ್ಸಿಡಿ, ಒಂದು ವರ್ಷ ಮುಂದುವರಿಕೆ

ಪಿಎಫ್ ಖಾತೆ ವರ್ಗಾವಣೆ ಹೇಗೆ?

ನೀವು ಇಪಿಎಫ್​ಒ ಪೋರ್ಟಲ್​ಗೆ ಹೋಗಿ ನಿಮ್ಮ ಯುಎಎನ್ ನಂಬರ್ ಮೂಲಕ ನೊಂದಾಯಿಸಿಕೊಂಡು ಲಾಗಿ ಆಗಿ. ಹಳೆಯ ಪಿಎಫ್ ಖಾತೆಯನ್ನು ಹೊಸ ಖಾತೆಗೆ ವರ್ಗಾಯಿಸಿಕೊಳ್ಳಲು ಆನ್ಲೈನ್​ನಲ್ಲೇ ಮನವಿ ಸಲ್ಲಿಸುವ ಅವಕಾಶ ಇದೆ. ಇದಕ್ಕೆ ಹಿಂದೆ ಕೆಲಸ ಮಾಡಿದ ಸಂಸ್ಥೆ ಅಥವಾ ಈಗ ಕೆಲಸ ಮಾಡುತ್ತಿರುವ ಸಂಸ್ಥೆ ಅನುಮೋದನೆ ಕೊಡಬೇಕು. ಒಟ್ಟಾರೆ ಈ ಪ್ರಕ್ರಿಯೆ ಮೂರರಿಂದ ಆರು ವಾರದೊಳಗೆ ಪೂರ್ಣಗೊಳ್ಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್