AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

20 ವರ್ಷದಲ್ಲಿ ಜೆಟ್ ಎಂಜಿನ್ ತಯಾರಿಸಲಾಗಲಿಲ್ಲ: ಚೀನಾ ಮತ್ತು ಭಾರತ ಹೋಲಿಸಿದ ಮೋಹನದಾಸ್ ಪೈ

We couldn't build jet engine in 20 years, Mohandas Pai slams govt policy: ಮಾಜಿ ಇನ್ಫೋಸಿಸ್ ಸಿಎಫ್​ಒ ಮೋಹನದಾಸ್ ಪೈ ಅವರು ಭಾರತ ಸರ್ಕಾರದ ಆರ್ಥಿಕ ನೀತಿಯನ್ನು ಟೀಕಿಸಿದ್ದಾರೆ. ಪೋಡ್​ಕ್ಯಾಸ್ಟ್​ವೊಂದರಲ್ಲಿ ಮಾತನಾಡುತ್ತಿದ್ದ ಅವರು, ತೆರಿಗೆಪಾವತಿದಾರರ ಹಣದಿಂದ ನಿರುಪಯುಕ್ತ ಸರ್ಕಾರಿ ಸಂಸ್ಥೆಗಳಿಗೆ ಫಂಡಿಂಗ್ ಮಾಡುವುದನ್ನು ಆಕ್ಷೇಪಿಸಿದ್ದಾರೆ. ಸರ್ಕಾರಿ ಸಂಸ್ಥೆಗಳಿಗೆ 20 ವರ್ಷದಿಂದ ಒಂದು ಜೆಟ್ ಎಂಜಿನ್ ಅಭಿವೃದ್ಧಿಪಡಿಸಲು ಆಗಲಿಲ್ಲ ಎಂದು ಪೈ ಸಿಡುಕಿದ್ದಾರೆ.

20 ವರ್ಷದಲ್ಲಿ ಜೆಟ್ ಎಂಜಿನ್ ತಯಾರಿಸಲಾಗಲಿಲ್ಲ: ಚೀನಾ ಮತ್ತು ಭಾರತ ಹೋಲಿಸಿದ ಮೋಹನದಾಸ್ ಪೈ
ಮೋಹನದಾಸ್ ಪೈ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Oct 06, 2025 | 7:37 PM

Share

ನವದೆಹಲಿ, ಅಕ್ಟೋಬರ್ 6: ಸರ್ಕಾರಗಳ ನೀತಿಗಳ ಬಗ್ಗೆ ನೇರ ಮತ್ತು ನಿಷ್ಠುರವಾಗಿ ಮಾತನಾಡುವ ಮಾಜಿ ಇನ್ಫೋಸಿಸ್ ಸಿಎಫ್​ಒ ಮೋಹನದಾಸ್ ಪೈ ಅವರು ಇತ್ತೀಚಿನ ಪೋಡ್​ಕ್ಯಾಸ್ಟ್​ವೊಂದರಲ್ಲಿ ಭಾರತದ ಆರ್ಥಿಕ ನೀತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತ್​ವಾರ್ತಾ (Bharatvaarta) ಎನ್ನುವ ಯೂಟ್ಯೂಬ್ ವಾಹಿನಿಯ ಪೋಡ್​ಕ್ಯಾಸ್ಟ್​ನಲ್ಲಿ ಮಾತನಾಡುತ್ತಿದ್ದ ಮೋಹನ್ ದಾಸ್ ಪೈ (Mohandas Pai), ಸರ್ಕಾರಿ ಸಂಸ್ಥೆಗಳನ್ನು ಸಲಹಲು ಸಾಕಷ್ಟು ಹಣ ವ್ಯಯಿಸುವ ನೀತಿ ವಿರುದ್ಧ ತಗಾದೆ ತೆಗೆದಿದ್ದಾರೆ.

ತೆರಿಗೆ ಪಾವತಿದಾರರ ಹಣವನ್ನು ಸರ್ಕಾರೀ ಉದ್ದಿಮೆಗಳಿಗೆ ನೀಡಲಾಗುತ್ತಿದೆ. ಈ ರೀತಿ ತೆರಿಗೆ ಹಣ ಪೋಲು ಮಾಡುತ್ತಿರುವ ಏಕೈಕ ದೇಶ ಎಂದರೆ ಅದು ಭಾರತವೇ ಎಂದು ಪೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದೇ ಸಂದರ್ಭದಲ್ಲಿ ಅವರು ಅಮೆರಿಕದ ಮಾದರಿ ಜೊತೆಗೆ ಹೋಲಿಕೆ ಮಾಡಿದ್ದಾರೆ.

‘ತೆರಿಗೆ ಪಾವತಿದಾರರೊಂದಿಗೆ ಸ್ಪರ್ಧೆಯೊಡ್ಡುವಂತೆ ಅವರ ಹಣವನ್ನು ಬಳಸುವುದಿಲ್ಲ. ತೆರಿಗೆ ಪಾವತಿದಾರರ ಹಣವನ್ನು ಬ್ಲ್ಯೂ ಸ್ಕೈ ಟೆಕ್ನಾಲಜಿಗಳನ್ನು ಅಭಿವೃದ್ಧಿಪಡಿಸಲು ಬಳಸುತ್ತೇವೆ ಎಂದು ಅಮೆರಿಕದವರು ನನಗೆ ಹೇಳಿದ್ದರು. ಆದರೆ, ಭಾರತದಲ್ಲಿ ಈ ರೀತಿಯ ಫಂಡಿಂಗ್ ಬಹಳ ನಗಣ್ಯವಾಗಿದೆ’ ಎಂದು ಅವರು ಬೇಸರಿಸಿದ್ದಾರೆ.

ಇದನ್ನೂ ಓದಿ: ಅಮೆರಿಕದ ಮೊದಲ ಲೈಫೈ ಇಂಟರ್ನೆಟ್ ಸಿಸ್ಟಂ ಅಳವಡಿಸಿದ ಕೀರ್ತಿ ಭಾರತೀಯ ಕಂಪನಿಯದ್ದು

‘ಭಾರತದಲ್ಲಿ ಇನ್ನೋವೇಶನ್​ಗೆ ಎಷ್ಟು ವೆಚ್ಚ ಮಾಡಲಾಗುತ್ತಿದೆ? ಬಹಳ ಅತ್ಯಲ್ಪ. ಹೆಚಚಿನ ಫಂಡಿಂಗ್​ಗಳು ಡಿಆರ್​ಡಿಒ, ಎನ್​ಎಎಲ್​ನಂತಹ ಸರ್ಕಾರಿ ಲ್ಯಾಬ್​ಗಳಿಗೆ ಹೋಗುತ್ತದೆ. ಇವುಗಳ ಕಾರ್ಯಕ್ಷಮತೆ ಬಹಳ ಕಡಿಮೆ’ ಎಂದು ಮೋಹನ್ ದಾಸ್ ಪೈ ಜರಿದಿದ್ದಾರೆ.

ಭಾರತ್​ವಾರ್ತ ಪೋಡ್​ಕ್ಯಾಸ್ಟ್​ನಲ್ಲಿ ಮೋಹನದಾಸ್ ಪೈ

ಜೆಟ್ ಎಂಜಿನ್ ತಯಾರಿಸಲು ಯಾಕೆ ಆಗಿಲ್ಲ?

‘20 ವರ್ಷದಲ್ಲಿ ನಮಗೆ ಒಂದು ಜೆಟ್ ಎಂಜಿನ್ ತಯಾರಿಸಲು ಆಗಲಿಲ್ಲ. ಅತ್ತ ಚೀನಾ ದೇಶವು ಬೋಯಿಂಗ್ ಜೊತೆ ಸ್ಪರ್ಧಿಸುತ್ತಿದೆ. ಟಾಟಾ ಮೋಟಾರ್ಸ್​ಗೋ ಎಲ್ ಅಂಡ್ ಟಿಗೋ ಹಣ ಕೊಟ್ಟಿದ್ದರೆ ಜೆಟ್ ಎಂಜಿನ್ ಅನ್ನು ನಿರ್ಮಿಸುತ್ತಿದ್ದರೇನೋ’ ಎಂದು ಮಾಜಿ ಇನ್ಫೋಸಿಸ್ ಸಿಎಫ್​ಒ ಹೇಳಿದ್ದಾರೆ.

ಇದನ್ನೂ ಓದಿ: ಆರ್​ಸಿಇಪಿಗೆ ಸೇರಿದರೆ ಭಾರತದಿಂದ ಹೆಚ್ಚು ಖರೀದಿಸಲು ಸಿದ್ಧ ಎಂದ ಚೀನಾ; ಏನಿದು ಆರ್​ಸಿಇಪಿ?

‘ನಾನೇನು ಸರ್ಕಾರಿ ಸಂಸ್ಥೆಗಳ ವಿರೋಧಿಯಲ್ಲ. ಅವು ಚೆನ್ನಾಗಿ ಬೆಳೆಯಬೇಕೆಂದು ಬಯಸುತ್ತೇನೆ. ಆದರೆ, ಅವುಗಳನ್ನು ಮಾತ್ರವೇ ಪೋಷಿಸುವುದು ತರವಲ್ಲ. ಈ ದೇಶವು ಖಾಸಗಿ ಉದ್ದಿಮೆಗಳೂ ಒಳಗೊಂಡಂತೆ ನಮಗೆಲ್ಲರಿಗೂ ಸೇರಿದ್ದು’ ಎಂದಿದ್ದಾರೆ ಮೋಹನದಾಸ್ ಪೈ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:34 pm, Mon, 6 October 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ