ನವದೆಹಲಿ, ಮೇ 18: ವಿಶ್ವದ ಪ್ರಮುಖ ಕ್ರೆಡಿಟ್ ರೇಟಿಂಗ್ ಏಜೆನ್ಸಿಯಾದ ಮೂಡೀಸ್ ಈಗ ಅಮೆರಿಕಕ್ಕೆ ನೀಡಿದ್ದ ಅತ್ಯುಚ್ಚ ರೇಟಿಂಗ್ ಅನ್ನು ಕಡಿಮೆಗೊಳಿಸಿದೆ. ಇದು ಹೂಡಿಕೆದಾರರ (ಹಣಕಾಸು ಸಂಸ್ಥೆಗಳು) ಅವಗಾಹನೆಗೆ ರೇಟಿಂಗ್ ಏಜೆನ್ಸಿಗಳು ನೀಡುವ ಗ್ರೇಡಿಂಗ್. ಮೂಡೀಸ್ ಸಂಸ್ಥೆ ಅಮೆರಿಕಕ್ಕೆ ತಾನು ನೀಡಿದ್ದ ಎಎಎ ರೇಟಿಂಗ್ ಅನ್ನು ಈಗ ಎಎ1ಗೆ ಇಳಿಸಿದೆ. ಇದರೊಂದಿಗೆ ಸ್ಟ್ಯಾಂಡರ್ಡ್ ಅಂಡ್ ಪೂರ್ ಹಾಗೂ ಫಿಚ್ ರೇಟಿಂಗ್ಗಳ ಸಾಲಿಗೆ ಮೂಡೀಸ್ ಸೇರಿದೆ. ಈ ಮೂರೂ ರೇಟಿಂಗ್ ಏಜೆನ್ಸಿಗಳು ಅಮೆರಿಕಕ್ಕೆ ರೇಟಿಂಗ್ ತಗ್ಗಿಸಿರುವುದು ಕುತೂಹಲ.
ಅಮೆರಿಕದ ವಿತ್ತೀಯ ಕೊರತೆಯು ಜಿಡಿಪಿಯ ಶೇ. 6.4ರಷ್ಟಿದೆ. 2035ರಲ್ಲಿ ಈ ಅಂತರವು ಶೇ. 9ಕ್ಕೆ ಏರಬಹುದು. 2024ರಲ್ಲಿ ಅಮೆರಿಕದ ಸಾಲವು ಜಿಡಿಪಿಗೆ ಹೋಲಿಸಿದರೆ ಶೇ. 98ರಷ್ಟಿದೆ. ಇದು 2035ರಲ್ಲಿ ಶೇ. 134ಕ್ಕೆ ಏರಬಹುದು. ಆಗ ಅಮೆರಿಕದ ಶೇ. 30ರಷ್ಟು ಆದಾಯವು ಬಡ್ಡಿ ಪಾವತಿಸಲೇ ಸಂದಾಯವಾಗಬಹುದು. ಈ ಕಾರಣಕ್ಕೆ ಮೂಡೀಸ್ ಸಂಸ್ಥೆಯು ಅಮೆರಿಕಕ್ಕೆ ರೇಟಿಂಗ್ ಅನ್ನು ಒಂದು ಹಂತ ಕೆಳಗಿಳಿಸಿದೆ.
ಮೂಡೀಸ್ನಂತಹ ಜಾಗತಿಕ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ವಿವಿಧ ದೇಶಗಳ ಸಾಲ ನಿರ್ವಹಣೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ರೇಟಿಂಗ್ ನೀಡುತ್ತವೆ. ಎಎಎನಿಂದ ಹಿಡಿದು ಸಿವರೆಗೆ ರೇಟಿಂಗ್ ಇರುತ್ತದೆ. ಎಎಎ ಅತ್ಯುಚ್ಚವಾದರೆ, ಸಿ ಎಂಬುದು ಕನಿಷ್ಠ ರೇಟಿಂಗ್.
ಇದನ್ನೂ ಓದಿ: ಮಾರುಕಟ್ಟೆಯನ್ನು ನಂಬಿ ಕೆಟ್ಟವರಿಲ್ಲವೋ…! ಇಲ್ಲಿವೆ ಹೂಡಿಕೆ ಮಾಡುವ ಸರಳ ತಂತ್ರಗಳು
ಒಂದು ದೇಶಕ್ಕೆ ಹಾಗೂ ಅದರಲ್ಲಿರುವ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಸಾಲ ನೀಡುವುದು ಎಷ್ಟು ರಿಸ್ಕ್ ಇರಬಹುದು ಎಂಬುದನ್ನು ಈ ರೇಟಿಂಗ್ ಸೂಚಿಸುತ್ತದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಈ ರೇಟಿಂಗ್ನ ಆಧಾರವಾಗಿ ಸಾಲಗಳನ್ನು ನೀಡಲು ನಿರ್ಧರಿಸಬಹುದು. ಇಲ್ಲಿ ಬ್ಯಾಂಕುಗಳು ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಆಧಾರವಾಗಿ ಸಾಲ ನೀಡುವುದಕ್ಕೆ ಇದನ್ನು ಹೋಲಿಸಬಹುದು.
ಅಮೆರಿಕಕ್ಕೆ ರೇಟಿಂಗ್ ಅನ್ನು ಎಎ1ಗೆ ಇಳಿಸಿರುವುದು ತೀರಾ ಆತಂಕದ ಸಂಗತಿಯಲ್ಲ. ಅಮೆರಿಕದ ಹಣಕಾಸು ನಿರ್ವಹಣೆಯ ಸದ್ಯದ ಸ್ಥಿತಿ ಗಮನಿಸಿದರೆ ದೀರ್ಘಾವಧಿಯಲ್ಲಿ ರಿಸ್ಕ್ ತುಸು ಹೆಚ್ಚಿರಬಹುದು ಎಂಬುದು ಇದರ ಎಚ್ಚರಿಕೆ.
ಮೂಡೀಸ್ನ ಈ ಕ್ರೆಡಿಟ್ ರೇಟಿಂಗ್ ಇಳಿಕೆ ನಿರ್ಧಾರವನ್ನು ಅಮೆರಿಕ ಸರ್ಕಾರ ಒಪ್ಪಿಲ್ಲ. ಇದೊಂದು ರಾಜಕೀಯ ನಿರ್ಧಾರ ಎಂದು ಹೇಳಿದೆ. ಮೂಡೀಸ್ ಅನಾಲಿಟಿಕ್ಸ್ ಸಂಸ್ಥೆಯ ಆರ್ಥಿಕ ತಜ್ಞ ಮಾರ್ಕ್ ಝಾಂಡಿ ಅವರು ಮೂಲತಃ ಟ್ರಂಪ್ ವಿರೋಧಿ. ಹೀಗಾಗಿ, ಅವರ ಅನಿಸಿಕೆ ಇಲ್ಲಿ ಅಪ್ರಸ್ತುತ ಎಂದು ಅಮೆರಿಕ ಅಧ್ಯಕ್ಷರ ವಕ್ತಾರರು ಹೇಳಿದ್ದಾರೆ.
ಇಲ್ಲಿ ಎಎಎನಿಂದ ಎ3ವರೆಗೆ ಇರುವ ರೇಟಿಂಗ್ಗಳು ಒಂದು ದೇಶದಲ್ಲಿನ ಹೂಡಿಕೆ ಕಡಿಮೆ ರಿಸ್ಕಿಯಾಗಿರಬಹುದು ಎಂಬುದನ್ನು ಸೂಚಿಸುತ್ತದೆ. ಬಿಎ1ನಿಂದ ಕೆಳಗಿರುವ ರೇಟಿಂಗ್ಗಳು ಅಧಿಕ ರಿಸ್ಕ್ ಅನ್ನು ಸೂಚಿಸುತ್ತದೆ.
ಇದನ್ನೂ ಓದಿ: ಪ್ಯಾನ್ ಸಂಖ್ಯೆ ರಹಸ್ಯ… 4 ಮತ್ತು 5ನೇ ಅಕ್ಷರಕ್ಕಿದೆ ಮಹತ್ವ; ವ್ಯಕ್ತಿಯಾ, ಸರ್ಕಾರವಾ, ಕಂಪನಿಯಾ ಗುರುತಿಸಲು ಸಾಧ್ಯ
ಮೂಡೀಸ್ ಸಂಸ್ಥೆ ಭಾರತಕ್ಕೆ ಬಿಎಎ3 ಎನ್ನುವ ರೇಟಿಂಗ್ ನೀಡಿದೆ. ಇದು ಹೈ ರಿಸ್ಕ್ ಮಟ್ಟಕ್ಕಿಂತ ಒಂದು ಹೆಜ್ಜೆ ಮೇಲಿರುವ ರೇಟಿಂಗ್.
ಪಾಕಿಸ್ತಾನವು ಸಿಎಎ2 ರೇಟಿಂಗ್ ಹೊಂದಿದೆ. ಬಹಳ ಕಡಿಮೆ ಗುಣಮಟ್ಟದ ಹಾಗೂ ಬಹಳ ರಿಸ್ಕಿ ಎನಿಸಿರುವ ಹೂಡಿಕೆ ಸ್ಥಳ ಎನಿಸಿದೆ. ಟರ್ಕಿ ದೇಶಕ್ಕೆ ಬಿ1 ರೇಟಿಂಗ್ ಇದೆ. ಇದೂ ಕೂಡ ಕಳಪೆಯೇ.
ಅತ್ಯುಚ್ಚ ಎಎಎ ರೇಟಿಂಗ್ ಇರುವ ದೇಶಗಳ ಪಟ್ಟಿ ಈ ಕೆಳಕಂಡಂತೆ ಇದೆ:
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ