AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಪಿಐ ಟ್ರಾನ್ಸಾಕ್ಷನ್​ಗೆ ಬಯೋಮೆಟ್ರಿಕ್ ಅಥೆಂಟಿಕೇಶನ್; ನವಿ ಆ್ಯಪ್​ನಲ್ಲಿ ಹೊಸ ಫೀಚರ್

Navi UPI introduces biometric authentication at Global Fintech Festival: ನವಿ ಆ್ಯಪ್​ನಲ್ಲಿ ಯುಪಿಐ ವಹಿವಾಟು ನಡೆಸುವಾಗ ಬಯೋಮೆಟ್ರಿಕ್ ದೃಢೀಕರಣ ನೀಡುವ ಹೊಸ ಫೀಚರ್ ಪರಿಚಯಿಸಲಾಗಿದೆ. ಮುಂಬೈನಲ್ಲಿ ನಡೆಯುತ್ತಿರುವ ಗ್ಲೋಬಲ್ ಫಿನ್​ಟೆಕ್ ಫೆಸ್ಟಿವಲ್​ನಲ್ಲಿ ನವಿ ಸಂಸ್ಥೆ ಇದನ್ನು ಘೋಷಿಸಿದೆ. ಬಯೋಮೆಟ್ರಿಕ್ ಅಥೆಂಟಿಕೇಶನ್ ಮಾತ್ರವಲ್ಲ, ಹೊಸ ಬಳಕೆದಾರರಿಗೆ ಅದರ ಆ್ಯಪ್ ಸ್ಥಾಪನೆ ಹಾಗೂ ಬಳಕೆಯ ಕ್ರಮವನ್ನೂ ಸರಳಗೊಳಿಸಿದೆ.

ಯುಪಿಐ ಟ್ರಾನ್ಸಾಕ್ಷನ್​ಗೆ ಬಯೋಮೆಟ್ರಿಕ್ ಅಥೆಂಟಿಕೇಶನ್; ನವಿ ಆ್ಯಪ್​ನಲ್ಲಿ ಹೊಸ ಫೀಚರ್
ನವಿ ಆ್ಯಪ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 09, 2025 | 1:12 PM

Share

ಮುಂಬೈ, ಅಕ್ಟೋಬರ್ 9: ಬೆಂಗಳೂರು ಮೂಲದ ನವಿ ಯುಪಿಐ ಸಂಸ್ಥೆ ಬಯೋಮೆಟ್ರಿಕ್ ಅಥೆಂಟಿಕೇಶನ್ (Biometric authentication) ಫೀಚರ್ ಅನ್ನು ಅನಾವರಣಗೊಳಿಸಿದೆ. ಹಾಗೆಯೇ, ಹೊಸ ಬಳಕೆದಾರರ ಸೇರ್ಪಡೆ ಕ್ರಮಗಳನ್ನೂ ಸರಳಗೊಳಿಸಿದೆ. ದೊಡ್ಡ ಮಟ್ಟದಲ್ಲಿ ಬಯೋಮೆಟ್ರಿಕ್ ಅನ್ನು ಪರಿಚಯಿಸಿದ ಮೊದಲ ಯುಪಿಐ ಆ್ಯಪ್ ಎನ್ನುವ ಹೆಗ್ಗಳಿಕೆ ನವಿಯದ್ದಾಗಿದೆ. ಈ ಹೊಸ ಫೀಚರ್​ನಿಂದ ಯುಪಿಐ ವಹಿವಾಟು ಹೆಚ್ಚು ಸುಲಭ ಮತ್ತು ಸುರಕ್ಷಿತವೆನಿಸುತ್ತದೆ. ಬಳಕೆದಾರರು ಟ್ರಾನ್ಸಾಕ್ಷನ್ ಮಾಡುವಾಗ ಪಿನ್ ನಮೂದಿಸುವ ಅವಶ್ಯಕತೆ ಇರುವುದಿಲ್ಲ. ಫೋನ್​ನಲ್ಲಿರುವ ಫಿಂಗರ್ ಪ್ರಿಂಟ್ ಅಥವಾ ಫೇಸ್ ರೆಕಗ್ನಿಶನ್ ಫೀಚರ್ ಬಳಸಿ ಟ್ರಾನ್ಸಾಕ್ಷನ್ ಅನ್ನು ದೃಢೀಕರಿಸುವ ಅವಕಾಶ ಸಿಗುತ್ತದೆ.

ಮುಂಬೈನಲ್ಲಿ ನಡೆಯುತ್ತಿರುವ ಗ್ಲೋಬಲ್ ಫಿನ್ಟೆಕ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ನವಿ ಆ್ಯಪ್ ತನ್ನ ಹೊಸ ಫೀಚರ್​​ಗಳನ್ನು ಪ್ರಕಟಿಸಿದೆ. ನವಿ ಮಾತ್ರವಲ್ಲ, ಫೋನ್ ಪೇ, ಪೇಟಿಎಂ ಇತ್ಯಾದಿ ವಿವಿಧ ಯುಪಿಐ ಆ್ಯಪ್​ಗಳೂ ಕೂಡ ಬಯೋಮೆಟ್ರಿಕ್ ದೃಢೀಕರಣದ ಫೀಚರ್ ಅಳವಡಿಸುತ್ತಿವೆ.

ಇದನ್ನೂ ಓದಿ: PM SVANidhi Scheme: ಸ್ವಂತ ಉದ್ಯೋಗಿಗಳಿಗೆ ನೆರವಾಗುವ ಪಿಎಂ ಸ್ವನಿಧಿ ಸ್ಕೀಮ್ ಬಗ್ಗೆ ಮಾಹಿತಿ

ಬಯೋಮೆಟ್ರಿಕ್ ಅಥೆಂಟಿಕೇಶನ್, ಸುಲಭ, ಕ್ಷಿಪ್ರ ಮತ್ತು ಸುರಕ್ಷಿತ ಪೇಮೆಂಟ್

ನವಿ ಆ್ಯಪ್ ತನ್ನಲ್ಲಿರುವ ಬಯೋಮೆಟ್ರಿಕ್ ದೃಢೀಕರಣದ ಫೀಚರ್ ಅನ್ನು ಸುರಕ್ಷಿತ ಹಾಗೂ ಸ್ವಂತ ಆಪರೇಟಿಂಗ್ ಸಿಸ್ಟಂ ಟೆಕ್ನಾಲಜಿಯಲ್ಲಿ ನಿರ್ಮಿಸಿದೆ. ಇದರಿಂದ ಯುಪಿಐ ಪೇಮೆಂಟ್ ಬಹಳ ವೇಗವಾಗಿ ಆಗುತ್ತದೆ. ಈ ದೃಢೀಕರಣವು ಫೋನ್​ನ ಸುರಕ್ಷಿತ ಪರಿಸರದೊಳಗೆಯೇ ನಡೆಯುವುದರಿಂದ ಖಾಸಗಿ ದತ್ತಾಂಶವು ಹೊರಗೆ ಹೋಗುವುದೇ ಇಲ್ಲ. ಹೀಗಾಗಿ, ನಿಮ್ಮ ವಹಿವಾಟು ಬಹಳ ಸುರಕ್ಷಿತವಾಗಿರುತ್ತದೆ ಎಂದು ಹೇಳಲಾಗುತ್ತದೆ.

ನವಿ ಆ್ಯಪ್​ನಲ್ಲಿ ಈ ಫೀಚರ್ ಬಳಕೆ ಐಚ್ಛಿಕವಾಗಿರುತ್ತದೆ. ಬಯೋಮೆಟ್ರಿಕ್ ಅಥೆಂಟಿಕೇಶನ್ ಫೀಚರ್ ಅನ್ನು ಯಾವಾಗ ಬೇಕಾದರೂ ಎನೇಬಲ್ ಅಥವಾ ಡಿಸೇಬಲ್ ಮಾಡಲು ಅವಕಾಶ ಇರುತ್ತದೆ. ಈ ಫೀಚರ್ ಜೊತೆಗೆ ಪಿನ್ ನಮೂದಿಸುವ ಫೀಚರ್ ಕೂಡ ಇರುತ್ತದೆ. ಬಳಕೆದಾರರು ಎರಡರಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಂಡು ಟ್ರಾನ್ಸಾಕ್ಷನ್ ಮಾಡಬಹುದು.

ಇದನ್ನೂ ಓದಿ: ಯುಪಿಐ ಅಪ್​ಡೇಟ್; ಪೇಮೆಂಟ್​ಗೆ ಪಿನ್ ನೀಡಬೇಕಿಲ್ಲ; ಬಳಕೆದಾರರಿಗೆ ಹೆಚ್ಚಿನ ಆಯ್ಕೆ

ನವಿ ಆ್ಯಪ್ ಸ್ಥಾಪಿಸುವ ಕ್ರಮ ಬಹಳ ಸರಳ

ನವಿ ಆ್ಯಪ್ ಹೊಸ ಬಳಕೆದಾರರಿಗೆ ಸುಗಮ ದಾರಿ ಮಾಡಿಕೊಟ್ಟಿದೆ. ಆ್ಯಪ್ ಡೌನ್​ಲೋಡ್ ಮಾಡಿ ನೊಂದಣಿ ಮಾಡಿಕೊಂಡು ಟ್ರಾನ್ಸಾಕ್ಷನ್ ಮಾಡುವ ಕಾರ್ಯವನ್ನು ಬಹಳ ಕ್ಷಿಪ್ರವಾಗಿ ಆಗುವಂತೆ ಕ್ರಮಗಳನ್ನು ಸರಳಗೊಳಿಸಲಾಗಿದೆ.

‘ಸುರಕ್ಷತೆ ಮತ್ತು ಸರಳತೆ ನಮ್ಮ ಉತ್ಪನ್ನ ತತ್ವದ ಪ್ರಮುಖ ಅಂಶಗಳಾಗಿವೆ. ಈ ಹೊಸ ಫೀಚರ್ಗಳಿಂದ ಡಿಜಿಟಲ್ ಪೇಮೆಂಟ್ಸ್​ನಲ್ಲಿ ನಾವು ವಿಶ್ವಾಸಾರ್ಹತೆಗೆ ಹೊಸ ಮಾನದಂಡ ನೀಡುತ್ತಿದ್ದೇವೆ’ ಎಂದು ನವಿ ಲಿಮಿಟೆಡ್ ಕಂಪನಿಯ ಎಂಡಿ ಮತ್ತು ಸಿಇಒ ರಾಜೀವ್ ನರೇಶ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!