GST On Crypto: ಕ್ರಿಪ್ಟೋಗಳ ಮೇಲಿನ ತೆರಿಗೆ ಹಾಕುವುದನ್ನು ಮುಂದೂಡುವಂತೆ ಅಧಿಕಾರಿಗಳ ಸೂಚನೆ

ಕ್ರಿಪ್ಟೋಕರೆನ್ಸಿಗಳ ಮೇಲಿನ ತೆರಿಗೆ ಹಾಕುವ ನಿರ್ಧಾರ ಮುಂದೂಡುವಂತೆ ಜಿಎಸ್​ಟಿ ಸಮಿತಿಗೆ ಅಧಿಕಾರಿಗಳು ಕೇಳಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

GST On Crypto: ಕ್ರಿಪ್ಟೋಗಳ ಮೇಲಿನ ತೆರಿಗೆ ಹಾಕುವುದನ್ನು ಮುಂದೂಡುವಂತೆ ಅಧಿಕಾರಿಗಳ ಸೂಚನೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jun 24, 2022 | 2:11 PM

ಜಿಎಸ್​ಟಿ (GST) ಸಮಿತಿಯಲ್ಲಿನ ಅಧಿಕಾರಿಗಳು ಜಿಎಸ್​ಟಿ ಸಮಿತಿಗೆ ಕ್ರಿಪ್ಟೋಕರೆನ್ಸಿ ಮತ್ತು ಇತರ ವರ್ಚುವಲ್ ಡಿಜಿಟಲ್ ಆಸ್ತಿಗಳ ತೆರಿಗೆ ಬಗ್ಗೆ ನಿರ್ಧಾರವನ್ನು ಮುಂದೂಡಲು ಸೂಚನೆ ನೀಡಿದೆ. ಜಿಎಸ್​ಟಿ ಸಮಿತಿಗೆ ಫಿಟ್‌ಮೆಂಟ್ ಸಮಿತಿಯು ತನ್ನ ವರದಿಯಲ್ಲಿ, ಕ್ರಿಪ್ಟೋಕರೆನ್ಸಿಯ ನಿಯಂತ್ರಣದ ಕುರಿತಾದ ಕಾನೂನನ್ನು ನಿರೀಕ್ಷಿಸುತ್ತಿದೆ ಮತ್ತು ಸರಕುಗಳು ಅಥವಾ ಸೇವೆಗಳ ವರ್ಗೀಕರಣವನ್ನು ಹೊರತುಪಡಿಸಿ ಕ್ರಿಪ್ಟೋ-ಪರಿಸರ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲ ಸಂಬಂಧಿತ ಸರಬರಾಜುಗಳನ್ನು ಗುರುತಿಸುವುದು ಅತ್ಯಗತ್ಯ ಎಂದು ಸೂಚಿಸಿದೆ.

ಫಿಟ್‌ಮೆಂಟ್ ಸಮಿತಿ ಎಂದು ಕರೆಯುವ ಕೇಂದ್ರ ಮತ್ತು ರಾಜ್ಯಗಳ ಅಧಿಕಾರಿಗಳ ಸಮಿತಿಯು ಕ್ರಿಪ್ಟೋ ಪರಿಸರ ವ್ಯವಸ್ಥೆಯಲ್ಲಿ ಒಳಗೊಂಡಿರುವ ಸಮಸ್ಯೆಗಳ ಬಗ್ಗೆ ಆಳವಾದ ಅಧ್ಯಯನದ ಅಗತ್ಯವಿದೆ ಎಂದು ಭಾವಿಸಿದೆ. ಹರಿಯಾಣ ಮತ್ತು ಕರ್ನಾಟಕವು ಎಲ್ಲ ಅಂಶಗಳನ್ನು ಅಧ್ಯಯನ ಮಾಡಲು ಮತ್ತು ನಿಗದಿತ ಸಮಯದಲ್ಲಿ ಫಿಟ್‌ಮೆಂಟ್ ಸಮಿತಿಯ ಮುಂದೆ ಅಧ್ಯಯನ ವರದಿಯನ್ನು ಸಲ್ಲಿಸಲು ನಿರ್ಧರಿಸಲಾಗಿದೆ.

ಜಿಎಸ್​ಟಿಯ ವ್ಯಾಪ್ತಿಯಲ್ಲಿರುವ ಕ್ರಿಪ್ಟೋ-ಪರಿಸರ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲ ಸಂಬಂಧಿತ ಸರಬರಾಜುಗಳನ್ನು ಗುರುತಿಸುವ ಅಗತ್ಯವಿದೆ ಎಂದು ಸಮಿತಿ ಭಾವಿಸಿದೆ; ಆ ಚಟುವಟಿಕೆಗಳು ಸರಕು ಅಥವಾ ಸೇವೆಗಳಾಗಿದ್ದರೂ ಅವುಗಳ ಸ್ವಭಾವ ಮತ್ತು ಅವುಗಳ ಅನ್ವಯವಾಗುವ ದರವನ್ನು ಗುರುತಿಸಬೇಕು. ಆದ್ದರಿಂದ ಸಮಿತಿಯು ತನ್ನ ಮುಂದಿನ ಸಭೆಯಲ್ಲಿ ಜೂನ್ 28-29ರಂದು ಕ್ರಿಪ್ಟೋಕರೆನ್ಸಿಯ ತೆರಿಗೆ ನಿರ್ಧಾರವನ್ನು ಮುಂದೂಡುವಂತೆ ಸಲಹೆ ನೀಡಿದೆ.

2022-23ರ ಬಜೆಟ್​ನಲ್ಲಿ ಕ್ರಿಪ್ಟೋ ಸ್ವತ್ತುಗಳ ಮೇಲಿನ ಆದಾಯ ತೆರಿಗೆ ವಿಧಿಸುವುದಕ್ಕೆ ಸಂಬಂಧಿಸಿದಂತೆ ಸ್ಪಷ್ಟತೆಯನ್ನು ತಂದಿದೆ. ಆದರೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಡೆಯಿಂದ ಕ್ರಿಪ್ಟೋಕರೆನ್ಸಿಯ ವರ್ಗೀಕರಣವು ಸರಕು ಅಥವಾ ಸೇವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕುದುರೆ ರೇಸ್ ಅಥವಾ ಇತರ ಸಟ್ಟಾ ವಹಿವಾಟುಗಳಿಂದ ಬರುವ ಆದಾಯದಂತೆ ಪರಿಗಣಿಸಿ, ಏಪ್ರಿಲ್ 1ರಿಂದ ಶೇ 30ರ ಆದಾಯ ತೆರಿಗೆ ಮತ್ತು ಸೆಸ್ ಹಾಗೂ ಹೆಚ್ಚುವರಿ ಶುಲ್ಕಗಳನ್ನು ವಿಧಿಸಲಾಗುತ್ತದೆ.

ವರ್ಚುವಲ್ ಕರೆನ್ಸಿಗಳಿಗೆ ರೂ. 10,000ಕ್ಕಿಂತ ಹೆಚ್ಚಿನ ಪಾವತಿಗಳ ಮೇಲೆ ಶೇ 1ರ ಟಿಡಿಎಸ್ ಅನ್ನು ಸಹ ಪರಿಚಯಿಸಲಾಗಿದ್ದು, ಇದು ಜುಲೈ 1ರಿಂದ ಪ್ರಾರಂಭವಾಗಲಿದೆ. ಟಿಡಿಎಸ್‌ನ ಮಿತಿಯು ನಿರ್ದಿಷ್ಟ ವ್ಯಕ್ತಿಗಳಿಗೆ ವರ್ಷಕ್ಕೆ ರೂ. 50,000 ಆಗಿರುತ್ತದೆ, ಇದರಲ್ಲಿನ ವ್ಯಕ್ತಿಗಳು/ಎಚ್‌ಯುಎಫ್‌ಗಳು ಖಾತೆಗಳನ್ನು ಆದಾಯ-ತೆರಿಗೆ ಕಾಯ್ದೆ ಅಡಿಯಲ್ಲಿ ಆಡಿಟ್ ಮಾಡಲಾಗುತ್ತದೆ. ಪಿಟಿಐ

ಇದನ್ನೂ ಓದಿ: Cryptocurrencies: ಬಿಟ್​ಕಾಯಿನ್ ಸೇರಿದಂತೆ ಕ್ರಿಪ್ಟೋಕರೆನ್ಸಿಗಳ ಮೇಲೆ ಶೇ 28ರಷ್ಟು ಜಿಎಸ್​ಟಿ ವಿಧಿಸುವ ಪ್ರಸ್ತಾವ

Published On - 2:11 pm, Fri, 24 June 22

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ