ಐಐಟಿ ಬಾಂಬೆಯ 25 ವಿದ್ಯಾರ್ಥಿಗಳಿಗೆ 1 ಕೋಟಿ ರೂ. ವೇತನದ ಉದ್ಯೋಗದ ಆಫರ್
1,500 ಆಫರ್ಗಳ ಪೈಕಿ 25 ಮಂದಿಗೆ ವಾರ್ಷಿಕ 1 ಕೋಟಿ ರೂಪಾಯಿಗೂ ಹೆಚ್ಚು ವೇತನದ ಆಫರ್ ದೊರೆತಿದೆ. ಈ ವಿದ್ಯಾರ್ಥಿಗಳು ಆಫರ್ ಅನ್ನು ಸ್ವೀಕರಿಸಿದ್ದಾರೆ.
ಮುಂಬೈ: ಬಾಂಬೆ ಐಐಟಿಯ (Bombay IIT) ಅಂತಿಮ ವರ್ಷದ ವಿದ್ಯಾರ್ಥಿಗಳ ಪೈಕಿ 25 ಮಂದಿಗೆ ವಾರ್ಷಿಕ 1 ಕೋಟಿ ರೂಪಾಯಿಗೂ ಹೆಚ್ಚು ವೇತನದ ಉದ್ಯೋಗದ ಆಫರ್ (Job Offer) ದೊರೆತಿದೆ. ಐಐಟಿಯಲ್ಲಿ ನಡೆಯುತ್ತಿರುವ ಉದ್ಯೋಗ ಮೇಳದಲ್ಲಿ ರಿಲಯನ್ಸ್, ಅದಾನಿ ಗ್ರೂಪ್, ಟಾಟಾ ಗ್ರೂಪ್ ಸೇರಿದಂತೆ ಅನೇಕ ಕಂಪನಿಗಳು ಅಭ್ಯರ್ಥಿಗಳ ಹುಡುಕಾಟದಲ್ಲಿವೆ. 9 ದಿನಗಳ ಬಳಿಕ ಒಟ್ಟು 1,500 ಉದ್ಯೋಗದ ಆಫರ್ ದೊರೆತಿದೆ ಎಂದು ಮಾಧ್ಯಮ ವರದಿ ತಿಳಿಸಿದೆ. ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳೂ ಸೇರಿದಂತೆ 44 ಕಂಪನಿಗಳು ಉದ್ಯೋಗ ಮೇಳದಲ್ಲಿ ನೋಂದಣಿ ಮಾಡಿಕೊಂಡಿವೆ. ಟಿಎಸ್ಎಂಸಿ, ಮೆಕ್ಕಿನ್ಸೆ ಆ್ಯಂಡ್ ಕಂಪನಿ, ಅಮೆರಿಕನ್ ಎಕ್ಸ್ಪ್ರೆಸ್, ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್, ಹೋಂಡಾ ಜಪಾನ್, ಮೋರ್ಗನ್ ಸ್ಟ್ಯಾನ್ಲಿ ಹಾಗೂ ಸ್ಪ್ರಿಂಕ್ಲರ್ ಕೂಡ ಅಭ್ಯರ್ಥಿಗಳ ಹುಟುಕಾಟದಲ್ಲಿವೆ.
1,500 ಆಫರ್ಗಳ ಪೈಕಿ 25 ಮಂದಿಗೆ ವಾರ್ಷಿಕ 1 ಕೋಟಿ ರೂಪಾಯಿಗೂ ಹೆಚ್ಚು ವೇತನದ ಆಫರ್ ದೊರೆತಿದೆ. ಈ ವಿದ್ಯಾರ್ಥಿಗಳು ಆಫರ್ ಅನ್ನು ಸ್ವೀಕರಿಸಿದ್ದಾರೆ ಎಂದು ‘ಬ್ಯುಸಿನೆಸ್ ಟುಡೇ’ ವರದಿ ತಿಳಿಸಿದೆ. 2021-22ರಲ್ಲಿ ಅಂತಾರಾಷ್ಟ್ರೀಯ ಮಟ್ಟದ 66 ಆಫರ್ಗಳು ದೊರೆತಿದ್ದವು. ಆದರೆ ಈ ಬಾರಿ 9ನೇ ದಿನದವರೆಗಿನ ಲೆಕ್ಕಾಚಾರದ ಪ್ರಕಾರ ಅಂತಾರಾಷ್ಟ್ರೀಯ ಮಟ್ಟದ 71 ಆಫರ್ಗಳು ದೊರೆತಿವೆ ಎಂದು ಬಾಂಬೆ ಐಐಟಿಯ ಉದ್ಯೋಗ ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Union Budget 2023-24: ತೆರಿಗೆ ವಿನಾಯಿತಿ ಮಿತಿ 5 ಲಕ್ಷ ರೂ.ಗೆ ಸಾಧ್ಯತೆ; ವರದಿ
ಅಂತಾರಾಷ್ಟ್ರೀಯ ಮಟ್ಟದ ಹೆಚ್ಚಿನ ಆಫರ್ಗಳು ಜಪಾನ್, ತೈವಾನ್, ದಕ್ಷಿಣ ಕೊರಿಯಾ, ಸಿಂಗಾಪುರ ಮತ್ತು ಇತರ ದೇಶಗಳ ಕಂಪನಿಗಳದ್ದಾಗಿತ್ತು ಎಂದು ಉದ್ಯೋಗ ಸಮಿತಿ ಸದಸ್ಯರು ಮಾಹಿತಿ ನೀಡಿದ್ದಾರೆ. 2021-22ರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹೆಚ್ಚಿನ ಆಫರ್ಗಳು ಅಮೆರಿಕ, ನೆದರ್ಲೆಂಡ್ಸ್ ಹಾಗೂ ಯುಎಇಗಳಿಂದ ಬಂದಿದ್ದವು ಎಂದು ಅವರು ಹೇಳಿದ್ದಾರೆ.
ಒಟ್ಟು 1,200ಕ್ಕೂ ಹೆಚ್ಚು ಮಂದಿಗೆ ಉದ್ಯೋಗ
1,500 ಒಟ್ಟು ಉದ್ಯೋಗದ ಆಫರ್ಗಳ ಪೈಕಿ 1,224 ಆಫರ್ಗಳು ಸ್ವೀಕೃತಗೊಂಡಿವೆ. ಅಂತಾರಾಷ್ಟ್ರೀಯ ಮಟ್ಟದ 71 ಆಫರ್ಗಳ ಪೈಕಿ 63 ಸ್ವೀಕೃತಗೊಂಡಿವೆ. ಅನೇಕ ವಿದ್ಯಾರ್ಥಿಗಳಿಗೆ ಒಂದಕ್ಕಿಂತ ಹೆಚ್ಚು ಆಫರ್ಗಳು ದೊರೆತಿದ್ದವು. ಹೀಗಾಗಿ ಅವರು ಆಯ್ಕೆ ಮಾಡಿ ಬಿಟ್ಟ ಕಾರಣ ಎಲ್ಲ ಆಫರ್ಗಳು ಸ್ವೀಕೃತವಾಗಿಲ್ಲ ಎಂದು ವರದಿ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ