OnePlus 10R: ಒನ್​ಪ್ಲಸ್ 10 ಪ್ರೊ ಆಯ್ತು ಈಗ ಒನ್​ಪ್ಲಸ್ 10R ಸರದಿ: ಇದರಲ್ಲಿನ ಫೀಚರ್ಸ್​ ಕೇಳಿದ್ರೆ ಶಾಕ್ ಆಗ್ತೀರ

ಒನ್‌ಪ್ಲಸ್‌ 10R ಸ್ಮಾರ್ಟ್‌ಫೋನ್‌ ದೀರ್ಘ ಸಮಯ ಬಾಳಿಕೆ ಬರುವ 4500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ ಎಂಬ ಮಾತಿದೆ. ಇದಕ್ಕೆ ಅನುಕೂಲವಾಗಿ ಬರೋಬ್ಬರಿ 150W ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ. 80W ಚಾರ್ಜಿಂಗ್ ಆಯ್ಕೆಯೂ ಸಹ ಲಭ್ಯವಿರುತ್ತದೆ. 1080 x 2412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿರಲಿದೆ ಎನ್ನಲಾಗಿದೆ.

OnePlus 10R: ಒನ್​ಪ್ಲಸ್ 10 ಪ್ರೊ ಆಯ್ತು ಈಗ ಒನ್​ಪ್ಲಸ್ 10R ಸರದಿ: ಇದರಲ್ಲಿನ ಫೀಚರ್ಸ್​ ಕೇಳಿದ್ರೆ ಶಾಕ್ ಆಗ್ತೀರ
OnePlus 10R
Edited By:

Updated on: Oct 08, 2026 | 12:58 PM

ಪ್ರಸಿದ್ಧ ಒನ್​ಪ್ಲಸ್ ಕಂಪನಿ ಭಾರತದಲ್ಲಿ ತಿಂಗಳಿಗೆ ಒಂದರಂತೆ ಹೊಸ ಹೊಸ ಆಕರ್ಷಕ ಸ್ಮಾರ್ಟ್​​ಫೋನ್​ಗಳನ್ನು (Smartphone) ಬಿಡುಗಡೆ ಮಾಡುತ್ತಿದೆ. ಕಳೆದ ತಿಂಗಳು ದೇಶದಲ್ಲಿ ಬಿಡುಗಡೆ ಮಾಡಿದ್ದ ಬಹುನಿರೀಕ್ಷಿತ ಒನ್​ಪ್ಲಸ್ 10 ಪ್ರೊ 5ಜಿ (OnePlus 10 Pro 5G) ಸ್ಮಾರ್ಟ್​​ಫೋನ್ ಈಗ ಖರೀದಿಗೆ ಸಿಗುತ್ತಿದ್ದು ಧೂಳೆಬ್ಬಿಸುತ್ತಿದೆ. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಹೊಸ ಮೊಬೈಲ್ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಅದುವೇ ಒನ್‌ಪ್ಲಸ್‌ 10ಆರ್ (OnePlus 10R). ಈ ಸ್ಮಾರ್ಟ್‌ಫೋನ್‌ ಇದೇ ಏಪ್ರಿಲ್ 28 ರಂದು ಸಂಜೆ 7 ಗಂಟೆಗೆ ಲಾಂಚ್‌ ಈವೆಂಟ್‌ ನಡೆಸಿ ಭಾರತದಲ್ಲಿ ಅನಾವರಣಗೊಳ್ಳಲಿದೆ ಎಂದು ಕಂಪನಿ ಹೇಳಿಕೆ ಬಿಡುಗಡೆ ಮಾಡಿದೆ. ಈ ಫೋನಿನ ಫೀಚರ್ಸ್​ ಬಗ್ಗೆ ಕಂಪನಿ ಇದುವರೆಗೆ ಅಧಿಕೃತ ಮಾಹಿತಿ ಹೊರಹಾಕಿಲ್ಲ. ಆದರೆ, ಮೂಲಗಳಿಂದ ಕೆಲ ವಿಚಾರ ತಿಳಿದಿದ್ದಿ ಅಚ್ಚರಿ ಮೂಡಿಸುವಂತಿದೆ.

ಒನ್‌ಪ್ಲಸ್‌ 10R ಸ್ಮಾರ್ಟ್‌ಫೋನ್‌ ದೀರ್ಘ ಸಮಯ ಬಾಳಿಕೆ ಬರುವ 4500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ ಎಂಬ ಮಾತಿದೆ. ಇದಕ್ಕೆ ಅನುಕೂಲವಾಗಿ ಬರೋಬ್ಬರಿ 150W ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ. 80W ಚಾರ್ಜಿಂಗ್ ಆಯ್ಕೆಯೂ ಸಹ ಲಭ್ಯವಿರುತ್ತದೆ. 1080 x 2412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿರಲಿದೆ ಎನ್ನಲಾಗಿದೆ.

ಪ್ರಮುಖವಾಗಿ ಈ ಸ್ಮಾರ್ಟ್‌ಫೋನ್​ಗೆ ಮೀಡಿಯಾಟೆಕ್‌ ಡೈಮೆನ್ಸಿಟಿ 8100-MAX ಪ್ರೊಸೆಸರ್‌ ಅಳವಡಿಸಲಾಗಿದೆಯಂತೆ. ಇದು ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿರಲಿದೆ.

ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್‌, ಎರಡನೇ ಕ್ಯಾಮೆರಾ 8 MP ಸೆನ್ಸಾರ್‌ ಹೊಂದಿದೆ. ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿರಲಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.  ಒನ್‌ಪ್ಲಸ್‌ 10R ಸ್ಮಾರ್ಟ್‌ಫೋನ್‌ ಇದೇ ಏಪ್ರಿಲ್ 28 ರಂದು ಬಿಡುಗಡೆಯಾಗಲಿದೆ. ಇದು ಯಾವ ಕಲರ್‌ ಆಯ್ಕೆಗಳಲ್ಲಿ ಬರಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹಾಗಾಯೆ ಈ ಸ್ಮಾರ್ಟ್‌ಫೋನಿನ ನಿಖರ ಬೆಲೆ ಕೂಡ ಬಹಿರಂಗವಾಗಿಲ್ಲ. ಆದರೆ, 40,000-45,000 ರೂ. ಒಳಗೆ ಇರಬಹುದು ಎಂದು ಹೇಳಲಾಗಿದೆ.

Published On - 3:02 pm, Tue, 19 April 22

TV9 Web

TV9 Kannada

Read More
Loading...
Unable to load recommendations.
Follow Us