ಪ್ರಭುದೇವ ಜೊತೆ ಡ್ಯಾನ್ಸ್ ಮಾಡಿ ಥ್ರಿಲ್ ಆದ ಸನ್ನಿ ಲಿಯೋನಿ
New Passport Rules: ಪಾಸ್ಪೋರ್ಟ್ ವೆರಿಫಿಕೇಶನ್ಗೆ ಡಿಜಿಲಾಕರ್ ಕಡ್ಡಾಯ; ಏನಿದು ಹೊಸ ನಿಯಮ, ಇಲ್ಲಿದೆ ಡೀಟೇಲ್ಸ್
Digilocker and Passport: ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸುವವರು ತಮ್ಮ ದಾಖಲೆಗಳ ವೆರಿಫಿಕೇಶನ್ಗೆ ಡಿಜಿಲಾಕರ್ ಉಪಯೋಗಿಸುವುದನ್ನು ಕಡ್ಡಾಯ ಮಾಡಲಾಗಿದೆ. ಅರ್ಜಿದಾರರು ಅಗತ್ಯ ದಾಖಲೆಗಳನ್ನು ಮೊದಲು ಡಿಜಿಲಾಕರ್ಗೆ ಹಾಕಿ ಬಳಿಕ ಅರ್ಜಿ ಸಲ್ಲಿಸಬೇಕು.
ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸುವವರು ಗಮನಿಸಬೇಕಾದ ಸುದ್ದಿ. ನೀವು ಪಾಸ್ಪಾರ್ಟ್ಗೆ ಅರ್ಜಿ ಸಲ್ಲಿಸುವಾಗ ಡಿಜಿಲಾಕರ್ ಅಕೌಂಟ್ (Digi locker account) ರಚಿಸಬೇಕಾಗುತ್ತದೆ. ಅದರಲ್ಲೂ ವೆರಿಫಿಕೇಶನ್ಗಳಿಗೆ ಆಧಾರ್ ಅನ್ನು ಬಳಸುವ ಪಾಸ್ಪೋರ್ಟ್ ಅರ್ಜಿದಾರರು ಡಿಜಿಲಾಕರ್ ಖಾತೆ ಹೊಂದಿರುವುದು ಕಡ್ಡಾಯವಾಗಿದೆ. ವರದಿಗಳ ಪ್ರಕಾರ ಪಾಸ್ಪೋರ್ಟ್ ಅರ್ಜಿ ಸಲ್ಲಿಕೆಗೆ ಬೇಕಾದ ಎಲ್ಲಾ ದಾಖಲೆಗಳನ್ನು ಮೊದಲು ಡಿಜಿಲಾಕರ್ಗೆ ಅಪ್ಲೋಡ್ ಮಾಡಬೇಕು. ಆ ಬಳಿಕವಷ್ಟೇ ಪಾಸ್ಪೋರ್ಟ್ ವೆಬ್ಸೈಟ್ಗೆ ಹೋಗಿ ಅರ್ಜಿ ಸಲ್ಲಿಸಬೇಕು.
ಡಿಜಿಲಾಕರ್ಗೆ ದಾಖಲೆಗಳನ್ನು ಅಪ್ಲೋಡ್ ಮಾಡಿದವರು, ಅದರ ಹಾರ್ಡ್ ಕಾಪಿಗಳನ್ನು ತೆಗೆದುಕೊಂಡು ಹೋಗುವ ಅವಶ್ಯಕತೆ ಇರುವುದಿಲ್ಲ. ಇದರಿಂದ ಪಾಸ್ಪೋರ್ಟ್ ಅರ್ಜಿ ಪ್ರಕ್ರಿಯೆ ಬಹಳ ಸುಗಮವಾಗಿ ನಡೆಯುತ್ತದೆ. ಸಮಯವೂ ಬಹಳ ಮಿಗುತ್ತದೆ.
ಕಾಗದ ರೂಪದ ಭೌತಿಕ ದಾಖಲೆಗಳ ವೆರಿಫಿಕೇಶನ್ ಕಾರ್ಯವನ್ನು ಸಾಧ್ಯವಾದಷ್ಟೂ ತಗ್ಗಿಸುವ ಉದ್ದೇಶದಿಂದ ಪಾಸ್ಪೋರ್ಟ್ ಸೇವಾ ಕೇಂದ್ರಗಳು ಹಾಗೂ ಅಂಚೆ ಕಚೇರಿ ಪಾಸ್ಪೋರ್ಟ್ ಸೇವಾ ಕೇಂದ್ರಗಳನ್ನು (POPSK) ಜಾರಿಗೆ ತರಲಾಗಿದೆ.
ಡಿಜಿಲಾಕರ್ ಎಂದರೇನು?
ಇದು ಒಂದು ರೀತಿಯಲ್ಲಿ ಡಿಜಿಟಲ್ ರೂಪದಲ್ಲಿ ದಾಖಲೆಗಳನ್ನು ಇಟ್ಟುಕೊಳ್ಳುವುದು. ಆಧಾರ್ ಕಅರ್ಡ್, ಡಿಎಲ್, ಆರ್ಸಿ ಇತ್ಯಾದಿ ಸರ್ಕಾರದಿಂದ ನೀಡಲಾಗುವ ಬಹುತೇಕ ಪ್ರಮುಖ ದಾಖಲೆಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಡಿಜಿಲಾಕರ್ನಲ್ಲಿ ಕ್ಷೇಮವಾಗಿ ಇಟ್ಟುಕೊಳ್ಳಬಹುದು. ಹಾರ್ಡ್ ಕಾಪಿ ಇಟ್ಟುಕೊಳ್ಳುವ ಅವಶ್ಯಕತೆ ಇರುವುದಿಲ್ಲ.
ಡಿಜಿಲಾಕರ್ ಖಾತೆಯನ್ನು ಆಧಾರ್ ಹೊಂದಿರುವ ಯಾರು ಬೇಕಾದರೂ ಅರಂಭಿಸಬಹುದು. ಆಧಾರ್ಗೆ ಜೋಡಿತವಾಗಿರುವ ಮೊಬೈಲ್ ನಂಬರ್ಗೆ ಒಟಿಪಿ ಪಡೆದು ಆ ಮೂಲಕ ಡಿಜಿಲಾಕರ್ ಖಾತೆಗೆ ಲಾಗಿನ್ ಆಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ