ಮನೆ ತೆರಿಗೆಯಲ್ಲಿ ಎಷ್ಟು ವಿಧಗಳಿವೆ? ಲೆಕ್ಕ ಹಾಕುವ, ವಿವರ ಸಲ್ಲಿಸುವ ವಿಧಾನಗಳು ಇಲ್ಲಿವೆ

| Updated By: Ganapathi Sharma

Updated on: Nov 10, 2022 | 12:08 PM

ಮನೆ ತೆರಿಗೆ ಲೆಕ್ಕ ಹಾಕಲು ಎಷ್ಟು ವಿಧಾನಗಳಿವೆ? ಯಾವುದರ ಆಧಾರದಲ್ಲಿ ತೆರಿಗೆ ಲೆಕ್ಕಹಾಕಲಾಗುತ್ತದೆ? ತೆರಿಗೆ ವಿವರ ಸಲ್ಲಿಸುವುದು ಹಾಗೂ ಪಾವತಿಸುವುದು ಹೇಗೆ? ಇಲ್ಲಿದೆ ಪೂರ್ಣ ವಿವರ.

ಮನೆ ತೆರಿಗೆಯಲ್ಲಿ ಎಷ್ಟು ವಿಧಗಳಿವೆ? ಲೆಕ್ಕ ಹಾಕುವ, ವಿವರ ಸಲ್ಲಿಸುವ ವಿಧಾನಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
Follow us on

ಆಸ್ತಿ ಅಥವಾ ಮನೆ (House) ಖರೀದಿ ದೊಡ್ಡ ಮಟ್ಟದ ಬಂಡವಾಳ ಹೂಡಿಕೆ (Capital Investment) ಪ್ರಕ್ರಿಯೆಯಾಗಿದ್ದು, ದೊಡ್ಡ ಮೊತ್ತ ವ್ಯಯಿಸಬೇಕಾಗುತ್ತದೆ. ಮನೆ ಖರೀದಿಸಿದ ನಂತರವೂ ಅದರ ನಿರ್ವಹಣೆಗಾಗಿ ಅಥವಾ ಅದಕ್ಕೊಂದು ಚೆಂದದ ರೂಪ ಕೊಡುವುದಕ್ಕಾಗಿ ಸಾಕಷ್ಟು ಖರ್ಚು ಮಾಡಬೇಕಾಗುತ್ತದೆ. ಸುಣ್ಣ, ಬಣ್ಣ ಬಳಿಯಬೇಕಾಗುತ್ತದೆ. ಒಳಾಂಗಣ ವಿನ್ಯಾಸಕ್ಕೂ ಖರ್ಗು ತಗಲುತ್ತದೆ. ಇವೆಲ್ಲದರ ಹೊರತಾಗಿ, ಮನೆ ಮಾಲೀಕ ಸಂಬಂಧಪಟ್ಟ ಆಡಳಿತಕ್ಕೆ ಮನೆ ತೆರಿಗೆ (House Tax) ಅಥವಾ ಆಸ್ತಿ ತೆರಿಗೆ (Property Tax) ಪಾವತಿಸಬೇಕಾಗುತ್ತದೆ. ಮನೆ ತೆರಿಗೆ ಲೆಕ್ಕ ಹಾಕಲು ಎಷ್ಟು ವಿಧಾನಗಳಿವೆ? ಯಾವುದರ ಆಧಾರದಲ್ಲಿ ತೆರಿಗೆ ಲೆಕ್ಕಹಾಕಲಾಗುತ್ತದೆ? ತೆರಿಗೆ ವಿವರ ಸಲ್ಲಿಸುವುದು ಹಾಗೂ ಪಾವತಿಸುವುದು ಹೇಗೆ? ಇಲ್ಲಿದೆ ಪೂರ್ಣ ವಿವರ.

ಏನಿದು ಮನೆ ತೆರಿಗೆ?

ಉದ್ಯಾನವನಗಳು, ಒಳಚರಂಡಿ ವ್ಯವಸ್ಥೆ, ರಸ್ತೆಗಳು, ಬೀದಿ ದೀಪಗಳಂತಹ ನಾಗರಿಕ ಸೌಲಭ್ಯಗಳು, ಸೇವೆಗಳು ಇತರ ಸೌಲಭ್ಯಗಳನ್ನು ಒದಗಿಸುವುದಕ್ಕಾಗಿ ಸ್ಥಳೀಯಾಡಳಿತಗಳು ಆಸ್ತಿ ತೆರಿಗೆ ಸಂಗ್ರಹಿಸುತ್ತವೆ. ಆಸ್ತಿಯ ಮಾಲೀಕನಿಗೆ ತೆರಿಗೆ ವಿಧಿಸಲಾಗುತ್ತದೆ. ಭಾರತದಲ್ಲಿ ನಿವಾಸದ ಪಕ್ಕದಲ್ಲಿರುವ ಖಾಲಿ ನಿವೇಶನಗಳಿಗೆ ತೆರಿಗೆ ವಿಧಿಸುವುದಿಲ್ಲ. ಆಸ್ತಿ ತೆರಿಗೆಯನ್ನು ಸ್ಥಳೀಯಾಡಳಿತಗಳು ಸಂಗ್ರಹಿಸುವುದರಿಂದ ತೆರಿಗೆ ದರ ಆಯಾ ರಾಜ್ಯ, ನಗರ, ಪಟ್ಟಣ ಹಾಗೂ ವಲಯಗಳಿಗೆ ಅನುಗುಣವಾಗಿ ವ್ಯತ್ಯಾಸವಿರುತ್ತದೆ.

ಇದನ್ನೂ ಓದಿ
Gold Price Today: ಚಿನ್ನ, ಬೆಳ್ಳಿ ಬೆಲೆ ಏರಿಕೆ; ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಧಾರಣೆ ಇಲ್ಲಿದೆ
Meta Layoffs: ನನ್ನನ್ನು ಕ್ಷಮಿಸಿ; 11,000 ಉದ್ಯೋಗಿಗಳ ವಜಾಕ್ಕೆ ಮಾರ್ಕ್ ಝುಕರ್​ಬರ್ಗ್ ವಿಷಾದ
2027ಕ್ಕೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಭಾರತ: ವರದಿ
Mutual Funds: ಉತ್ತಮ ರಿಟರ್ನ್ಸ್ ತಂದುಕೊಡುತ್ತಿರುವ ಮಿಡ್​ಕ್ಯಾಪ್ ಮ್ಯೂಚುವಲ್ ಫಂಡ್​ಗಳಿವು

ಹೇಗೆ ಲೆಕ್ಕ ಹಾಕುವುದು?

ತೆರಿಗೆ ದರವು ಹೇಗೆ ಆಯಾ ರಾಜ್ಯ, ನಗರ, ಪಟ್ಟಣ ಹಾಗೂ ವಲಯಗಳಿಗೆ ಅನುಗುಣವಾಗಿ ಬೇರೆ ಇರುತ್ತವೆಯೋ ಲೆಕ್ಕಾಚಾರ ಕೂಡ ಅದೇ ರೀತಿ ಬದಲಾಗುತ್ತದೆ.

ವಾರ್ಷಿಕ ಬಾಡಿಕೆ ಮೌಲ್ಯ ವ್ಯವಸ್ಥೆ

ಈ ಮಾದರಿಯಲ್ಲಿ ಆಸ್ತಿಯ ವಾರ್ಷಿಕ ಬಾಡಿಗೆ ಮೌಲ್ಯದ ಆಧಾರದಲ್ಲಿ ತೆರಿಗೆ ಲೆಕ್ಕ ಹಾಕಲಾಗುತ್ತದೆ. ಇದು ಆಸ್ತಿಯ ಮೇಲೆ ಸಂಗ್ರಹಿಸಲಾದ ವಾಸ್ತವಿಕ ಬಾಡಿಗೆ ಮೊತ್ತವನ್ನು ಆಧರಿಸಿರುವುದಿಲ್ಲ. ನಿರ್ದಿಷ್ಟ ಬಾಡಿಗೆ ದರವನ್ನು ಆಯಾ ಸ್ಥಳೀಯಾಡಳಿತಗಳು ಮನೆ ಇರುವ ಪ್ರದೇಶ, ಮನೆಯ ಗಾತ್ರ ಇತ್ಯಾದಿಗಳ ಆಧಾರದಲ್ಲಿ ನಿರ್ಧರಿಸುತ್ತವೆ.

ಕ್ಯಾಪಿಟಲ್ ವ್ಯಾಲ್ಯೂ ಸಿಸ್ಟಂ

ಈ ವಿಧಾನದಲ್ಲಿ ಪುರಸಭೆ ಆಡಳಿತವು ಮನೆಯ ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ ಲೆಕ್ಕಾಚಾರ ಹಾಕಿ ತೆರಿಗೆ ವಿಧಿಸುತ್ತವೆ. ಮನೆ ಅಥವಾ ಆಸ್ತಿಯ ಮೌಲ್ಯ ಏನೆಂಬುದನ್ನು ಸರ್ಕಾರ ನಿರ್ಧರಿಸುತ್ತದೆ. ಇದನ್ನು ಆಸ್ತಿ ಇರುವ ಪ್ರದೇಶಕ್ಕನುಗುಣವಾಗಿ ವಾರ್ಷಿಕವಾಗಿ ಪರಿಷ್ಕರಿಸಲಾಗುತ್ತದೆ.

ಯೂನಿಟ್ ವ್ಯಾಲ್ಯೂ ಸಿಸ್ಟಂ

ಈ ವಿಧಾನದಲ್ಲಿ ಕಟ್ಟಡ ನಿರ್ಮಾಣವಾದ ಪ್ರದೇಶದ ಆಸ್ತಿಯ ಪ್ರತಿ ಯೂನಿಟ್ ಆಧಾರದಲ್ಲಿ ಲೆಕ್ಕ ಹಾಕಿ ತೆರಿಗೆ ವಿಧಿಸಲಾಗುತ್ತದೆ. ಆಸ್ತಿಯ ದರ, ಬಳಕೆ, ಪ್ರದೇಶಗಳ ಆಧಾರದಲ್ಲಿ ಎಷ್ಟು ರಿಟರ್ನ್ಸ್ ಬರಬಹುದು ಎಂಬ ಲೆಕ್ಕಾಚಾರದ ಆಧಾರದಲ್ಲಿ ತೆರಿಗೆ ದರ ನಿಗದಿಪಡಿಸಲಾಗುತ್ತದೆ.

ಆಸ್ತಿ ಅಥವಾ ಮನೆ ತೆರಿಗೆ ವಿವರ ಸಲ್ಲಿಸುವುದು ಹೇಗೆ? ಎಲ್ಲಿ?

ಸ್ಥಳೀಯ ಪುರಸಭೆ ಆಡಳಿತ ಅಥವಾ ಪುರಸಭೆ ನಿಗದಿಪಡಿಸಿದ ಬ್ಯಾಂಕ್​ಗಳಿಗೆ ತೆರಳಿ ತೆರಿಗೆ ವಿವರ ಸಲ್ಲಿಸಿ ಪಾವತಿ ಮಾಡಬಹುದು. ನಿಮ್ಮ ಆಸ್ತಿಯನ್ನು ಗುರುತಿಸುವುದಕ್ಕಾಗಿ ಆಸ್ತಿ ತೆರಿಗೆ ಸಂಖ್ಯೆ ಅಥವಾ ಖಾತಾ ಸಂಖ್ಯೆಯನ್ನು ನೀಡಬೇಕಾಗುತ್ತದೆ. ಆನ್​ಲೈನ್ ಮೂಲಕವೂ ಆಸ್ತಿ ತೆರಿಗೆ ವಿವರ ಸಲ್ಲಿಸಲು, ಪಾವತಿಸಲು ಅವಕಾಶವಿದೆ. ಸಂಬಂಧಪಟ್ಟ ಸ್ಥಳಿಯಾಡಳಿತದ ಅಥವಾ ಸರ್ಕಾರದ ವೆಬ್​​ಸೈಟ್​ಗೆ ಭೇಟಿ ನೀಡುವ ಮೂಲಕ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ವೈಯಕ್ತಿಕ ಹಣಕಾಸಿಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ