ವಾಲಂಟರಿ ಪ್ರಾವಿಡೆಂಟ್ ಫಂಡ್; ನಿಮ್ಮ ಇಪಿಎಫ್ ಕಾರ್ಪಸ್ ಹೆಚ್ಚಿಸುವ ಒಂದು ಪ್ಲಾನ್

Contribute more to EPF through Voluntary Provident Fund option: ಇಪಿಎಫ್ ಸ್ಕೀಮ್​ನಲ್ಲಿ ಉದ್ಯೋಗಿಯ ಸಂಬಳದಲ್ಲಿ ಶೇ. 12ರಷ್ಟನ್ನು ಮುರಿದುಕೊಂಡು ಇಪಿಎಫ್ ಅಕೌಂಟ್​ಗೆ ಹಾಕಲಾಗುತ್ತದೆ. ಕಂಪನಿ ವತಿಯಿಂದಲೂ ಶೇ. 12ರಷ್ಟು ಕೊಡುಗೆ ಇರುತ್ತದೆ. ಈ ಅಕೌಂಟ್​ನಲ್ಲಿರುವ ಹಣಕ್ಕೆ ಸರ್ಕಾರ ವಾರ್ಷಿಕವಾಗಿ ಬಡ್ಡಿ ಹಣ ಜಮೆ ಮಾಡುತ್ತದೆ. ಉದ್ಯೋಗಿಗಳು ಇಚ್ಛಿಸಿದರೆ ವಿಪಿಎಫ್ ಕೊಡುಗೆಯನ್ನೂ ಸೇರಿಸಿಕೊಳ್ಳಬಹುದು.

ವಾಲಂಟರಿ ಪ್ರಾವಿಡೆಂಟ್ ಫಂಡ್; ನಿಮ್ಮ ಇಪಿಎಫ್ ಕಾರ್ಪಸ್ ಹೆಚ್ಚಿಸುವ ಒಂದು ಪ್ಲಾನ್
ಇಪಿಎಫ್
Image Credit source: Shutterstock

Updated on: Apr 12, 2026 | 4:23 PM

ಉದ್ಯೋಗಿಗಳ ನಿವೃತ್ತಿಗೆಂದು ರೂಪಿಸಲಾಗಿರುವ ಸ್ಕೀಮ್ ಇಪಿಎಫ್ (EPF) ಬಹಳ ಉತ್ತಮ ಬಡ್ಡಿ ಕೊಡಲಾಗುವ ಸ್ಕೀಮ್. ಫಿಕ್ಸೆಡ್ ಡೆಪಾಸಿಟ್​ಗಳಿಗಿಂತಲೂ ಹೆಚ್ಚಿನ ಬಡ್ಡಿ ಸಿಗುತ್ತದೆ. ಸದ್ಯ ಸರ್ಕಾರ ಪಿಎಫ್ ಅಕೌಂಟ್​ನಲ್ಲಿರುವ ಹಣಕ್ಕೆ ವಾರ್ಷಿಕ ಶೇ. 8.2 ರಂತೆ ಬಡ್ಡಿ ತುಂಬುತ್ತದೆ. ನಿವೃತ್ತಿ ವಯಸ್ಸೆಂದು ಪರಿಗಣಿಸಲಾಗಿರುವ 58 ವರ್ಷ ವಯಸ್ಸು ಮುಟ್ಟಿದ ಬಳಿಕ ಇಪಿಎಫ್ ಹಣ ಲಂಪ್ಸಮ್ ಆಗಿ ದೊರಕುತ್ತದೆ.

ಉದ್ಯೋಗಿಯ ಮೂಲ ವೇತನ ಮತ್ತು ಭತ್ಯೆಯನ್ನು ಇಪಿಎಫ್ ಸ್ಯಾಲರಿ ಎಂದು ಪರಿಗಣಿಸಬಹುದು. ಇದರ ಶೇ. 12ರಷ್ಟನ್ನು ಸಂಬಳದಲ್ಲೇ ಮುರಿದುಕೊಳ್ಳಲಾಗುತ್ತದೆ. ಕಂಪನಿ ವತಿಯಿಂದ ಇಷ್ಟೇ ಕೊಡುಗೆ ನೀಡಲಾಗುತ್ತದೆ. ಆದರೆ, ಕಂಪನಿಯ ಶೇ. 12 ಕೊಡುಗೆಯಲ್ಲಿ ಇಪಿಎಫ್​ಗೆ ಶೇ. 3.67 ಮತ್ತು ಇಪಿಎಸ್​ಗೆ ಶೇ. 8.33 ಹಂಚಿಹೋಗುತ್ತದೆ. ಇಪಿಎಸ್ ಎಂಬುದು ಅಪ್ಪಟ ಪಿಂಚಣಿ ಸ್ಕೀಮ್. ಇದರಲ್ಲಿರುವ ಹಣವನ್ನು ವಿತ್​ಡ್ರಾ ಮಾಡಲು ಆಗುವುದಿಲ್ಲ. ಇದು ಪಿಂಚಣಿಗಾಗಿ ಮಾತ್ರ ಬಳಕೆ ಆಗುವುದು.

ಇದನ್ನೂ ಓದಿ: ಪಿಪಿಎಫ್​ನಲ್ಲಿ ಒಂದು ಕೋಟಿ ರೂ ಹಣ ಪಡೆಯುವುದು ಹೇಗೆ? 61,000 ರೂ ಮಾಸಿಕ ಆದಾಯ ಪಡೆಯಲು ಹೀಗೆ ಮಾಡಿ

ಉದ್ಯೋಗಿಗಳ ಇಪಿಎಫ್ ಅಕೌಂಟ್​ಗೆ ಕಂಪನಿಗಳು ಇನ್ನೂ ಹೆಚ್ಚಿನ ಕೊಡುಗೆ ನೀಡಲು ಅವಕಾಶ ಇರುತ್ತದೆ. ಆದರೆ, ಹೆಚ್ಚಿನ ಕಂಪನಿಗಳು ತಮ್ಮ ಕೊಡುಗೆಯನ್ನು ಶೇ. 12ಕ್ಕೆ ಮಾತ್ರ ಸೀಮಿತಗೊಳಿಸುತ್ತವೆ. ಆದರೆ, ಇಪಿಎಫ್ ಮೊತ್ತ ಹೆಚ್ಚಿಸಲು ಉದ್ಯೋಗಿಗೆ ಇನ್ನೊಂದು ಮಾರ್ಗ ಇದೆ. ಅದು ವಿಪಿಎಫ್. ವಾಲಂಟರಿ ಪ್ರಾವಿಡೆಂಟ್ ಫಂಡ್.

ಉದ್ಯೋಗಿಗಳು ತಮ್ಮ ವೇತನದ ಶೇ. 12ಕ್ಕಿಂತ ಹೆಚ್ಚಿನ ಹಣವನ್ನು ಇಪಿಎಫ್ ಅಕೌಂಟ್​ಗೆ ನೀಡಲು ಬಯಸಿದರೆ ವಿಪಿಎಫ್ ಅನ್ನು ಬಳಸಬಹುದು. ಕಂಪನಿ ಅವಕಾಶ ಕೊಟ್ಟರೆ ಇದು ಸಾಧ್ಯ. ಇಪಿಎಫ್ ಅಕೌಂಟ್​ಗೆ ಸಿಗುವಷ್ಟೇ ಬಡ್ಡಿ ವಿಪಿಎಫ್​ಗೂ ಸಿಗುತ್ತದೆ. ಹೀಗಾಗಿ, ಉದ್ಯೋಗಿಗಳಿಗೆ ಇದೊಂದು ಉತ್ತಮ ಹೂಡಿಕೆ ಉಪಾಯವೆನಿಸುತ್ತದೆ.

ಇದನ್ನೂ ಓದಿ: ಪಿಪಿಎಫ್​ನಲ್ಲಿ ಕೇವಲ 1 ಪರ್ಸಂಟ್ ಬಡ್ಡಿಗೆ ಸಾಲ? ಯಾವ ವರ್ಷ, ಎಷ್ಟು ಅವಧಿ ಇತ್ಯಾದಿ ನಿಯಮಗಳು ತಿಳಿದಿರಿ

ಒಂದು ಕೋಟಿ ರೂಗೂ ಅಧಿಕ ಇಪಿಎಫ್ ಕಾರ್ಪಸ್ ಸೃಷ್ಟಿಸಬೇಕಾ?

ನೀವು ನಿವೃತ್ತರಾದಾಗ ಇಪಿಎಫ್​ನ ಹಣ ಒಂದು ಕೋಟಿ ರೂ ದಾಟಬೇಕೆಂದಿದ್ದರೆ ಹೆಚ್ಚಿನ ವಿಪಿಎಫ್ ಕೊಡುಗೆ ಇರಬೇಕು. ತಿಂಗಳಿಗೆ 12,500 ರೂಗಳಷ್ಟು ವಿಪಿಎಫ್ ಕೊಡುಗೆ ಇದ್ದರೆ 23 ವರ್ಷದಲ್ಲಿ ಒಂದು ಕೋಟಿ ರೂ ಕಾರ್ಪಸ್ ನಿರ್ಮಾಣ ಆಗುವ ಸಾಧ್ಯತೆ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us