ಎಂಪ್ಲಾಯೀ ಪ್ರಾವಿಡೆಂಟ್ ಫಂಡ್ ಅಥವಾ ಇಪಿಎಫ್ ಎಂಬುದು ಭಾರತದ ಸಂಘ ಸಂಸ್ಥೆಗಳಿಗೆ ಸರ್ಕಾರದಿಂದ ಕಡ್ಡಾಯಪಡಿಸಲಾಗಿರುವ ಉದ್ಯೋಗಿ ಭವಿಷ್ಯ ಯೋಜನೆಯಾಗಿದೆ. ಪ್ರತಿಯೊಬ್ಬ ಉದ್ಯೋಗಿಯ ಹೆಸರಿನಲ್ಲೂ ಕಂಪನಿಗಳು ಪಿಎಫ್ (EPF) ಖಾತೆ ತೆರೆಯಬೇಕೆನ್ನುತ್ತದೆ ನಿಯಮ. ಈ ಖಾತೆಗೆ ಉದ್ಯೋಗಿಯ ಸಂಬಳದಲ್ಲಿ ನಿರ್ದಿಷ್ಟ ಭಾಗದ ಹಣ ಸೇರ್ಪಡೆಯಾಗುತ್ತಿರಬೇಕು. ಇಷ್ಟೇ ಮೊತ್ತದ ಹಣವನ್ನು ಕಂಪನಿ ಸೇರಿಸಿ ತುಂಬಬೇಕು. ಸರ್ಕಾರ ಈ ಖಾತೆಯಲ್ಲಿರುವ ಹಣಕ್ಕೆ ವರ್ಷಕ್ಕೊಮ್ಮೆ ನಿರ್ದಿಷ್ಟ ಬಡ್ಡಿಹಣ ಜಮೆ ಮಾಡುತ್ತಾ ಹೋಗುತ್ತದೆ. ಹೀಗೆ, ಒಬ್ಬ ಉದ್ಯೋಗಿಯು ನಿವೃತ್ತಿಯಾಗುವಷ್ಟರಲ್ಲಿ ಅತನ ಇಪಿಎಫ್ ಖಾತೆಯಲ್ಲಿ ಸಾಕಷ್ಟು ಹಣ ಭರ್ತಿಯಾಗಿರುತ್ತದೆ. ಅವರ ನಿವೃತ್ತಿನಂತರದ ಬದುಕಿಗೆ ಈ ಉಳಿತಾಯ ಹಣ ಬಹಳ ಉಪಯುಕ್ತವಾಗುತ್ತದೆ.
ಕೆಲವೊಮ್ಮೆ ನಮ್ಮ ಇಪಿಎಫ್ ಖಾತೆಯಲ್ಲಿ ಸಮಸ್ಯೆಗಳು ತಲೆದೋರಬಹುದು. ಹಣ ಜಮೆ ಆಗುತ್ತಿಲ್ಲದೇ ಇರಬಹುದು. ನಿವೃತ್ತಿಗೆ ಮೊದಲು ಇಪಿಎಫ್ ಹಣದಲ್ಲಿ ಕೆಲ ಭಾಗವನ್ನು ಹಿಂಪಡೆಯುವ ಅವಕಾಶ ಇರುತ್ತದೆ. ಹಾಗೆ ಕ್ಲೈಮ್ ಮಾಡಿಕೊಳ್ಳಲು ಏನೋ ತಾಂತ್ರಿಕ ಸಮಸ್ಯೆ ತಲೆದೋರಬಹುದು. ಇಂಥ ಸಂದರ್ಭದಲ್ಲಿ ದೂರು ನೀಡಲು ಇಪಿಎಫ್ಒ ಕಚೇರಿಗೆ ಹೋಗುವುದು ಅನಿವಾರ್ಯವಲ್ಲ. ಆನ್ಲೈನ್ ಮೂಲಕವೇ ದೂರುಗಳನ್ನು ದಾಖಲಿಸಲು ಅವಕಾಶ ನೀಡಲಾಗಿದೆ. ಇಪಿಎಫ್ಒದಿಂದ ಇದಕ್ಕಾಗಿಯೇ ಐ ಗ್ರೀವೆನ್ಸ್ ಮ್ಯಾನೇಜ್ಮೆಂಟ್ ಸಿಸ್ಟಂ ಎಂಬ ವಿಶೇಷ ಪೋರ್ಟಲ್ ಆರಂಭಿಸಿದೆ. ಇಲ್ಲಿ ಇಪಿಎಫ್ ಸದಸ್ಯರು ತಮ್ಮ ದೂರುಗಳನ್ನು ದಾಖಲಿಸಬಹುದು. ಅಥವಾ ಯಾವುದಾದರೂ ಇಪಿಎಫ್ ವಿಷಯದ ಬಗ್ಗೆ ಅನುಮಾನಗಳಿದ್ದರೆ ಪರಿಹಾರ ಪಡೆಯಬಹುದು.
ಇದನ್ನೂ ಓದಿ: ದೀರ್ಘಾವಧಿ ಹೂಡಿಕೆಗೆ ಪಿಪಿಎಫ್ ಉತ್ತಮವೋ, ಮ್ಯುಚುವಲ್ ಫಂಡ್ ಓಕೆಯಾ? ಇಲ್ಲಿದೆ ಒಂದು ಹೋಲಿಕೆ
ಇದನ್ನೂ ಓದಿ: ಸರ್ಕಾರಿ ನೌಕರರು ಷೇರು ವಹಿವಾಟು ನಡೆಸಬಹುದೇ? ನಿಯಮಗಳು ಏನು ಹೇಳುತ್ತವೆ?
ಇದರೊಂದಿಗೆ ನಿಮ್ಮ ದೂರು ಈ ಪೋರ್ಟಲ್ನಲ್ಲಿ ದಾಖಲಾಗುತ್ತದೆ. ರಿಜಿಸ್ಟ್ರೇಶನ್ ನಂಬರ್ ಅನ್ನು ಕಾಪಿ ಮಾಡಿಟ್ಟುಕೊಳ್ಳಿ. ನಿಮ್ಮ ಕಂಪ್ಲೇಂಟ್ ಸ್ಟೇಟಸ್ ಪರಿಶೀಲಿಸಲು ಇದು ಬೇಕಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ